Bhagyalakshmi: ಭಾಗ್ಯಾಳ ದೃಢ ನಿರ್ಧಾರಕ್ಕೆ ತಾಂಡವ್ ಶಾಕ್; ಇನ್ಮುಂದೆ ಡಿವೋರ್ಸ್ ಹೆಸರೆತ್ತಂಗಿಲ್ಲ!

By ಎಸ್ ಸುಮಂತ್

ಕುಸುಮಾ ಮನೆಯಲ್ಲಿ ಮಗ ಸೊಸೆಯ ಬಗ್ಗೆಯೇ ಚಿಂತೆಯಾಗಿದೆ. ಅಮ್ಮ ತಂದ ಸೊಸೆ ಇಷ್ಟವಿಲ್ಲವೆಂದು ಡಿವೋರ್ಸ್ ಪಡೆಯಲು ಹೊರಟಿದ್ದಾನೆ. ಕುಸುಮಾಗೆ ಶ್ರೇಷ್ಠಾ ಮೇಲೆ ಅನುಮಾನವಿದೆ. ಆದರೆ ಅದಿನ್ನು ದಟ್ಟವಾಗಿಲ್ಲ. ಪೂಜಾಗೆ ಎಲ್ಲಾ‌ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಸಾಕ್ಷಿ ಸಮೇತ ನೋಡಿದ್ದಾಳೆ. ಹೀಗಾಗಿ ಅಕ್ಕನ ಸಂಸಾರ ಸರಿ ಮಾಡಲು ನಾಟಕವಾಡಿದ್ದಳು. ಕುಸುಮಾಳನ್ನು ಒಪ್ಪಿಸಿ, ಮಕ್ಕಳಿಂದ ನಾಟಕವಾಡಿಸಿದ್ದಳು. ಆದರೆ‌ ಈಗ ಶ್ರೇಷ್ಠಾಳಿಂದ ಸತ್ಯ ಗೊತ್ತಾಗಿದೆ.

ಪೆಂಡಿಂಗ್ ಇಟ್ಟಿದ್ದ ಡಿವೋರ್ಸ್ ಮಾತನ್ನು ತಾಂಡವ್ ಮತ್ತೆ ತೆಗೆದಿದ್ದಾನೆ. ಭಾಗ್ಯಾ ಈಗಿಂದ ಈಗಲೇ ಮನೆ ಬಿಟ್ಟು ಹೋಗ್ತಾ ಇರಬೇಕು ಎಂದಿದ್ದಾನೆ. ಮಕ್ಕಳಿಗೂ ಪಪ್ಪಾನೇ ಎಲ್ಲಾ ಅಂತ ವಾರ್ನಿಂಗ್ ಕೊಟ್ಟಿದ್ದಾನೆ. ಆದರೆ ಭಾಗ್ಯಾ ಇದ್ಯಾವುದಕ್ಕೂ ಬಗ್ಗಿಲ್ಲ. ತಾಂಡವ್‌ಗೆ ಥಂಡಾ ಹೊಡೆಯುವಂತೆ ಮಾಡಿದ್ದಾಳೆ.

Bhagyalakshmi kannada serial Written Update on April 4th episode

ತಿರುಗಿಬಿದ್ದ ಭಾಗ್ಯಾ

ಮನುಷ್ಯನಿಗೆ ಪದೇ ಪದೇ ಹೊಡೆತ ಬೀಳುತ್ತಿದ್ದರೆ ಯಾರೂ ಕೂಡ ಸಹಿಸುವುದಿಲ್ಲ. ಭಾಗ್ಯಾ ಮನೆ, ಮಕ್ಕಳು, ಸಂಸಾರಕ್ಕೋಸ್ಕರ ತನಗೆ ಎಷ್ಟೇ ನೋವಾದರೂ ಸಹಿಸಿಕೊಳ್ಳುತ್ತಿದ್ದಳು. ಆದರೆ‌ ಕಡೆಯದಾಗಿ ಮನೆ, ಮಕ್ಕಳನ್ನು ಬಿಟ್ಟು ಹೋಗಬೇಕು ಎಂದರೆ ಭಾಗ್ಯಾಳ ಕೋಪ ಹೆಚ್ಚಾಗಿದೆ. ಬದಲಾವಣೆಗಾಗಿ ಅವಕಾಶ ಕೂಡ ಕೊಟ್ಟಿದ್ದಳು. ತಾಂಡವ್ ಮೇಲೆ ಮಕ್ಕಳ ಜವಾಬ್ದಾರಿ ವಹಿಸಲಾಗಿತ್ತು. ಅದರಲ್ಲಿ ಸೋತ ಬಳಿಕ ಭಾಗ್ಯಾ, ವಾಪಾಸ್ ಬಂದಿದ್ದಾಳೆ. ಈಗ ಭಾಗ್ಯಾಳಿಗೆ ಮತ್ತೆ ಡಿವೋರ್ಸ್ ಕೊಡುತ್ತೇನೆ ಎಂದರೆ ಸುಮ್ಮನೆ ಇರುತ್ತಾಳಾ..?

ಡಿವೋರ್ಸ್ ಕೊಡಲ್ಲ ಅಂದ್ರೆ..!

ಡಿವೋರ್ಸ್ ಕೊಡುತ್ತೀನಿ ಸುಮ್ಮನೆ ಹೋಗ್ತಾ ಇರಬೇಕು ಎಂದಿದ್ದಾನೆ ತಾಂಡವ್. ಅದಕ್ಕೆ ಸುಮ್ಮನೆ ನೋಡದ ಭಾಗ್ಯಾ ಕೊಡಲ್ಲ ಅಂದ್ರೆ ಏನು ಮಾಡ್ತೀರಾ ಎಂದು ಧೈರ್ಯವಾಗಿಯೇ ಹೇಳಿದ್ದಾಳೆ. ಆದರೆ ಅದಕ್ಕೆ ಹೆದರದ ತಾಂಡವ್ ಕೋರ್ಟ್‌ನಲ್ಲಿ ನೋಡಿಕೊಳ್ಳುತ್ತೇನೆ ಎಂದಿದ್ದಾನೆ. ಭಾಗ್ಯಾ ಏನು ದಡ್ಡಿ‌ ಅಲ್ಲ. ಹಿರಿಯರಿಗೆ ಗೌರವ ಕೊಟ್ಟು, ಆ ರೀತಿ ಸೈಲೆಂಟ್ ಆಗಿ ಇರುತ್ತಾಳೆ. ಆದರೆ ತನ್ನವರನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾದರೆ ಜೋರು ಮಾತನಾಡುವುದಕ್ಕೂ ಬರುತ್ತದೆ. ಡಿವೋರ್ಸ್ ವಿಚಾರದಲ್ಲೂ ಅಷ್ಟೇ ಜೋರು ಧ್ವನಿ ಎತ್ತಿದ್ದಾಳೆ. ಹೊರಗೆ ಬಿಸಾಡಿದ್ದ ಬ್ಯಾಗ್ ಅನ್ನು ತಂದು ತಾಂಡವ್ ಮುಂದೆಯೇ ಒಳಗೆ ನಡೆದಿದ್ದಾಳೆ.

Bhagyalakshmi kannada serial Written Update on April 4th episode

ಅಮ್ಮನ ಬೆಂಬಲಕ್ಕೆ ನಿಂತ ತನ್ವಿ

ಭಾಗ್ಯಾಳ ಧೈರ್ಯ ಕಂಡು ಅತ್ತೆ ಮಾವ ಅಂತು ಫುಲ್ ಖುಷಿಯಾಗಿದ್ದಾರೆ. ಭಾಗ್ಯಾ ನಿನ್ನನ್ನ ನಾವೂ ಹೋಗೋದಕ್ಕೆ ಬಿಡುವುದಿಲ್ಲ ಎಂದೇ ಹೇಳಿದ್ದಾರೆ. ಆ ವಾತಾವರಣ ನೋಡಿ ಮಕ್ಕಳು ಗಾಬರಿಯಾಗಿದ್ದರು. ತಾಂಡವ್, ಗುಂಡನ ಕಪಾಳಕ್ಕೆ ಹೊಡೆದಿದ್ದ. ಭಾಗ್ಯಾ ಸೀದಾ ಮಕ್ಕಳ ಬಳಿಕ ಧೈರ್ಯ ತುಂಬಿದ್ದಾಳೆ. ತನ್ವಿ ಈಗ ಅಮ್ಮನ ಮಗಳಾಗಿದ್ದಾಳೆ. ಅಮ್ಮನನ್ನು ತಬ್ಬಿ ಸಮಾಧಾನ ಮಾಡಿಕೊಂಡಿದ್ದಾಳೆ.

ಶ್ರೇಷ್ಠಾಗೂ ಶುರುವಾಯ್ತು ಸಂಕಷ್ಟ

ತಾಂಡವ್ ಸಂಸಾರ ಹಾಳು ಮಾಡಲು ಹೋದ ಶ್ರೇಷ್ಠಾಗೆ ಗ್ರಹಚಾರ ಕೆಟ್ಟಿದೆ. ಸುಂದರಿಯನ್ನು ತಾಂಡವ್ ಅಮ್ಮ ಎಂದು ಸುಳ್ಳು ಹೇಳಿದ್ದರು. ಈಗ ಅವಳ ಕಾಟ ತಡೆದುಕೊಳ್ಳಲು ಆಗದೇ ಲಗೇಜ್ ಸಮೇತ ಮನೆಯಿಂದ ಹೊರಗೆ ಹಾಕಿದ್ದಾಳೆ. ಸುಂದ್ರಿ ಮೊದಲೇ ಡ್ರಾಮಾ ಆರ್ಟಿಸ್ಟ್. ಅಕ್ಕ ಪಕ್ಕದವರೆಲ್ಲಾ ಕಾಣುವಂತೆ ಡ್ರಾಮಾ ಶುರು ಮಾಡಿದ್ದಾಳೆ. ಎಲ್ಲರು ಶ್ರೇಷ್ಠಾಳನ್ನೇ ಬೈಯ್ಯುತ್ತಿದ್ದಾರೆ. ಆದರೆ ಅಕ್ಕ ಪಕ್ಕದವರ ಮಾತಿಗೆ ತಲೆ ಕೆಡಿಸಿಕೊಳ್ಳದ ಶ್ರೇಷ್ಠಾ, ಸುಂದರಿಯನ್ನು ಹೊರ ಹೋಗುವಂತೆ ಹೇಳಿದ್ದಾಳೆ. ಅಷ್ಟರಲ್ಲಿ ಶ್ರೇಷ್ಠಾಳ ಅಪ್ಪ ಆ ಜಾಗಕ್ಕೆ ಬಂದಿದ್ದಾರೆ. ಅಕ್ಕ ಪಕ್ಕದವರಿಗೆ ಕ್ಷಮೆ ಕೇಳಿ, ಸಮಸ್ಯೆಯನ್ನು ತಾನೂ ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ಪರಿಸ್ಥಿತಿ ಶ್ರೇಷ್ಠಾ ಹಾಗೂ ತಾಂಡವ್‌ಗೆ ಹೊಸ ಸವಾಲಾಗಿದೆ.

More from Filmibeat

English summary
Bhagyalakshmi kannada serial today episode. Here is the details about Tandav Shack to the answer of Bhagya;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X