Bhagyalakshmi: ತಾಯಿಯನ್ನು ಎಲ್ಲರ ಮುಂದೆ ಎಳೆದುಕೊಂಡು ಬಂದ ತಾಂಡವ್: ಅದು ಕಾಳಜಿ ಅಲ್ಲ!

By ಎಸ್ ಸುಮಂತ್

ಇಡೀ ಮನೆಯಲ್ಲಿ ಯಾರಿಗೂ ಸಣ್ಣ ಅನುಮಾನವೂ ಬಾರದಂತೆ ಅತ್ತೆ ಸೊಸೆ ಕೆಲಸಕ್ಕೆ ಹೋಗುತ್ತಿದ್ದಾರೆ. ಅತ್ತೆ ವ್ರತ ಅಂತ ಸುಳ್ಳು ಹೇಳಿದ್ದರೆ, ಸೊಸೆ ಭಜನೆಗೆಂದು ಸುಳ್ಳು ಹೇಳಿ ಹೋಗುತ್ತಿದ್ದಾಳೆ. ಆದರೆ ತಾಂಡವ್ ಗೆ ಅನುಮಾನ ಬಂದು, ಅಮ್ಮನನ್ನು ಫಾಲೋ ಮಾಡಿದಾಗಲೇ ಅಮ್ಮ ಏನು ಮಾಡುತ್ತಿದ್ದಾರೆ ಎಂಬುದು ತಿಳಿದದ್ದು. ಆದರೆ ಅಮ್ಮನ ಸ್ಥಿತಿಗೆ ತಾನೇ ಕಾರಣ ಎಂಬುದನ್ನು ಅರಿಯದೆ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ.

ಕೆಲಸ‌ಮಾಡುತ್ತಿದ್ದ ಅಮ್ಮನನ್ನು ನೋಡಿ, ಅಮ್ಮನ ಸ್ಥಿತಿಗೆ ಆ ಎಮ್ಮೆಯೇ ಕಾರಣ ಅಂತ ಇನ್ನಷ್ಟು ಅಂತ ಕೋಪಗೊಂಡಿದ್ದಾನೆ. ಆದರೆ ಅಮ್ಮನನ್ನು ಆ ಸ್ಥಿತಿಯಲ್ಲಿ ಕಂಡು ಸೀದಾ ಅಡುಗೆ ಮನೆಗೆ ಬಂದಿದ್ದಾನೆ. ಅಲ್ಲಿ ಅಮ್ಮನ ಮಾತನ್ನು ಕೇಳದೆ ಧರಧರನೇ ಎಳೆದುಕೊಂಡು ಹೋಗಿದ್ದಾನೆ.

Bhagyalakshmi kannada serial Written Update on June 4th episode

ಹೊಟೇಲ್ ಮಾಲೀಕರಿಗೆ ಬೈದ ತಾಂಡವ್

ಅಮ್ಮನನ್ನು ಆ ಸ್ಥಿತಿಗೆ ತಳ್ಳಿರುವುದು ಭಾಗ್ಯಾನೇ ಎಂದು ಕಿಡಿಕಾರಿದ ತಾಂಡವ್, ಅಮ್ಮನ ಕೆಲಸದ ಅವತಾರ ತಪ್ಪಿಸಿ, ಸೀದಾ ಹೊರಗೆ ಕರೆದುಕೊಂಡು ಹೋದ. ಕುಸುಮಾ ಕೈ ಚೆಲ್ಲಿದಳು. ಆದರೆ ತಾಂಡವ್ ನೀನು ಇಲ್ಲಿ ಯಾಕಮ್ಮ ಕೆಲಸ ಮಾಡಬೇಕು ಎಂದು ಕೇಳುವಾಗಲೇ ಹೊಟೇಲ್ ಮಾಲೀಕರು ಅಲ್ಲಿಗೆ ಬಂದರು. ಕುಸುಮಾಗೆ ಏಕವಚನದಲ್ಲಿಯೇ ಬೈದರು. ಅದನ್ನು ಸಹಿಸದ ತಾಂಡವ್ ತಿರುಗಿಸಿ ಹೊಟೇಲ್ ಮಾಲೀಕರಿಗೆ ಬೈದಿದ್ದಾನೆ.

ಅಮ್ಮನ ಮಾತಿಗೆ ಗಪ್ ಚುಪ್ ಆದ ತಾಂಡವ್

ಕಷ್ಟಕಾಲದಲ್ಲಿ ಕೆಲಸ ಕೊಟ್ಟು ಸಹಾಯ ಮಾಡಿದ ಮಾಲೀಕರಿಗೆ ಬೈದ ತಾಂಡವ್ ಬಾಯಿ ಮುಚ್ಚಿಸಿದ್ದಾಳೆ ಕುಸುಮಾ. ಆಮೇಲೆ ಹೊಟೇಲ್ ಮಾಲೀಕರು ಕೂಡ ತಾಂಡವ್ ನನ್ನು ಬೈದು ಹೋದರು. ನಿನ್ನಂತ ಮಗನಿದ್ದರೆ, ತಾಯಂದಿರು ಇನ್ನೇನು ತಾನೇ ಮಾಡುವುದಕ್ಕೆ ಸಾಧ್ಯ ಎಂದು ತಾಂಡವ್ ಗೆ ಛೀಮಾರಿ ಹಾಕಿ ಹೋದರು. ಆದರೂ ತಾಂಡವ್ ಅಮ್ಮನನ್ನು ಸಮಾಧಾನ ಮಾಡುವುದಕ್ಕೆ ಹೊರಟ. ಕುಸುಮಾ ಅದಕ್ಕೆಲ್ಲ ಬಗ್ಗುವುದೇ ಅಲ್ಲ. ತಾಂಡವ್ ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ.

Bhagyalakshmi kannada serial Written Update on June 4th episode

ಭಾಗ್ಯಾ ಬಗ್ಗೆ ಮತ್ತೆ ಕೆಟ್ಟ ಮಾತು

ಅಮ್ಮನನ್ನು ಸಮಾಧಾನ ಮಾಡಲು ಹೋಗಿ ಮತ್ತೆ ತಾಂಡವ್, ಭಾಗ್ಯಾಳಾ ಮೇಲರ‌ಗೂಬೆ ಕೂರಿಸಿದ್ದಾನೆ. ಅಲ್ಲ ಅಮ್ಮ ನೀವೆಂದರೆ ನನಗೆ ಪ್ರಾಣ. ನೀವೂ ಈ ರೀತಿ ಕೆಲಸ ಮಾಡುವುದಾ. ಆ ಎಮ್ಮೆ ಈಗ ಎಲ್ಲೋ ಒಂದು ಕಡೆ ಭಜನೆ ಮಾಡಿಕೊಂಡು ಕೂತಿರುತ್ತಾಳೆ. ನೀವೂ ಇಷ್ಟು ಕಷ್ಟ ಪಡಬೇಕಾ. ನಾನು ಭಾಗ್ಯಾಳನ್ನ ಬೇಡ ಅಂತಾ ಇರೋದು. ನೀವೂ ಅವಳೇ ಬೇಕು ಅಂತಾ ಇದ್ದೀರಾ. ನೀವೂ ಈ ರೀತಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಾ ಇದ್ದೀರಾ ಎಂದರೆ ನನ್ನ ಮರ್ಯಾದೆ ಏನಾಗಬೇಡ. ನಮ್ಮ ಆಫೀಸಿನವರು ಯಾರಾದರೂ ನೋಡಿದರೆ ಎಂದು ಅಮ್ಮನ ಬಳಿ ರೇಗಾಡಿದ. ಅಲ್ಲಿಗೆ ಕುಸುಮಾಗೆ ಮತ್ತೊಮ್ಮೆ ಬೇಜಾರಾಯಿತು. ಇಲ್ಲಿ ಅಮ್ಮನ ಬಗ್ಗೆ ಕಾಳಜಿ ಇರೋದಲ್ಲ ನಿನ್ನ ಮರ್ಯಾದೆ ಬಗ್ಗೆ ಕಾಳಜಿ ಇರೋದಾ ಎಂದು ಬೇಸರ ಹೊರ ಹಾಕಿದಳು.

ಒತ್ತು ಶಾವಿಗೆ ತರಲು ಬಂದ ಭಾಗ್ಯಾ

ಅತ್ತ ಭಾಗ್ಯಾಗೆ ದುಷ್ಮನ್ ಆಗಿದ್ದ ಹಿತ, ಈಗ ಒಳಿತನ್ನೇ ಮಾಡುತ್ತಿದ್ದಾಳೆ. ಭಾಗ್ಯಾಗೆ ಬೆಂಬಲವಾಗಿ ನಿಂತಿದ್ದಾಳೆ. ಈಗ ಎದುರುಗಡೆ ಇರುವ ದರ್ಶಿನಿ ಹೊಟೇಲ್ ನಲ್ಲಿ ಒಂದು ಪದಾರ್ಥ ತರಿಸುವುದಕ್ಕೆ ಕಳುಹಿಸಿದ್ದಾಳೆ. ಎಲ್ಲರು ಆ ದರ್ಶಿನಿ ಹೊಟೇಲ್ ನಲ್ಲಿ ಮಾಡುವ ಒತ್ತು ಶಾವಿಗೆಯ ಬೇಡಿಕೆ ಶುರುವಿಟ್ಟುಕೊಂಡಿರಬಹುದು. ಈಗ ಅತ್ತೆ ಮಾಡಿ ಒತ್ತು ಶಾವಿಗೆ ತರುವುದಕ್ಕೆ ಹೊರಟಿದ್ದಾಳೆ‌ ಭಾಗ್ಯಾ. ಆ ಕಡೆ ಹೊಟೇಲ್ ಎದುರೇ ಗಂಡ-ಅತ್ತೆ ಜಗಳವಾಡುತ್ತಾ ನಿಂತಿದ್ದಾರೆ.

More from Filmibeat

English summary
Bhagyalakshmi kannada serial today episode. Here is the details about Tandav told Amma to leave work;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X