Bhagyalakshmi: ಶ್ರೇಷ್ಠಾ ಪ್ಲ್ಯಾನ್ ವರ್ಕೌಟ್ ಆಯ್ತು; ಕುಸುಮಾ ಮನೆಯಲ್ಲಿ ಅಲ್ಲೋಲ ಕಲ್ಲೋಲ!
ತಾಂಡವ್‌ನನ್ನು ಪಡೆಯುವುದಕ್ಕೆ ಶ್ರೇಷ್ಠಾ ಪಡುತ್ತಿರುವ ಪಾಡು ಅಷ್ಟಿಷ್ಟಲ್ಲ. ತಾಂಡವ್ ಮನೆಯಲ್ಲಿ ಏನೆಲ್ಲಾ ಅಲ್ಲೋಲ ಕಲ್ಲೋಲ ಮಾಡಬಹುದೋ ಅಷ್ಟೆಲ್ಲವನ್ನು ಮಾಡುತ್ತಿದ್ದಾಳೆ. ಈಗಾಗಲೇ ತಾಂಡವ್ ಜೊತೆಗೆ ಎಂಗೇಜ್ಮೆಂಟ್ ಕೂಡ ಆಗಿದೆ. ಆದರೆ ಅದನ್ನ ಮನೆಯವರಿಂದ ಮುಚ್ಚಿಡಲಾಗಿದೆ. ಈ ಕಳ್ಳಾಟವೆಲ್ಲ ಪೂಜಾಳ ಕಿವಿಗೆ ಬಿದ್ದಿದೆ. ಅದಕ್ಕೆಂದೇ ಅಕ್ಕನ ಸಂಸಾರ ಹಾಳಾಗುವುದಕ್ಕೆ ಬಿಡದೇ ಮಕ್ಕಳಿಂದ ನಾಟಕ ಶುರು ಮಾಡಿಸಿದ್ದಳು.
ತಾಂಡವ್‌ಗೆ ಮಕ್ಕಳೆಂದರೆ ತುಂಬಾ ಇಷ್ಟ. ಆದರೆ ಭಾಗ್ಯಾ ಎಂದರೆ ಅಸಡ್ಡೆ. ತನ್ನ ಇಷ್ಟದಂತೆ ಇಲ್ಲ, ಸ್ಟೈಲ್ ಮಾಡಲ್ಲ, ಅದೇ ಸೀರೆ, ಅದೇ ಉದ್ಧ ಜಡೆ, ಫ್ಯಾಷನ್ ಅನ್ನೋದೆ ಗೊತ್ತಿಲ್ಲ ಎಂಬ ಆರೋಪ. ಈಗ ಶ್ರೇಷ್ಠಾಳ ಸಹವಾಸದಿಂದ ಭಾಗ್ಯಾ ಬೇಡವಾಗಿದ್ದಾಳೆ. ಮಕ್ಕಳಿಗಾಗಿ ಹಿಂದೆ ಸರಿದಿದ್ದ ತಾಂಡವ್ ಇದೀಗ ಮತ್ತೆ ಡಿವೋರ್ಸ್ ಮಾತಾಡಿದ್ದಾನೆ.

ಮಕ್ಕಳ ನಾಟಕ ಬಯಲು
ಶ್ರೇಷ್ಠಾಳಿಗೆ ತಾಂಡವ್ ಬೇಕು. ಹೇಗಾದರೂ ಮಾಡಿ ಅವನನ್ನು ಪಡೆಯಲೇಬೇಕೆಂಬ ಹಠ ಅವಳದ್ದು. ಅದಕ್ಕಾಗಿಯೇ ಸಮಯ ಸಿಕ್ಕಾಗೆಲ್ಲಾ ಭಾಗ್ಯಾಳ ಬಗ್ಗೆ, ಕುಸುಮಾ ಬಗ್ಗೆ ನೆಗೆಟಿವಿಟಿಯನ್ನೇ ತುಂಬುತ್ತಾ ಇರುತ್ತಾಳೆ. ಈಗ ಮಕ್ಕಳು ನಾಟಕವಾಡುತ್ತಿರುವ ಸತ್ಯವನ್ನು ಶ್ರೇಷ್ಠಾ ಕಂಡು ಹಿಡಿದಿದ್ದಾಳೆ. ಅದನ್ನೇ ಬಂದು ತಾಂಡವ್ ಕಿವಿಗೂ ಊದಿದ್ದಾಳೆ. ನಿನ್ನ ಮಗನಿಗೆ ಯಾವ ಕಾಯಿಲೆಯೂ ಇಲ್ಲ. ನಿಮ್ಮಿಬ್ಬರನ್ನು ಒಂದು ಮಾಡುವುದಕ್ಕಷ್ಟೇ ಈ ನಾಟಕ ಎಂದಿದ್ದಾಳೆ.
ಮಕ್ಕಳನ್ನ ಗದರಿಸಿದ ತಾಂಡವ್
ಶ್ರೇಷ್ಠಾ ಮಾತು ಎಂದರೆ ತಾಂಡವ್‌ಗೆ ವೇದ ವಾಕ್ಯ. ಹಾಗಂತ ಸತ್ಯ ಗೊತ್ತಾದ ತಕ್ಷಣ ರಿಯಾಕ್ಟ್ ಮಾಡಿರಲಿಲ್ಲ. ಸುಮ್ಮನೆ ಇದ್ದ. ಈಗ ತಾಂಡವ್ ಸ್ವಾಭಿಮಾನ ಮತ್ತೆ ಕೆಣಕಿದೆ. ಭಾಗ್ಯಾ ಬೇರೆ ಹೋರಾಟ ಮಾಡಿ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆದಿದ್ದಾಳೆ. ಅಷ್ಟೇ ಅಲ್ಲ ಮಗಳು ಪರೀಕ್ಷೆ ಬರೆಯುವಂತೆ ಮಾಡಿದ್ದಾಳೆ. ಇದು ತಾಂಡವ್ ಕಡೆಯಿಂದ ಸಹಿಸಲಾಗಿಲ್ಲ. ಹೀಗಾಗಿಯೇ ಈಗ ಮನೆಯಲ್ಲಿ ದೊಡ್ಡ ರಾದ್ಧಾಂತ ಮಾಡಿದ್ದಾನೆ. ಮಕ್ಕಳಿಗೆ ಹೊಡೆದು ಬಡಿದು ಸತ್ಯ ಬಾಯಿ ಬಿಡಿಸಿದ್ದಾನೆ.

ಭಯಕ್ಕೆ ಎಲ್ಲಾ ಸತ್ಯ ಹೊರಕ್ಕೆ
ಗುಂಡ ಎಷ್ಟೇ ಮಾತನಾಡಿದರು ಅಪ್ಪನ ಕೋಪಕ್ಕೆ ಹೆದರುತ್ತಾನೆ. ಅಪ್ಪ ಅಮ್ಮ ಒಂದಾಗುವುದಕ್ಕೆ ಪೂಜಾ ಕೊಟ್ಟ ಪ್ಲ್ಯಾನ್ ವರ್ಕೌಟ್ ಆಗಿತ್ತು. ಆದರೆ ಶ್ರೇಷ್ಠಾಳ ಕಿತಾಪತಿಯಿಂದ ಎಲ್ಲವೂ ಹಾಳಾಗಿದೆ. ಗುಂಡನಿಗೆ ಹೊಡೆದ ತಾಂಡವ್, ಕಡೆಗೂ ಸತ್ಯ ಕಂಡು ಹಿಡಿದುಕೊಂಡಿದ್ದಾನೆ. ಮಕ್ಕಳು ನಾಟಕವಾಡಿ ಬಿಟ್ಟಿರಲ್ಲ, ಅದು ಅಪ್ಪನ ಜೊತೆಗೆ ನಾಟಕವಾಡಿದ್ದೀರಿ ಎಂದು ಕೋಪದಲ್ಲಿಯೇ ಗದರಿದ್ದಾನೆ. ತಾಂಡವ್ ರೌದ್ರವತಾರಕ್ಕೆ ಮಕ್ಕಳು ಭಯಗೊಂಡು ಸುಮ್ಮನೆ ನಿಂತಿದ್ದಾರೆ.
ಗಂಡನ ಮಾತಿಗೆ ದಿಗ್ಬ್ರಾಂತಳಾದ ಭಾಗ್ಯ
ಮಕ್ಕಳಿಗೂ ತಾಂಡವ್ ಎಚ್ಚರಿಕೆ ಕೊಟ್ಟಿದ್ದಾನೆ. ನಿಮ್ಮ ಅಮ್ಮನಿಗೋಸ್ಕರ ನಾಟಕವಾಡಿದ್ದೀರಿ ಅಲ್ವಾ. ಡಿವೋರ್ಸ್ ಹೋಲ್ಡ್‌ನಲ್ಲಿ ಇಟ್ಟಿದ್ದೆ. ಆದರೆ ಈಗ ಅದನ್ನ ಮುಂದುವರೆಸುತ್ತೀನಿ. ಇವತ್ತೆ ನಿಮ್ಮ ಅಮ್ಮನಿಗೆ ಡಿವೋರ್ಸ್ ಕೊಡ್ತೀನಿ. ಈ ಕ್ಷಣದಿಂದಾನೇ ನಿಮ್ಮ ಅಮ್ಮ ಮನೆ ಬಿಟ್ಟು ಹೋಗಬೇಕು, ನೀವೂ ನನ್ನ ಬಳಿ ಇರಬೇಕು. ಇನ್ನು ಮುಂದೆ ನಿಮಗೆ ಅಪ್ಪನೇ ಎಲ್ಲಾ ಆಗಬೇಕು ಗೊತ್ತಾಯ್ತಾ ಎಂದು ಹೇಳಿದಾಗಲೇ ಮಕ್ಕಳಿಗೆ ಆತಂಕವಾಗಿದೆ.
ಮೌನಕ್ಕೆ ಜಾರಿದ ಭಾಗ್ಯ
ಭಾಗ್ಯಾ ಅಂತು ಏನು ಮಾಡಬೇಕು ಎಂಬುದನ್ನೇ ತಿಳಿಯದೇ ಮೌನಿಯಾಗಿದ್ದಾಳೆ. ಪ್ರಮಾಣ ಮಾಡಿ ತಾಳಿ ಕಟ್ಟಿದ ದಿನವನ್ನು ನೆನೆದು ಕಣ್ಣೀರಾಗಿದ್ದಾಳೆ. ಗಲಾಟೆ ಮಾಡಬೇಕಾ, ಸುಮ್ಮನೆ ಹೊರಟು ಬಿಡಬೇಕಾ ಎನ್ನುವುದು ಆಕೆಗೆ ತಿಳಿಯದಾಗಿದೆ.


Click it and Unblock the Notifications











