BhagyaLakshmi: ಕೊನೆಗೂ ತಂದೆ- ಮಗಳ ಭೇಟಿ, ಕಳಚಿ ಬೀಳುತ್ತಾ ಶ್ರೇಷ್ಠಾ ಮುಖವಾಡ..!?
ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಂಡು ಸಾಗುತ್ತಾ ಇದೆ. ಸದ್ಯಕ್ಕೆ ತಾಂಡವ್ ಮನೆ ಬಿಟ್ಟು ಬಂದಿದ್ದು ಭಾಗ್ಯ ಪ್ರತಿಯೊಂದು ಕೂಡ ಲೆಕ್ಕಾಚಾರವನ್ನು ಹಾಕುತ್ತಾ ಇದ್ದಾಳೆ. ತನ್ವಿಗಂತೂ ತಾನು ಸ್ಕೂಲ್ ಟ್ರಿಪ್ ಗೆ ಹೋಗುವುದೇ ದೊಡ್ಡ ಗುರಿಯಾಗಿದೆ. ತನ್ನ ಫ್ರೆಂಡ್ಸ್ ಎಲ್ಲ ಸ್ಕೂಲ್ ಟ್ರಿಪ್ ಹೋಗುತ್ತಿದ್ದು ತಾನು ಕೂಡ ಅವರ ಜೊತೆಯಲ್ಲಿ ಹೋಗಬೇಕು ಎಂದು ಮನೆಯಲ್ಲಿ ಪದೇ ಪದೇ ಜಗಳ ಮಾಡುತ್ತಲೇ ಇದ್ದಾಳೆ. ಭಾಗ್ಯ ಹೇಗೋ ಆಕೆಯ ಬಾಯಿ ಮುಚ್ಚಿಸಿದ್ದಳು. ಆದರೆ ಆಕೆಯ ಫ್ರೆಂಡ್ಸ್ ತನ್ವಿಯನ್ನ ಎತ್ತಿ ಕಟ್ಟಿ ನಿನ್ನ ತಂದೆಯ ಬಳಿ ಹಣವನ್ನು ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ.
ತನ್ವಿಗೂ ಕೂಡ ಇದೇ ಬೇಕಾಗಿದ್ದು ತನ್ನ ತಂದೆಯನ್ನು ಡೈರೆಕ್ಟಾಗಿ ಮೀಟ್ ಆಗಬೇಕು ಎಂದುಕೊಂಡಿದ್ದಾಳೆ. ಆದರೆ ಇದನ್ನು ಭಾಗ್ಯ ಬಳಿಯಲ್ಲಿ ಹೇಳಿದರೆ ಕಳಿಸುವುದಿಲ್ಲ ಎಂದುಕೊಂಡು ತನ್ನ ಗೆಳೆಯರ ಜೊತೆಗೆ ಮನೆಗೆ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳಿದ್ದಾಳೆ. ಭಾಗ್ಯ ಆಯಿತು ಹುಷಾರಾಗಿ ಹೋಗಿ ಬಾ ಎಂದ ಕೂಡಲೇ ಭಾಗ್ಯ ಅತ್ತ ಕಡೆ ಹೋದ ಕೂಡಲೇ ಈಗ ತನ್ವಿ ತನ್ನ ತಂದೆಯ ಆಫೀಸ್‌ಗೆ ಹೊರಟಿದ್ದಾಳೆ. ಈ ಕಡೆ ಭಾಗ್ಯಗೆ ತನ್ನ ಮಗ ಯಾಕೆ ಸ್ಪೋರ್ಟ್ಸ್ ಗೆ ಸೇರಿಲ್ಲ ಎಂಬ ಚಿಂತೆಯಾಗಿದೆ. ಮನೆಗೆ ಹೋಗುವ ದಾರಿಯಲ್ಲಿಯೇ ಗುಂಡಣ್ಣ ಯಾಕೆ ಸ್ಪೋರ್ಟ್ಸ್ ಗೆ ಸೇರಿಲ್ಲ ಅವನಿಗೆ ಸ್ಪೋರ್ಟ್ಸ್ ಎಂದರೆ ತುಂಬಾ ಇಷ್ಟ ಎಂದು ಯೋಚಿಸಿ ಮನೆಗೆ ಹೋಗಿದ್ದಾಳೆ.

ಇದೇ ವಿಚಾರವಾಗಿ ಕುಸುಮ ಬಳಿಯೂ ಕೂಡ ಚರ್ಚೆ ಮಾಡಿದ್ದು ಕುಸುಮ ಕೂಡ ಗುಂಡಣ್ಣನಿಗೆ ಸ್ಪೋರ್ಟ್ಸ್ ಎಂದರೆ ತುಂಬಾ ಇಷ್ಟ. ಎಲ್ಲರಿಗಿಂತ ಮುಂದೆ ಇರುತ್ತಿದ್ದನು. ಏನಾಯಿತು ಎಂದು ವಿಚಾರಿಸು ಎಂದು ತನ್ನ ಸೊಸೆಗೆ ಹೇಳಿ ಕಳಿಸಿದ್ದಾರೆ. ಮನೆಗೆ ಬಂದ ಭಾಗ್ಯ ತನ್ನ ಮಗನ ಬಳಿ ಹೋಗಿ ಏನಾಯಿತು ಗುಂಡಣ್ಣ ಯಾಕೆ ನೀನು ಸ್ಪೋರ್ಟ್ಸ್ ಗೆ ಹೆಸರನ್ನ ಕೊಟ್ಟಿಲ್ಲ ಎಂದು ಕೇಳಿದ್ದಾಳೆ. ಆದರೆ ತನ್ನ ಅಮ್ಮನಿಗೆ ಕಷ್ಟವಾಗಬಾರದು ಎಂದು ಗುಂಡಣ್ಣ ಯಾವುದೇ ವಿಚಾರವನ್ನು ಭಾಗ್ಯ ಬಳಿ ಹೇಳುತ್ತಿಲ್ಲ ಸುಮ್ಮನೆ ಇದ್ದಾನೆ.
ಅಮ್ಮನ ಕಷ್ಟಕ್ಕೆ ಹೆಗಲಾದ ಗುಂಡಣ್ಣ, ಮಗನನ್ನು ಮುದ್ದಾಡಿದ ಭಾಗ್ಯ
ಭಾಗ್ಯಲಕ್ಷ್ಮಿ ಧಾರಾವಾಹಿ ಎಲ್ಲಿ ತನ್ವಿ ತುಂಬಾ ಹಠಮಾರಿಯಾದರೆ ಗುಂಡಣ್ಣ ಮನೆಯ ಎಲ್ಲಾ ಕಷ್ಟಗಳನ್ನು ಅರ್ಥ ಮಾಡಿಕೊಂಡು ಮನೆಯವರಿಗೆ ಬೇಸರ ಮಾಡದ ಹುಡುಗನಾಗಿದ್ದಾನೆ. ಈಗಲೂ ಅಷ್ಟೇ ಮನೆಯಲ್ಲಿ ತುಂಬಾ ಕಷ್ಟವಿದೆ ಎಂದು ಅರಿತುಕೊಂಡ ಗುಂಡಣ್ಣ ಸ್ಪೋರ್ಟ್ಸ್ ಶೂ ಕಿತ್ತು ಹೋದ ಕಾರಣ ತಾನು ಸ್ಪೋರ್ಟ್‌ಗೆ ಹೆಸರನ್ನೇ ಕೊಟ್ಟಿಲ್ಲ. ಮಗನ ಬಳಿ ಬಂದಂತಹ ಭಾಗ್ಯ ಮಗನಲ್ಲಿ ಹಲವು ಬಾರಿ ಯಾಕೆ ಹೆಸರು ಕೊಟ್ಟಿಲ್ಲ ಎಂದು ಕೇಳಿಕೊಂಡಿದ್ದಾಳೆ. ಯಾಕೆ ನೀನು ಹೆಸರು ಕೊಟ್ಟಿಲ್ಲ ಹೇಳು ಎಂದಾಗ ಅಮ್ಮ ನನಗೆ ಈಗ ಇಂಟರೆಸ್ಟ್ ಇಲ್ಲ ಎಂದಷ್ಟೇ ಗುಂಡಣ್ಣ ಹೇಳಿದ್ದಾನೆ ಆದರೆ ಭಾಗ್ಯಗೆ ಇದು ಸುಳ್ಳು ಎಂದು ಅನಿಸಿದೆ.
ನೀನು ಅಮ್ಮನ ಬಳಿಯಲ್ಲಿ ಸುಳ್ಳು ಹೇಳುತ್ತಿದ್ದೀಯಾ ಟೀಚರ್ಸ್ ನಿನಗೆ ಹೇಳಿಕೊಟ್ಟಿದ್ದಾರೆ. ತಾನೆ ತಂದೆ-ತಾಯಿ ಬಳಿಯಲ್ಲಿ ಸುಳ್ಳು ಹೇಳಬಾರದು ಎಂದು ಏನಾಯಿತು ಹೇಳು ಎಂದಾಗ, ನನ್ನ ಸ್ಪೋರ್ಟ್ಸ್ ಶೂ ಕಿತ್ತು ಹೋಗಿದೆ ಅಷ್ಟೇ ಅಲ್ಲದೆ ಬಟ್ಟೆಯೂ ಕೂಡ ಚಿಕ್ಕದಾಗಿದೆ ಈಗ ಅದಕ್ಕೆಲ್ಲ 4000 ಹಣ ಬೇಕಾಗುತ್ತದೆ ಅದಕ್ಕಾಗಿ ನಾನು ಸೇರಿಕೊಂಡಿಲ್ಲ. ಮನೆಯ ಪರಿಸ್ಥಿತಿಯು ಚೆನ್ನಾಗಿಲ್ಲ ಅಪ್ಪ ಇದ್ದಾಗ ಕೇಳಬಹುದಾಗಿತ್ತು ಎಂದು ಮಾತನಾಡಿದ್ದಾನೆ. ಮನೆಯ ಕಷ್ಟವನ್ನು ಅರಿತಿರುವ ಮಗನನ್ನ ಕಂಡು ಭಾಗ್ಯ ಮುದ್ದಾಡಿದ್ದಾಳೆ.

ತಾಂಡವ್ ಬಳಿ ಬಂದ ತನ್ವಿ, ಕಳಚಿ ಬೀಳುತ್ತಾ ಶ್ರೇಷ್ಠಾ ಮುಖವಾಡ
ತಂದೆಯನ್ನು ಕಾಣಲು ತನ್ವಿ ಡೈರೆಕ್ಟಾಗಿ ಬಂದಿದ್ದಾಳೆ ಮಗಳನ್ನು ನೋಡಿದ ಕೂಡಲೇ ತಾಂಡವ್ ಬಹಳ ಖುಷಿಪಟ್ಟಿದ್ದಾನೆ. ತನ್ವಿ ತನ್ನ ತಂದೆಗೆ ಪ್ರಶ್ನೆ ಮಾಡುತ್ತಿದ್ದಾಳೆ. ನಾನು ನಿಮಗೆ ಫೋನ್ ಮಾಡಿದರು ಸಹ ಸರಿಯಾಗಿ ಮಾತನಾಡಿಲ್ಲ ಹಣ ಕೇಳಿದ್ದಕ್ಕೆ ಮೆಸೇಜ್ ಮಾಡಿದ್ದೀರಿ ಎಂದಿದ್ದಾಳೆ. ನಾನು ಯಾವಾಗ ಮೇಸೇಜ್ ಮಾಡಿದೆ ಎಂದು ತಾಂಡವ್ ತನ್ವಿ ಬಳಿಯಲ್ಲಿ ಕೇಳುತ್ತಾ ಇದ್ದಾನೆ. ಅಷ್ಟರಲ್ಲಿ ಶ್ರೇಷ್ಠಾ ಅಲ್ಲಿಗೆ ಬಂದಿದ್ದು ನಿನ್ನ ಮಗಳು ಸುಳ್ಳು ಹೇಳುತ್ತಿದ್ದಾಳೆ ಎಂದಿದ್ದಾಳೆ ಇದಕ್ಕೆ ತನ್ವಿಗೆ ಬಹಳ ಬೇಸರವಾಗಿದೆ.
ಅಂದು ತನ್ವಿ ಫೋನ್ ಮಾಡಿದಾಗ ಶ್ರೇಷ್ಠ ಫೋನ್ ಕಟ್ ಮಾಡಿ ಆ ನಂಬರ್ ಅನ್ನು ಡಿಲೀಟ್ ಮಾಡಿದ್ದಾಳೆ. ನಂತರ ತಾಂಡವ್ ಮೊಬೈಲ್ ನಿಂದ ಮೆಸೇಜ್ ಕಳುಹಿಸಿ ಅದನ್ನು ಕೂಡ ಡಿಲೀಟ್ ಮಾಡಿದ್ದಾಳೆ. ಈಗ ತಾಂಡವ್ ಮುಂದೆ ಶ್ರೇಷ್ಠಾ ಮುಖವಾಡವನ್ನು ತನ್ವಿ ಕಳಚುತ್ತಾಳಾ ಎಂಬುದೇ ಕುತೂಹಲ.


Click it and Unblock the Notifications











