Bhagyalakshmi: ಶ್ರೇಷ್ಠಾ ಮಾತು ಕೇಳಿ ಮಗಳನ್ನೇ ಮನೆಯಿಂದ ಹೊರ ಹಾಕಿದ ತಾಂಡವ್, ಆಘಾತದಲ್ಲಿದ್ದ ತನ್ವಿಗೆ ಅಪಘಾತ!
ತಾಂಡವ್ ತನ್ನ ನಿಶ್ಚಿತಾರ್ಥದ ಅಮಲಿನಲ್ಲಿದ್ದಾನೆ. ಆತನಿಗೆ ಶ್ರೇಷ್ಠಾ ಮಾತ್ರ ಬೇಕು, ಬೇರೆ ಯಾರು ಬೇಡ ಮಗಳು. ತನ್ವಿ ತನ್ನ ತಂದೆಯಾದರು ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನೆ, ಆತ ಆದರೂ ನನ್ನನ್ನು ಸ್ಕೂಲ್ ಟ್ರಿಪ್ ಕಳುಹಿಸುತ್ತಾನೆ. ನನಗೆ 10,000 ಹಣವನ್ನು ಯಾರು ಕೊಡಲಿಲ್ಲ ಎಂದರು ನನ್ನ ಪಪ್ಪ ಕೊಟ್ಟೆ ಕೊಡುತ್ತಾರೆ ಎನ್ನುವ ಭರವಸೆಯಲ್ಲಿ ತನ್ನ ತಂದೆಯನ್ನು ಭೇಟಿಯಾಗಲು ತಾಯಿಯ ಬಳಿ ಸುಳ್ಳು ಹೇಳಿ ಹೋಗುತ್ತಾಳೆ.
ತನ್ವಿಯನ್ನು ನೋಡಿದ ಕೂಡಲೇ ಶ್ರೇಷ್ಠಾ ಮುಖದಲ್ಲಿ ಕೋಪ ಬಂದು, ಮಾತನಾಡಿಸುತ್ತಾ ಇರುತ್ತಾಳೆ ಆಮೇಲೆ ಅಲ್ಲಿಗೆ ತಾಂಡವ್ ಬರುತ್ತಾನೆ. ತಾಂಡವ್ ಬಳಿ ತನ್ವಿ ಸ್ಕೂಲ್ ಟ್ರಿಪ್ ಬಗ್ಗೆ ಮಾತನಾಡಿದಾಗ ತಾಂಡವ್ ಶ್ರೇಷ್ಠಾ ಮುಖ ನೋಡುತ್ತಾನೆ. ಶ್ರೇಷ್ಠಾ ಆತನನ್ನು ಮಹಡಿ ಮೇಲೆ ಕರೆದುಕೊಂಡು ಹೋಗಿ ಇಲ್ಲ ಸಲ್ಲದನ್ನ ಹೇಳಿಬಿಡುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ತನ್ವಿ ತಂದೆಗೆ ಪ್ರಶ್ನೆಯ ಮೇಲೆ ಪ್ರಶ್ನೆ ಮಾಡುತ್ತಾಳೆ.

ತಾಂಡವ್ ತನ್ನ ಮಕ್ಕಳಿಗೆ ಯಾವತ್ತೂ ಕೆಟ್ಟದ್ದನ್ನು ಬಯಸಿದವನಲ್ಲಲ್ಲ ಆತನಿಗೆ ಭಾಗ್ಯ ಮೇಲೆ ಅದೆಷ್ಟೇ ಸಿಟ್ಟಿದ್ದರೂ ಮಕ್ಕಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ತಾಂಡವ್‌ಗೆ ಶ್ರೇಷ್ಠಾ ಇಲ್ಲಸಲ್ಲದ್ದನ್ನ ಎಲ್ಲ ಹೇಳಿ ತನ್ವಿಗೆ ಹಣ ಕೊಡದ ಹಾಗೆ ಮಾಡುತ್ತಾಳೆ. ಹಾಗೆಯೇ ತನ್ವಿ ಮೇಲೆ ಕೈ ಎತ್ತುವ ಹಾಗೆ ಮಾಡುತ್ತಾಳೆ. ಇದನ್ನೆಲ್ಲ ನೋಡಿದ ತನ್ವಿ ತಂದೆಯಿಂದ ಕೂಡ ನನಗೆ ಹಣ ದೊರಕುವುದಿಲ್ಲ ಎಂದು ಬಹಳ ನೋವಿನಿಂದ ನೆನೆಯುತ್ತಾ ಬರುತ್ತಾಳೆ .
ತಂದೆಯ ಮಾತು ಕೇಳಿ ತನ್ವಿಗೆ ಆಘಾತ
ನನ್ನ ತಂದೆ ಯಾವತ್ತೂ ತನ್ನ ತಂದೆ ಕೇಳಿದ್ದನ್ನೆಲ್ಲ ಈಡೇರಿಸುತ್ತೇನೆ ಬಂದಿದ್ದ. ಆದರೆ, ಇದೀಗ ತಂದೆ ಕೂಡ ಬದಲಾಗಿದ್ದಾರೆ ಎಂದುಕೊಂಡು ದಾರಿಯಲ್ಲಿ ನಡೆಯುತ್ತ ಬರುವಾಗ ತನ್ವಿಗೆ ಅಪಘಾತವಾಗುತ್ತದೆ. ಆ ವೇಳೆಯಲ್ಲಿ ಭಾಗ್ಯ ಹಾಗೂ ಕುಸುಮ ಇಬ್ಬರನ್ನ ಕರೆಯಿಸಿ ಆಂಬುಲೆನ್ಸ್ ವ್ಯವಸ್ಥೆಯನ್ನು ಕೂಡ ಮಾಡಿ ಆಸ್ಪತ್ರೆಗೆ ದಾಖಲು ಮಾಡಲು ಆಗುತ್ತದೆ.
ಶ್ರೇಷ್ಠಾ ಮನೆಗೆ ಹೊರಟ ತಾಂಡವ್
ತಾಂಡವ್ ಆ ಬಾಡಿಗೆ ತಂದೆ ತಾಯಿಯ ಜೊತೆಗೆ ಶ್ರೇಷ್ಠಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೋಗುತ್ತಾನೆ. ಆತ ಶ್ರೇಷ್ಠಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂದು ನಿಶ್ಚಯ ಮಾಡಿಕೊಂಡಿದ್ದಾನೆ. ಶ್ರೇಷ್ಠಾ ಮನೆಗೆ ತಾಂಡವ್ ಹಾಗೂ ಆತನ ಬಾಡಿಗೆ ತಂದೆ ತಾಯಿ ಹೋಗುತ್ತಿರುವಾಗ ದಾರಿ ಮಧ್ಯೆ ಆಂಬುಲೆನ್ಸ್ ನಿಂತಿರುತ್ತದೆ. ಯಾರಿಗೂ ಅಪಘಾತವಾಗಿದೆ ಎಂದು ತಾಂಡವ್ ಎಂದುಕೊಳ್ಳುತ್ತಾನೆ.

ಕುಸುಮಾ ಫೋನ್ ಮಾಡಿದರೂ ಕ್ಯಾರೆ ಎನ್ನದ ತಾಂಡವ್
ಅಪಘಾತ ಆಗಿರುವುದು ಬೇರೆ ಯಾರಿಗೂ ಅಲ್ಲ ಮಗಳಿಗೆ ಎಂದು ತಾಂಡವ್‌ಗೆ ತಿಳಿದಿಲ್ಲ. ಅಪಘಾತವಾದ ಸ್ಥಳದಲ್ಲಿ ಒಂದು ಕ್ಷಣವು ಕಾರು ನಿಲ್ಲಿಸದೆ ಅಲ್ಲಿಂದ ನೇರವಾಗಿ ಶ್ರೇಷ್ಠಾ ಮನೆಗೆ ಹೋಗುತ್ತಾನೆ. ತಾಂಡವ್ ಅಮ್ಮ ತಾಂಡವ್‌ಗೆ ಪದೇ ಪದೇ ಫೋನ್ ಮಾಡಿದರು ಆತ ಫೋನ್ ಕಾಲ್ ರಿಸೀವ್ ಮಾಡದೆ ಕಾರಿನ ಒಳಗೆ ಮೊಬೈಲ್ ಇಟ್ಟುಬಿಡುತ್ತಾನೆ.


Click it and Unblock the Notifications











