Bhagyalakshmi: ಭಾಗ್ಯ ಬಗ್ಗೆ ತಾಂಡವ್‌ಗೆ ಅಭಿಪ್ರಾಯ ಚೇಂಜ್ ಆಗೋದೆ ಇಲ್ವಾ?

By ಶೃತಿ ಹರೀಶ್ ಗೌಡ

ತಾಂಡವ್‌ಗೆ ಮೊದಲಿನಿಂದಲೂ ಭಾಗ್ಯ ಕಂಡರೆ ಆಗೋದಿಲ್ಲ ಹೆಂಡತಿಯನ್ನು ಮನೆಯಿಂದ ಹೊರಗೆ ಓಡಿಸಬೇಕು ಎಂದು ಮಾಡಿದ ಪ್ಲ್ಯಾನ್ ಕೂಡ ಉಲ್ಟಾ ಆಗಿತ್ತು. ಇನ್ನೂ ಭಾಗ್ಯಗೆ ಗಂಡ ಪ್ರೀತಿ ತೋರಿಸುತ್ತಾ ಇದ್ದಾನೆ ಎಂದು ಅಂದುಕೊಂಡಾಗ ಅದು ನಾಟಕದ ಪ್ರೀತಿ ಎಂಬುದು ತಿಳಿದಿದೆ. ತಾಂಡವ್ ಶ್ರೇಷ್ಠಾ ಮಾತನ್ನು ಕೇಳಿಕೊಂಡು ಪದೇ ಪದೇ ಭಾಗ್ಯ ಜೊತೆಗೆ ಜಗಳವಾಡಿಕೊಂಡು ಈಗ ಮನೆ ಬಿಟ್ಟು ಹೋಗಿದ್ದು ಕುಸುಮಾಗೂ ಸಹ ಮಗನ ಮೇಲೆ ಬೇಸರ ಹೆಚ್ಚಾಗಿದೆ.‌ ಶ್ರೇಷ್ಠಾ ಪ್ರೀತಿಯಲ್ಲಿ ತಾಂಡವ್ ಪೂರ್ತಿ ಮುಳುಗಿ ಹೋಗಿದ್ದಾನೆ ಹೀಗಾಗಿ ಮಕ್ಕಳ ಮೇಲೂ ಸಹ ಪ್ರೀತಿ ಕಡಿಮೆ ಆಗಿದೆ.

ಬಾಸ್ ಕಾರ್ಯಕ್ರಮದಲ್ಲೂ ಕೂಡ ತಾಂಡವ್ ಅಮ್ಮನನ್ನೇ ತಪ್ಪಾಗಿ ತಿಳಿದುಕೊಂಡು ಕುಸುಮಾಗೆ ನೋವಾಗುವಂತೆ ಮಾತನಾಡಿದ್ದಾನೆ. ಮಗನ ಮಾತುಗಳನ್ನ ಕೇಳಿಸಿಕೊಂಡ ಕುಸುಮಾ ಎಂದಿಗೂ ಕಣ್ಣಿನಲ್ಲಿ ನೀರಾಕದವರು ಕಣ್ಣೀರು ಹಾಕಿದ್ದಾರೆ. ಆದರೆ ಭಾಗ್ಯಗೆ ಅತ್ತೆಯ ಕಣ್ಣೀರನ್ನ ಕಂಡು ಗಂಡನಿಗೆ ಬುದ್ದಿ ಕಲಿಸಬೇಕು ಎಂದು ನಿರ್ಧಾರವನ್ನು ಮಾಡಿದ್ದು ಗಂಡನ ವಿರುದ್ಧ ಮಾತನಾಡಿದ್ದಾಳೆ.

Bhagyalakshmi Kannada serial Written Update on january 29th episode

ಭಾಗ್ಯ ತಾಂಡವಗೆ ತನ್ನ ತಪ್ಪಿನ ಅರಿವು ಮಾಡಿಸಬೇಕು ಎಂದು ಅಮ್ಮ ನಿಮ್ಮನ್ನು ಕಾಲಿಗೆ ಬೀಳಿಸಿಕೊಳ್ಳಲು ಕರೆಸಿಕೊಂಡಿಲ್ಲ. ನೀವು ಮನೆ ಬಿಟ್ಟು ಹೋಗಿರುವ ವಿಚಾರ ಯಾರಿಗೂ ತಿಳಿಯಬಾರದು ಎಂದು ಇಲ್ಲಿಗೆ ಕರೆಸಿಕೊಂಡರೆ ನೀವು ಅತ್ತೆಗೆ ನೋವಾಗುವಂತೆ ಮಾತನ್ನು ಆಡಿದ್ದು ಸರಿಯಲ್ಲ ಗಂಡನನ್ನೆ ಭಾಗ್ಯ ಪ್ರಶ್ನೆ ಮಾಡಿದ್ದಾಳೆ. ಇನ್ನೂ ತಾಂಡವ್‌ಗೆ ಭಾಗ್ಯ ಕೇಳಿದ ಪ್ರಶ್ನೆಯಿಂದ ಬೇಸರವಾಗುತ್ತಿದೆ. ನನ್ನ ಮುಂದೆ ಮಾತನಾಡಲು ಹೆದರುತ್ತಿದ್ದ ನನ್ನ ಹೆಂಡತಿ ನನಗೆ ಈಗ ಬುದ್ಧಿ ಹೇಳುವ ಮಟ್ಟಕ್ಕೆ ಬಂದು ಬಿಟ್ಟಿದ್ದಾಳೆ ಎಂದು ಕೋಪ ಮಾಡಿಕೊಂಡಿದ್ದಾನೆ.

ಪಾರ್ಟಿಯಲ್ಲಿ ಭಾಗ್ಯ ಮೇಲೆ ಲಸ್ಸಿ ಎರಚಿದ ತಾಂಡವ್!

ಭಾಗ್ಯ ಅಷ್ಟು ಹೇಳಿದ ಮೇಲು ಕೂಡ ತಾಂಡವ್‌ಗೆ ಬುದ್ಧಿ ಬಂದಿಲ್ಲ ಈಗಲೂ ಸಹ ಭಾಗ್ಯ ಮೇಲೆ ಹಗೆ ಸಾಧಿಸುತ್ತಾ ಇದ್ದಾನೆ. ನಾನು ಹಾಗೂ ನನ್ನ ಅಮ್ಮ ದೂರವಾಗಲು ನೀನೇ ಕಾರಣ ಎಂದು ಭಾಗ್ಯ ಮೇಲೆ ದೂರಿನ ಮೇಲೆ ದೂರು ಹೇಳುತ್ತಿದ್ದಾನೆ. ಆದರೆ ಈಗ ಭಾಗ್ಯ ಏನು ಮಾತನಾಡದ ಪರಿಸ್ಥಿತಿಯಲ್ಲಿ ಇದ್ದಾಳೆ. ಯಾಕೆಂದರೆ ಈಗಾಗಲೇ ಹೇಳುವುದೆಲ್ಲವನ್ನು ಹೇಳಿಯಾಗಿದೆ ಆದರೂ ಕೂಡ ತಾಂಡವ ಮನಸ್ಸನ್ನು ಬದಲಾಯಿಸಿಕೊಂಡಿಲ್ಲ. ನಿನ್ನಿಂದ ನಾನು ಅಮ್ಮನನ್ನು ತಪ್ಪು ತಿಳಿದುಕೊಂಡು ಬಿಟ್ಟೆ ಅಮ್ಮನ ಮೇಲೆ ರೇಗಾಡಿದೆ. ಬಾಯಿಗೆ ಬಂದಂತೆ ಮಾತನಾಡಿದೆ ಎಂದು ಅವಳ ಮೇಲೆ ಗೂಬೆ ಕೂರಿಸುತ್ತಿದ್ದಾನೆ.

ಭಾಗ್ಯ ಗಂಡ ಹೇಳಿದ್ದೆಲ್ಲವನ್ನು ಸಹ ಕೇಳಿಸಿಕೊಂಡು ಸುಮ್ಮನೆ ನಿಂತುಕೊಂಡಿದ್ದಾಳೆ. ಅಮ್ಮ ಮಗ ಎಷ್ಟು ಖುಷಿಯಾಗಿ ಇದ್ವಿ ಅಮ್ಮ ಮಗನ ಸಂಬಂಧವನ್ನೇ ಹಾಳು ಮಾಡಿಬಿಟ್ಟೆ. ನೀನು ನನ್ನ ಜೀವನದಿಂದ ಮೊದಲು ತೊಲಗು ಎಂದು ಭಾಗ್ಯಗೆ ತಾಂಡವ್ ಹೇಳಿದ್ದಾನೆ. ಈಗ ನಿನಗೆ ಖುಷಿಯಾಗಿರಬೇಕು ನಾನು ಅಮ್ಮನ ಜೊತೆ ಇಲ್ಲ ಎಂದು ಒಂದು ಲೋಟ ಹಾಲು ಕುಡಿ ಎಂದು ಹೆಂಡತಿಗೆ ಹೇಳಿದ್ದಾನೆ. ಜೊತೆಗೆ ಅಲ್ಲೇ ಇದ್ದ ಲಸ್ಸಿಯನ್ನ ತೆಗೆದುಕೊಂಡು ಭಾಗ್ಯ ಮೈಮೇಲೆ ಚೆಲ್ಲಾಡಿದ್ದಾನೆ.

Bhagyalakshmi Kannada serial Written Update on january 29th episode

ಮಾಡ್ರನ್ ಡ್ರೆಸ್‌ನಲ್ಲಿ ಭಾಗ್ಯಳ ಹೊಸ ರೂಪ ಕಂಡು ಅತ್ತೆ ಶಾಕ್!

ಭಾಗ್ಯ ಸೀರೆಯ ಮೇಲೆ ಲಸ್ಸಿ ಚೆಲ್ಲಿ ಹೋಗಿದ್ದನ್ನು ನೋಡಿದ ಬಾಸ್‌ ಹೆಂಡತಿ ಭಾಗ್ಯಗೆ ಹೊಸ ಡ್ರೆಸ್ ಅನ್ನ ಕೊಟ್ಟಿದ್ದಾರೆ. ಹೊಸ ಮಾಡ್ರನ್ ಡ್ರೆಸ್ ನಲ್ಲಿ ಭಾಗ್ಯ ಸಕ್ಕತ್ತಾಗಿ ಕಾಣಿಸುತ್ತಾ ಇದ್ದು ತಮ್ಮ ಸೊಸೆಯನ್ನು ಹೊಸ ಡ್ರೆಸ್ ನಲ್ಲಿ ನೋಡಿದ ಕುಸುಮಾಗೆ ತುಂಬಾನೇ ಶಾಕ್ ಆಗಿದೆ. ಇದೇನಪ್ಪ ಇದು ನನ್ನ ಸೊಸೆನಾ ಎನ್ನುವಷ್ಟರ ಮಟ್ಟಿಗೆ ಭಾಗ್ಯ ತುಂಬಾ ಚೆನ್ನಾಗಿ ಕಾಣಿಸುತ್ತಾ ಇದ್ದಾಳೆ. ಇಷ್ಟು ದಿನ ಅಮ್ಮನನ್ನು ಸೀರೆಯಲ್ಲಿ ನೋಡುತ್ತಿದ್ದ ತನ್ವಿ ಅಮ್ಮ ಕೂಡ ಮಾಡ್ರನ್ ಡ್ರೆಸ್ ನಲ್ಲಿ ಯಾರಿಗೂ ಕಮ್ಮಿ ಇಲ್ಲದಂತೆ ಕಾಣಿಸುತ್ತಾಳೆ ಎಂದು ಖುಷಿಪಟ್ಟಿದ್ದಾಳೆ.

ಇನ್ನು ಭಾಗ್ಯಳನ್ನ ನೋಡಿದ ಇಡೀ ಪಾರ್ಟಿಯ ಮಂದಿ ಸುಸ್ತಾಗಿದ್ದಾರೆ. ತಾಂಡವ್ ಕೂಡ ಭಾಗ್ಯಳ ಬಟ್ಟೆಯನ್ನು ನೋಡಿ ಶಾಕ್ ಆಗಿದೆ ನನ್ನ ಹೆಂಡತಿ ಇಷ್ಟು ಚೆನ್ನಾಗಿ ಕಾಣಿಸುತ್ತಾಳೆ ಎಂದು ನನಗೆ ಗೊತ್ತೇ ಇರಲಿಲ್ಲ ಎಂದುಕೊಂಡಿದ್ದಾನೆ. ಇನ್ನು ಶ್ರೇಷ್ಠಾ ಕೂಡ ಭಾಗ್ಯಳನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದಾಳೆ. ಈಗ ತಾಂಡವ್‌ಗೆ ತನ್ನ ಹೆಂಡತಿ ಕೂಡ ಇಷ್ಟು ಚನ್ನಾಗಿ ಕಾಣುತ್ತಾಳೆ ಎಂಬ ಜ್ಞಾನೋದಯವಾಗುತ್ತಾ ನೋಡಬೇಕಿದೆ.

More from Filmibeat

English summary
Bhagyalakshmi serial anuary 29th episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X