Bhagyalakshmi: ತನ್ನ ಗಂಡನ ಸತ್ಯವನ್ನು ಶ್ರೇಷ್ಠಾ ಅಪ್ಪ-ಅಮ್ಮನಿಗೆ ಹೇಳಿಯೇ ಬಿಟ್ಟಳು ಭಾಗ್ಯಾ!
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠಾ ಮದುವೆ ತಯಾರಿ ನಡೆಯುತ್ತಿದೆ. ಶ್ರೇಷ್ಠಾಗೆ ಇರುವ ಮದುವೆ ದೋಷವನ್ನು ಪರಿಹಾರ ಮಾಡಲು ಆಕೆಯ ಅಪ್ಪ ಅಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಮದುವೆಯಲ್ಲಿ ಏನೆಲ್ಲಾ ಶಾಸ್ತ್ರಗಳನ್ನು ಮಾಡುತ್ತಾರೋ ಆ ಎಲ್ಲಾ ಶಾಸ್ತ್ರಗಳನ್ನು ಮಾಡುವ ಮೂಲಕ ದೋಷ ಪರಿಹಾರಕ್ಕೆ ಮುಂದಾಗಿದ್ದಾರೆ.
ಭಾಗ್ಯ, ತನ್ನ ವೈಯಕ್ತಿಕ ಜೀವನಕ್ಕೆ ತಲೆ ಹಾಕುತ್ತಿದ್ದಾಳೆಂದು ಕೋಪಗೊಂಡ ಶ್ರೇಷ್ಠಾ, ಭಾಗ್ಯಾಳ ವೈಯಕ್ತಿಕ ಬದುಕಿಗೇನೆ ಸಂಕಷ್ಟ ತಂದಿಟ್ಟಿದ್ದಾಳೆ. ಶ್ರೇಷ್ಠಾಳನ್ನು ನಂಬಿ ಡಿವೋರ್ಸ್ ಬೇಕು ಅಂತ ಕುಸಿಯುತ್ತಿರುವ ತಾಂಡವ್‌ಗೆ ಈಗ ಭಾಗ್ಯಾಳ ವಿರುದ್ಧವೇ ಮತ್ತೊಂದು ಅಸ್ತ್ರ ಕೊಟ್ಟಿದ್ದಾಳೆ. ಹಾಗಂತ ಭಾಗ್ಯಾ ಸುಮ್ಮನೆ ಕೂರುವುದಿಲ್ಲ. ಗ್ರಹಚಾರ ಬಿಡಿಸಲು ದೇವಸ್ಥಾನದಲ್ಲಿಯೇ ಸಮಯ ನಿಗದಿ ಮಾಡಿದ್ದಾಳೆ. ಶ್ರೇಷ್ಠಾ ಅಪ್ಪ ಅಮ್ಮನಿಗೆ ಸತ್ಯ ಗೊತ್ತಾಗಿದೆ.

ಮೇಘಾಳನ್ನು ಶ್ರೇಷ್ಠಾ ಶಾಕ್
ಶ್ರೇಷ್ಠಾಳಿಗೆ ಒಳ್ಳೆ ಮಾತಿನಿಂದ ಭಾಗ್ಯಾ ಬುದ್ದಿ ಮಾತು ಹೇಳಿದ್ದಳು. ಬಳೆ ತೊಡಿಸಿ, ಕುಂಕುಮ ಹಚ್ಚಿ ಒಳ್ಳೆಯವಳಾಗು ಎಂದೇ ಹೇಳಿದ್ದಳು. ಇದು ಶ್ರೇಷ್ಠಾಳ ಅಪ್ಪ ಅಮ್ಮನಿಗೆ ಗೊಂದಲವನ್ನುಂಟು ಮಾಡಿತ್ತು. ಏನಾಯ್ತು ಎಂದು ಕೇಳಿದಾಗ ಭಾಗ್ಯಾ ನಡೆದ ಘಟನೆಯನ್ನು ಹೇಳಿದಳು. ಆದರೆ ಶ್ರೇಷ್ಠಾ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಕ್ಕೆ ಸಿದ್ದವಿಲ್ಲ. ಭಾಗ್ಯಾ ಸುಮ್ಮನೆ ಏನನ್ನು ಮಾಡುವುದಿಲ್ಲ. ಶ್ರೇಷ್ಠಾಳ ಮುಂದೆ ಮೇಘಾಳನ್ನು ನಿಲ್ಲಿಸಿ, ಸತ್ಯ ಹೇಳಿಸಿದ್ದಾಳೆ.
ತಾಯಿಯಿಂದಲೇ ಶ್ರೇಷ್ಠಾಗೆ ಕಪಾಳಮೋಕ್ಷ
ಭಾಗ್ಯಾಳ ಬಗ್ಗೆ ಕೆಟ್ಟದಾಗಿ ವಿಡಿಯೋ ಮಾಡಿಸಿದ್ದಾಳೆ, ಅವಳ ಸಂಸಾರವನ್ನು ಹಾಳು ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ ಎಂದು ಗೊತ್ತಾದ ಮೇಲೆ ಯಶೋಧಾಗೆ ಮಗಳ ಮೇಲೆ ಹೆಚ್ಚಿನ ಕೋಪವೇ ಬಂತು. ತೆಗೆದು ಕಪಾಳಕ್ಕೆ ಹೊಡೆದಿದ್ದಾಳೆ. ಮದುವೆ ಹತ್ತಿರ ಇರುವಾಗ ಈ ರೀತಿಯ ಆಟವೆಲ್ಲಾ ಯಾಕೆ ಎಂದು ಬೈದಿದ್ದಾಳೆ. ಶ್ರೇಷ್ಠಾ ಅಪ್ಪನಿಗೂ ಕೋಪ ಬಂದಿದ್ದು, ಯಾವಾಗಲೂ ಈ ರೀತಿಯ ಕೆಲಸವನ್ನೇ ಮಾಡುತ್ತೀಯಲ್ಲ ಎಂದು ಬೈದಿದ್ದಾನೆ.

ತರುಣ್ ಬಗ್ಗೆ ಸತ್ಯ ಹೇಳಿದ ಭಾಗ್ಯಾ
ಶ್ರೇಷ್ಠಾಳ ಅಪ್ಪನಿಗೆ ಇವಳ್ಯಾಕೆ ಭಾಗ್ಯಾಳನ್ನು ಟಾರ್ಗೆಟ್ ಮಾಡುತ್ತಾ ಇದ್ದಾಳೆ ಎಂಬ ಪ್ರಶ್ನೆ. ಅವರ ತಾಯಿ ಯಶೋಧಾ ಕೂಡ ಅದನ್ನೇ ಹೇಳಿದ್ದಾರೆ. ಅಷ್ಟು ಒಳ್ಳೆಯ ಮನೆತನದ ಭಾಗ್ಯಾಗೆ ತೊಂದರೆ ಯಾಕೆ ಕೊಡುತ್ತೀಯಾ ಅಂತ. ಭಾಗ್ಯಾ ಮುಚ್ಚಿಟ್ಟ ಸತ್ಯವನ್ನ ಅಲ್ಲಿ ಬಾಯ್ಬಿಟ್ಟಿದ್ದಾಳೆ. 'ದ್ವೇಷ ಅಲ್ಲ ಸರ್ ಸೊಕ್ಕು. ಎರಡು ಮಕ್ಕಳಿರುವ ತಂದೆಯನ್ನ ಅವರ ಸಂಸಾರ ಬೀದಿಗೆ ತಂದು ಇವಳು ಮದುವೆ ಆಗುವುದಕ್ಕೆ ಹೊರಟಿದ್ದಾಳೆ' ಎಂದು ಮನಸ್ಸಲ್ಲಿ ಮುಚ್ಚಿಟ್ಟ ಸತ್ಯವನ್ನು ಹೇಳಿಯೇ ಬಿಟ್ಟಿದ್ದಾಳೆ.
ಅದು ತಾಂಡವ್ ಎಂದು ಭಾಗ್ಯಾಗೆ ಗೊತ್ತಾದರೆ?
ಭಾಗ್ಯಾ ಹೇಳಿದ ಮಾತನ್ನು ಕೇಳಿ ಶ್ರೇಷ್ಠಾ ತಂದೆ ತಾಯಿ ಶಾಕ್ ಆಗಿದ್ದಾರೆ. ಆದರೆ ಭಾಗ್ಯಾಳಿಗೆ ತರುಣ್ ತನ್ನ ಗಂಡ ತಾಂಡವ್ ಎಂಬ ಸತ್ಯ ಗೊತ್ತಾಗುವುದಕ್ಕೆ ಇನ್ನು ಬಹಳಷ್ಟು ಸಮಯ ಬೇಕಾಗಿದೆ. ಶ್ರೇಷ್ಠಾ ಅನಾಥ ಮಾಡುತ್ತಿರುವ ಎರಡು ಮಕ್ಕಳು ತನ್ನವೇ ಎಂಬುದು ಅರಿವಿಗೆ ಬರಲು ಸಮಯ ಬೇಕಾಗಿದೆ. ಸದ್ಯಕ್ಕೆ ತರುಣ್‌ಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂಬುದನ್ನು ಶ್ರೇಷ್ಠಾಳ ಅಪ್ಪ ಅಮ್ಮನ ಮುಂದೆ ಹೇಳಿದ್ದಾಳೆ. ಅವರು ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ. ಶ್ರೇಷ್ಠಾಳ ಹಠದ ಮುಂದೆ ಸತ್ಯ ಗೊತ್ತಾದರೇನು, ಸುಳ್ಳನ್ನೇ ನಂಬಿದ್ದರೇನು. ಯಾವುದೇ ವ್ಯತ್ಯಾಸ ಆಗಲ್ಲ.


Click it and Unblock the Notifications











