BhagyaLakshmi: ಕೊನೆಗೂ ಹೊರಗೆ ಬಂತು ಮುಚ್ಚಿಟ್ಟ ಸತ್ಯ: ತಾಂಡವ್ ಮಗಳ ಬಗ್ಗೆ ತಂದೆ-ತಾಯಿ ಬಳಿ ಹೇಳಿದ ಶ್ರೇಷ್ಠಾ.! ಮುಂದೇನು?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ಈಗ ಮಹತ್ವದ ತಿರುವೊಂದು ಪಡೆದುಕೊಂಡಿದೆ. ಇಷ್ಟು ದಿನ ಶ್ರೇಷ್ಠಾ ತನ್ನ ತಂದೆ ತಾಯಿಯ ಬಳಿ ಮುಚ್ಚಿಟ್ಟಿದ್ದ ಸತ್ಯ ಹೊರಗೆ ಬಂದಿದೆ. ಶ್ರೇಷ್ಠಾ ತಂದೆ ತಾಯಿಗೆ ಮೊದಲಿಂದಲೂ ಕೂಡ ತಾಂಡವ್ ಮೇಲೆ ಅನುಮಾನವಿತ್ತು. ಆದರೆ ಶ್ರೇಷ್ಠಾ ತಾಂಡವ್‌ ಪರವಾಗಿಯೇ ಮಾತನಾಡುತ್ತಾ ತನ್ನ ತಂದೆ ತಾಯಿಯನ್ನ ಒಪ್ಪಿಸಿದ್ದಳು. ಮಗಳಿಗೆ ರಾಘು ಜೊತೆಯಲ್ಲಿ ಮದುವೆ ಮಾಡಿಸಬೇಕು ಎಂಬುವುದು ಅವರ ಆಸೆಯಾಗಿತ್ತು.

ಮಗಳ ಮಾತಿಗೆ ಮಣಿದ ಶ್ರೀವರ ಹಾಗೂ ಯಶೋಧ ಇಬ್ಬರು ಕೂಡ ತಾಂಡವ್ ಜೊತೆಗೆ ಮದುವೆ ಮಾಡಿಸಲು ಒಪ್ಪಿಗೆ ಕೊಟ್ಟಿದ್ದರು. ತಂದೆ ತಾಯಿಯನ್ನು ತೊರೆದು ಶ್ರೇಷ್ಠಾ ಬೆಂಗಳೂರಿಗೆ ಬಂದಾಗ ಶ್ರೀವರ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಇದು ಕೂಡ ಶ್ರೇಷ್ಠಾಗೆ ಗೊತ್ತಿರಲಿಲ್ಲ ನಂತರ ಅದು ಕುಸುಮಾಗೆ ಹೇಗೋ ತಿಳಿದುಕೊಂಡು ತನ್ನ ಜೊತೆಯೇ ಇರುವಂತೆ ಶ್ರೇಷ್ಠಾ ಮಾಡುವಲ್ಲಿ ಸಕ್ಸಸ್ ಆಗಿದ್ದಳು. ತಾಂಡವ್ ತನ್ನ ಮನೆಯವರನ್ನೆಲ್ಲಾ ತೊರೆದು ಶ್ರೇಷ್ಠಾ ಜೊತೆಗೆ ಇದ್ದನು. ಈ ವೇಳೆ ಮತ್ತಷ್ಟು ತಾಂಡವ್ ಮನಸ್ಸು ಕೆಟ್ಟು ಹೋಗಿತ್ತು.

Bhagyalakshmi kannada serial Written Update on january 13th episode

ಇದೇ ಒಳ್ಳೆಯ ಸಮಯ ಎಂದುಕೊಂಡ ಶ್ರೇಷ್ಠಾ ತನ್ನ ತಂದೆ ತಾಯಿಗೆ ಫೋನ್ ಮಾಡಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವುದಾಗಿ ತಿಳಿಸಿದಳು. ಇದಕ್ಕಾಗಿ ಒಂದು ಡೇಟ್ ಫೀಕ್ಸ್ ಮಾಡಿದ್ದರು. ತಾಂಡವ್ ಮೊದಲೇ ಕಾರ್ಯಕ್ರಮ ಸಿಂಪಲ್ಲಾಗಿ ನಡೆಯಬೇಕು ಎಂದು ಹೇಳಿದನು. ಆದರೆ ಶ್ರೇಷ್ಠಾ ತಂದೆ ತಾಯಿ ಇರುವ ಒಬ್ಬಳೇ ಮಗಳಿಗೆ ಹೇಗೆ ಸಿಂಪಲ್ಲಾಗಿ ಮಾಡುವುದು ಎಂದು ಗ್ರಾಂಡ್ ಆಗಿ ಕಾರ್ಯಕ್ರಮ ಮಾಡಿದ್ದರು. ತಾಂಡವ್ ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ಕಾವ್ಯಗೆ ತಿಳಿದ ಮೇಲೆ ಅವಳು ತಾಂಡವ್‌ಗೆ ಹೇಳುವ ಪ್ರಯತ್ನವನ್ನು ಮಾಡಿದ್ದಳು. ಈ ನಡುವೆ ರಘು ಯಾರು ನಿಮಗೆ ರೂಮ್ ಲಾಕ್ ಮಾಡಿದ್ದರು ಎಂಬ ವಿಚಾರ ತಿಳಿದಾಗ ಕಾವ್ಯ ತರುಣ್ ಮಗಳಿಗೆ ಆಕ್ಸಿಡೆಂಟ್ ಆಗಿದೆ ಎಂಬ ವಿಚಾರವನ್ನು ಮಾತನಾಡಿದ್ದಾಳೆ.

ತಂದೆ-ತಾಯಿ ಬಳಿ ನಿಜ ಹೇಳಿದ ಶ್ರೇಷ್ಠಾ

ಹೊರಗೆ ಬಂತು ತಾಂಡವ್ ಮದುವೆ ವಿಚಾರ

ಕಾವ್ಯ ಹಾಗೂ ರಘು ಇಬ್ಬರು ತಾಂಡವ್ ಬಗ್ಗೆ ಮಾತನಾಡುವಾಗ ಶ್ರೇಷ್ಠಾ ತಂದೆ ಶ್ರೀವರ ಅವರು ಪ್ರತಿಯೊಂದು ಮಾತನ್ನು ಕೇಳಿಸಿಕೊಂಡಿದ್ದಾರೆ. ಈ ವೇಳೆ ಕಾವ್ಯ ಸುಮ್ಮನೆ ಆಗಿದ್ದು ಶ್ರೇಷ್ಠಾ ಬಳಿ ಬಂದ ಶ್ರೀವರ ಅವರು ತಾಂಡವ್‌ಗೆ ಮಗಳು ಇದ್ದಾಳ ಅವಳಿಗೆ ಆಕ್ಸಿಡೆಂಟ್ ಆಗಿದ್ಯಾ ಎಂಬುದರ ಬಗ್ಗೆ ಶ್ರೇಷ್ಠಾ ಬಳಿ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಆದರೆ ಶ್ರೇಷ್ಠಾಗೆ ತನ್ನ ತಂದೆಯ ಮುಂದೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಈ ವೇಳೆ ಏನನ್ನು ಹೇಳಲಿ ಎಂಬುದನ್ನು ಯೋಚನೆ ಮಾಡುತ್ತಿದ್ದಾಗ. ಶ್ರೀವರ ಅವರು ಮತ್ತೆ ನೀನು ಸುಳ್ಳು ಹೇಳಿದರೆ ಅದರ ಪರಿಣಾಮ ನೆಟ್ಟಗೆ ಇರೋದಿಲ್ಲ ಎಂದು ವಾರ್ನಿಂಗ್ ಮಾಡಿದ್ದಾರೆ.

ಕಾವ್ಯ ಕೂಡ ನೀನು ಸುಳ್ಳು ಹೇಳಬೇಡ ನನಗೆ ಇಷ್ಟು ದಿನ ಸತ್ಯವನ್ನ ಮುಚ್ಚಿಟ್ಟುಕೊಂಡು ಸಾಕಾಗಿ ಹೋಗಿದೆ ಸತ್ಯವನ್ನು ಹೇಳು ಎಂದು ಹೇಳಿದ್ದಾಳೆ. ಈ ವೇಳೆ ಶ್ರೇಷ್ಠಾ ಹೌದು ಮಗಳಿದ್ದಾಳೆ ಅವಳ ಹೆಸರು ತನ್ವಿ ಎಂಬ ಸತ್ಯವನ್ನು ಹೊರಗೆ ಹಾಕಿದ್ದಾಳೆ. ತರುಣ್ ಮಗಳು ಈಗ 10ನೇ ತರಗತಿಯನ್ನು ಓದುತ್ತಿದ್ದಾಳೆ ಎಂದು ಹೇಳಿದ ಕೂಡಲೇ ಶ್ರೇಷ್ಠಾ ತಂದೆ ತಾಯಿಯ ಮುಖಭಾವವೇ ಬದಲಾಗಿ ಹೋಗಿದೆ. ಹಾಗಾದರೆ ಇದು ತರುಣ್‌ಗೆ ಎರಡನೇ ಮದುವೆಯ ಎಂದು ಕೇಳಿದ್ದಾರೆ.

ಮುಂದೇನು ಶ್ರೇಷ್ಠಾ ಕಥೆ..!?

ಶ್ರೇಷ್ಠಾ ತಂದೆ ತಾಯಿಗೆ ತಾಂಡವ್ ಜೊತೆಗೆ ಮದುವೆ ಮಾಡುವುದು ಸ್ವಲ್ಪವೂ ಕೂಡ ಇಷ್ಟವಿರಲಿಲ್ಲ . ಈಗ ಹೇಗಿದ್ದರೂ ಅವನಿಗೆ ಇದು ಎರಡನೇ ಮದುವೆ ಎಂಬುವುದು ತಿಳಿದ ಮೇಲೆ ಶ್ರೇಷ್ಠಾಳ ಮದುವೆಯನ್ನು ತಾಂಡವ ಜೊತೆಗೆ ಮಾಡುತ್ತಾರಾ ಎಂಬ ಕುತೂಹಲ ವೀಕ್ಷಕರಲ್ಲಿ ಇದೆ. ತಾಂಡವ್ ತನ್ನ ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ತಿಳಿದು ಆಸ್ಪತ್ರೆಗೆ ತೆರಳುತ್ತಾನ ಅಥವಾ ಅಮ್ಮ ಹಾಗೂ ಹೆಂಡತಿಯ ಮೇಲಿನ ಕೋಪದಿಂದ ಸುಮ್ಮನೆ ಇರುತ್ತಾನ ನೋಡಬೇಕಿದೆ.

More from Filmibeat

English summary
Bhagyalakshmi serial january 13th episode Written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X