Bhagyalakshmi: ಅಪ್ಪನ ವಿರುದ್ಧ ತಿರುಗಿ ಬಿದ್ದ ಗುಂಡಣ್ಣ..!? ಕುಸುಮಾಗೆ ಶ್ರೇಷ್ಠಾ ಮೇಲೆ ಅನುಮಾನ

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಾ ಸಾಗುತ್ತಿದೆ. ಅಷ್ಟೇ ಅಲ್ಲದೆ ವೀಕ್ಷಕರಿಗೆ ಮುಂದೇನು ಎಂಬ ಕುತೂಹಲ ಹುಟ್ಟು ಹಾಕುತ್ತಿದೆ. ಪ್ರತಿಎಪಿಸೋಡ್‌ನ ಕೂಡ ವೀಕ್ಷಿಸಲು ವೀಕ್ಷಕರು ಕಾತುರದಿಂದ ಕಾಯುವಂತಾಗಿದೆ. ಈಗ ಕುಸುಮಾ ಮಾಡಿರುವ ಪ್ಲ್ಯಾನ್‌ನಿಂದಾಗಿ ತಾಂಡವ್ ಸಿಕ್ಕಿ ಬೀಳುವ ಎಲ್ಲಾ ಲಕ್ಷಣಗಳು ಕೂಡ ಕಾಣಿಸುತ್ತಿದೆ.

ಶ್ರೇಷ್ಠಾ ಹೇಳಿದ ಒಂದೇ ಒಂದು ಸುಳ್ಳು ಭಾರೀ ಸಂಕಷ್ಟ ತಂದಿದೆ. ಯಾಕೆಂದರೆ ಶ್ರೇಷ್ಠಾಳ ಅತ್ತೆ ಮುಖವನ್ನು ಕುಸುಮಾ ದೇವಸ್ಥಾನದಲ್ಲಿ ನೋಡಿದ್ದರು. ಆ ಸುಂದರಿಯೇ ಕಳ್ಳಿ ಎನ್ನುವುದು ಗೊತ್ತಾಗಿ ಹೋದರೆ ಅಲ್ಲೋಲ ಕಲ್ಲೋಲವಾಗಲಿದೆ.

Bhagyalakshmi kannada serial Written Update on january 31th episode

ಶ್ರೇಷ್ಠಾ ಒಂದೇ ಒಂದು ಸುಳ್ಳು ಮುಚ್ಚಿ ಹಾಕಲು ಹೋಗಿ ಈಗ ಕುಸುಮಾ ತಲೆಗೆ ಅನುಮಾನದ ಹುಳ ಬಿಟ್ಟಿದ್ದಾಳೆ. ಸುಂದರಿಯನ್ನ ಬಚಾವ್ ಮಾಡಲು ಹೋಗಿ ತಾನೇ ಹೆಣೆದ ಬಲೆಯೊಳಗೆ ಸಿಕ್ಕಿ ಬೀಳುವ ಹಂತಕ್ಕೆ ಹೋಗಿದ್ದಾಳೆ. ಆದರೆ ಇಲ್ಲಿ ಕುಸುಮಾ ಏನು ಪ್ಲಾನ್ ಮಾಡುತ್ತಿದ್ದಾಳೆ? ಎನ್ನುವುದ ಮಾತ್ರ ಯಾರಿಗೂ ತಿಳಿದಿಲ್ಲ.

ಕುಸುಮಾಗೆ ಎಲ್ಲೋ ಒಂದು ಕಡೆ ಗುರಿ ತಪ್ಪುತ್ತಿದೆ ಎಂಬುವುದು ಮಾತ್ರ ಸ್ಪಷ್ಟವಾಗಿದೆ. ಆದರೆ ಭಾಗ್ಯಗೆ ಇದ್ಯಾವುದು ಸಹ ಅರ್ಥವಾಗಿಲ್ಲ. ನನ್ನ ಗಂಡ ಪ್ರತಿಯೊಂದಕ್ಕೂ ಕೂಡ ನನ್ನನ್ನೇ ಗುರಿ ಮಾಡುತ್ತಾರೆ ಎಂಬುವುದು ಮಾತ್ರ ಭಾಗ್ಯಗೆ ಅರ್ಥವಾಗಿದೆ. ಇದಕ್ಕಾಗಿ ಮಕ್ಕಳು ಏನನ್ನು ಮಾತನಾಡಬಾರದು ಎಂದು ನೋಡಿಕೊಳ್ಳುವುದಷ್ಟೇ ಭಾಗ್ಯ ಪಾಲಿಗೆ ಧಕ್ಕಿದೆ.

ತಾಂಡವ್ ತನ್ನ ಮಗನಿಗೆ ಎಲ್ಲರನ್ನೂ ಕರೆದುಕೊಂಡು ಬಾ ಎಂದು ಕಳುಹಿಸಿ ಸುಂದರಿಯನ್ನು ಇಲ್ಲಿಂದ ಜಾಗ ಖಾಲಿ ಮಾಡು ಎಂದು ಹೇಳಿದ್ದಾನೆ. ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಾಂಡವ್ ಹಾಗೂ ಶ್ರೇಷ್ಠ ತಪ್ಪಿಸಿಕೊಂಡಿದ್ದಾರೆ. ಸದ್ಯಕ್ಕೆ ಶ್ರೇಷ್ಠಾಳ ಮಾತುಗಳಿಂದ ಕುಸುಮಾ ತಲೆಗೆ ಅನುಮಾನ ಬರುವಂತಾಗಿವೆ.

ಗುಂಡಣ್ಣ ಎಲ್ಲರನ್ನು ಕೂಡ ಕರೆದುಕೊಂಡು ಕಳ್ಳಿಯನ್ನು ತೋರಿಸುತ್ತೇನೆ ಬನ್ನಿ ಅಪ್ಪ ಕೂಡ ಕಳ್ಳಿಯನ್ನು ಕೂಡಿ ಹಾಕಿದ‌ ಜಾಗದಲ್ಲಿ ಇದ್ದಾರೆ ಎಂದು ಹೋಗಿದ್ದಾನೆ. ಆದರೆ ಅಲ್ಲಿ‌ ಕಳ್ಳಿ ಇರದಿದ್ದಕ್ಕೆ ಗುಂಡಣ್ಣ ಕೋಪ ಮಾಡಿಕೊಂಡಿದ್ದಾನೆ.

Bhagyalakshmi kannada serial Written Update on january 31th episode

ಸುಂದರಿ ಜಾಗ ಖಾಲಿ ಮಾಡಿಸಿದ ತಾಂಡವ್

ತಾಂಡವ್ ಏನೋ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾನೆ ಆದರೆ. ಮಗನ ಪಾಲಿಗೆ ವಿಲನ್ ಆಗಿ ಕಂಡಿದ್ದಾನೆ. ನನ್ನ ತಂದೆ ನನ್ನ ಬಳಿಯೂ ಸಹ ಸುಳ್ಳು ಹೇಳಿದ್ದಾರೆ ಎಂದು ಗುಂಡಣ್ಣ ಬೇಸರ ಮಾಡಿಕೊಂಡಿದ್ದಾನೆ.‌ ಅಪ್ಪ, ಶ್ರೇಷ್ಠಾ ಆಂಟಿ ಆ ರೂಮಿಗೆ ಕಳ್ಳಿಯನ್ನು ಕರೆದುಕೊಂಡು ಹೋಗಿ ಕೂಡಿ ಹಾಕಿದ್ದನ್ನು ನಾನೇ ನೋಡಿದ್ದೇನೆ. ಜೊತೆಗೆ ಕಣ್ಣಾರೆ ಕಂಡು ಎಲ್ಲರನ್ನು ಕರೆದುಕೊಂಡು ಬಂದಿದ್ದೇನೆ, ನೀವು ಈಗ ಅಲ್ಲಿ ಕಳ್ಳಿ ಇಲ್ಲ ಎಂದು ಸುಳ್ಳು ಹೇಳುತ್ತಿದ್ದೀರಾ? ಎಂದು ತಾಂಡವ್ ಬಳಿ ಗುಂಡಣ್ಣ ಹೇಳಿದ್ದಾನೆ.

ಅಪ್ಪನ ವಿರುದ್ಧವೇ ನಿಂತುಕೊಂಡ ಗುಂಡಣ್ಣ

ಎಲ್ಲರೂ ಗುಂಡಣ್ಣನನ್ನು ಸಮಾಧಾನ ಮಾಡಿ ಕರೆದುಕೊಂಡು ಬಂದಿದ್ದಾರೆ. ‌ಮಗ ಕೊಲಿಗ್ಸ್ ಮುಂದೆ ಸರಿಯಾದ ರೀತಿಯಲ್ಲಿ ಮರ್ಯಾದೆ ಕೊಟ್ಟಿದ್ದಾನೆ ಎಂದು ತಾಂಡವ್ ಬೇಸರ ಮಾಡಿಕೊಂಡಿದ್ದಾನೆ. ಭಾಗ್ಯ ಬಳಿ ಬಂದವನೇ ಇಲ್ಲಿಗೆ ಬಂದು ಸ್ಪರ್ಧೆಯಲ್ಲಿ ಗೆಲುವು ಪಡೆದು ನನ್ನಿಂದ ಕಾಲಿಗೆ ಬೀಳಿಸಿಕೊಳ್ಳುವಂತೆ ಮಾಡಿದ್ರಿ ನಂತರ ಮಕ್ಕಳಿಂದಲೂ ನನ್ನ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕುದ್ರಿ ಎಂದ ಬೇಸರವನ್ನು ಹೊರ ಹಾಕಿದ್ದಾನೆ.‌ ಇದೆಲ್ಲವೂ ಕೂಡ ನಿನ್ನಿಂದಲೇ ಆಗಿದ್ದು ಎಂದು ಭಾಗ್ಯಗೆ ಬೈದಿದ್ದಾನೆ. ಇದರ ಪರಿಣಾಮ ನೆಟ್ಟಗೆ ಇರೋದಿಲ್ಲ ಎಂದು ಹೇಳಿ ಅಲ್ಲಿಂದ ತೆರಳಿದ್ದಾನೆ.

ಕುಸುಮಾಗೆ ಶ್ರೇಷ್ಠಾ ಮೇಲೆ ಅನುಮಾನ

ಶ್ರೇಷ್ಠಾ ಆಂಟಿ ಕಳ್ಳಿಯನ್ನು ಕರೆದುಕೊಂಡು ಹೋಗಿ ರೂಮ್‌ಗೆ ಕೂಡಿ ಹಾಕಿದರು ಎಂದು ಗುಂಡಣ್ಣ ಹೇಳಿದಾಗ ಕುಸುಮಾ ಸುಮ್ಮನಾಗಿದ್ದಾಳೆ. ಬಾಸ್ ಹೆಂಡತಿ ನೀನೇ ಕಳ್ಳಿಯನ್ನು ಕೂಡಿ ಹಾಕಿದೆ ಎಂದು ಗುಂಡ ಹೇಳಿದ ಅಂದಾಗ ಇಲ್ಲ ನಾನು ಅತ್ತೆಯ ಜೊತೆಗೆ ಓಡಾಡುತ್ತಾ ಇದ್ದೇ ಎಂದು ಸುಳ್ಳು ಹೇಳಿದ್ದಾಳೆ. ‌ಈ ವೇಳೆ ಗುಂಡಣ್ಣ ಶ್ರೇಷ್ಠ ಆಂಟಿ‌ ಸುಳ್ಳು ಹೇಳುತ್ತಾ ಇದ್ದಾರೆ ಎಂದು ಕುಸುಮಾ ಬಳಿ ಹೇಳಿದ್ದಾನೆ.

ಯಶೋಧಗೆ ಕುಸುಮಾ ಫೋನ್

ಗುಂಡಣ್ಣನ ಮಾತಿನಿಂದ ಕುಸುಮಾಗೆ ಅನುಮಾನ ಬಂದಿದೆ. ಎಲ್ಲೋ ಒಂದು ಕಡೆ ಗುರಿ ತಪ್ಪುತ್ತಿದೆ. ನಾನು ಅವರ ಅತ್ತೆಯನ್ನು ನೋಡಿಲ್ಲ ಎಂದು ಅಂದುಕೊಂಡಿದ್ದಾರೆ. ನಂತರ ಶ್ರೇಷ್ಠ ಅಮ್ಮ ಯಶೋಧಗೆ ಫೋನ್ ಮಾಡಿ ಬೀಗರ ಪೋಟೋ ಕಳುಹಿಸು ಎಂದು ಹೇಳಿದ್ದಾರೆ. ಮುಂದೆ ತಾಂಡವ್, ಶ್ರೇಷ್ಠಾ ಸಿಕ್ಕಿ ಬೀಳುತ್ತಾರಾ ನೋಡಬೇಕಿದೆ.

More from Filmibeat

English summary
Bhagyalakshmi serial today episode. Here is the details about tandav lying infront of gundanna, gundanna insulting tandav, tandav angry on bhagya;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X