Bhagyalakshmi: ಗಾಳಿಪಟ ಸ್ಪರ್ಧೆಯಲ್ಲಿ ಗೆದ್ದ ಭಾಗ್ಯ: -ಸೋತು ಕುಸುಮಾ ಕಾಲಿಗೆ ಬಿದ್ದ ತಾಂಡವ್!
ಕುಸುಮಾ ತನ್ನ ಸೊಸೆಗೋಸ್ಕರ ಏನು ಬೇಕಾದರೂ ಮಾಡುತ್ತೇನೆ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ತಾಂಡವ್ ಭಾಗ್ಯಾಗೆ ಒಂದೇ ಸಮನೆ ಬೈಯುತ್ತಿರುವುದನ್ನು ನೋಡಿದ ಕುಸುಮಾ ಕೊನೆಗೆ ಒಂದು ನಿರ್ಧಾರವನ್ನು ಮಾಡಿಬಿಟ್ಟರು. ಬಾಸ್‌ನ ಹೆಂಡತಿಯ ಬಳಿ ಹೋಗಿ ಯಾವಾಗಲೂ ದಂಪತಿಯೇ ಸ್ಪರ್ಧೆಗೆ ಇಳಿದರೆ ಏನು ಚೆನ್ನಾಗಿ ಇರುತ್ತದೆ. ಹೆಣ್ಣು ಮಕ್ಕಳು ಕೂಡ ಸ್ಟ್ರಾಂಗ್ ಎಂಬುದನ್ನು ಈ ಗಂಡು ಮಕ್ಕಳಿಗೆ ನಾವು ತೋರಿಸಬೇಕು ಎಂದು ಎರಡು ತಂಡ ಮಾಡಿಸಿದ್ದರು.
ಕುಸುಮಾ ಕೊಟ್ಟ ಐಡಿಯಾ ಚೆನ್ನಾಗಿ ಇದ್ದಿದ್ದರಿಂದ ಗಂಡು ಹಾಗೂ ಹೆಣ್ಣು ಮಕ್ಕಳ ಗುಂಪನ್ನು ಮಾಡಿ ಸ್ಪರ್ಧೆಯನ್ನು ಏರ್ಪಾಟು ಮಾಡಲಾಗಿತ್ತು. ಇನ್ನು ತಾಂಡವ್‌ಗೆ ನಾನೇ ಗೆಲ್ಲೋದು ಎಂಬ ಅಹಂಕಾರ ಸ್ವಲ್ಪ ಹೆಚ್ಚಾಗಿಯೇ ಇದ್ದಿದ್ದರಿಂದ. ಅಮ್ಮನ ಮುಂದೆಯೇ ಈ ಗೆಲುವು ನನ್ನದು ನಾನೇ ಗೆಲ್ಲುತ್ತೇನೆ ಎಂದು ಅಹಂ ತೋರಿಸಿದ್ದನು. ಈ ಕಡೆ ಶ್ರೇಷ್ಠಾಗೆ ಸ್ವಲ್ಪ ಸಮಾಧಾನ ಆದಂತೆ ಆಯಿತು ಹೇಗೋ ಭಾಗ್ಯ ಜೊತೆಗೆ ನಿಂತು ತಾಂಡವ್ ಗಾಳಿಪಟ ಹರಿಸುತ್ತಾ ಇಲ್ಲ, ನನಗೆ ಅಷ್ಟೇ ಸಾಕು ಎಂದು ಸಮಾಧಾನಪಟ್ಟಿದ್ದಳು.\

ಆದರೆ ಇಲ್ಲಿ ಕುಸುಮಾ ಮಗನಿಗೆ ಸವಾಲನ್ನು ಹಾಕಿದರು. ಈ ಸ್ಪರ್ಧೆಯಲ್ಲಿ ಗೆಲ್ಲೋದು ನನ್ನ ಸೊಸೆ ಗೆಲುವು ಅವಳದ್ದೆ ಎಂದು ಹೇಳಿದ್ದರು. ಈ ವೇಳೆ ತಾಂಡವ್ ಸುಮ್ಮನೆ ಇದ್ದಿದ್ದರೆ ಆಗುತ್ತಿತ್ತು ಆದರೆ ಸ್ವಾಭಿಮಾನಕ್ಕೆ ಪೆಟ್ಟು ಬೀಳುತ್ತದೆ ಎಂದುಕೊಂಡು ಭಾಗ್ಯ ಏನಾದರೂ ಗೆದ್ದರೆ ನಿನ್ನ ಕಾಲಿಗೆ ಬೀಳತ್ತೇನೆ. ನಿನ್ನ ಸೊಸೆಯೇ ಸರ್ವಶ್ರೇಷ್ಠ ಎಂದು ಒಪ್ಪಿಕೊಳುತ್ತೇನೆ ಎಂಬ ಸವಾಲನ್ನ ಹಾಕಿದ ಕೂಡಲೇ ಸೊಸೆಯನ್ನ ಗೆಲ್ಲಿಸಬೇಕು ಎಂಬ ಹಠ ಹೆಚ್ಚಾಗಿದೆ. ಇದಕ್ಕಾಗಿ ಭಾಗ್ಯ ಬಳಿ ಬಂದವರೇ ನೀನು ಈ ಆಟದಲ್ಲಿ ಗೆಲುವು ಪಡೆಯಲೇಬೇಕು. ನಿನ್ನ ತಾಕತ್ತು ಏನು ಎಂಬುದನ್ನು ನೀನು ತಾಂಡವ್‌ಗೆ ತೋರಿಸಲೇಬೇಕು ಎಂಬ ಕಿವಿ ಮಾತನ್ನ ಹೇಳಿದ್ದಾರೆ. ಅತ್ತೆಯ ಮಾತನ್ನ ಪೂರ್ತಿಯಾಗಿ ತೆಗೆದುಕೊಂಡ ಭಾಗ್ಯ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾಳೆ.
ಗಾಳಿಪಟ ಸ್ಪರ್ಧೆಯಲ್ಲಿ ಗೆದ್ದ ಭಾಗ್ಯ, ಅಹಂನಿಂದ ಸೋತು ಸುಣ್ಣವಾದ ತಾಂಡವ್
ಅತ್ತೆಯ ಪ್ರೋತ್ಸಾಹದ ನುಡಿಗಳನ್ನು ಕೇಳಿದ ಭಾಗ್ಯ ಕೊನೆಗೂ ಕೂಡ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಗೆದ್ದು ಎಲ್ಲಾ ಹೆಣ್ಣು ಮಕ್ಕಳಿಗೂ ಸ್ಫೂರ್ತಿಯಾಗಿದ್ದಾಳೆ. ಈ ಕಡೆ ಬಾಸ್ ಹೆಂಡತಿ ಭಾಗ್ಯಳ ಬೆನ್ನನ್ನ ತಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ. ನೀವು ಹೆಣ್ಣು ಮಕ್ಕಳ ಮಾನವನ್ನು ಉಳಿಸಿ ಬಿಟ್ರಿ ಧನ್ಯವಾದಗಳು ಭಾಗ್ಯ ಎಂದು ಹೊಗಳಿಕೆಯ ಮಾತನ್ನ ಆಡಿದ್ದಾರೆ. ಈ ಕಡೆ ಸೊಸೆ ಗೆದ್ದ ಖುಷಿಯಲ್ಲಿ ಕುಸುಮಾ ಭಾಗ್ಯಳನ್ನು ತಬ್ಬಿಕೊಂಡು ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಆದರೆ ತಾಂಡವ್‌ಗೆ ಭಾಗ್ಯ ಗೆಲುವು ಪಡೆದಿದ್ದು ಸ್ವಲ್ಪವೂ ಕೂಡ ಇಷ್ಟವಾಗಿಲ್ಲ.
ಭಾಗ್ಯ ಗೆಲ್ಲುತ್ತಾ ಇದ್ದಂತೆ ಅಮ್ಮನ ಮುಂದೆ ತಾಂಡವ್ ಆಡಿದ ಮಾತುಗಳು ಕಣ್ಮುಂದೆ ಬಂದಿವೆ. ಈಗ ನಾನು ಸೋತಿದ್ದು ಭಾಗ್ಯಳನ್ನೇ ಸರ್ವ ಶ್ರೇಷ್ಠಳು ಎಂದು ತಿಳಿದುಕೊಂಡು ಅಮ್ಮನ ಕಾಲಿಗೆ ಬೀಳಬೇಕಾದ ಪರಿಸ್ಥಿತಿ ಬಂದಿದೆ. ಈ ಕಡೆ ಕುಸುಮ ತಾಂಡವ್ ನನ್ನು ಕರೆದುಕೊಂಡು ಬರುವಂತೆ ಗುಂಡಣ್ಣನಿಗೆ ಹೇಳಿ ಕಳುಹಿಸಿದ್ದಾರೆ. ತನ್ವಿಗೆ ತನ್ನ ಪಪ್ಪ ಎಲ್ಲರ ಜೊತೆಗೆ ಕುಳಿತುಕೊಂಡು ಊಟ ಮಾಡುವುದು ಇಷ್ಟವಿಲ್ಲ ಇದಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದು ಕುಸುಮ ಸುಮ್ಮನೆ ಮಾಡಿದ್ದಾರೆ.

ಕುಸುಮ ಕಾಲಿಗೆ ಬಿದ್ದ ತಾಂಡವ್, ಮನೆಗೆ ವಾಪಸ್ ಬರ್ತಾನ?
ಕುಸುಮಾ ಭಾಗ್ಯ ಬಳಿಯಲ್ಲಿ ಮಾತನಾಡುತ್ತಾ ಇರುವಾಗ ತನ್ವಿ ಅಪ್ಪ ಇಲ್ಲಿಗೆ ಬರೋದು ಸ್ವಲ್ಪವೂ ಇಷ್ಟವಿಲ್ಲ ಆ ಶ್ರೇಷ್ಠಾ ಆಂಟಿ ಜೊತೆಗೆ ಅವರು ಊಟ ಮಾಡಲಿ ಎಂದಿದ್ದಾಳೆ. ಈ ಮಾತಿನಿಂದ ಕುಸುಮಾಗೆ ಕೋಪ ಬಂದಿದ್ದು ಅವರು ನಿಮ್ಮ ತಂದೆ ಆ ರೀತಿಯಲ್ಲ ಮಾತನಾಡಬಾರದು ಶ್ರೇಷ್ಠಾಗೆ ಈಗಾಗಲೇ ಮದುವೆ ಫಿಕ್ಸ್ ಆಗಿದೆ ಇದು ಮಾತನಾಡುವ ಜಾಗವು ಅಲ್ಲ ಎಂದು ತನ್ವಿಯನ್ನ ಸುಮ್ಮನೆ ಇರಿಸಿದ್ದಾರೆ. ಭಾಗ್ಯ ಕೂಡ ಮಗಳಿಗೆ ಬುದ್ಧಿ ಹೇಳಿದ್ದಾಳೆ ಅವರು ನಿಮ್ಮ ತಂದೆ ಆ ರೀತಿಯಲ್ಲ ಮಾತನಾಡಬಾರದು ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಆ ರೀತಿ ಎಲ್ಲಾ ಆಗಿರುತ್ತದೆ ಎಂದು ಮಗಳ ಮನಸ್ಸನ್ನು ತಿಳಿಗೊಳಿಸಲು ನೋಡುತ್ತಾ ಇದ್ದಾಳೆ.
ಕುಸುಮಾ ಎದ್ದು ನಿಂತು ಈ ಗುಂಡಣ್ಣ ಎಲ್ಲಿಗೆ ಹೋದ ಇನ್ನೂ ಅವರ ಅಪ್ಪನನ್ನು ಕರೆದುಕೊಂಡು ಬಂದಿಲ್ಲ ಎಂದು ನೋಡುವ ವೇಳೆ ತಾಂಡವ್ ಬಂದವನೇ ಕುಸುಮಾ ಅವರ ಕಾಲಿಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾನೆ. ಯಾರಪ್ಪ ಇದು ಕಾಲಿಗೆ ಕೈ ಹಾಕಿರೋದು ಎಂದು ನೋಡಿದರೆ ಅದು ತಾಂಡವ್. ಮಗನನ್ನ ಈಗ ಕುಸುಮಾ ಕ್ಷಮಿಸುತ್ತಾರಾ ನೋಡಬೇಕಾಗಿದೆ.


Click it and Unblock the Notifications











