BhagyaLakshmi: ಮಗಳನ್ನು ನೋಡಲು ಬಂದು ತಗಲಾಕ್ಕೊಂಡ ತಾಂಡವ್: ಶ್ರೇಷ್ಠಾ ಹೆಸರು ಕೇಳಿದ ಮನೆ ಮಂದಿಗೆ ಶಾಕ್..!?
ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಂಡು ಸಾಗುತ್ತಾ ಇದೆ. ತಾಂಡವ್ ತನ್ನ ಎಂಗೇಜ್ಮೆಂಟ್ ಸಂಭ್ರಮವನ್ನೆಲ್ಲ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದಿದ್ದಾನೆ. ಇನ್ನು ಶ್ರೇಷ್ಠಾ ಆಕ್ಸಿಡೆಂಟ್ ಆಗಿದೆ ಎಂಬ ವಿಚಾರವನ್ನು ತಿಳಿಸಿದ್ದಾಳೆ ಆ ವಿಷಯ ಕೇಳಿದ ಕೂಡಲೇ ತಾಂಡವ್ ಓಡೋಡಿ ಮನೆಗೆ ಬಂದಿದ್ದಾನೆ. ಮನೆಗೆ ಬಂದ ತಾಂಡವ್‌ನನ್ನು ಕುಸುಮಾ ತಡೆದಿದ್ದಾರೆ. ನೀನು ದಾರಿ ತಪ್ಪಿ ಇಲ್ಲಿಗೆ ಬಂದಿದ್ದೀಯಾ ನೀನು ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದು ಚುಚ್ಚು ಮಾತನಾಡಿದ್ದಾರೆ. ತಾಂಡವ ಗೆ ಈಗ ಯಾರು ಏನೇ ಅಂದರೂ ಸರಿಯೇ ತನ್ನ ಮಗಳನ್ನು ನೋಡಬೇಕು ಎನ್ನುವ ಹಂಬಲ ಹೆಚ್ಚಾಗಿದೆ ಇದಕ್ಕಾಗಿ ಕುಸುಮ ಅವರನ್ನು ತಳ್ಳಿಕೊಂಡು ತನ್ವಿಯನ್ನು ನೋಡಲು ಹೋಗಿದ್ದಾನೆ.
ಇದೇ ವೇಳೆ ಭಾಗ್ಯ ನನ್ನ ಮಗಳನ್ನು ನೋಡಬೇಕು ಎಂದರೆ ನನ್ನ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದು ಗಂಡನ ವಿರುದ್ಧ ಜಗಳಕ್ಕೆ ನಿಂತಿದ್ದಾಳೆ. ನಿನ್ನಿಂದಲೇ ನಾನು ಈ ರೀತಿಯಲ್ಲ ನಡೆದುಕೊಳ್ಳುತ್ತಾ ಇದ್ದೇನೆ ಒಂದೇ ಊರಿನಲ್ಲಿ ಇದ್ದುಕೊಂಡು ಎರಡು ಮನೆಯನ್ನ ಮಾಡಿದ್ದೇನೆ ಎಂದು ತಾಂಡವ್ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದಾನೆ. ಆದರೆ ಭಾಗ್ಯಗೆ ಇದ್ಯಾವುದೂ ಕೂಡ ಇಷ್ಟವಾಗಿಲ್ಲ ಇನ್ನೂ ಒಂದೇ ಒಂದು ಮಾತು ಆಡಿದರೆ ಚೆನ್ನಾಗಿರುವುದಿಲ್ಲ ಎಂದು ತಾಂಡವ್‌ಗೆ ಭಾಗ್ಯಳೇ ಜೋರು ಮಾಡಿದ್ದಾಳೆ. ಹೆಂಡತಿ ತನ್ನ ವಿರುದ್ಧ ಮಾತನಾಡುತ್ತಿರುವುದನ್ನು ತಾಂಡವ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಆದರೂ ಕೂಡ ಈಗ ಭಾಗ್ಯಾಳ ಮಾತುಗಳನ್ನು ಕೇಳಲೇಬೇಕಾದ ಅನಿವಾರ್ಯತೆ ತಾಂಡವ್‌ಗೆ ಬಂದಿದೆ.

ಎಲ್ಲಾ ಅನಿಷ್ಟಕ್ಕೂ ಕೂಡ ಈ ಭಾಗ್ಯಾಳ ಕಾರಣ ಎಂದು ನೀವು ಹೇಳುವುದನ್ನು ನಾನು ಒಪ್ಪೋದಿಲ್ಲ. ನೀವು ಲಕ್ಷಗಟ್ಟಲೆ ದುಡಿದರೆ ಏನು ಮಗಳಿಗೆ ಆಕ್ಸಿಡೆಂಟ್ ಆದಾಗ ಬಿಲ್ ಕಟ್ಟಲು ಬಂದಿದ್ದು ಅವಳ ಚಿಕ್ಕಪ್ಪ ಎಂದು ವೈಷ್ಣವ್ ಬಿಲ್ ಕಟ್ಟಿದ್ದನ್ನು ಇದೆ ವೇಳೆ ಹೇಳಿದ್ದಾಳೆ. ಇನ್ನು ಮನೆಯವರೆಲ್ಲರನ್ನು ಕೂಡ ಎದುರು ಹಾಕಿಕೊಂಡು ತಾಂಡವ್ ತನ್ನ ಮಗಳು ತನ್ನಿಯನ್ನ ನೋಡಲು ಮೇಲಕ್ಕೆ ಹೋಗಿದ್ದಾನೆ ಇದೆ ವೇಳೆ ತನ್ವಿ ತನ್ನ ಅಪ್ಪನನ್ನ ನೋಡಿ ಬೇಸರ ವ್ಯಕ್ತಪಡಿಸಿದ್ದಾಳೆ. ಓಡೋಡಿ ಬಂದ ತಾಂಡವ್ ಮಗಳೇ ತನ್ವಿ ಹೇಗಿದ್ದೀಯಾ ಎಂದು ಕೇಳಿ ಮಗಳನ್ನು ತಬ್ಬಿಕೊಂಡಿದ್ದಾನೆ.
ಶ್ರೇಷ್ಠಾ ಆಂಟಿಯ ಜೊತೆಗೆ ಹೋಗಿ ಎಂದ ತನ್ವಿ
ತಾಂಡವ್ ತಬ್ಬಿಕೊಂಡ ಕೂಡಲೇ ತನ್ವಿಗೆ ಹಳೆಯದೆಲ್ಲಾ ನೆನಪಾಗುತ್ತಿದೆ. ಶ್ರೇಷ್ಠ ನಿನ್ನ ಮಗಳು ಹೊಸದಾಗಿ ಸುಳ್ಳು ಹೇಳುತ್ತಾಳಾಇಲ್ಲಿ ತನಕ ಸಾವಿರಾರು ಸುಳ್ಳುಗಳನ್ನ ಹೇಳಿದ್ದಾಳೆ. ತನ್ನ ಕೆಲಸ ಆಗಬೇಕು ಎಂದರೆ ಯಾವ ಮಟ್ಟಕ್ಕೆ ಬೇಕಾದರೂ ಸುಳ್ಳು ಹೇಳುತ್ತಾಳೆ ಎಂದು ಶ್ರೇಷ್ಟಾ ಹೇಳಿದ ಮಾತು ಈಗ ಕಣ್ಮುಂದೆ ಬಂದಿದೆ .ಅದೇ ಮಾತನ್ನು ಅಂದು ತಾಂಡವ್ ಕೇಳಿದ್ದು ಕೂಡ ನೆನಪಾಗಿದ್ದು ತನ್ನ ತಂದೆಯನ್ನ ಜೋರಾಗಿ ತಳ್ಳಿದ್ದಾಳೆ. ನೀವು ನನ್ನನ್ನ ನೋಡಲು ಯಾಕೆ ಬಂದ್ರಿ ಆ ಶ್ರೇಷ್ಠ ಆಂಟಿ ನಿಮಗೆ ಹೆಚ್ಚಾಗಿ ಹೋಗಿದ್ದಾಳೆ ಹೋಗಿ ಅವಳ ಜೊತೆಗೆ ಇರಿ ಎಂದು ತನ್ವಿ ಹೇಳಿದ್ದಾಳೆ.

ನಿಮ್ಮ ಮಗಳ ಮೇಲೆ ನಿಮಗೆ ನಂಬಿಕೆ ಇಲ್ಲ ನಾನು ಶಾಲಾ ಪ್ರವಾಸಕ್ಕೆ ಹೋಗಲು ಹಣ ಕೇಳಲು ಬಂದಾಗ ನನಗಿಂತ ನಿಮಗೆ ಶ್ರೇಷ್ಠಾ ಆಂಟಿ ಮಾತೆ ಹೆಚ್ಚಾಗಿ ಹೋಯಿತು. ಇದಕ್ಕಾಗಿ ನನ್ನ ಮೇಲೆ ಕೈ ಮಾಡಲು ಬಂದ್ರಿ ಎಂದು ತನ್ನ ತಂದೆ ತಾಂಡವ್‌ಗೆ ತನ್ವಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ನಾನು ಪೋನ್ ಮಾಡಿದಾಗ ನೀವು ಮೇಸೇಜ್ ಕಳುಹಿಸಿದ್ರಿ ಹಣವನ್ನು ಕೊಟ್ಟರೆ ಅಜ್ಜಿ ಹಾಗೂ ಅಮ್ಮ ಬಯ್ಯುತ್ತಾರೆ ಎಂದು ನಾನು ಆ ವಿಷಯ ಹೇಳಿದ ಕೂಡಲೇ ನನಗೆ ಯಾವ ಮೇಸೇಜ್ ಬಂದಿಲ್ಲ, ಕಾಲ್ ಬಂದಿಲ್ಲ ಎಂದು ಶ್ರೇಷ್ಠಾ ಆಂಟಿಯನ್ನು ಕೇಳಲು ಹೋದ್ರಿ. ನಿಮ್ಮ ಮಗಳನ್ನೇ ನೀನು ಸುಳ್ಳಿ ಎನ್ನೋದು ಎಷ್ಟು ಸರಿ ಎಂದು ಹೇಳಿದಾಗ ಮನೆಯವರ ಗಮನ ಶ್ರೇಷ್ಠಾ ವಿಷಯದ ಮೇಲೆ ಸೆಳೆದಿದೆ.
ಶ್ರೇಷ್ಠಾ ಮಾತು ಕೇಳಿದ ಮನೆಯವರಿಗೆ ಶಾಕ್, ತಾಂಡವ್‌ಗೆ ಸುನಂದಾ ಕ್ಲಾಸ್
ತನ್ವಿ ಯಾವಾಗ ಶ್ರೇಷ್ಠಾ ಹೇಳಿದಂತೆ ಕೇಳುತ್ತಾರೆ ಎಂದು ಹೇಳಿದಳು ಆಗ ಮನೆಯ ಎಲ್ಲರ ಕಿವಿ ನೆಟ್ಟಗಾಗಿ ಹೋಗಿದೆ. ಶ್ರೇಷ್ಠನಾ ಶ್ರೇಷ್ಠ ಹೇಳಿದಂತೆ ತಾಂಡವ್ ಕೇಳುತ್ತಾನ ಎಂದುಕೊಂಡು ಕುಸುಮ ಕೂಡ ಕಣ್ಣು ಬಾಯಿ ಬಿಡುತ್ತಿದ್ದಾರೆ, ಭಾಗ್ಯ ಕೈಯಲು ಕೂಡ ಮಾತನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅಂದುಕೊಂಡರೆ ಕುಸುಮಾ ಒಂದು ಹೆಜ್ಜೆ ಮುಂದೆ ಹೋಗಿ ಆ ಮಿಟುಕಲಾಡಿ ಹೇಳಿದಂತೆ ಇವನು ಕೇಳುದ್ನಾ ಎಂದು ಮೊಮ್ಮಗಳನ್ನು ಪ್ರಶ್ನೆ ಮಾಡುತ್ತಾ ಇದ್ದಾರೆ.
ಅಂದು ಆಫೀಸ್ ಗೆ ಹೋದಾಗ ಏನು ನಡೆಯಿತು ಎಂಬುದನ್ನು ಸರಿಯಾದ ರೀತಿಯಲ್ಲಿ ಹೇಳು ಎಂದು ತನ್ವಿಗೆ ಸುನಂದ ಹೇಳುತ್ತಿದ್ದಾರೆ. ಈ ಕಡೆ ತಾಂಡವ್‌ಗೆ ಇರಿಸು ಮುರಿಸಾಗುತ್ತಿದ್ದು ಯಾವ ಸುಳ್ಳು ಕಥೆಯನ್ನ ಕಟ್ಟಲಿ ಮನೆಯವರನ್ನೆಲ್ಲಾ ನಂಬಿಸಲಿ ಎಂದು ಯೋಚನೆ ಮಾಡುತ್ತಿದ್ದಾನೆ. ಸದ್ಯಕ್ಕೆ ತಾಂಡವ್ ತಪ್ಪಿತಸ್ಥ ಸ್ಥಾನದಲ್ಲಿ ನಿಂತುಕೊಂಡಿದ್ದು, ತನ್ನ ತಪ್ಪನ್ನ ಮುಚ್ಚಿಕೊಳ್ಳಲು ಯಾವ ರೀತಿ ಸುಳ್ಳು ಹೇಳುತ್ತಾನೆ ಎಂಬುದೆ ಕುತೂಹಲ.


Click it and Unblock the Notifications











