Bhagyalakshmi: ಕುಸುಮಾ ಮುಂದೆಯೇ ಭಾಗ್ಯಳನ್ನು ದಡ್ಡಿ, ದರಿದ್ರ ಎಂದ ತಾಂಡವ್: ಸಿಕ್ತು ಸರಿಯಾದ ತಿರುಗೇಟು!
ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್‌ಗೆ ಹೆಂಡತಿಯನ್ನು ಕಂಡರೆ ಅಸಡ್ಡೆ. ಇದಕ್ಕೆ ಸ್ವಲ್ಪ ವೀಕ್ಷಕರಿಗೆ ಬೇಸರವನ್ನು ತರಿಸಿದೆ. ಇದಕ್ಕಾಗಿ ತಾಂಡವ್ ಸ್ವಲ್ಪ ಬದಲಾದರೆ ಚೆನ್ನಾಗಿ ಇರುತ್ತದೆ ಹೆಂಡತಿಯನ್ನು ಪ್ರೀತಿ ಮಾಡಿದರೆ ಚೆನ್ನಾಗಿ ಇರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಭಾಗ್ಯ ಮೇಲೆ ತಾಂಡವ್ ಅಸಮಾಧಾನವನ್ನು ಹೊರಹಾಕಿದ್ದಾನೆ.
ಬಾಸ್ ಕರೆದಿರುವ ಫಂಕ್ಷನ್‌ಗೆ ಕುಸುಮ ಭಾಗ್ಯ ಬಂದಿರುವುದು ತಾಂಡವ್‌ಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ಇವರು ಬರುವುದಿಲ್ಲ ಎಂದು ಕೊಂಡರೆ ಇಲ್ಲಿಗೂ ಬಂದು ನನ್ನ ನೆಮ್ಮದಿಯನ್ನೇ ಕಿತ್ತುಕೊಳ್ಳುತ್ತಾ ಇದ್ದಾರೆ ಎಂದುಕೊಂಡಿದ್ದಾನೆ. ಅಮ್ಮ ನೀವ್ಯಾಕೆ ಈ ಫಂಕ್ಷನ್‌ಗೆ ಬರೋಕೆ ಹೋದ್ರಿ ಮಗನೇ ಬೇಡ ಎಂದ ಮೇಲೆ ಆಫೀಸ್‌ನ ಫಂಕ್ಷನ್ ಅನ್ನು ಅಟೆಂಡ್ ಮಾಡುವ ಅವಶ್ಯಕತೆ ಏನಿತ್ತು ಎಂದು ಕುಸುಮಾಗೆ ಕೇಳೇ ಬಿಟ್ಟಿದ್ದಾನೆ.

ಇದಕ್ಕೆ ಕುಸುಮಾ ಕೂಡ ಯಾವುದೇ ಅಂಜಿಕೆ ಇಲ್ಲದೆ ನಾವು ಬಾಸ್ ಹೆಂಡತಿ ಹಾಗೂ ಬಾಸ್ ಬಂದು ಮನೆಗೆ ಕರೆದಿದ್ದಕ್ಕೆ ಅವರ ಅತಿಥಿಗಳಾಗಿ ಬಂದಿದ್ದೇವೆ. ಮಗನ ಆಫೀಸ್ ಎಂದು ಬಂದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇನ್ನು ಈ ಕಡೆ ಭಾಗ್ಯ ಸುಂದರಿಯನ್ನ ನೋಡಿದ್ದು ಸುಂದರಿಗೆ ವಾಪಾಸ್ ಮನೆಗೆ ಹೋಗು ಎಂದು ತಾಂಡವ್ ಹೇಳಿದ್ದಾನೆ. ಚೆನ್ನಾಗಿ ಉಂಡುಕೊಂಡು ಹಾಗೂ ಕಳವು ಮಾಡಿಕೊಂಡು ಹೋಗಬಹುದಾಗಿತ್ತು ಅದಕ್ಕೂ ಕೂಡ ಈಗ ಅಡ್ಡಿ ಆಯಿತು ಅಂದುಕೊಂಡಿದ್ದಾಳೆ ಸುಂದರಿ. ಏನಾದರೂ ಭಾಗ್ಯ ಸುಂದರಿಯನ್ನ ನೋಡಿಬಿಟ್ಟರೆ ಎಡವಟ್ಟು ಆಗುತ್ತದೆ ಎಂಬುವುದು ತಾಂಡವ್‌ನ ಮನಸ್ಸಿನಲ್ಲಿ ಬೇರೂರಿದೆ.
ಅಮ್ಮನ ಮುಂದೆ ತಾಂಡವ್ ಅಸಮಾಧಾನ ಸ್ಪೋಟ
ತಾಂಡವ್‌ಗೆ ತನ್ನ ಮಕ್ಕಳು ಎಂದರೆ ಪ್ರೀತಿ ಆದರೆ ಈಗ ಮಕ್ಕಳಿಬ್ಬರೂ ಕೂಡ ತಾಂಡವ್‌ನಿಂದ ದೂರ ಹೋಗಿದ್ದಾರೆ. ತನ್ವಿಯನ್ನು ಮಾತನಾಡಿಸಲು ಬಂದಾಗ ತನ್ವಿಗೆ ಕೋಪ ಬಂದಿದೆ ಇದನ್ನೆಲ್ಲಾ ಗಮನಿಸುತ್ತಾ ಇದ್ದ ಕುಸುಮಾ ತನ್ವಿ ಇದ್ದ ಕಡೆಗೆ ಬಂದಿದ್ದಾರೆ. ಯಾರದು ನನ್ನ ಮೊಮ್ಮಗಳನ್ನ ಮಾತನಾಡಿಸುತ್ತಾ ಇರೋದು ಎಂದು ಮಗನನ್ನೇ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ತಾಂಡವ್ ಅಮ್ಮ ಬಂದ ಕಡೆಯಲ್ಲೆಲ್ಲ ನೀನು ನನಗೆ ಕೋಪ ತರಿಸಬೇಡ ನನ್ನ ಮಕ್ಕಳ ಮೇಲೆ ನನಗೆ ಪ್ರೀತಿ ಇದೆ ಎಂದಿದ್ದಾನೆ. ಈ ಮಾತಿನಿಂದ ಕುಸುಮಾಗೆ ಮತ್ತಷ್ಟು ಕೋಪ ಬಂದಿದೆ. ಮಕ್ಕಳ ಮನಸ್ಸು ಮಣ್ಣಿನ ತರ ಅದಕ್ಕೆ ಏನನ್ನು ಹೊಡೆಯುತ್ತೇವೋ ಅದು ಶಾಶ್ವತವಾಗಿ ಕೊನೆಯ ತನಕ ಇರುತ್ತದೆ ಎಂದು ಹೇಳಿದ್ದಾರೆ.
ಅಮ್ಮನ ಮಾತಿಗೆ ಸಿಡಿಮಿಡಿಗೊಂಡ ತಾಂಡವ್ ಬಂದಲ್ಲಿ ಹೋದಲ್ಲಿ ನೀನು ವೇದಾಂತ ಹೇಳಲು ಬರಬೇಡ ಎಂದು ಕುಸುಮಾಗೆ ಅವಮಾನಿಸಿದ್ದಾನೆ. ನನ್ನಿಂದ ನನ್ನ ಮಕ್ಕಳು ಹಾಗೂ ನೀನು ದೂರವಾಗಲು ನನ್ನ ಹೆಂಡತಿ ಭಾಗ್ಯಳೆ ಕಾರಣ ಎಂದು ಅಸಮಾಧಾನವನ್ನು ಹೊರಹಾಕಿದ್ದಾನೆ. ನನ್ನ ಜೀವನಕ್ಕೆ ಭಾಗ್ಯ ಎಂಟ್ರಿಯನ್ನು ಕೊಟ್ಟಿಲ್ಲ ಎಂದಿದ್ದರೆ ಎಲ್ಲವೂ ಕೂಡ ಚೆನ್ನಾಗಿ ಇರುತ್ತಿತ್ತು. ಅವಳು ಏನು ಶ್ರೀಮಂತರ ಮನೆಯಿಂದ ಬಂದಿದ್ದಾಳಾ, ಇಲ್ಲ ಚನ್ನಾಗಿ ಓದಿಕೊಂಡಿದ್ದಾಳ ಎಂದೆಲ್ಲಾ ಅವಮಾನಿಸಿದ್ದಾನೆ. ಅವಳು ಒಬ್ಬಳು ದಡ್ಡಿ ಹಾಗೂ ದರಿದ್ರ ಎಂದೆಲ್ಲಾ ಕುಸುಮ ಮುಂದೆ ಸೊಸೆಯ ಬಗ್ಗೆ ಮಾತನಾಡಿದ್ದು ಕುಸುಮಾಗೆ ಸ್ವಲ್ಪವೂ ಕೂಡ ಇಷ್ಟವಾಗಿಲ್ಲ.

ಸೊಸೆಯನ್ನು ಅದೃಷ್ಟ ಎಂದ ಅತ್ತೆ
ತಾಂಡವ್ ಭಾಗ್ಯಳನ್ನು ದರಿದ್ರ ಎಂದ ಕೂಡಲೇ ಕುಸುಮಾಗೆ ಕೋಪ ಬಂದಿದ್ದು ಅವಳು ನಮ್ಮ ಪಾಲಿನ ಅದೃಷ್ಟ .ನನಗೆ ಸಿಕ್ಕಿದ ಒಳ್ಳೆಯ ಸೊಸೆ ಎಂದಿದ್ದಾರೆ. ಮಗನ ಮುಂದೆ ಈಗಲೂ ಕೂಡ ಕುಸುಮಾ ಭಾಗ್ಯಳನ್ನೇ ಸಮರ್ಥನೆ ಮಾಡಿಕೊಂಡಿದ್ದಾರೆ. ಜೊತೆಗೆ ತಂದೆ ಆಡುತ್ತಿರುವ ಪ್ರತಿಯೊಂದು ಮಾತುಗಳನ್ನು ಕೂಡ ತನ್ವಿ ಕೇಳಿಸಿಕೊಳ್ಳುತ್ತಾ ಇದ್ದಾಳೆ.
ಸುಂದರಿ ಈಗ ಜಾಗ ಖಾಲಿ ಮಾಡಲು ಹೋಗುತ್ತಾ ಇದ್ದಾಳೆ. ಅಕಸ್ಮಾತ್ ಏನಾದರೂ ಭಾಗ್ಯ ಮುಂದೆ ಸುಂದರಿ ಸಿಕ್ಕಿಬಿದ್ದರೆ ಸುಂದರಿ ಕಥೆ ಇಂದು ಅಧೋಗತಿಯಾಗುತ್ತದೆ. ಈಗ ಧಾರವಾಹಿಯ ಮುಂದಿನ ಕುತೂಹಲವೇ ಸುಂದರಿ ಭಾಗ್ಯ ಕೈಗೆ ಸಿಕ್ಕಿ ಬೀಳುತ್ತಾಳಾ ಎಂಬುದು.


Click it and Unblock the Notifications











