Bhagyalakshmi: ಸತ್ಯ ಹೇಳಲು ಬಂದ ಶ್ರೇಷ್ಠಾಗೆ ಕುಸುಮಾ ನೋಡಿ ಧೈರ್ಯ ಸಾಕಾಗ್ತಿಲ್ವಾ?
ಶ್ರೇಷ್ಠಾ ಹಾಗೂ ತಾಂಡವ್ ಲವ್ವಿ ಡವ್ವಿ ಪೂಜಾಗೆ ಮೊದಲಿಂದಾನೇ ಗೊತ್ತು. ಆರಂಭದಲ್ಲಿ ತಾಂಡವ್ ಬಳಿ ಬ್ಲ್ಯಾಕ್ ಮೇಲ್ ಮಾಡಿ ಹಣ ಕೀಳುತ್ತಿದ್ದಳು. ಆದರೆ ನಂತರ ಶ್ರೇಷ್ಠಾಳಿಂದಾನೇ ಅದು ನಿಂತಿದೆ. ಈಗ ಅವರಿಬ್ಬರು ಹೆಚ್ಚಿಗೆ ಮುಂದಿವರೆದಿದ್ದಾರೆ ಎಂಬುದು ಕೂಡ ಗೊತ್ತಿದೆ. ಅದಕ್ಕಾಗಿಯೇ ಎಚ್ಚರಿಕೆ ನೀಡಿದ್ದಾಳೆ. ಇಬ್ಬರು ಮದುವೆ ಅಂತೆಲ್ಲಾ ಹೋದರೆ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದ್ದಾಳೆ.
ಪೂಜಾ ಯಾವಾಗ ಆ ರೀತಿಯೆಲ್ಲಾ ಮಾತನಾಡಿದಳೋ ಆಗಲೇ ಶ್ರೇಷ್ಠಾ ರೊಚ್ಚಿಗೆದ್ದಿದ್ದಾಳೆ. ನೇರ ಮನೆಗೆ ಬಂದಿದ್ದಾಳೆ. ಎಲ್ಲಾ ಸತ್ಯವನ್ನು ಹೇಳಿಯೇ ಬಿಡುತ್ತೀನಿ ಎನ್ನುತ್ತಿದ್ದಾಳೆ. ಸತ್ಯ ಗೊತ್ತಾಗುವುದು ತಾಂಡವ್ ಗೂ ಅಗತ್ಯವಿಲ್ಲ. ಪೂಜಾಗೂ ಬೇಕಾಗಿಲ್ಲ. ಏನಾಗುತ್ತದೋ ಎಂಬ ಭಯದಲ್ಲಿಯೇ ಇದ್ದಾರೆ ತಾಂಡವ್ ಅಂಡ್ ಪೂಜಾ.

ಭಾಗ್ಯಾಳ ಜೊತೆ ಮಾತನಾಡಬೇಕೆಂದ ಶ್ರೇಷ್ಠಾ
ಕೋಪದಲ್ಲಿದ್ದ ಶ್ರೇಷ್ಠಾ ನೇರವಾಗಿ ಕುಸುಮಾ ಮನೆಗೆ ಬಂದಿದ್ದಾಳೆ. ಕುಸುಮಾ ಪ್ರಶ್ನೆ ಮಾಡಿದಾಗ, ನಾನು ಭಾಗ್ಯಾ ಬಳಿಯೇ ಮಾತನಾಡಬೇಕಿದೆ. ಅವಳ ಬಳಿಯೇ ಸತ್ಯ ಹೇಳಬೇಕಿದೆ ಎಂದಿದ್ದಾಳೆ. ಕುಸುಮಾ ಬೇಡದೆ ಇರುವ ವಿಚಾರಕ್ಕೆ ತಲೆ ಹಾಕುವುದಿಲ್ಲ. ಹೀಗಾಗಿ ಭಾಗ್ಯಾ ಬರುವವರೆಗೂ ಕಾಯಲು ಹೇಳಿದ್ದಾಳೆ. ತಾಂಡವ್ ಪಾಲಾಗಿದ್ದ ಮನೆಯಲ್ಲಿ ಕೂತು ಕಾಯುತ್ತಿದ್ದಾಳೆ. ಈ ಕಡೆ ಎಲ್ಲರೂ ಕೂತಿದ್ದರೆ, ಆ ಕಡೆ ಶ್ರೇಷ್ಠಾ ಹಾಗೂ ತಾಂಡವ್ ಇದ್ದರು. ಭಾಗ್ಯಾಗೆ ಬೇಗ ಬರುವುದಕ್ಕೆ ಕುಸುಮಾನೆ ಕಾಲ್ ಕೂಡ ಮಾಡಿದ್ದಾಳೆ.
ಶ್ರೇಷ್ಠಾಳಿಗೆ ಮತ್ತೆ ಎಚ್ಚರಿಕೆ ಕೊಟ್ಟ ಪೂಜಾ
ಇತ್ತ ಪೂಜಾಗೆ ತನ್ನ ಅಕ್ಕನ ಸಂಸಾರ ಎಲ್ಲಿ ಹಾಳಾಗುತ್ತದೋ ಎಂಬ ಭಯ. ಯಾವುದೇ ಕಾರಣಕ್ಕೂ ಸತ್ಯ ಗೊತ್ತಾಗಬಾರದೆಂದು ಪ್ರಯತ್ನ ಪಡುತ್ತಿದ್ದಾಳೆ. ಶ್ರೇಷ್ಠಾಳಿಗೆ ಮತ್ತೆ ಎಚ್ಚರಿಕೆ ಕೊಡುತ್ತಿದ್ದಾಳೆ. ಯಾಕಂದ್ರೆ ತಾಂಡವ್‌ಗೆ ಮತ್ತೊಂದು ಸಂಬಂಧ ಇದೆ ಎಂಬುದನ್ನು ಕೇಳಿಯೇ ಭಾಗ್ಯಾಳಿಂದ ಸಹಿಸುವುದಕ್ಕೆ ಸಾಧ್ಯವಾಗಲಿಲ್ಲ. ಇನ್ನು ಸಂಬಂಧವೇ ಸತ್ಯವಾದರೆ ಹೇಗೆ ಸಹಿಸುತ್ತಾಳೆ. ಅದಕ್ಕಾಗಿಯೇ ಪೂಜಾ ಆ ಸತ್ಯವನ್ನು ಮುಚ್ಚಿಡುವುದಕ್ಕೆ ಶ್ರೇಷ್ಠಾಳಿಗೆ ಗದರಿದ್ದಾಳೆ. ಅಷ್ಟರಲ್ಲಿ ಬಂದ ಕುಸುಮಾ ಬೈದು ಆ ಮನೆಯಿಂದ ಈ ಮನೆಗೆ ಕರೆದಿದ್ದಾಳೆ.

ಶ್ರೇಷ್ಠಾ ಹೊಸ ಆಟ
ಇತ್ತ ಸತ್ಯ ಗೊತ್ತಾಗಬಾರದು ಎಂದು ತಾಂಡವ್ ಒದ್ದಾಡುತ್ತಿದ್ದಾನೆ. ಗೊತ್ತಾದರೆ ಅಮ್ಮನಿಂದ ಅವನ ತಿಥಿಯೇ ಆಗುತ್ತದೆ. ಅದಕ್ಜಾಗಿಯೇ ಕೋಪದಲ್ಲಿರುವ ಶ್ರೇಷ್ಠಾಳನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಶ್ರೇಷ್ಠಾ ಫೋನ್ ಕೂಡ ರಿಸೀವ್ ಮಾಡ್ತಾ ಇಲ್ಲ. ಇದು ತಾಂಡವ್ ಗೆ ಸಿಕ್ಕಾಪಟ್ಟೆ ಟೆನ್ಶನ್ ಆಗಿದೆ. ಇನ್ನೆಲ್ಲಿ ಸತ್ಯ ಗೊತ್ತಾಗುತ್ತೋ ಎಂಬ ಭಯದಲ್ಲಿದ್ದಾನೆ.
ಶ್ರೇಷ್ಠಾಳನ್ನು ಎಳೆದೊಯ್ದ ಪೂಜಾ
ಇನ್ನು ಭಾಗ್ಯಾಗೋಸ್ಕರ ಶ್ರೇಷ್ಠಾ ಕಾಯ್ತಾ ಕೂತಿದ್ದಳು. ಅತ್ತೆಯ ಮಾತಿನಂತೆ ಭಾಗ್ಯಾ ಕೂಡ ಮನೆಗೆ ಬಂದಿದ್ದಾಳೆ. ಅಷ್ಟರಲ್ಲಿ ಶ್ರೇಷ್ಠಾಳನ್ನ ಎಳೆದು ಹೊರಗೆ ಕರೆದುಕೊಂಡು ಹೊರಟಿದ್ದಳು ಪೂಜಾ. ಅದನ್ನು ನೋಡಿದ ಕುಸುಮಾ, ಇವಳು ಭಾಗ್ಯಾಳ ಜೊತೆಗೆ ತಾನೇ ಮಾತನಾಡಬೇಕು ಅಂದಿದ್ದು. ಅದೇನು ಮಾತನಾಡ್ತಾಳೆ ನೋಡಬೇಕು. ನಡಿ ಒಳಗೆ ಎಂದಿದ್ದಾಳೆ.
ತಡಬಡಾಯಿಸುತ್ತಿರುವ ಶ್ರೇಷ್ಠಾ
ಮಕ್ಕಳ ಮುಂದೆ ಮಾತನಾಡಬಾರದು ಎಂದಾಗ ಪೂಜಾಗೆ ಮಕ್ಕಳನ್ನು ಒಳಗೆ ಕರೆದುಕೊಂಡು ಹೋಗಲು ಹೇಳುತ್ತಾಳೆ. ಆದರೆ ಶ್ರೇಷ್ಠಾಗೆ ಸತ್ಯ ಹೇಳುವುದಕ್ಕೆ ಅಷ್ಟಾಗಿ ಧೈರ್ಯವೇ ಬಂದಂತೆ ಕಾಣುತ್ತಿಲ್ಲ. ತಡಬಡಾಯಿಸುತ್ತಿದ್ದಾಳೆ. ಕುಸುಮಾಳ ಮುಖ ನೋಡಿದರೇನೆ ಶ್ರೇಷ್ಠಾ ನಡುಗು ಹೋಗುತ್ತಾಳೆ.


Click it and Unblock the Notifications











