Bhagyalakshmi: ಬರೀ ಭಾಗ್ಯಾಗೆ ಮಾತ್ರ ಶಿಕ್ಷೆ ಯಾಕೆ? ವೀಕ್ಷಕರಿಗಾಗಿ ಉಲ್ಟಾ ಆಗುತ್ತಾ ಕಥೆ?

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಾಗೆ ಬಂದಿರುವ ಕಷ್ಟ ಅಷ್ಟಿಷ್ಟಲ್ಲ. ತಾಂಡವ್ ತನ್ನ ಅತಿಯಾಸೆಯಿಂದಾಗಿ ಡಿವೋರ್ಸ್ ಕೊಡುವುದಕ್ಕೆ ಹೋದ. ಆಗಲೂ ನೊಂದಳು. ಮನೆ ಬಿಟ್ಟು ಹೋಗುವಂತೆ ಹೇಳಿದನು. ಆಗಲೂ ನೋವು ಅನುಭವಿಸಿದಳು. ಈಗ ಮನೆಯೇ ಡಿವೈಡ್ ಆದರೂ ತಾಂಡವ್ ವರ್ತನೆ ಮಾತ್ರ ಬದಲಾಗಿಲ್ಲ.

ಎಲ್ಲಿ ಭಾಗ್ಯಾಳನ್ನು ಲಾಕ್ ಮಾಡಬಹುದೋ ಅಲ್ಲೆಲ್ಲಾ ಲಾಕ್ ಮಾಡುತ್ತಿದ್ದಾನೆ. ಭಾಗ್ಯಾಳ ಬಳಿ ಹಣವಿಲ್ಲ ಎಂಬುದು ಗೊತ್ತಿರುವ ವಿಚಾರ. ಅದನ್ನೇ ಬಂಡವಾಳ ಮಾಡಿಕೊಂಡ ತಾಂಡವ್ ಮನೆಯ ಖರ್ಚಿನಲ್ಲಿ ಅರ್ಧ ಖರ್ಚು ಕೇಳಿದ್ದಾನೆ. ಈಗ ಅದನ್ನ ಹೊಂದಿಸೋದಕ್ಕೆ ಭಾಗ್ಯಾ ದುಡಿಮೆಗೆ ಹೋಗುತ್ತಿದ್ದಾಳೆ. ಆದರೆ ಅತ್ತೆಗೆ ಹೇಳದೆ ತಪ್ಪು ಮಾಡುತ್ತಾ ಇದ್ದೀನಿ ಎಂಬ ಕೊರಗಿನಲ್ಲೇ ಇದ್ದಾಳೆ.

Bhagyalakshmi kannada serial Written Update on April 26th episode
ಶ್ರೇಷ್ಠಾಳ ಪ್ಲ್ಯಾನ್‌ಗೆ ತಾಂಡವ್ ಖುಷಿ

ಪೂಜಾ ಮಾಡಿದ ಅವಾಂತರಕ್ಕೆ ಇಂದು ಎಲ್ಲಾ ಸತ್ಯ ಹೇಳಿ ಬಿಡುತ್ತೇನೆ ಎಂದು ಬಂದ ಶ್ರೇಷ್ಠಾ, ಮನೆಯಲ್ಲಿ ಉಲ್ಟಾ ಹೊಡೆದಿದ್ದಾಳೆ. ಭಾಗ್ಯಾಳ ಜೊತೆಗೇನೆ ಮಾತನಾಡಬೇಕು ಅಂತ ಹೇಳಿ, ತಾಂಡವ್‌ಗೂ ಜೀವ ಕೈಗೆ ಬರಿಸಿದ್ದಳು. ಭಾಗ್ಯಾ ಬಂದ ಕೂಡಲೇ ಒಂದೈದು ನಿಮಿಷ ಎಲ್ಲರಿಗೂ ಗಾಬರಿ ಹುಟ್ಟಿಸಿ, ಹಣದ ವಿಚಾರ ಎತ್ತಿದ್ದಾಳೆ. ಲಕ್ಷ್ಮೀ ಮದುವೆಯಲ್ಲಿ ಪೂಜಾ ಕದ್ದ ಹಣವನ್ನೇ ಶ್ರೇಷ್ಠಾ, ಭಾಗ್ಯಾಳಿಗೆ ಸಾಲವಾಗಿ ನೀಡಿದ್ದಳು. ಈಗ ಅದೇ ಹಣವನ್ನು ಕೇಳಿದ್ದಾಳೆ.

ಅತ್ತೆಯ ಬಳಿ ಸತ್ಯ ಹೇಳಿದ ಭಾಗ್ಯಾ

ಶ್ರೇಷ್ಠಾ ಈ ರೀತಿ ಹಣ ಕೇಳಿದ್ದು ಕುಸುಮಾಗೆ ಶಾಕ್ ಆಗಿದೆ. ಭಾಗ್ಯಾ ಕೂಡ ಹೌದು ಎಂದಾಕ್ಷಣಾ ಕುಸುಮಾಗೆ ಕೊಂಚ ಗಲಿಬಿಲಿಯಾಗಿದೆ. ಭಾಗ್ಯಾ ಹಾಗೆಲ್ಲ ಸುಮ್ಮನೆ ತೆಗೆದುಕೊಳ್ಳುವವಳಲ್ಲ ಎಂಬುದು ಗೊತ್ತಿದೆ. ಹೀಗಾಗಿಯೇ ಒಳಗೆ ಕರೆದುಕೊಂಡು ಹೋಗಿ ಕೇಳಿದಾಗ ಭಾಗ್ಯಾ ಎಲ್ಲಾ ಸತ್ಯವನ್ನು ಹೇಳಿದ್ದಾಳೆ. ಲಕ್ಷ್ಮೀ ಮದುವೆಗಾಗಿ ಎಂಬ ಸತ್ಯ ಗೊತ್ತಾದ ಮೇಲೆ ಇದ್ದ ಕೋಪ ಕೊಂಚ ಇಳಿದಿದೆ. ಶ್ರೇಷ್ಠಾ ಹೊಸ ನಾಟಕವಾಡಿದ್ದು, ಆದಷ್ಟು ಬೇಗ ಹಣ ಕೊಡು ಅಂತ ಹೇಳಿ ಸುಮ್ಮನೆ ಹೋಗಿದ್ದಾಳೆ.

ತಾಂಡವ್‌ಗೆ ತಾಯಿಯಿಂದ ಮಂಗಳಾರತಿ

ಇದು ತಾಂಡವ್‌ಗೆ ಭಲೇ ಖುಷಿಕೊಟ್ಟಂತ ಸುದ್ದಿ. ಯಾವುದೋ ಭೂಕಂಪ ಮಾಡಿ ಬಿಡುತ್ತಾಳೆ ಎಂದುಕೊಂಡಿದ್ದ ತಾಂಡವ್‌ಗೆ ಶ್ರೇಷ್ಠಾ ಸಖತ್ ಶುಭಕರ ಸುದ್ದಿಯನ್ನೇ ಕೊಟ್ಟಿದ್ದಾಳೆ. ಇದರಿಂದ ಭಾಗ್ಯಾ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದಳು ಎಂಬ ಖುಷಿ ಅವನಲ್ಲಿ. ಅದಕ್ಕೆ ಭಾಗ್ಯಾ ಬಂದಾಗ ರೇಗಿಸಿದ್ದಾನೆ. ಏನ್ರಿ ಭಾಗ್ಯಾ ಮೇಡಂ, ಈಗ ಎರಡು ಲಕ್ಷ ಹೇಗೆ ಅಡ್ಜೆಸ್ಟ್ ಮಾಡ್ತೀರೀ ಎಂದಿದ್ದಾನೆ. ಅಷ್ಟರಲ್ಲಿ ಬಂದ ಕುಸುಮಾ, ಪಕ್ಕದ ಮನೆಯವರು ಸುಮ್ಮನೆ ಇದ್ದರೆ ಸರಿ. ಅವಳೇನು ಶೋಕಿ ಮಾಡುವುದಕ್ಕೆ ಸಾಲ ಮಾಡಿಲ್ಲ ಎಂದು ಬೈದಿದ್ದಾಳೆ. ಅವರ ಅಪ್ಪ ಕೂಡ ವ್ಯಂಗ್ಯವಾಗಿ ಹಾಡು ಹೇಳಿದ್ದಾರೆ.

Bhagyalakshmi kannada serial Written Update on April 26th episode

ವೀಕ್ಷಕರಿಗಾಗಿ ಕಥೆ ಉಲ್ಟಾ ಆಗುತ್ತಾ?

ಇನ್ನು ಆರಂಭದಿಂದಾನೂ ಭಾಗ್ಯಾಳೇ ಕಷ್ಟ ಅನುಭವಿಸುತ್ತಿದ್ದಾಳೆ. ತಾಂಡವ್ ಹಿಂಸೆ ಕೊಡುತ್ತಲೇ ಇದ್ದಾನೆ. ವೀಕ್ಷಕರಿಗೂ ಭಾಗ್ಯಾಳ ಪರಿಸ್ಥಿತಿ ನೋಡಿ ನೋಡಿ ಸಾಕಾಗಿದೆ. ಹೀಗಾಗಿ ಬರೀ ಹೆಣ್ಣು ಮಕ್ಕಳಿಗೆ ಯಾಕೆ, ಗಂಡು ಮಕ್ಕಳಿಗೂ ಕಷ್ಟ ಕೊಡಬೇಕು ಅಲ್ವಾ ಎಂದಿದ್ದಾರೆ. ಎಷ್ಟೋ ಧಾರಾವಾಹಿಗಳು ವೀಕ್ಷಕರ ನಾಡಿಮಿಡಿತ ಅರಿತು ಕಥೆ ಬದಲಾಯಿಸುತ್ತಾರೆ. ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲೂ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಲು ಕಥೆಯಲ್ಲಿ ಕೊಂಚ ಬದಲಾದರೂ ಆಶ್ಚರ್ಯವೇನಿಲ್ಲ. ಫೈನಲಿ ವೀಕ್ಷಕರೇ ಮುಖ್ಯ ಅಲ್ಲವೇ?

More from Filmibeat

English summary
Bhagyalakshmi kannada serial latest episode. Here is the details about The audience requested to give trouble to Tandav
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X