Bhagyalakshmi: ಬೀದಿಯಲ್ಲಿ ಹೋಯ್ತು ಕುಸುಮಾ ಮರ್ಯಾದೆ: ಅತ್ತೆ ಪರ ಗಟ್ಟಿಯಾಗಿ ನಿಂತ ಭಾಗ್ಯ!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಕುಸುಮ ಪಾತ್ರ ತುಂಬಾ ಗಟ್ಟಿತನ ಹೊಂದಿದೆ. ಅಷ್ಟೇ ಅಲ್ಲದೆ ಕುಸುಮ ಹೇಳಿದಂತೆ ಎಲ್ಲವೂ ಕೂಡ ನಡೆಯಬೇಕು ಎಂಬಂತೆ ತೋರಿಸಲಾಗಿದೆ. ಆದರೆ ಈಗ ಕುಸುಮ ಪಾತ್ರಕ್ಕೆ ನೋವಾಗುವಂತಹ ವಿಚಾರವನ್ನು ಅಕ್ಕ ಪಕ್ಕದ ಜನರು ಮಾತನಾಡುತ್ತಾ ಇದ್ದಾರೆ. ಕುಸುಮ ಅವರು ತಮ್ಮ ಮಗನನ್ನೇ ಮನೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಇಡೀ ಏರಿಯಾದ ಜನರು ಮಾತನಾಡಿದ್ದಾರೆ.

ಆದರೆ ಈ ವಿಚಾರ ಕುಸುಮಗೆ ಮಾತ್ರ ತಿಳಿದಿರಲಿಲ್ಲ. ಇನ್ನೂ ಕುಸುಮ ಅವರದು ದೊಡ್ಡ ಬಾಯಿ ಯಾರೇ ತಪ್ಪು ಮಾಡಿದರು ಕೂಡ ಅಲ್ಲೇ ಬೈದು ಬುದ್ಧಿ ಹೇಳುವಂತಹ ಸ್ವಭಾವ. ಇಂತಹ ಕುಸುಮಾ ತಪ್ಪನ್ನು ಮಾಡಿದ್ದಾರೆ ಎಂದು ಅಕ್ಕಪಕ್ಕದ ಮನೆಯವರು ಕುಸುಮ ಬಗ್ಗೆ ಮಾತನಾಡಿಕೊಳ್ಳುತ್ತಾ ಇದ್ದಾರೆ. ಸೊಸೆ ಕೆನ್ನೆಗೆ ಹೊಡೆದ ಎಂಬ ಒಂದೇ ಒಂದು ಕಾರಣಕ್ಕೆ ಮಗನ ಕೈಯನ್ನೇ ಸುಟ್ಟಿದ್ದರು.

Bhagyalakshmi kannada serial Written Update on January 22th episode

ಈ ವಿಚಾರ ಈಗ ಇಡೀ ಏರಿಯಾದ ಜನರಿಗೆ ಗೊತ್ತಾಗಿದ್ದು ಕುಸುಮಾ ಅವರು ಮಗನನ್ನೇ ಸೊಸೆಗೋಸ್ಕರ ಮನೆ ಬಿಟ್ಟು ಹೊರಗೆ ಹಾಕಿದ್ದಾರೆ ಎಂದು ಹೀಯಾಳಿಸುತ್ತಾ ಇದ್ದಾರೆ. ಕುಸುಮಾಗೆ ಅಕ್ಕ ಪಕ್ಕದ ಜ‌ನರ ಮಾತುಗಳನ್ನ ಕೇಳಿ ತುಂಬಾ ಅಳುವೆ ಬಂದಿದೆ. ಆದರೂ ಕೂಡ ಗಟ್ಟಿಗಿತ್ತಿ ಎಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ತಾಂಡವ್ ಮಾತ್ರ ತನ್ನ ಅಮ್ಮ ಬಾಸ್ ಕರೆದಿರುವ ಫಂಕ್ಷನ್ ಗೆ ಬರುತ್ತಾರೆ ಎಂಬ ಯಾವುದೇ ಪರಿವೆ ಇಲ್ಲದೆ ಚೆನ್ನಾಗಿ ರೆಡಿಯಾಗುತ್ತಾ ಇದ್ದಾನೆ. ಇದೆ ವೇಳೆ ಶ್ರೇಷ್ಠಾಗೆ ನೀನು ಕೂಡ ಚೆನ್ನಾಗಿ ರೆಡಿಯಾಗು ಇನ್ಮುಂದೆ ನನಗೆ ನನ್ನ ಕುಟುಂಬ ಇಲ್ಲ ನೀನೇ ನನಗೆ ಎಲ್ಲಾ ಎಂದು ಹೇಳುತ್ತಿದ್ದಾನೆ. ಭಾಗ್ಯಳ ಸ್ಥಾನವನ್ನು ಕೂಡ ನೀನೇ ತುಂಬಬೇಕು ಎಂದು ಹೇಳಿದ್ದಾನೆ. ಆದರೆ ಶ್ರೇಷ್ಠ ಮನಸ್ಸಿನಲ್ಲಿ ಬೇರೆಯದ್ದೇ ಓಡುತ್ತಿದೆ. ಇಬ್ಬರೇ ಇರಬೇಕು ಎಂಬುದು ಆಕೆ ಯೋಚನೆ. ಆದರೆ ತಾಂಡವ್, ನನ್ನ ಜೊತೆಯಲ್ಲಿ ನನ್ನ ತಂದೆ ತಾಯಿ ಹಾಗೂ ಮಕ್ಕಳು ಇರುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾನೆ.

ಕುಸುಮಾಗೆ ಅವಮಾನ ಮಾಡಿದ ಅಕ್ಕಪಕ್ಕದವರು

ಕುಸುಮಾ ಅವರು ತಾಂಡವ್‌ನ ಬಾಸ್ ಕರೆದಿರುವ ಫಂಕ್ಷನ್ ಗೆ ಹೋಗುವ ವೇಳೆ ಮನೆಯಿಂದ ಹೊರಗೆ ಬಂದು ಆಟೋ ಗಾಗಿ ಕಾಯುತ್ತಾ ಇದ್ದಾರೆ. ಇದೇ ಒಳ್ಳೆಯ ಸಮಯ ಎಂದುಕೊಂಡ ಅಕ್ಕ ಪಕ್ಕದ ಜನರು ಯಾಕೆ ಆಟೋಗಾಗಿ ಕಾಯುತ್ತಾ ಇದ್ದೀರಾ ನಿಮ್ಮ ಮಗ ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಸುಮ ಅವನು ಕೆಲಸ ಇದೆ ಎಂದುಕೊಂಡು ಬೆಳಗ್ಗೆಯೇ ಮನೆಯಿಂದ ಹೋಗಿದ್ದಾನೆ ಎಂದು ಹೇಳಿ ಅಲ್ಲಿಂದ ಹೊರಟು ನಿಂತಿದ್ದಾರೆ.

Bhagyalakshmi kannada serial Written Update on January 22th episode

ಆದರೆ, ಅಕ್ಕಪಕ್ಕದವರು ಮನೆಯಿಂದ ಮಗನನ್ನು ಹೊರಗೆ ಹಾಕಿ ಯಾವ ರೀತಿ ಭಿಕಾರಿಗಳ ತರ ನಡೆದುಕೊಂಡು ಹೋಗುತ್ತಾ ಇದ್ದಾರೆ ನೋಡಿ ಎಂದು ಮಾತನಾಡಿದ್ದಾರೆ. ಈ ಮಾತು ಕೇಳಿದ ಭಾಗ್ಯಗೆ ಕೋಪನೇ ಬಂದಿದೆ. ಅಕ್ಕ ಪಕ್ಕದ ಜನರಿಗೆಲ್ಲಾ ನಿಮ್ಮ ಮಗ ಮನೆಯಲ್ಲಿ ಇಲ್ಲ ಎಂಬ ವಿಚಾರ ಗೊತ್ತಾಗಿದೆ ಎಂದು ಕುಸುಮ ಮುಂದೆ ಅಕ್ಕಪಕ್ಕದ ಜನರು ಹೇಳಿದ್ದಾರೆ. ಮೊದಲೇ ನಿಮ್ಮ ಬಾಯಿ ಬೊಂಬಾಯಿ ನಿಮ್ಮ ಮನೆಯಲ್ಲಿ ನಡೆಯುವ ಎಲ್ಲಾ ವಿಚಾರವೂ ಕೂಡ ಎಲ್ಲರಿಗೂ ತಿಳಿಯುತ್ತದೆ. ನೀವೇ ಸೊಸೆಯ ವಿಚಾರಕ್ಕಾಗಿ ಮಗನ ಕೈಗೆ ಬರೆಯಾಕಿ ಅವನನ್ನ ಮನೆಯಿಂದ ಹೊರಗಡೆ ಕಳಿಸಿದ್ದೀರಿ ಅದನ್ನು ಕಣ್ಣಾರೆ ನೋಡಿದ್ದೇವೆ ಎಂದು ಕುಸುಮಾಗೆ ಅಕ್ಕ-ಪಕ್ಕದ ಮನೆಯವರು ಹೇಳಿದಾಗ ಭಾಗ್ಯಾಗೆ ಕೋಪ ಬಂದಿದೆ.

ಅತ್ತೆ ಪರ ಮಾತನಾಡಿದ ಭಾಗ್ಯ

ನಮ್ಮ ಮನೆಯ ವಿಚಾರ ಗೊತ್ತಿಲ್ಲದೆ ನೀವು ಎನೇನೋ ಮಾತನಾಡಿ ಎಂದು ಭಾಗ್ಯ‌ ಹೇಳಿದ್ದಾಳೆ. ನೀವೇ ಎಲ್ಲರಿಗೂ ಕೂಡ ಬುದ್ದಿಯನ್ನು ಹೇಳುತ್ತೀರಾ ನೀವು ವಯಸ್ಸಿಗೆ ಬಂದ ಮಗನನ್ನು ಹೊರಗೆ ಕಳುಹಿಸಿ ಈ ರೀತಿ ನಡೆದುಕೊಳ್ಳುತ್ತಾ ಇರುವುದು ತಪ್ಪಲ್ವ ಇದೇ ರೀತಿ ನಡೆದುಕೊಂಡರೆ ಬೀದಿಗೆ ಬರಬೇಕಾಗುತ್ತದೆ ಎಂದು ಜನರು ಕುಸುಮಾಗೆ ಬುದ್ದಿ ಹೇಳಿದ್ದಾರೆ.

ಭಾಗ್ಯ ಅತ್ತೆಗೆ ನೋವಾಗುತ್ತದೆ ಎಂದು ಜನರ ಬಾಯಿ ಮುಚ್ಚಿಸಲು ಪ್ರಯತ್ನವನ್ನು ಮಾಡಿದ್ದಾಳೆ. ಆದರೆ ಕುಸುಮಾಗೆ ಜನರ ಮಾತುಗಳಿಂದ ತುಂಬಾನೇ ನೋವುಂಟಾಗಿದೆ. ‌ಗುಂಡಣ್ಣ ಹಾಗೂ ತನ್ವಿ ಇಬ್ಬರು ಕೂಡ ಜನರು ಯಾಕೆ ಈ ರೀತಿ ಮಾತನಾಡುತ್ತಾ ಇದ್ದಾರೆ ಎಂದು ನೋಡುತ್ತಾ ಇದ್ದಾರೆ. ಜನರ ಮಾತು ಕೇಳುತ್ತಿರುವ ಕುಸುಮಾ ಮಗನಿಗೆ ಯಾವ ರೀತಿ ಬುದ್ದಿ ಕಲಿಸಿ ಸರಿದಾರಿಗೆ ತರುತ್ತಾರೆ ನೋಡಬೇಕಾಗಿದೆ.

More from Filmibeat

English summary
Bhagyalakshmi serial January 22th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X