Bhagyalakshmi: ವಾರೆವಾ.. ಭಾಗ್ಯ; ಕೆಲಸಕ್ಕಾಗಿ ಧ್ವನಿ ಎತ್ತಿದ ಕುಸುಮಾ ಸೊಸೆಗೆ ವೀಕ್ಷಕರ ಜೈಕಾರ

By ಎಸ್ ಸುಮಂತ್

ತನಗೆ ಅನ್ಯಾಯವಾಗುತ್ತಾ ಇದೆ ಎಂದಾಗಲೂ ಭಾಗ್ಯಾ ಒಂದು ಮಾತನ್ನು ಆಡಲ್ಲ. ತಾಂಡವ್ ಎಮ್ಮೆ, ಕೋಣ, ಪೆದ್ದಿ ಎಂದಾಗಲೂ ತುಟಿಕ್ ಪಿಟಿಕ್ ಎನ್ನದ ಭಾಗ್ಯಾಳನ್ನು ಕಂಡು ವೀಕ್ಷಕರು ರೋಸಿ ಹೋಗಿದ್ದರು. ಪರೀಕ್ಷೆ ಬರೆಯುವಾಗ ಆದ ಅನ್ಯಾಯಕ್ಕಾಗಿ ನ್ಯಾಯ ಹುಡುಕುತ್ತಾ, ತಪ್ಪಿತಸ್ಥರನ್ನು ಬುದ್ದಿವಂತಿಕೆಯಿಂದ ಹುಡುಕಿದ ಭಾಗ್ಯಾ ಎಲ್ಲಿ ಹೋದಳು.‌ ನಮಗೆ ಆ ಭಾಗ್ಯಾ ಬೇಕು. ಗಂಡನ ಅಹಂಕಾರವನ್ನೆಲ್ಲ ಸಹಿಸುವ ಭಾಗ್ಯಾ ಬೇಡ ಎಂದೇ ಮಹಿಳಾ ಅಭಿಮಾನಿಗಳ ಒತ್ತಾಸೆಯಾಗಿತ್ತು. ಇದೀಗ ಬಯಸಿದ ಭಾಗ್ಯಾ ಸಿಕ್ಕಿದ್ದಾಳೆ.

ಅನಿವಾರ್ಯತೆ ಎಂಬುದು ಎಷ್ಟುಬೇಕಾದರೂ ಧೈರ್ಯ ತಂದುಕೊಡುತ್ತದೆ. ಯಾರನ್ನ ಬೇಕಾದರೂ ಸಂಭಾಳಿಸುವಂತ ಸ್ಪೂರ್ತಿ ಸಿಗುತ್ತದೆ. ಭಾಗ್ಯಾಗೂ ಇಲ್ಲಿ ಅದೇ ಆಗಿದ್ದು. ಮನೆಯಲ್ಲಿ ಕಷ್ಟ, ಗಂಡನಿಂದ ಟಾರ್ಚರ್ ಒಳಗಿನ ಧೈರ್ಯ ಹೊರಗೆ ಬಂದಿದೆ.

Bhagyalakshmi kannada serial Written Update on June 6th episode

ಒತ್ತು ಶಾವಿಗೆ ಮಾಡುತ್ತೇನೆಂದ ಭಾಗ್ಯಾ

ದರ್ಶಿನಿ ಹೊಟೇಲ್‌ನಿಂದ ಭಾಗ್ಯಾಳಿಗೆ ತರುವುದಕ್ಕೆ ಹೇಳಿದ್ದಿದ್ದು ಒತ್ತು ಶಾವಿಗೆ, ಕಾಯಿ ಹಾಲು. ಆದರೆ ಅದಕ್ಕೆ ಇಂಗ್ಲಿಷ್‌ನಲ್ಲಿ ಅದೇನೋ ಹೆಸರಿಟ್ಟು ಗೊಂದಲ ಮಾಡಿದ್ದರು. ಅದರ ಚಿತ್ರ ನೋಡಿದಾಗಲೇ ಭಾಗ್ಯಾಗೆ ಇದು ಗೊತ್ತಾಗಿದ್ದು. ಮ್ಯಾನೇಜರ್ ಬಳಿ ಈ ಅಡುಗೆ ನನಗೆ ಮಾಡುವುದಕ್ಕೆ ಬರುತ್ತದೆ. ಮನೆಯಲ್ಲಿ ಇದನ್ನು ಎಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ನನ್ನ ಮಗನಂತೂ ಈ ಅಡುಗೆ ಮಾಡಿದರೆ ಬೇರೆನನ್ನು ತಿನ್ನುವುದೇ ಇಲ್ಲ ಎಂದಳು.

ಕೆಲಸದಿಂದ ವಜಾಗೊಂಡ ಭಾಗ್ಯಾ

ಹಿತ ಸಾಧ್ಯವಾದಷ್ಟು ಭಾಗ್ಯಾಳನ್ನು ಕಾಪಾಡುವುದಕ್ಕೇನೆ ನೋಡಿದಳು. ಆದರೆ ಭಾಗ್ಯಾಳ ಮಾತು ಮ್ಯಾನೇಜರ್‌ಗೆ ಅನುಮಾನ ಮೂಡಿಸಿತ್ತು. ಹೊಟೇಲ್ ಮ್ಯಾನೇಜ್ಮೆಂಟ್ ಮಾಡಿಕೊಂಡು ಬಂದು ಅಡುಗೆ ಮಾಡ್ತೀನಿ ಅಂತೀರಲ್ಲ, ಅದೇಗ್ರಿ ರ್ಯಾಂಕ್ ಬಂದ್ರಿ. ನಂಗೆ ಸರ್ಪೈಸ್ ಆಗ್ತಿದೆ ಎಂದಾಗಲೇ ಇನ್ನೊಬ್ಬ ಅಲ್ಲಿಗೆ ಎಂಟ್ರಿ ಕೊಟ್ಟ. ಸರ್ಪೈಸ್ ಆಗಲೇಬೇಕಲ್ಲವಾ. ಯಾಕಂದ್ರೆ ಇವರು ಭಗಾಯನೇ ಅಲ್ಲ ಎಂದಿದ್ದಾನೆ.‌ ಇದನ್ನು ಕೇಳಿದ ಮ್ಯಾನೇಜರ್ ಕೆಂಡಾಮಂಡಲರಾಗಿದ್ದಾರೆ. ಮೊದಲು ನನ್ನ ಕಣ್ಣ ಮುಂದೆ ಇರಬೇಡಿ ಹೋಗಿ ಎಂದು ಗದರಿದ್ದಾನೆ. ದಾರಿ ಕಾಣದೇ ಡ್ರೆಸ್ ಬದಲಾಯಿಸಿಕೊಂಡು ಹೊರಟಿದ್ದಾಳೆ.

Bhagyalakshmi kannada serial Written Update on June 6th episode

ಅವಕಾಶ ಕೇಳಿದ ಭಾಗ್ಯಾ

ಅಷ್ಟರಲ್ಲಿ ಹೊಟೇಲ್‌ಗೆ ಟೇಸ್ಟ್ ನೋಡಿ, ರಿವ್ಯೂ ಬರೆಯುವ ಅಧಿಕಾರಿ ಬಂದು ಕೂತಿದ್ದರು. ಹೊಟೇಲ್ ಮಾಲೀಕರು ಅವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಅದನ್ನು ಕಂಡು ಭಾಗ್ಯಾ ಜೋರಾಗಿಯೇ ಮಾತನಾಡಿದ್ದಾಳೆ‌‌. ಈ ಅಡುಗೆ ಮಾಡುವುದಕ್ಕೆ ನನಗೆ ಬರುತ್ತದೆ. ಒಂದು ಅವಕಾಶ ಕೊಟ್ಟರೆ ಮಾಡಿ ತೋರಿಸುತ್ತೇನೆ. ಅವಕಾಶ ಕೊಡಬೇಕು ಅಲ್ವಾ ಎಂದಿದ್ದಾಳೆ.

ಭಾಗ್ಯಾಳಾ ಈ ನಡೆಗೆ ವೇಯ್ಟಿಂಗ್

ಸರಿಯಾದ ಸಮಯಕ್ಕೆ ಸರಿಯಾದ ಮಾತು ಆಡಿದ್ದಾಳೆ ಭಾಗ್ಯಾ. ಒಂದು ವೇಳೆ ದೊಡ್ಡವರು ಇದ್ದಾರೆಂದು ಸುಮ್ಮನೆ ಬಂದು ಬಿಟ್ಟಿದ್ದರೆ ಭಾಗ್ಯಾ ಮತ್ತೆ ಸೋಲುತ್ತಿದ್ದಳು. ಈಗ ಆ ಹೊಟೇಲ್ ಮಾಲೀಕ ಏನು ಮಾತನಾಡುವುದಕ್ಕೆ ಸಾಧ್ಯವಿಲ್ಲ. ಭಾಗ್ಯಾಳಿಗೆ ಅವಕಾಶ ಕೊಡಲೇಬೇಕು. ಒತ್ತು ಶಾವಿಗೆಯಾಗಿರುವ ಕಾರಣ, ಅತ್ತೆಯ ಕೈರುಚಿಯೇ ಬಂದಿರುತ್ತೆ. ಹೀಗಾಗಿ ಇದರಲ್ಲಿ ಗೆದ್ದೇ ಗೆಲ್ಲುತ್ತಾಳೆ. ಭಾಗ್ಯಾಳ ಈ ಗುಣಕ್ಕೆ ಎಲ್ಲರೂ ಶಬ್ಬಾಶ್ ಗಿರಿ ನೀಡಿದ್ದಾರೆ. ಇಷ್ಟೇ ಧೈರ್ಯ ಇನ್ಮುಂದೆಯೂ ಮುಂದುವರೆಯಲಿ ಭಾಗ್ಯಾ ಎಂದೇ ಹಾರೈಸಿದ್ದಾರೆ. ಎಲ್ಲದಕ್ಕೂ ಹೆದರುವ ಭಾಗ್ಯಾಳಿಗಿಂತ ಸರಿ, ತಪ್ಪು, ಅನ್ಯಾಯವನ್ನು ಖಂಡಿಸುವ ಭಾಗ್ಯಾಳೆ ಎಲ್ಲರಿಗೂ ಇಷ್ಟ.

More from Filmibeat

English summary
Bhagyalakshmi kannada serial today episode. Here is the details about Viewers admired Bhagya's bravery;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X