Bhagyalakshmi: ಸೊಸೆ ಕೆಲಸ ಮಾಡುವುದು ಕುಸುಮಾಗೆ ಇಷ್ಟವಿಲ್ಲ; ಭಾಗ್ಯಗೆ ಡಿವೋರ್ಸ್ ಕೊಡ್ತಾನಾ ತಾಂಡವ್!?
ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಸಾಗುತ್ತಾ ಇದೆ. ಈಗ ಪೂಜಾಗೆ ಶ್ರೇಷ್ಠಾ ಮನೆ ಗೊತ್ತಾಗಿದೆ. ತನ್ನ ಭಾವನನ್ನು ಸರಿಯಾದ ಟೈಮ್ ನಲ್ಲಿ ಲಾಕ್ ಮಾಡಬೇಕು ಎಂದು ಯೋಜನೆ ರೂಪಿಸಿದ್ದಾಳೆ. ತಾಂಡವ್ ತನ್ನ ಮಗಳಿಗೆ ಆಕ್ಸಿಡೆಂಟ್ ಆಗಿದೆ ಎಂಬ ವಿಚಾರವನ್ನು ತಿಳಿದ ಕೂಡಲೇ ಓಡೋಡಿ ಮನೆಗೆ ಬಂದಿದ್ದಾನೆ.
ತನ್ವಿ ತಾಂಡವ್ ಊಹಿಸಿರದ ಶಾಕ್ ನೀಡಿ ಮನೆಯಿಂದ ಹೊರಗೆ ಕಳುಹಿಸಿದ್ದಾಳೆ. ಇದು ತಾಂಡವ್‌ಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಶ್ರೇಷ್ಠಾಳ ಹೆಸರನ್ನು ತೆಗೆದಿರುವ ತನ್ವಿ ಮನೆಯ ಎಲ್ಲರಿಗೂ ಕೂಡ ತಾಂಡವ್ ಹಾಗೂ ಶ್ರೇಷ್ಠಾ ಸಂಬಂಧದ ಮೇಲೆ ಅನುಮಾನ ಬರುವಂತೆ ಮಾಡಿದ್ದಾಳೆ. ತಾಂಡವ್ ತನ್ನದೇ ತಪ್ಪಿದ್ದರು ಕೂಡ ಭಾಗ್ಯದ್ದೇ ತಪ್ಪು ಎಂದಿದ್ದಾನೆ. ಈ ಮಾತು ಯಾರಿಗೂ ಕೂಡ ಇಷ್ಟವಾಗಿಲ್ಲ.

ಇನ್ನು ತನ್ವಿ ಕೂಡ ಈಗ ಬದಲಾಗಿದ್ದು ಅಮ್ಮನ ಪರವಾಗಿ ಇದ್ದಾಳೆ. ನನ್ನ ತಂದೆ ಮಾಡುತ್ತಿರುವುದೆಲ್ಲವೂ ಕೂಡ ಸರಿ ಇಲ್ಲ ಎಂಬುದು ತನ್ವಿಗೂ ಕೂಡ ಈಗ ಗೊತ್ತಾಗಿದೆ. ಆದರೆ ಭಾಗ್ಯ ಮಾತ್ರ ತನ್ನ ಗಂಡ ಕೆಟ್ಟವನು ಎಂದು ಮಕ್ಕಳು ಅಂದುಕೊಳ್ಳಬಾರದು ಎಂದು ಸುಮ್ಮನೆ ಇದ್ದಾಳೆ. ತನ್ವಿಗೆ ತನ್ನ ತಂದೆ ತಾಂಡವ್ ಹೊಡೆಯಲು ಕೈ ಎತ್ತಿದ್ದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನನ್ನ ತಂದೆ ಶ್ರೇಷ್ಠಾ ಆಂಟಿಯ ಮಾತು ಕೇಳಿ ನನ್ನನ್ನೇ ಸುಳ್ಳಿ ಎಂದರು ಎಂದು ಯೋಚಿಸುತ್ತಾ ಇದ್ದಾಳೆ ಭಾಗ್ಯ ತನ್ವಿಗೆ ಸಮಾಧಾನ ಮಾಡಿದ್ದಾಳೆ.
ಭಾಗ್ಯಗೂ ಕೂಡ ಎಲ್ಲೋ ಒಂದು ಕಡೆ ಶ್ರೇಷ್ಠ ಹಾಗೂ ತಾಂಡವ್ ನಡುವಿನ ಸಂಬಂಧದ ಬಗ್ಗೆ ಅನುಮಾನ ಬಂದಿದೆ. ಜ್ವರ ಬಂದು ತಲೆ ಕೆಟ್ಟು ಅವನು ಆ ಶ್ರೇಷ್ಠಾ ಮನೆಗೆ ಹೋಗಿದ್ದಾನೆ ಎಂದು ಕುಸುಮ ಹೇಳಿದ್ದ ಮಾತು ಎಲ್ಲವೂ ಕೂಡ ಈಗ ಕಣ್ಮುಂದೆ ಬರುತ್ತಿದ್ದು ಭಾಗ್ಯ ಕೂಡ ಈಗ ಕನ್ಫ್ಯೂಷನ್ ನಲ್ಲಿ ಇದ್ದಾಳೆ. ಸಾಲದ್ದಕ್ಕೆ ತನ್ವಿ ಕೂಡ ನಾನು ಸುಳ್ಳು ಹೇಳುತ್ತಿಲ್ಲ ಶ್ರೇಷ್ಠಾ ಆಂಟಿಯ ಮಾತನ್ನೇ ಅಪ್ಪ ಕೇಳುತ್ತಿದ್ದಾರೆ. ನಾನು ಮೊದಲು ಶ್ರೇಷ್ಠಾ ಆಂಟಿಯನ್ನು ಒಳ್ಳೆಯವರು ಅಂದುಕೊಂಡಿದ್ದೆ. ಆದರೆ ಅವರು ಡಬಲ್ ಗೇಮ್ ಆಡುತ್ತಿದ್ದಾರೆ ಎಂದೆಲ್ಲ ಹೇಳಿದ್ದು ಭಾಗ್ಯಾಳ ತಲೆಕೆಡಿಸಿದೆ. ಕುಸುಮ ಆ ರೀತಿ ಎಲ್ಲಾ ಯೋಚನೆ ಮಾಡಬೇಡ ನಿನ್ನ ಗಂಡ ಇನ್ನೊಂದು ಹೆಣ್ಣಿನ ಹಿಂದೆ ಹೋಗೋದಿಲ್ಲ ಎಂದು ಧೈರ್ಯವನ್ನ ತುಂಬಿದ್ದಾರೆ.

ಟೈಲರ್ ಆಗುತ್ತೇನೆಂದ ಭಾಗ್ಯನಿಗೆ ತನ್ವಿ ಸಾಥ್: ಗುಂಡಣ್ಣನಿಗೆ ಕೋಪ
ತಾಂಡವ್ ಮನೆ ಬಿಟ್ಟು ಹೋಗಿದ್ದು ಸಂಸಾರವನ್ನು ನಿಭಾಯಿಸಲು ಈಗ ಹಣದ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕಾಗಿ ಭಾಗ್ಯ ತನಗೆ ಟೈಲರಿಂಗ್ ಬರುತ್ತೆ ಫಾಲ್ಸ್, ಕುಚ್ಚು ಹಾಕುವ ಕೆಲಸವನ್ನು ಮಾಡುವುದಾಗಿ ಹೇಳಿದ್ದಾಳೆ. ತನ್ವಿ ತನ್ನ ಅಮ್ಮನಿಗೆ ಸಪೋರ್ಟ್ ಮಾಡುತ್ತಿದ್ದಾಳೆ. ಅಮ್ಮ ಹಳೆ ಕಾಲದವರ ತರ ಲಕ್ಷ್ಮಿ ಟೈಲರಿಂಗ್ ಅಂಗಡಿ ಎಂದು ಇಡುವ ಬದಲು, ಲಕ್ಷ್ಮಿ ಫ್ಯಾಷನ್ ಡಿಸೈನ್ ಶಾಪ್ ಎಂದು ಇಡು ತುಂಬಾ ಚೆನ್ನಾಗಿ ಇರುತ್ತದೆ ಎಂದು ಅಮ್ಮನಿಗೆ ಹೇಳಿದ್ದಾಳೆ. ತನ್ನ ಮಗಳು ತನಗೆ ಮೊದಲ ಬಾರಿಗೆ ಸಪೋರ್ಟ್ ಮಾಡಿದ್ದನ್ನು ಕಂಡ ಭಾಗ್ಯಗೆ ತುಂಬಾನೇ ಖುಷಿಯಾಗಿದೆ.
ಖುಷಿ ಖುಷಿಯಿಂದ ಭಾಗ್ಯ ಮತ್ತೊಂದು ಬೋರ್ಡನ್ನು ಬರೆದು ಅತ್ತೆಯ ಮುಂದೆ ಬರುವಷ್ಟರಲ್ಲಿ ಕುಸುಮ ಜೋರಾದನಿಯಲ್ಲಿ ಭಾಗ್ಯಳನ್ನ ಕರೆದಿದ್ದಾರೆ ಮುಂದೆ ಬಂದು ನಿಂತಿದ್ದಾಳೆ. ಕೈನಲ್ಲಿ ಹಿಡಿದಿರುವ ಬೋರ್ಡನ್ನು ನೋಡಿದ ಕುಸುಮ ಕೋಪ ಮಾಡಿಕೊಂಡು ಅದನ್ನ ಕಿತ್ತು ನೆಲಕ್ಕೆ ಎಸೆದಿದ್ದಾರೆ. ಈಗ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಮಗ ಮನೆಯಲ್ಲಿಲ್ಲ ಎಂಬುವುದು ಗೊತ್ತು. ನೀನು ಎಲ್ಲರಿಗೂ ತಿಳಿಸಬೇಕು ಎಂಬ ಕೆಲಸವನ್ನ ಮಾಡುತ್ತಿದ್ದೀಯಾ ನೀನು ಟೈಲರಿಂಗ್ ಮಾಡುವುದು ಬೇಡ ನಮ್ಮನ್ನು ಸಾಕುವುದು ಬೇಡ ಹೇಗೋ ನಡೆಯುತ್ತದೆ ಎಂದು ಸೊಸೆಗೆ ಹೇಳಿದ್ದಾರೆ.
ಭಾಗ್ಯಾಗೆ ಡಿವೋರ್ಸ್ ಕೊಡುತ್ತಾನಾ ತಾಂಡವ್?
ಮನೆಯಲ್ಲಿ ಹೇಗೋ ನಡೆಯುತ್ತದೆ ಹಾಲಿನ ಹೊಳೆ ಹರಿಸುತ್ತಿದ್ದೆವು, ಹಾಲು ಕುಡಿಯುವುದನ್ನು ಕಡಿಮೆ ಮಾಡೋಣ. ಬೆಣ್ಣೆ ತುಪ್ಪ ತಿನ್ನುವುದನ್ನು ಕಡಿಮೆ ಮಾಡೋಣ. ಮನೆಯ ಕರ್ಚನ್ನು ಸ್ವಲ್ಪ ಸ್ವಲ್ಪವೇ ಕಡಿಮೆ ಮಾಡಿದರೆ ಏನು ಆಗುವುದಿಲ್ಲ ಎಂದು ಕುಸುಮ ಸೊಸೆಗೆ ಹೇಳಿದ್ದಾರೆ. ನಾನು ನಿನ್ನನ್ನ ಕಷ್ಟಪಟ್ಟು ಎಲ್ಲರನ್ನ ಎದುರು ಹಾಕಿಕೊಂಡು ಶಾಲೆಗೆ ಸೇರಿಸಿದ್ದೇನೆ. ನೀನು ಹತ್ತನೇ ತರಗತಿಯನ್ನು ಪಾಸು ಮಾಡುವುದರ ಬಗ್ಗೆ ಗಮನ ಕೊಡು ಎಂದು ಭಾಗ್ಯಗೆ ಬುದ್ದಿವಾದ ಹೇಳಿದ್ದಾರೆ.
ಈ ಕಡೆ ಕೋಪದಿಂದ ಮನೆಯಿಂದ ಹೊರಗೆ ಹೋಗಿರುವ ತಾಂಡವ್ ತಲೆಯಲ್ಲಿ ನೂರಾರು ಯೋಚನೆಗಳು ಓಡುತ್ತಿವೆ. ಭಾಗ್ಯಗೆ ಡಿವೋರ್ಸ್ ಕೊಟ್ಟು ನೆಮ್ಮದಿಯಿಂದ ಇರಬೇಕು ಅಂದುಕೊಂಡಿದ್ದಾನೆ. ನಿಜವಾಗಿಯೂ ತಾಂಡವ್ ಭಾಗ್ಯಗೆ ಡಿವೋರ್ಸ್ ಮಾಡ್ತಾನಾ ಇಲ್ಲ ಭಾಗ್ಯ ಜೊತೆಗೆ ಬಂದು ಪೂಜಾ ಮಾಡುತ್ತಿರುವ ಪ್ಲಾನಿನಿಂದ ಸಂಸಾರ ಮಾಡುತ್ತಾನಾ ಎಂಬುದೇ ಈಗ ಇರುವ ಕೂತೂಹಲವಾಗಿದೆ. ಭಾವನನ್ನ ವಾಪಸ್ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಪೂಜಾ ಪಣತೊಟ್ಟಿದ್ದಾಳೆ.


Click it and Unblock the Notifications











