Bhagyalakshmi: ಮಗಳನ್ನು ಉಳಿಸಿಕೊಳ್ಳಲು ಭಾಗ್ಯ ಪರದಾಟ, ಅತ್ತ ಎರಡನೇ ಮದುವೆ ಸಂಭ್ರಮದಲ್ಲಿ ತಾಂಡವ್!
ಭಾಗ್ಯಲಕ್ಷ್ಮೀ ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಂಡು ಸಾಗುತ್ತಾ ಇದೆ. ತನ್ವಿಗೆ ಆಕ್ಸಿಡೆಂಟ್ ಆಗಿದ್ದು ಅದನ್ನು ತಾಂಡವ್‌ಗೆ ಹೇಳಲು ಕುಸುಮಾ ಸಾಕಷ್ಟು ಬಾರಿ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ತಾಂಡವ್ ಅಮ್ಮ ಎಲ್ಲಿ ನನಗೆ ಬೈದು ಬಿಡುತ್ತಾರೋ ಎಂದುಕೊಂಡು ಅಮ್ಮನ ಫೋನ್ ರಿಸೀವ್ ಮಾಡುವುದಿಲ್ಲ. ಕುಸುಮಾ ತನ್ವಿಗೆ ಆಕ್ಸಿಡೆಂಟ್ ಆಗಿರುವ ವಿಚಾರವನ್ನು ಹೇಳಲು ಮೊದಲ ಬಾರಿ ಕರೆ ಮಾಡಿದಾಗ ತಾಂಡವ ಆಫೀಸ್‌ನಲ್ಲಿ ಇದ್ದನು. ಆದರೆ ಶ್ರೇಷ್ಠಾ ನಿನ್ನ ಅಮ್ಮ ನಿನಗೆ ಬೈಯಲು ಫೋನ್ ಮಾಡುತ್ತಿದ್ದಾರೆ ನೀನು ಫೋನ್ ರಿಸೀವ್ ಮಾಡಿ ಮೂಡ್ ಆಫ್ ಮಾಡಿಕೊಳ್ಳಬೇಡ ಎಂದು ಹೇಳಿದಳು. ಅದೇ ಮಾತನ್ನು ನಂಬಿರುವ ತಾಂಡವ್ ಶ್ರೇಷ್ಠಾ ಜೊತೆಯಲ್ಲಿ ಹೋಗುವಾಗಲೂ ಸಹ ಫೋನ್ ರಿಸೀವ್ ಮಾಡಿಲ್ಲ.
ಈ ಕಡೆ ಗುಂಡಣ್ಣ ಅಕ್ಕನಿಗೆ ಏನಾಯಿತು ಏನೋ ಅಂದುಕೊಂಡು ಸುನಂದ ಬಳಿಯಲ್ಲಿ ಅಜ್ಜಿ ನಾವು ಕೂಡ ಅಕ್ಕನನ್ನು ಆಡ್ಮಿಟ್ ಮಾಡಿರುವ ಆಸ್ಪತ್ರೆಗೆ ಹೋಗೋಣ ಎಂದು ಹಠ ಹಿಡಿಯುತ್ತಾನೆ. ಸುನಂದಾ ಕುಸುಮಾಗೆ ಫೋನ್ ಮಾಡಿ ಯಾವ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರೆ ಎಂಬುದನ್ನು ಕೇಳಿಕೊಂಡು ಗುಂಡಣ್ಣನ ಜೊತೆಯಲ್ಲಿ ಆಸ್ಪತ್ರೆಗೆ ಹೊರಟಿದ್ದಾರೆ. ತಾಂಡವ್‌ಗೆ ಕುಸುಮ ಪದೇ ಪದೇ ಫೋನ್ ಮಾಡುತ್ತಿದ್ದರು ಕೂಡ ಡ್ಯಾಶ್ ಬೋರ್ಡ್‌ಗೆ ಫೋನ್ ಇಟ್ಟು ಸುಮ್ಮನೆ ಆಗಿದ್ದಾನೆ. ಈ ವಿಷಯ ಶ್ರೇಷ್ಠಾಗೆ ತುಂಬಾ ಖುಷಿ ಕೊಡುತ್ತಿದೆ. ಕೊನೆಗೂ ತಾಂಡವ್ ನನ್ನ ಮಾತು ಕೇಳುತ್ತಾ ಇದ್ದಾನೆ ಅಂದುಕೊಂಡಿದ್ದಾಳೆ.

ಶ್ರೇಷ್ಠಾ ಮನೆಯಲ್ಲಿ ಹೂ ಮುಡಿಸುವ ಶಾಸ್ತ್ರದ ಸಂಭ್ರಮ ಕೂಡ ಮನೆ ಮಾಡಿದೆ. ಆದರೆ ತಾಂಡವ್ ಒಲ್ಲದ ಮನಸ್ಸಿನಿಂದ ಒಪ್ಪಿಗೆಯನ್ನು ನೀಡಿ ಕರೆದುಕೊಂಡು ಹೋಗುತ್ತಾ ಇದ್ದಾನೆ. ಅವನಿಗೆ ಈಗ ಮನೆ, ಹೆಂಡತಿ, ಮಕ್ಕಳು, ತಂದೆ-ತಾಯಿ ಯಾರು ಬೇಡವಾಗಿದ್ದಾರೆ. ಶ್ರೇಷ್ಠಾ ಹೇಳಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಇದ್ದಾನೆ. ಭಾಗ್ಯ ತನ್ನ ಮಗಳನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಾ ಇದ್ದಾಳೆ. ತನ್ವಿ ತಾಂಡವ್ ಬಳಿ ಹೋಗಿರಬಹುದು ಎಂದು ಗುಂಡಣ್ಣ ಹೇಳಿದ್ದು, ನಿಜವಾಗಿ ಇದೆ ಆಗಿದೆ ಎಂದು ಮನೆಯವರು ತಿಳಿದುಕೊಂಡಿದ್ದಾರೆ.
ತನ್ವಿಯನ್ನು ಹೇಗೆ ಉಳಿಸಿಕೊಳ್ತಾಳೆ ಭಾಗ್ಯ..?!
ಮಗಳಿಗಾಗಿ ಮಿಡಿಯುತ್ತಾ ತಂದೆಯ ಹೃದಯ
ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರವನ್ನು ಯಾವ ರೀತಿ ತಿಳಿಸಬೇಕು ಎಂಬುದು ಭಾಗ್ಯ ಹಾಗೂ ಕುಸುಮಾ ಅವರಿಗೆ ತಿಳಿಯುತ್ತಿಲ್ಲ. ಪದೇ ಪದೇ ಪೋನ್ ಮಾಡಿ ಸುಸ್ತಾಗಿದ್ದಾರೆ. ತನ್ವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಭಾಗ್ಯ ಹೇಗೆ ಮಗಳನ್ನು ಉಳಿಸಿಕೊಳ್ಳುತ್ತಾಳೆ ನೋಡಬೇಕು. ತನ್ವಿಗೆ ಬ್ಲಡ್ ಲಾಸ್ ಆಗಿದೆ ಎಂದು ಡಾಕ್ಟರ್ ಹೇಳಿದ್ದಾರೆ. ನಮ್ಮ ಬ್ಲಡ್ ಬ್ಯಾಂಕ್ ನಲ್ಲಿ ತನ್ವಿಗೆ ಬೇಕಾದ ಬ್ಲಡ್ ಇಲ್ಲ ಆದಷ್ಟು ಬೇಗ ಅರೇಂಜ್ ಮಾಡಿ ಎಂದು ಹೇಳಿದ್ದಾರೆ. ಡಾಕ್ಟರ್ ಮಾತು ಕೇಳಿದ ಭಾಗ್ಯ ಗಾಬರಿಯಾಗಿದ್ದಾಳೆ. ಕುಸುಮ ಮಗನಿಗೆ ವಿಷಯವನ್ನು ತಿಳಿಸಬೇಕು ಎಂದು ಪದೇ ಪದೇ ಕಾಲ್ ಮಾಡುತ್ತಿದ್ದರು ಕೂಡ ತಾಂಡವ್ ಫೋನ್ ಎತ್ತುತ್ತಿಲ್ಲ.

ತಾಂಡವ್ ಶ್ರೇಷ್ಠಾ ಜೊತೆಯಲ್ಲಿಎಂಗೇಜ್ಮೆಂಟ್ ಮಾಡಿಕೊಳ್ಳಲು ಹೋಗುತ್ತಾ ಇದ್ದಾನೆ. ತಾಂಡವ್ ಡೂಪ್ಲಿಕೇಟ್ ಅಪ್ಪ-ಅಮ್ಮ ದಾರಿ ಮಧ್ಯದಲ್ಲಿ ಡುಪ್ಲಿಕೇಟ್ ಅಪ್ಪ ಅಮ್ಮನ ಮಾತು ಕೋಪ ತರಿಸುತ್ತಿದೆ. ಆದರೆ ಏನು ಮಾತನಾಡದೆ ಸುಮ್ಮನೆ ಕಾರ್ ಡ್ರೈವ್ ಮಾಡುತ್ತಿದ್ದಾನೆ. ಶ್ರೇಷ್ಠಾ ಕೂಡ ಸುಂದರಿ ಹಾಗೂ ಮಹೇಶ್‌ನ ಮಾತು ಕೋಪವನ್ನ ತರಿಸುತ್ತಿದ್ದರು ಕೂಡ ನನ್ನ ತಂದೆ ತಾಯಿ ಆಸ್ತಿ ಕಟ್ಟಿಕೊಂಡು ನಿಮಗೆ ಏನು ಆಗಬೇಕು ಎಂದು ಹೇಳಿದ್ದಾಳೆ.
ಶ್ರೇಷ್ಠಾ ಜೊತೆಗೆ ವಾದಕ್ಕೆ ನಿಂತ ತಾಂಡವ್
ತಾಂಡವ್ ಎಂಗೇಜ್ಮೆಂಟ್ ಏನು ಗ್ರ್ಯಾಂಡ್ ಆಗಿ ಇರಬಾರದು ನಮ್ಮ ಫ್ಯಾಮಿಲಿ ನಿಮ್ಮ ಫ್ಯಾಮಿಲಿ ಅವರಷ್ಟೇ ಇರಬೇಕು ನನಗೆ ಈ ಆಡಂಬರವೆಲ್ಲ ಇಷ್ಟ ಆಗೋದಿಲ್ಲ. ನಿನ್ನ ತಂದೆ ತಾಯಿಗೆ ಈ ವಿಷಯವನ್ನು ತಿಳಿಸಿಬಿಡು ಎಂದು ಹೇಳಿದ್ದಾನೆ. ನಾನು ಈ ಎಂಗೇಜ್ಮೆಂಟ್ ಮಾಡಿಕೊಳ್ಳಲು ಒಪ್ಪಿದೆ ಹೆಚ್ಚು ನಾನು ಹೇಳಿದಂತೆ ಎಲ್ಲವೂ ಆಗಬೇಕು ಎಂದು ಕೇಳಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ನೀನು ಈ ರೀತಿಯೆಲ್ಲ ಮಾತನಾಡಬೇಡ, ನನ್ನ ತಂದೆ ತಾಯಿಗೆ ಹೇಳುವುದಕ್ಕೆ ಆಗುವುದಿಲ್ಲ ಏನಾದರೂ ಒಂದು ಮಾಡೋಣ ಬಾ ಎಂದು ಕರೆದುಕೊಂಡು ಹೋಗುತ್ತಾ ಇದ್ದಾಳೆ. ಆ ಕಡೆ ಮಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ ಈ ಕಡೆ ತಾಂಡವ್ ಯಾವುದೇ ಚಿಂತೆ ಇಲ್ಲದೆ ಎಂಗೇಜ್‌ಮೆಂಟ್ ಮಾಡಿಕೊಳ್ಳಲು ಹೋಗುತ್ತಿದ್ದು, ತಾಂಡವ್‌ಗೆ ಯಾವ ರೀತಿ ಮಗಳಿಗೆ ಆಕ್ಸಿಡೆಂಟ್ ಆಗಿರುವ ವಿಚಾರ ಗೊತ್ತಾಗುತ್ತದೆ ಎಂಬುವುದೇ ಕುತೂಹಲವಾಗಿದೆ.


Click it and Unblock the Notifications











