Bhagyalakshmi: ತಾಂಡವ್ ಹೊಸ ಪ್ಲ್ಯಾನ್: ರೂಪಾಳಿಂದ ರೋಸಿ ಹೋದ ಮನೆ ಮಂದಿ
ತಾಂಡವ್‌ಗೆ ಬುದ್ದಿ ಕಲಿಸಲೆಂದೆ ಕುಸುಮಾ ಮನೆಯನ್ನು ಇಬ್ಬಾಗ ಮಾಡಿದ್ದಾಳೆ. ತಾಂಡವ್ ಯಾವತ್ತಿಗೂ ತಾನೂ ಮಾಡುತ್ತಿರುವ ತಪ್ಪು ಏನು ಎಂಬುದನ್ನು ಯೋಚಿಸುವುದಿಲ್ಲ. ಅದಕ್ಕೆ ರಿವೇಂಜ್ ಹೇಗೆ ತೀರಿಸಿಕೊಳ್ಳುವುದು ಎಂಬುದನ್ನಷ್ಟೇ ಯೋಚನೆ ಮಾಡುತ್ತಾನೆ. ಅಂಥ ಕೆಲಸಕ್ಕೆಲ್ಲ ಮೊದಲು ಶ್ರೇಷ್ಠಾಳ ಸಹಾಯವನ್ನೇ ಕೇಳುತ್ತಾನೆ.
ಮೊದಲೇ ಶ್ರೇಷ್ಠಾಳದ್ದು ಕಿತಾಪತಿ ಪ್ಲ್ಯಾನಿಂಗ್ ಹೇಗಾದರೂ ಮಾಡಿ, ತಾಂಡವ್ ನ ಪಡೆಯಬೇಕು, ಮನೆಯವರಿಂದ ದೂರ ಮಾಡಬೇಕು ಎಂದು ಕಾಯುತ್ತಾ ಇರುತ್ತಾಳೆ. ಹೀಗಿರುವಾಗ ಶ್ರೇಷ್ಠಾ ಕೊಡುವ ಐಡಿಯಾವೆಲ್ಲಾ ಮನೆಯ ನೆಮ್ಮದಿ ಕೆಡಿಸುವಂತದ್ದೇ.

ಭಾಗ್ಯಾಳ ಒಳ್ಳೆಯ ಗುಣಕ್ಕೆ ಕುಸುಮಾ ಅವಳ ಬೆಂಬಲಕ್ಕೆ ನಿಂತಿದ್ದಾಳೆ. ಸೊಸೆ ತಪ್ಪು ಮಾಡದೆ ಹೋದಾಗಲೂ ಕುಸುಮಾ ಅತ್ತೆಯ ಅಧಿಕಾರವನ್ನು ಚಲಾಯಿಸುತ್ತಾಳೆ. ಅದು ತಾಂಡವ್ ಕಣ್ಣಿಗೆ ಕಾಣುವುದೇ ಇಲ್ಲ. ಸಂಸಾರ ಸರಿಯಾಗಲಿ ಎಂಬ ಕಾರಣಕ್ಕೆ ಸೊಸೆಯ ಪರ ನಿಂತಿರುವುದು ಅಪ್ಪ-ಅಮ್ಮನ ತಪ್ಪು ಅಂತಾನೆ. ಭಾಗ್ಯಾಳಿಗೆ ಎಮ್ಮೆ ಅಂತ ನಿಂದಿಸುತ್ತಾನೆ. ಅಪ್ಪ, ಅಮ್ಮನನ್ನ ಮರುಳು ಮಾಡಿದ್ದೀಯಾ ಅಂತಾನೆ. ಅದ್ಯಾವಾಗ ಬುದ್ದಿ ಬರುತ್ತೋ ಅಂತಿದ್ದಾರೆ ನೋಡುಗರು.
ಮನೆಗೆ ಬಂದ ದೀಪಾ
ರೂಪಾ ಅಡುಗೆ ಮಾಡುವುದರಲ್ಲಿ ಎಕ್ಸ್ ಪರ್ಟ್. ಟಿವಿಯಲ್ಲಿ ಫೇಮಸ್ ಆಗಿದ್ದಾಳೆ. ಅಡುಗೆ ಮಾತ್ರವಲ್ಲ ಸಂಸಾರದಲ್ಲಿ ಏನಾದರೂ ಸಮಸ್ಯೆ ಇದ್ದರು ಅದನ್ನು ಸರಿ ಮಾಡುತ್ತಾಳೆ. ಹೀಗಂತ ಶ್ರೇಷ್ಠಾ ನಂಬರ್ ಕೊಟ್ಟಿದ್ದಕ್ಕೆ, ಸಂಪರ್ಕ ಮಾಡಿದ ತಾಂಡವ್, ದೀಪಾಳಿಗೆ ಹೆಂಡತಿಯ ಬಗ್ಗೆ ಇನ್ನಿಲ್ಲದ್ದೆಲ್ಲವನ್ನು ಹೇಳಿ, ಮನೆಗೆ ಕರೆತಂದಿದ್ದಾನೆ.
ಕುಸುಮಾಳಿಂದ ಬೈಗುಳ ತಿಂದ ರೂಪಾ
ಕುಸುಮಾ ಯಾರಿಗೂ ಹೆದರುವುದೇ ಇಲ್ಲ. ಪ್ರಭಾವಿತ ಮಾತುಗಳನ್ನಾಡಿದರೆ ಕೇಳುವವಳೇ ಅಲ್ಲ. ಸೊಸೆ, ಬೀಗರನ್ನೆಲ್ಲಾ ತನ್ನ ಅದ್ದುಬಸ್ತಿನಲ್ಲೇ ಇಟ್ಟುಕೊಂಡಿರುವುದು. ಮಗ ಮನೆ ಬಿಟ್ಟು ಹೋಗ್ತೀನಿ, ಸಂಸಾರ ನೋಡಿಕೊಳ್ಳಲ್ಲ ಎಂದಾಗಲೇ ಬಿಡದ ಕುಸುಮಾ ಇನ್ನು ರೂಪಾಳನ್ನು ಬಿಡುತ್ತಾಳಾ. ಬಾಯಿಗೆ ಬಂದಂಗೆ ಏನೇನೋ ಮಾತನಾಡುತ್ತಿದ್ದ ದೀಪಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾಳೆ.

ತಾಂಡವ್ ಉದ್ದೇಶವೇ ಅರ್ಥವಾಗುತ್ತಿಲ್ಲ
ರೂಪಾ ಮನೆಗೆ ಬಂದ ಮೇಲೆ ಎಲ್ಲರಿಗೂ ರಾಂಗ್ ಆಗಿಯೇ ಮಾತನಾಡುತ್ತಿದ್ದಾಳೆ. ಅಂದರೆ ತಾಂಡವ್ ಪ್ರತಿಯೊಬ್ಬರ ಬಗ್ಗೆಯೂ ಚೆನ್ನಾಗಿಯೇ ಪರಿಚಯ ಮಾಡಿಕೊಟ್ಟು ಕರೆದುಕೊಂಡು ಬಂದಂತೆ ಇದೆ. ಭಾಗ್ಯಾಳನ್ನು, ಮನೆಯನ್ನೇ ಇಬ್ಬಾಗ ಮಾಡಿಸಿದ ಸೊಸೆ ನೀನು ಅಂದರೆ, ಕುಸುಮಾಗೆ ಮಗನನ್ನೇ ದೂರ ಮಾಡಿರುವ ತಾಯಿ ನೀನು ಅಂತೆಲ್ಲಾ ಉತ್ತರ ಕೊಟ್ಟಿದ್ದಾಳೆ. ತಾಂಡವ್ ಇವಳನ್ನು ಮನೆಗೆ ಕರೆ ತಂದಿರುವುದು ಬರೀ ಅಡುಗೆಗಲ್ಲ. ಮನೆಯವರಿಗೆಲ್ಲಾ ಇವಳ್ಯಾಕೆ ಇಲ್ಲಿಗೆ ಬಂದಳು ಎಂಬ ಪ್ರಶ್ನೆಯೇ ಕಾಡುತ್ತಿದೆ.
ಊಟದ ವಿಚಾರದಲ್ಲೂ ರೂಪಾ ವ್ಯಂಗ್ಯ
ಇವತ್ತು ಹಬ್ಬ ಅಂತ ಭಾಗ್ಯಾ ಉಪ್ಪಿಟ್ಟು, ಕೇಸರಿ ಬಾತ್ ಮಾಡಿದ್ದಳು. ಆದರೆ ಗುಂಡಣ್ಣ ಹಸಿವು ಎಂದು ಬಂದವನು ಎಲ್ಲವನು ಚೆಲ್ಲಿದ. ಮನೆಯವರೆಲ್ಲ ಟೆನ್ಶನ್ ನಲ್ಲಿ ಇದ್ದರೆ ರೂಪಾ ಬಂದು ಅದರಲ್ಲೂ ವ್ಯಂಗ್ಯವಾಡುತ್ತಿದ್ದಳು. ಹಬ್ಬಕ್ಕೂ ನಿಮ್ಮದೇನು ಉಪ್ಪಿಟ್ಟು, ಕೇಸರಿ ಬಾತ್ ಮಾಡುವುದು ಎಂದು ಬೇರೆ ರೀತಿಯಲ್ಲಿಯೇ ಸವಾಲು ಹಾಕಿದ್ದಾಳೆ.
ತಾಂಡವ್ ಪ್ಲ್ಯಾನ್ ಏನು?
ಮೊದಲೇ ಮನೆ ಡಿವೈಡ್ ಆಗಿದೆ. ಈಗ ಭಾಗ್ಯಾ ಇರುವ ಹಣದಿಂದಾನೇ ಮನೆ ನಡೆಸಬೇಕಿದೆ. ಈ ಕಷ್ಟವನ್ನು ಅರ್ಥ ಮಾಡಿಕೊಂಡು ಮಕ್ಕಳೇ ಏನು ಕೇಳುತ್ತಿಲ್ಲ. ಈಗ ರೂಪಾ ಆಡುತ್ತಿರುವ ಮಾತುಗಳು ಭಾಗ್ಯಾಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾ ಅಂತ. ತಾಂಡವ್ ಪ್ಲ್ಯಾನ್ ಕೂಡ ಇದೆ ಆಗಿದೆಯಾ ನೋಡಬೇಕಿದೆ.


Click it and Unblock the Notifications











