Bhagyalakshmi: ಭಾಗ್ಯಾ ಹೇಳ್ತಾ ಇದ್ರೆ ತಾಂಡವ್ ಬಾಯಿ ಮುಚ್ಚಿಕೊಂಡು ಕೇಳ್ತಾ ಇರಬೇಕು!
ಅದೆಷ್ಟು ಜನ ಇದಕ್ಕಾಗಿ ಕಾಯುತ್ತಿದ್ದರೋ ಏನೋ. ಭಾಗ್ಯಾ ಎಲ್ಲವನ್ನು ಸಹಿಸಿಕೊಳ್ಳುತ್ತಾಳೆ. ಗಂಡ ಹೊಡೆದರು ಹೊಡೆಸಿಕೊಳ್ಳುತ್ತಾಳೆ. ಪ್ರೀತಿಯ ಅತ್ತೆ ಗದರಿದರು ಒಂದು ಮಾತನಾಡಲ್ಲ. ಮಾವನ ಆರೋಗ್ಯದ ಕಡೆಗೆ ಚಿಂತೆ. ಮಕ್ಕಳ ಜವಾಬ್ದಾರಿಯನ್ನೆಲ್ಲಾ ಹೊರುತ್ತಾಳೆ. ಹೀಗಿರುವಾಗ ಗಂಡ ಆದವನು ಅವಳನ್ನು ಇನ್ನಷ್ಟು ಪ್ರೀತಿಸಬೇಕು ಎಂಬುದೇ ಜನರ ಹಾರೈಕೆ.
ತಾಂಡವ್ ಮಾತ್ರ ಸದಾ ಭಾಗ್ಯಾಳನ್ನು ನಿಂದಿಸಿದ್ದೇ ಆಯ್ತು. ಶ್ರೇಷ್ಠಾಳಿಗೋಸ್ಕರ ಭಾಗ್ಯಾಳಿಗೆ ಡಿವೋರ್ಸ್ ಕೊಡುವ ಮಟ್ಟಕ್ಕೆ ಹೋಗಿದ್ದಾನೆ. ಒಬ್ಬ ಹೆಣ್ಣಿನ ತಾಳ್ಮೆಯನ್ನು ಹಾಗೇ ಬಿಟ್ಟರೆ ಮಾತ್ರ ಗಂಡನಿಗೆ ಒಳ್ಳೆಯದು. ಅದನ್ನು ಪದೇ ಪದೇ ಕಣಕಿದರೆ ಹೆದರಿ ಓಡಿಹೋಗುವುದಿಲ್ಲ. ಬದಲಿಗೆ ಹೆದರಿಸಿ ಮೆಟ್ಟಿನಿಲ್ಲುತ್ತಾಳೆ. ತಾಂಡವ್, ಭಾಗ್ಯಾಳ ವಿಚಾರದಲ್ಲಿ ಪದೇ ಪದೇ ಕೆರೆದು ಗಾಯ ಮಾಡಿಕೊಂಡಿದ್ದಾನೆ. ಈಗ ಏನಿದ್ದರೂ ಭಾಗ್ಯಾಳ ಮಾತನ್ನು ಸುಮ್ಮನೆ ಕೇಳಿಸಿಕೊಳ್ಳಬೇಕು ಅಷ್ಟೇ.

ಮಕ್ಕಳನ್ನು ಕರೆತಂದ ಭಾಗ್ಯಾ
ಭಾಗ್ಯಾಳಿಗೆ ಈಗಲೇ ಡಿವೋರ್ಸ್ ಕೊಡ್ತೀನಿ ಅಂತ ಹೇಳಿದ ತಾಂಡವ್, ಮಕ್ಕಳನ್ನು ಕೂಡಿ ಹಾಕಿದ್ದ. ಮಕ್ಕಳಿಗೆ ಅದು ಇಷ್ಟವೇ ಇಲ್ಲದೆ ಇದ್ದರು, ಧರ ಧರನೇ ಎಳೆದುಕೊಂಡು ಹೋಗಿದ್ದಾನೆ. ಮಕ್ಕಳನ್ನು ಕೂಡೊ ಹಾಕಿ ಬಂದಿದ್ದಾನೆ. ಆದರೆ ಬ್ಯಾಗ್ ಎತ್ತುಕೊಂಡು ಮನೆ ಒಳಗೆ ಬಂದ ಭಾಗ್ಯಾ, ಮಕ್ಕಳನ್ನು ಕೂಡಿ ಹಾಕಿದ್ದ ಬಾಗಿಲನ್ನು ತೆಗೆದಿದ್ದಾಳೆ.
ತಾಂಡವ್ ಮೇಲೆ ಭಾಗ್ಯಾ ಫುಲ್ ಗರಂ
ಮಕ್ಕಳನ್ನ ಹೊರಗೆ ಕರೆದುಕೊಂಡು ಬಂದಿದ್ದು ಯಾಕೆ..? ನೀನು ಹೋಗುವ ತನಕ ಮಕ್ಕಳು ಬರಬಾರದು ಎಂದೇ ಕೂಡಿ ಹಾಕಿದ್ದೇ ಎಂದಾಗ ಭಾಗ್ಯಾ ಇನ್ನಷ್ಟು ಗರಂ ಆಗಿದ್ದಾಳೆ. ನಾನು ಹೋಗುವುದೇ ಇಲ್ಲ ಎಂದಾಗ ಮಕ್ಕಳನ್ನು ಕೂಡಿ ಹಾಕುವುದರಲ್ಲಿ ಏನು ಪ್ರಯೋಜನ ಎಂದಿದ್ದಾಳೆ. ಭಾಗ್ಯಾಳಿಗೆ, ತಾಂಡವ್ ಮತ್ತೆ ನನ್ನನ್ನು ಕೆಣಕಬೇಡ ಎಂದಿದ್ದಾನೆ. ಅದಕ್ಕೆ ನಾನು ಕೆಣಕುವುದೇ ಅಂತಾನೇ ಉತ್ತರ ಕೊಟ್ಟಿದ್ದಾಳೆ.

ಹೆಂಡತಿ ಸ್ಥಾನದ ಗೌರವ ತಿಳಿಸಿದ ಭಾಗ್ಯಾ
ತಾಂಡವ್ ತನ್ನ ಮಾತನ್ನು ಬದಲಾಯಿಸುವಂತೆ ಕಾಣಿಸುತ್ತಿಲ್ಲ. ಪದೇ ಪದೇ ಡಿವೋರ್ಸ್ ಮಾತನ್ನೇ ಎತ್ತುತ್ತಾನೆ. ಅಮ್ಮನಿಂದ ಮಕ್ಕಳನ್ನು ದೂರ ಮಾಡುವುದಕ್ಕೆ ನೋಡುತ್ತಿದ್ದಾನೆ. ಇದನ್ನು ನೋಡಿದ ಭಾಗ್ಯಾ, ನಿಮ್ಮ ಎಲ್ಲಾ ಮಾತಿಗೆ ತಲೆಯಲ್ಲಾಡಿಸಿ ಸಾಕಾಗಿದೆ. ಬರ್ತಾ ಬರ್ತಾ ಅತಿಯಾಗಿದೆ ನಿಮ್ಮದು. ಗಂಡನ ಸ್ಥಾನಮಾನಕ್ಕೆ ಧಕ್ಕೆ ಬರಬಾರದು ಎಂದು ಅತ್ತೆ-ಅಮ್ಮ ಹೇಳಿಕೊಟ್ಟಂತೆ ಸುಮ್ಮನೆ ಇದ್ದರೆ, ನೀವೂ ಹೆಂಡತಿ ಸ್ಥಾನಕ್ಕೆ ಗೌರವ ಇದೆ ಎಂಬುದನ್ನ ತಿಳಿಯದೆ ಮೀರಿ ನಡೆದುಕೊಳ್ಳುತ್ತಾ ಇದ್ದೀರಾ ಎಂದು ಗದರಿದ್ದಾಳೆ.
ಭಾಗ್ಯಾಳ ಮಾತಿಗೆ ತಾಂಡವ್ ಗಾಬರಿ
ಈ ಅಮ್ಮ ನೀವೂ ಬೇಕು ಅಂದಾಗ ಬಂದು ಹೋಗು ಅಂದಾಗ ಹೋಗಳಲ್ಲ. ಇವತ್ತು ನೀವೂ ನಾನು ಹೇಳಿದಂತೆ ನೀವೂ ಬಾಯಿ ಮುಚ್ಚಿಕೊಂಡು ಕೇಳಿಸಿಕೊಳ್ಳುತ್ತಾ ಇರಬೇಕು. ಆಗಲೇ ನೀವೇನೋ ಹೇಳಿದ್ರಲ್ಲ ಯಾವ ಅಧಿಕಾರದಿಂದ ಇರುತ್ತೀಯ ಅಂತ, ತಾಯಿ ಅನ್ನೋ ಅಧಿಕಾರದಿಂದ ಇದ್ದೀನಿ. ನಿಮಗಿಂತ ನೂರು ಪಟ್ಟು ಮಕ್ಕಳನ್ನ ಅರ್ಥ ಮಾಡಿಕೊಂಡಿದ್ದೀನಿ. ಈ ಮಕ್ಕಳು ನಿಮಗೆಷ್ಟು ಮುಖ್ಯವೋ ನನಗು ಅಷ್ಟೇ ಮುಖ್ಯ. ನಾನು ಸತ್ತರು ಮಕ್ಕಳನ್ನು ಬಿಟ್ಟು ಹೋಗುವುದಿಲ್ಲ ಎಂದು ಭಾಗ್ಯಾ, ತಾಂಡವ್‌ಗೆ ಖಡಕ್ ಆಗಿಯೇ ಉತ್ತರ ಕೊಟ್ಟಿದ್ದಾಳೆ. ಭಾಗ್ಯಾಳ ಉತ್ತರಕ್ಕೆ ಅತ್ತೆ ಮಾವ ಖುಷಿಯಾಗಿದ್ದಾರೆ. ಮಕ್ಕಳಿಗೂ ಧೈರ್ಯ ಬಂದಿದೆ.


Click it and Unblock the Notifications











