Bhagyalakshmi: ಪೂಜಾಗೆ ಶ್ರೇಷ್ಠಾ ಸವಾಲ್; ಮನದಲ್ಲಿದ್ದ ಅಸಮಾಧಾನ ಹೊರಹಾಕಿದ ತಾಂಡವ್

By Poorva

ಭಾಗ್ಯ ತನ್ನ ಗಂಡ ಕರೆದ ಎನ್ನುವ ಒಂದೇ ಕಾರಣಕ್ಕೆ ಏನೇ ಕೆಲಸ ಇದ್ದರೂ ಅದೆಲ್ಲವನ್ನೂ ಬದಿಗೆ ಇಟ್ಟು ಓಡೋಡಿ ತಾಂಡವ್ ಹೇಳಿರುವ ರೆಸಾರ್ಟ್‌ಗೆ ಬರುತ್ತಾಳೆ. ಅಲ್ಲಿ ತನ್ನ ಇಬ್ಬರು ಮಕ್ಕಳನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ಗುಂಡಣ್ಣ ಮಾತ್ರ ತನ್ನ ತಂದೆ ತಾಯಿಯನ್ನು ಒಂದು ಮಾಡಲೇ ಬೇಕು ಎನ್ನುವ ಪಣ ತೊಟ್ಟು ಬಿಟ್ಟಿದ್ದಾನೆ. ಅದರ ಪ್ರಕಾರ ನಾಟಕ ಕೂಡ ಮಾಡುತ್ತಾನೆ.

ಗುಂಡಣ್ಣನ ಕಿತಾಪತಿಯಿಂದ ಭಾಗ್ಯ ವಾಪಸ್ ಬರುವಂತಾಯಿತು.ತಾಂಡವ್, ಭಾಗ್ಯಳನ್ನು ನೋಡಿ ಕೂಗಾಡಿದ್ದು ಆಯಿತು. ತಾಂಡವ್‌ಗೆ ಭಾಗ್ಯಳನ್ನು ಕಂಡರೆ ಅಷ್ಟಕಷ್ಟೆ. ಆತನ ಪ್ರೀತಿ ಏನಿದ್ದರೂ ತಂದೆ ತಾಯಿ ಮಕ್ಕಳು ಹಾಗೂ ಶ್ರೇಷ್ಠ ಮೇಲೆ ಮಾತ್ರ. ಇವರು ನನ್ನ ಜೀವನದಲ್ಲಿ ಇರಬೇಕು ಆದರೆ ಭಾಗ್ಯ ಮಾತ್ರ ನನ್ನ ಜೀವನದಲ್ಲಿ ಇರಬಾರದು ಎಂದು ಕೊಂಚ ಕಠೋರವಾಗಿ ಹೇಳಿ ಬಿಟ್ಟಿರುತ್ತಾನೆ.

BhagyaLakshmi kannada serial written update on 4th March episode

ಈ ವಿಚಾರ ಭಾಗ್ಯಗೆ ಕೂಡ ತಿಳಿದಿದೆ. ಆದರೆ ಆಕೆಗೆ ಮಕ್ಕಳದ್ದು ಚಿಂತೆ. ಮಕ್ಕಳು ಚೆನ್ನಾಗಿ ಇರಬೇಕು ತಂದೆಯ ಜೊತೆ ಖುಷಿ ಖುಷಿಯಾಗಿ ಇರಬೇಕು ಎನ್ನುವುದು ಆಕೆಯ ಆಸೆ. ಇನ್ನೂ ಗುಂಡಣ್ಣ ಮಾತ್ರ ಅಮ್ಮನನ್ನು ನೋಡಿ ಮುದ್ದಾಡುತ್ತಾ ಇರುತ್ತಾನೆ. ಅಮ್ಮ ನನ್ನನ್ನು ನೀನು ಮತ್ತು ಪಪ್ಪಾ ಉಯ್ಯಾಲೆಯಲ್ಲಿ ತೂಗಿ ಎಂದು ಹೇಳುತ್ತಾನೆ. ಗುಂಡಣ್ಣ ಏನೆಲ್ಲ ಹೇಳುತ್ತಾನೋ. ಅದ್ಯಾವುದಕ್ಕೂ ಇಲ್ಲ ಎಂದು ಹೇಳುವುದು ಇಲ್ಲ ಭಾಗ್ಯ. ಎಲ್ಲದಕ್ಕೂ ಆಯಿತು ಎಂದೆ ಹೇಳುತ್ತಾಳೆ. ಇನ್ನೂ ಶ್ರೇಷ್ಠಗೆ ಮಾತ್ರ ತಾಂಡವ್ ಮೇಲೆ ವಿಪರೀತ ಸಿಟ್ಟು ಬರುತ್ತದೆ. ತಾಂಡವ್‌ನನ್ನು ಹೇಗಾದರೂ ನನ್ನವನ್ನಾಗಿ ಮಾಡಿಕೊಳ್ಳಬೇಕು ಎಂದು ನಾನು ಪ್ಲಾನ್ ಮಾಡುತ್ತಾ ಇದ್ದೆ. ಆದರೆ ತಾಂಡವ್‌ನನ್ನು ಹೀಗೆ ಬಿಟ್ಟರೆ ಖಂಡಿತವಾಗಿಯೂ ನನ್ನನ್ನು ಬಿಟ್ಟು ಹೋಗಿ ಬಿಡುತ್ತಾನೆ. ಆದಷ್ಟು ಬೇಗ ಮದುವೆ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಾಳೆ.

ಇನ್ನು ಶ್ರೇಷ್ಠಾ, ಪೂಜಾ ಜೊತೆ ಚಾಲೆಂಜ್ ಮಾಡುತ್ತಾಳೆ. ತಾಂಡವ್‌ನನ್ನು ಹೇಗಾದರೂ ಮಾಡಿ ಪಡೆದುಕೊಂಡೆ ತೀರುತ್ತೇನೆ ಎಂದು ಹೇಳುತ್ತಾಳೆ. ಮನೆಯವರು ಎಲ್ಲರೂ ತಾಂಡವ್, ಭಾಗ್ಯ ಇಬ್ಬರು ಒಂದಾಗಿದ್ದಾರೆ ಎಂದು ಬಹಳ ಖುಷಿ ಪಡುತ್ತಿದ್ದರೂ ತಾಂಡವ್ ಮಾತ್ರ ಭಾಗ್ಯಗೆ ಬೈಯ್ಯುತ್ತಿರುತ್ತಾನೆ. ನೀನು ಯಾಕೆ ನಾನು ಕರೆದ ತಕ್ಷಣ ಓಡಿ ಬಂದೆ. ನೀನು ಇಲ್ಲಿಗೆ ಬರುವ ಅಗತ್ಯ ಇರಲಿಲ್ಲ. ಎಂದೆಲ್ಲ ಕೊಂಚ ಜೋರಾಗಿಯೇ ಹೇಳುತ್ತಾನೆ.

ಭಾಗ್ಯಗೆ ಪ್ರಶ್ನೆ ಮಾಡುತ್ತಿರುವ ತಾಂಡವ

ನಾನೇನೋ ಮಕ್ಕಳು ಸುಮ್ಮನೆ ಹಠ ಮಾಡುತ್ತಾ ಇದ್ದಾರೆ ಎಂದು ನಿನಗೆ ಅವರೆದುರು ನಾಟಕೀಯವಾಗಿ ಕರೆ ಮಾಡಿದೆ. ನೀನು ಅದನ್ನೇ ಸತ್ಯ ಎಂದು ನಂಬಿಕೊಂಡು ಓಡೋಡಿ ಬರುತ್ತೀಯಾ. ಇದ್ಯಾಕೋ ನನಗೆ ಸರಿ ಕಾಣಿಸುತ್ತಿಲ್ಲ. ನೀನು ಯಾಕೆ ಇಲ್ಲಿಗೆ ಬಂದಿರುವುದು ಎಂದೆಲ್ಲ ಭಾಗ್ಯಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ಕಾಟ ಕೊಡುತ್ತಾ ಇರುತ್ತಾನೆ ತಾಂಡವ್. ಭಾಗ್ಯ ಸಹಿಸುವಷ್ಟು ಎಲ್ಲವನ್ನೂ ಸಹಿಸಿಕೊಂಡು ಕೊನೆಗೆ ತಾಂಡವ್ ಬಳಿ ಮಾತನಾಡುತ್ತಾಳೆ.

BhagyaLakshmi kannada serial written update on 4th March episode

ಒಪ್ಪಂದದ ಬಗ್ಗೆ ನೆನಪಿಸಿದ ತಾಂಡವ್

ನನಗೆ ಕರೆ ಮಾಡಿ ಬೇಗ ಬಾ ಎಂದು ಹೇಳಿದ್ದು ಯಾರು? ನೀವೇ ತಾನೇ ಇದೀಗ ನೀನು ಯಾಕೆ ಬಂದೆ ಅಂದ್ರೆ ನೀವು ಬಾ ಅಂದಾಗ ಬರಬೇಕು ಹೋಗು ಅನ್ನುವಾಗ ಹೋಗಬೇಕು ಏನಿದು?ಎಂದಾಗ ತಾಂಡವ್, ಭಾಗ್ಯ ವಿರುದ್ಧ ಕೂಗಾಡುತ್ತಾನೆ. ನಮ್ಮಿಬ್ಬರ ನಡುವೆ ಒಂದು ವಾರದ ಒಪ್ಪಂದ ನಡೆದಿದೆ. ಅಷ್ಟರವರೆಗೆ ನಿನಗೆ ನಿನ್ನ ಮನೆಯಲ್ಲಿ ನಿಲ್ಲಲು ಸಾಧ್ಯ ಆಗುವುದು ಇಲ್ವಾ? ಮೊನ್ನೆ ಮಕ್ಕಳಿಗೆ ಡಬ್ಬದಲ್ಲಿ ತಿಂಡಿ ತೆಗೆದುಕೊಂಡು ಬೇರೆ ಬಂದಿದ್ದೆ. ನಾನು ಹೇಳಿದ ಕಂಡೀಷನ್ ಏನು? ನೀನು ಮಾಡುತ್ತಿರುವುದು ಏನು? ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದಾಗ ಭಾಗ್ಯ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ .

ಗುಂಡಣ್ಣನನ್ನು ವಿಚಾರಿಸುತ್ತಿರುವ ಕುಸುಮಾ

ಇತ್ತ ಗುಂಡ ಸುಳ್ಳು ಹೇಳಿರುವುದು. ಅಮ್ಮ ಇಲ್ಲಿಗೆ ಬರಲೇಬೇಕು ಎಂದು ಹಠ ಹಿಡಿದು ತಲೆ ಸುತ್ತಿ ಬಿದ್ದಿದ್ದು ಇದೆಲ್ಲ ನಾಟಕ ಮಾಡಿದ್ದು ಎಂದು ಸುನಂದಾ ಹಾಗೂ ಕುಸುಮಾಗೆ ತಿಳಿದು ಹೋಗಿದೆ. ಪೂಜಾ ಬಳಿ ಸುನಂದಾ ಬಹಳ ಜೋರಾಗಿಯೇ ಮಾತನಾಡುತ್ತಾಳೆ. ನಿಜ ವಿಚಾರ ಏನೆಂಬುದನ್ನು ಹೇಳಿಯೇ ಬಿಡುತ್ತಾಳೆ ಪೂಜಾ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
BhagyaLakshmi kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X