Bhagyalakshmi: ಮಗಳಿಗೆ ನಗುತ್ತಲೇ ಭಾಗ್ಯ ಪಾಠ: ಆವೇಶದಿಂದ ಕುದಿಯುತ್ತಿರುವ ತಾಂಡವ್

By ಶೃತಿ ಹರೀಶ್ ಗೌಡ

ಭಾಗ್ಯ ಹಾಗೂ ತನ್ವಿ ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಕಡೆ ಭಾಗ್ಯ ಬಾಯಿ ಬಿಟ್ಟು ಏನನ್ನು ಹೇಳದೇ ತನ್ವಿಗೆ ಪಾಠವನ್ನ ಕಲಿಸಬೇಕು ಎಂದು ನಿರ್ಧಾರ ಮಾಡಿದ್ದಾಳೆ. ಅತ್ತೆ ನೀವೇನು ಟೆನ್ಶನ್ ಮಾಡಿಕೊಳ್ಳಬೇಡಿ ನಾನು ಇನ್ಮುಂದೆ ತನ್ವಿಯನ್ನು ಬಿಟ್ಟು ಎಲ್ಲೂ ಹೋಗೋದಿಲ್ಲ ತರಗತಿಯಲ್ಲೂ ಅಷ್ಟೇ ತನ್ವಿ ಪಕ್ಕ ಕುಳಿತುಕೊಳ್ಳುತ್ತೇನೆ ಎಂದೆಲ್ಲಾ ಒಗಟಾಗಿ ಮಾತನಾಡುತ್ತಿದ್ದಾಳೆ.

ಅಮ್ಮ ಒಗಟು ಒಗಟಾಗಿ ಮಾತನಾಡುತ್ತಿರುವುದು ತನ್ವಿಗೆ ಟೆನ್ಶನ್ ತಂದಿದೆ. ಅಮ್ಮನಿಗೆ ಎಲ್ಲಾ ಸತ್ಯವೂ ಸಹ ಅರ್ಥವಾಗಿ ಹೋಗಿದೆ, ಆದರೆ ನನ್ನ ಮುಂದೆ ಈ ರೀತಿ ಮಾತನಾಡುತ್ತಿದ್ದಾಳೆ ಎಂದು ತನ್ವಿ ಅಂದುಕೊಂಡಿದ್ದಾಳೆ. ಇನ್ನು ಅಜ್ಜಿಯ ಬಳಿ ನಾನು ಶಾಲೆಗೆ ಬಾರದೆ ಚಕ್ಕರ್ ಹೊಡೆದಿದ್ದೆ ಎಂಬ ಸತ್ಯವನ್ನ ಹೇಳುತ್ತಾಳೆ.‌ ಅಜ್ಜಿ ಚೆನ್ನಾಗಿ ಬೈಯ್ಯುತ್ತಾರೆ ಎಂದು ತನ್ವಿ ಭಯ ಪಡುತ್ತಿದ್ದಾಳೆ.

Bhagyalakshmi Kannada serial Written Update on Aug 5th episode

ಈ ಕಡೆ ತಾಂಡವ್‌ಗೆ ಶ್ರೇಷ್ಠ ಇರಿಟೇಟ್ ಮಾಡುತ್ತಿದ್ದಾಳೆ. ಶ್ರೇಷ್ಠ ತಂದೆ ತಾಯಿಯನ್ನು ತಾಂಡವ್ ಕಾರಿನಲ್ಲಿ ಕೂರಿಸಿಕೊಂಡು ನಾನು, ಆಂಟಿ ಅಂಕಲ್‌ಗೆ ಇಡೀ ಬೆಂಗಳೂರನ್ನು ತೋರಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಇದಕ್ಕೆ ಶ್ರೇಷ್ಠ ಅಪ್ಪ ಅಮ್ಮಗೆ ಬೆಂಗಳೂರು ತೋರಿಸುವುದು ಏನೂ ಬೇಡ. ನಿನ್ನ ತಂದೆ ತಾಯಿಯನ್ನ ತೋರಿಸು ಎಂದು ಹೇಳಿದ್ದಾಳೆ. ‌ಇದಕ್ಕೆ ತಾಂಡವ್ ನಾನೇ ನನ್ನ ತಂದೆ ತಾಯಿಯ ಬಳಿ ಮಾತನಾಡಿ ನಿಮಗೆ ತಿಳಿಸುತ್ತೇನೆ ಎಂದು ಜಾರಿಕೊಂಡಿದ್ದಾನೆ.

ಅಮ್ಮನ ಬಳಿ ಬಂದ ತನ್ವಿ

ಭಾಗ್ಯ ತನ್ನ ಮಗಳಿಗೆ ಕೂಗಾಡದೆ, ಕಿರುಚಾಡದೆ ಎಲ್ಲರ ಮುಂದೆ ಸತ್ಯವನ್ನು ಹೇಳದೆ ಸಹನೆಯಿಂದ ಪಾಠ ಕಲಿಸಬೇಕು ಎಂದು ತೀರ್ಮಾನ ಮಾಡಿದ್ದಾಳೆ. ಭಾಗ್ಯ ಅಡುಗೆ ಮನೆಯಲ್ಲಿ ಕೇಸರಿಬಾತ್ ಮಾಡುವ ವೇಳೆ ತನ್ವಿ ಅಡುಗೆ ಮನೆಗೆ ಬಂದು ಅಮ್ಮ ಎಂದು ಕರೆದಿದ್ದಾಳೆ. ತನ್ವಿ ಬಂದಿದ್ದನ್ನು ನೋಡಿದ ಭಾಗ್ಯ ಆಶ್ಚರ್ಯದಿಂದ ಏನು ತನ್ವಿ ಅಡುಗೆ ಮನೆ ಕಡೆ ಬಂದಿದ್ದೀಯಾ. ಅಮ್ಮನಿಗೆ ಸಹಾಯ ಮಾಡಬೇಕು ಎಂದುಕೊಂಡು ಬಂದ್ಯಾ ಎಂದು ಕೇಳಿದ್ದಾಳೆ.

Bhagyalakshmi Kannada serial Written Update on Aug 5th episode

ಧರ್ಮರಾಜ್‌ಗೆ ಅನುಮಾನ

ಭಾಗ್ಯ ಮಗಳಿಗೆ ಪಾತ್ರೆ ತೊಳೆಯುವಂತೆ ಹೇಳಿದ್ದಾಳೆ. ಪಾತ್ರೆ ತೊಳೆಯಲು ನಿರಾಕರಿಸಿದ ತನ್ವಿಗೆ ಹಾಸ್ಟೆಲ್‌ಗೆ ಹೋದರೆ ನಿನ್ನ ಕೆಲಸ ನೀನೇ ಮಾಡಿಕೊಳ್ಳಬೇಕಾಗಿತ್ತು. ಇಲ್ಲೂ ಅದನ್ನೇ ಮಾಡು ಎಂದು ಭಾಗ್ಯ ಹೇಳಿದ್ದಾಳೆ. ಇದೇ ವೇಳೆ ಮರು ಮಾತನಾಡದೇ ತನ್ವಿ ಪಾತ್ರೆ ತೊಳೆಯುತ್ತಿದ್ದಾಳೆ. ಇದೆಲ್ಲವನ್ನು ಸಹ ಭಾಗ್ಯ ಮಾವ ಧರ್ಮರಾಜ್ ಗಮನಿಸುತ್ತಾ ಇದ್ದಾನೆ. ಅಡುಗೆ ಮನೆಯೊಳಗೆ ಬಂದ ಧರ್ಮರಾಜ್, ಭಾಗ್ಯ ಎಲ್ಲವೂ ಕೂಡ ಸರಿಯಾಗಿದೆ ತಾನೇ ಎಂದು ಕೇಳಿದ್ದಾರೆ. ಇದಕ್ಕೆ ಭಾಗ್ಯ, ಮಾವ ಎಲ್ಲವೂ ಕೂಡ ಸರಿಯಾಗಿದೆ. ಸರಿ ಇಲ್ಲದಿದ್ದರೆ ನಾನು ಅದನ್ನು ಸರಿ ಮಾಡಿರುತ್ತೇನೆ ಎಂದು ಒಗಟಿನ ರೀತಿ ಮಾವನಿಗೂ ಹೇಳಿದ್ದಾಳೆ.

ಅಮ್ಮನ ಬಳಿ ತಾಂಡವ್ ಪ್ರಶ್ನೆ

ತಾಂಡವ್ ಮನಸಿನ ಒಳಗಡೆ ಬೆಟ್ಟದಷ್ಟು ದ್ವೇಷ ಇಟ್ಟುಕೊಂಡು ಭಾಗ್ಯ ಮುಂದೆ ಪ್ರೀತಿಯ ಮುಖವಾಡ ಹಾಕಿ ಬದುಕನ್ನು ನಡೆಸುತ್ತಿದ್ದಾನೆ. ಇದು ಭಾಗ್ಯಗೂ ಸಹ ತಿಳಿದಿದೆ. ಮತ್ತೊಂದು ಬಾರಿ ಇದು ಭಾಗ್ಯ ಮುಂದೆ ಪ್ರಕಟವಾಗಿದೆ.‌ ಮನೆಗೆ ಬಂದ ತಾಂಡವ್‌ಗೆ ಭಾಗ್ಯ ಕೇಸರಿ ಬಾತ್ ಕೊಟ್ಟಿದ್ದಾಳೆ. ಇದೇ ವೇಳೆ ತಾಂಡವ್ ಅಮ್ಮನ ಬಳಿ ಏನು ಇವತ್ತು ಪೂಜೆ ಹಾಗೂ ಸಿಹಿ ಮನೆಯಲ್ಲಿ ಮಾಡಿದ್ದೀರಾ ಎಂದು ಕೇಳಿದ್ದಾನೆ.

ತಾಂಡವ್‌ಗೆ ಆವೇಶ

ನಾನು ಇವತ್ತು ಭಾಗ್ಯಳನ್ನ ಶಾಲೆಗೆ ಸೇರಿಸಿ ಬಂದೆ ಅದಕ್ಕಾಗಿ ಮನೆಯಲ್ಲಿ ಪೂಜೆ, ಸಿಹಿ ಮಾಡಿಸಿದ್ದೇನೆ ಎಂದು ಕುಸುಮಾ ಹೇಳಿದ್ದಾರಳೆ. ತಾಂಡವ್‌ಗೆ ಇದರಿಂದ ಬೇಸರವಾಗಿದೆ. ಏನು ಭಾಗ್ಯ ಶಾಲೆಗೆ ಸೇರಿಕೊಂಡು ಬಿಟ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ. ಇದೇ ವೇಳೆ ತನ್ನ ಸಿಟ್ಟು ಹಾಗೂ ಅಸಹನೆಯನ್ನು ಹೊರ ಹಾಕಿದ್ದಾನೆ. ಅದು ಸಹ ಯಾರಿಗೂ ಗೊತ್ತಾಗದ ರೀತಿ ಸೋಫಾ ಮೇಲಿದ್ದ ಕೈನ ಮುಷ್ಟಿಯನ್ನ ಬಿಗಿ ಮಾಡಿದ್ದಾನೆ. ಇದನ್ನು ನೋಡಿ ಭಾಗ್ಯ ಬೇಸರ ಮಾಡಿಕೊಂಡಿದ್ದಾಳೆ.

More from Filmibeat

English summary
Bhagyalakshmi Kannada serial today episode. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X