Bhagyalakshmi: ತಾಂಡವ್ ಕೊಬ್ಬು ತೋರಿಸಿದ್ರೆ ಇಳಿಸಲು ಕುಸುಮಾಗೆ ಗೊತ್ತು!

By ಎಸ್ ಸುಮಂತ್

ಭಾಗ್ಯಾ, ಕುಸುಮಾಳ ಆಯ್ಕೆ. ಕುಸುಮಾಳ ಆಯ್ಕೆ ಎಲ್ಲಿಯೂ ತಪ್ಪಾಗುವುದಕ್ಕೆ ಸಾಧ್ಯವೇ ಇಲ್ಲ. ಒಂದು ಯಶಸ್ವಿ ಸಂಸಾರವನ್ನು ನಡೆಸುವುದರಲ್ಲಿ ಭಾಗ್ಯಾ ಸಕ್ಸಸ್ ಆಗಿದ್ದಾಳೆ‌. ಎರಡು ಮಕ್ಕಳ ತಾಯಿಯಾಗಿ ಮಕ್ಕಳನ್ನು ಸರಿಯಾಗಿ ನೋಡಿಕೊಂಡು, ಅತ್ತೆ ಮಾವನ ಆರೋಗ್ಯ ಕಾಪಾಡುತ್ತಾ, ಮನೆಯನ್ನು ಚೆನ್ನಾಗಿಯೇ ನಿರ್ವಹಣೆ ಮಾಡುತ್ತಿದ್ದಾಳೆ. ಹೀಗಾಗಿ ಭಾಗ್ಯಾ ತಕ್ಕ ಸೊಸೆಯಾಗಿದ್ದಾಳೆ.

ತನ್ನ ಆಯ್ಕೆ ತಪ್ಪಲ್ಲ ಎಂದು ಗೊತ್ತಾದ ಮೇಲೆ ಕುಸುಮಾ, ಸೊಸೆಯನ್ನು ಬಿಟ್ಟುಕೊಡುವುದಕ್ಕೆ ಚಾನ್ಸೇ ಇಲ್ಲ‌. ಎಷ್ಟೇ ಸಲ ತಾಂಡವವಾಡಿದರೂ ಸಹ ಕುಸುಮಾ ತನ್ನ ಸೊಸೆಯ ಪರವಾಗಿಯೇ ಇದ್ದಾಳೆ. ಈಗ ಸೊಸೆಗಾಗಿ ಮನೆಯನ್ನೇ ಎರಡು ಭಾಗವಾಗಿ ಮಾಡಿದ್ದಾಳೆ. ಗೆರೆ ಹಾಕಿ, ಆ ಕಡೆ ನೀನು, ಈ ಕಡೆ ನಾವೂ ಎಂದಿದ್ದಾಳೆ. ತಾಯಿಯ ಮಾತು ಕೇಳಿ ತಾಂಡವ್ ಶಾಕ್ ಆಗಿದ್ದಾನೆ.

Bhagyalakshmi kannada serial Written Update on April 8th episode

ಸೊಸೆಗಾಗಿ ಗಟ್ಟಿ ನಿರ್ಧಾರ

ತಾಂಡವ್‌ ಇಂದು ಸರಿ ಆಗ್ತಾನೆ ನಾಳೆ ಸರಿ ಆಗ್ತಾನೆ ಅಂತ ಕಾದಿದ್ದೇ ಆಯ್ತು. ಆದರೆ ಅವನು ಸರಿ ಹೋಗುವತ್ತ ಯೋಚನೆಯನ್ನು ಮಾಡುತ್ತಿಲ್ಲ. ಮಾತೆತ್ತಿದರೆ ನಂಗೆ ಭಾಗ್ಯಾ ಬೇಡ, ಡಿವೋರ್ಸ್ ಕೊಡ್ತೀನಿ, ಮನೆಯಿಂದ ಹೊರ ಹೋಗು ಎಂಬುದನ್ನೇ ಹೇಳುತ್ತಿದ್ದ. ಇದನ್ನು ನೋಡಿ ನೋಡಿ ಬೇಸತ್ತ ಕುಸುಮಾ, ಒಳ್ಳೆಯ ಪ್ಲ್ಯಾನ್ ಅನ್ನೇ ಮಾಡಿದ್ದಾಳೆ. ಸೊಸೆಗಾಗಿ ಆಸ್ತಿಯನ್ನೇ ತ್ಯಾಗ ಮಾಡಿದ್ದಾಳೆ. ಇದಕ್ಕೆ ಮಾವನ ಒಪ್ಪಿಗೆಯೂ ಸಿಕ್ಕಿದೆ.

ತನ್ನವರನ್ನೆಲ್ಲಾ ತನ್ನತ್ತ ಕರೆದ ಕುಸುಮಾ

ಮೊದಲೇ ಗಂಡನ ಜೊತೆಗೆ ಜಗಳ ಆಡಿ ಆತಂಕದಲ್ಲಿದ್ದಳು ಭಾಗ್ಯಾ. ಆಗ ಬಂದ ಕುಸುಮಾ ಒಂದು ಗೆರೆ ಎಳೆದಳು. ತಾಂಡವ್ ಗೆ ಇದನ್ನು ಕಂಡು ಶಾಕ್ ಆಗಿತ್ತು. ಸೊಸೆಯನ್ನು ಉಳಿಸಿಕೊಳ್ಳುವುದಕ್ಕೆ ತನ್ನರ್ಧ ಆಸ್ತಿಯನ್ನೇ ಬರೆದಿಟ್ಟಿದ್ದಳು. ಗೆರೆಯಿಂದ ಹೊರಗೆ ಹೋಗಿ, ಸೊಸೆಯ ಕೈಹಿಡಿದು ಕರೆದುಕೊಂಡು ಬಂದಳು. ಮೊಮ್ಮಕ್ಕಳನ್ನು ತನ್ನತ್ತ ಕರೆದುಕೊಂಡಳು. ಪೂಜಾ ಹಾಗೂ ಸುನಂದಾಳನ್ನು ತನ್ನ ಮನೆಗೆ ಕರೆದುಕೊಂಡಳು.

ತಾಂಡವ್ ಗೆ ಎಚ್ಚರಿಕೆ ನೀಡಿದ ಕುಸುಮಾ

ಪದೇ ಪದೇ ಮನೆ ಬಿಟ್ಟು ಹೋಗು ಎನ್ನುವ ತಾಂಡವ್‌ಗೆ ಇದು ಭಾಗ್ಯಾಳಿಗೂ ಸೇರಿದ ಮನೆ ಎಂಬುದನ್ನು ಸ್ಪಷ್ಟಪಡಿಸಿದಳು. ದಾಖಲೆ‌ ಸಮೇತ. ಗೆರೆ ಎಳೆದಿರುವ ಕಡೆ ನಮ್ಮ ಮನೆ, ಆ ಕಡೆ ನಿನ್ನ ಮನೆ ಎಂದಿದ್ದಾಳೆ. ನಮ್ಮ ಜೊತೆಗೆ ನನ್ನ ಸೊಸೆ, ಮೊಮ್ಮಕ್ಕಳು, ಸುನಂದಾ, ಪೂಜಾ ಜೊತೆಗೆ ಇರುತ್ತಾರೆ. ನೀನು ನಿನ್ನ ಮನೆಯಲ್ಲಿ ಇರು ಎಂದಿದ್ದಾಳೆ. ತಾಂಡವ್ ಈ ಉತ್ತರವನ್ನು ನಿರೀಲ್ಷೆ ಮಾಡಿರಲಿಲ್ಲ. ಅಮ್ಮನ ಮಾತನ್ನು ಕೇಳಿ ಶಾಕ್ ಆಗಿದ್ದಾನೆ.

Bhagyalakshmi kannada serial Written Update on April 8th episode

ಸುಂದ್ರಿಯಿಂದ ಶ್ರೇಷ್ಠಾಗೆ ಸಂಕಷ್ಟ

ಮೊದಲೇ ತಾಂಡವ್ ಸಿಗುತ್ತಿಲ್ಲ ಎಂಬ ಕೋಪದಲ್ಲಿದ್ದಾಳೆ ಶ್ರೇಷ್ಠಾ. ಸುಂದರಿಯ ಟಾರ್ಚರ್‌ಗೆ ಮನೆಯಿಂದ ಹೊರ ಹಾಕುವುದಕ್ಕೆ ಪ್ರಯತ್ನ ಪಟ್ಟಿದ್ದಳು. ಆದರೆ ಶ್ರೇಷ್ಠಾಳ ತಂದೆ ಬಂದು ಅದನ್ನು ತಪ್ಪಿಸಿದ್ದರು. ಸುಂದ್ರಿಗೆ ಎಲ್ಲಾ ಸತ್ಯ ಗೊತ್ತಿರುವ ಕಾರಣ, ತನ್ನ ಲಾಭವನ್ನಷ್ಟೇ ನೋಡುತ್ತಿದ್ದಾಳೆ. ಹೀಗಾಗಿ ಶ್ರೇಷ್ಠಾಳನ್ನು ಉರಿದು ಮುಕ್ಕುತ್ತಿದ್ದಾಳೆ. ಅದರ ಜೊತೆಗೆ ತಾಂಡವ್ ವಿಚಾರ ತೆಗೆದು ತೆಗೆದು ಕಾಡಿಸುತ್ತಿದ್ದಾಳೆ.

ಶ್ರೇಷ್ಠಾಗೆ ಸುಂದ್ರಿ ಕಾಟ

ಅತ್ತ ಸುಂದ್ರಿಯನ್ನು ಸಹಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ ಬಿಡುವುದಕ್ಕೂ ಆಗುತ್ತಿಲ್ಲ. ಇನ್ನೊಂದು ಕಡೆ ತಾಂಡವ್ ಸಿಗದೇ ಇರುವ ಟೆನ್ಶನ್ ಬೇರೆ. ಆದರೆ ತಾಂಡವ್ ಈಗಿನ ಪರಿಸ್ಥಿತಿಗೆ ಮನೆ ಬಿಟ್ಟು ಶ್ರೇಷ್ಠಾ ಬಳಿಗೆ ಬರುವುದು ಕಷ್ಟವಾಗಿದೆ.

More from Filmibeat

English summary
Bhagyalakshmi kannada serial today episode. Here is the details about Kusuma wrote property for Bhagya;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X