Bhagyalakshmi: ಲಕ್ಷ್ಮೀಯನ್ನು ಆಚೆ ಹಾಕಿ ವೈಷ್ಣವ್ ಬಾಳಿಗೆ ಬರಲು ಕೀರ್ತಿ ಸಂಚು.. ಮುಂದೇನು?
ವೈಷ್ಣವ್ ಮತ್ತು ಲಕ್ಷ್ಮೀ ಮದುವೆ ನಡೆಯುವ ತನಕ ಎಲ್ಲರಿಗೂ ಆತಂಕ ಎದುರಾಗಿತ್ತು. ಒಂದು ಕಡೆ ಕೀರ್ತಿಯನ್ನು ಒಪ್ಪಿಸಿ ಕರೆದುಕೊಂಡು ಬರ್ತೀನಂತ ವೈಷ್ಣವ್ ಹಠ ಮಾಡ್ತಾ ಇದ್ರೆ, ಈ ಕಡೆ ಕಾವೇರಿ ಮತ್ತು ಕುಸುಮಾ ಮನಸ್ಸು ವಿಲವಿಲ ಅಂತ ಒದ್ದಾಡುತ್ತಿತ್ತು. ಈ ಮದುವೆ ನಡೆಯುವುದಕ್ಕೆ ಸಾಧ್ಯವೇ ಇಲ್ಲವೇನೋ ಎಂದು ಎಲ್ಲರೂ ಆಸೆ ಕಳೆದುಕೊಂಡಾಗಲೇ ಎಲ್ಲವೂ ಸಲೀಸಾಗಿ ಹೋಗಿದೆ. ಅದು ಕಾವೇರಿಯ ಬುದ್ಧಿವಂತಿಕೆಯಿಂದಾನೆ.
ಲಕ್ಷ್ಮೀ ಮನೆಯವರಿಗೆ ವೈಷ್ಣವ್ ಪ್ರೀತಿ ತಿಳಿಯದಂತೆ ಕಾವೇರಿ ಮತ್ತು ಕುಸುಮಾ ಇಬ್ಬರು ಪ್ರಯತ್ನಪಟ್ಟರು. ಕೀರ್ತಿ ಬೆಸ್ಟ್ ಫ್ರೆಂಡ್ ಅಂತಾನೆ ಲಕ್ಷ್ಮೀ ಮತ್ತು ಭಾಗ್ಯಾ ನಂಬುವಂತೆ ಮಾಡಿದರು. ಈಗ ಮದುವೆಯೂ ಮುಗಿದಿದೆ. ಲಕ್ಷ್ಮೀಯನ್ನು ಮನೆ ತುಂಬಿಸಿಕೊಂಡು ಆಗಿದೆ. ಆಗಲೇ ಕೀರ್ತಿಯ ಕಿರಿಕ್ ಶುರುವಾಗಿದೆ.

ಕೀರ್ತಿಯನ್ನು ಯಾಮಾರಿಸಿ ಬಿಟ್ಟಿದ್ದಾಳೆ ಕಾವೇರಿ..!
ವೈಷ್ಣವ್ ಮದುವೆಯಾಗುವುದಕ್ಕೆ ಬಿಡಲ್ಲ, ಕೊನೆಯ ಗಳಿಗೆಯಲ್ಲಿ ನಾನೇ ಆಗೋದು ಅಂತ ಕೀರ್ತಿ ಬಡಬಡಾಯಿಸ್ತಾ ಇದ್ದಳು. ಆದರೆ, ವೈಷ್ಣವ್ ಮನಸ್ಸಿಗೆ ನೋವಾಗುವಂತೆ ಮಾಡಿ, ಅವನು ತಂದಿದ್ದ ತಾಳಿಯನ್ನು ಬೆಂಕಿಗೆ ಬಿಸಾಡಿ, ಅವನ ಮನಸ್ಸನ್ನು ಘಾಸಿ ಮಾಡಿ ಬಿಟ್ಟಳು. ಮತ್ತೆಂದು ನಿನ್ನ ಬಯಸುವುದಿಲ್ಲ ಎಂದು ಹೇಳಿ ವೈಷ್ಣವ್ ಲಕ್ಷ್ಮೀಯನ್ನು ಮದುವೆಯಾಗಲು ಹೋದ. ಇದರ ಹಿಂದಿನ ಸಂಪೂರ್ಣ ಜವಾಬ್ದಾರಿ ಕಾವೇರಿಯದ್ದು. ಲಕ್ಷ್ಮೀಯನ್ನು ಮನೆಯಿಂದಾಚೆ ಹಾಕಿ ಮತ್ತೆ ವೈಷ್ಣವ್‌ಗೆ ನಿನ್ನನ್ನು ತಂದುಕೊಳ್ಳುತ್ತೇನೆ ಎಂದು ಭರವಸೆಯನ್ನು ಹುಟ್ಟು ಹಾಕಿದ್ದಾಳೆ. ಅದನ್ನೆ ನಂಬಿಕೊಂಡಿರುವ ಕೀರ್ತಿ, ವೈಷ್ಣವ್‌ಗಾಗಿ ಕಾಯ್ತಾ ಇದ್ದಾಳೆ.

ಸುಪ್ರಿತಾ ಮಾಡಿದ ಕೆಲಸಕ್ಕೆ ವೈಷ್ಣವ್ ಆಕ್ರೋಶ
ಈ ಕಡೆ ಮದುವೆಯೆಲ್ಲಾ ಮುಗಿದಿದೆ, ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ. ಆದರೆ, ಸುಪ್ರಿತಾ ಮತ್ತು ನಿಧಿಗೆ ಲಕ್ಷ್ಮೀ ಕಂಡರೆ ಆಗಲ್ಲ. ಈಗ ಒಳಗೆ ಬರುವುದಕ್ಕೂ ಮುನ್ನ ಏನಾದರೂ ಮಾಡಬೇಕೆಂದು ಪ್ಲ್ಯಾನ್ ಮಾಡಿದ್ದಳು. ಲಕ್ಷ್ಮೀ ಸೇರು ಒದ್ದು, ಕಾಲು ಒಳಗಿಡಬೇಕು ಎನ್ನುವಷ್ಟರಲ್ಲಿ ಗಾಜಿನ ಪಾತ್ರೆ ಬೀಳಿಸಿದಳು. ಲಕ್ಷ್ಮೀ ಕಾಲಿಡುವ ಜಾಗದಲ್ಲಿ ಗಾಜಿದೆ. ಕಾಲು ಹಿಂದೆಯೂ ತೆಗೆಯುವಂತಿಲ್ಲ. ಅಕ್ಕಿ ಸ್ವಚ್ಛ ಮಾಡಿ ಬರುವಂತೆಯೂ ಇಲ್ಲ. ಸುಪ್ರಿತಾ ಮಾಡಿದ ಕೆಲಸಕ್ಕೆ ಎಲ್ಲರೂ ತರಾಟೆಗೆ ತೆಗೆದುಕೊಂಡಿದ್ದಾರೆ. ವೈಷ್ಣವ್ ಕೂಡ ಈಗ ಅತ್ತೆಗೆ ಬೆಲೆ ಕೊಡ್ತಾ ಇಲ್ಲ.

ಲಕ್ಷ್ಮೀ ಧೈರ್ಯಕ್ಕೆ ಎಲ್ಲರ ಚಪ್ಪಾಳೆ
ಸುಪ್ರಿತಾ ಬೇಕಂತಲೇ ಮಾಡಿ, ಲಕ್ಷ್ಮೀಯನ್ನು ಹೀಯಾಳಿಸಿದಳು. ಮೊದಲ ದಿನವೇ ಹೀಗೆ ಆಗೋಯ್ತಲ್ಲ ಲಕ್ಷ್ಮೀ ಅಂತ. ಅದಕ್ಕೆ ಲಕ್ಷ್ಮೀ ಯಾಕೆ ಬರೋದಕ್ಕೆ ಆಗಲ್ಲ. ಶಾಸ್ತ್ರ ನಡೆಯುತ್ತೆ ಎಂದು ಕಾಲು ಒಳಗಿಡಲು ಹೋದಾಗ ವೈಷ್ಣವ್ ಹಾಗೂ ಭಾಗ್ಯ ಇಬ್ಬರು ಅವಳ ಪಾದಕ್ಕೆ ತಮ್ಮ ಕೈ ಇಟ್ಟರು. ಭಾಗ್ಯಗೆ ಸಂತಸ ತುಂಬಿ ಬಂತು. ನನ್ನ ಲಡ್ಡುನಾ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವವನೇ ಸಿಕ್ಕಿದ್ದಾನೆ ಅಂತ. ಬಳಿಕ ಲಕ್ಷ್ಮೀ ಇಬ್ಬರಿಗೂ ಕೈ ತೆಗೆಯಲು ಹೇಳಿ ಒಳಗೆ ಬಂದಳು.

ವೈಷ್ಣವ್ ಬದುಕಲ್ಲಿ ಕೀರ್ತಿ ಮುಗಿದ ಅಧ್ಯಾಯ..!
ಸುಪ್ರಿತಾ ಮಾಡಿದ ಕೆಲಸದಿಂದ ಲಕ್ಷ್ಮೀ ಕಾಲಿಗೆ ಗಾಜಿನ ಪೀಸು ಚುಚ್ಚಿತ್ತು. ಅದನ್ನು ಭಾಗ್ಯ ಗಮನಿಸಿದಳು. ಪೂಜೆಯೆಲ್ಲಾ ಮುಗಿದ ಮೇಲೆ ಆ ಗಾಜಿನ ಪೀಸನ್ನು ತೆಗೆದು, ಬ್ಯಾಂಡೇಜ್ ಮಾಡಿದಳು. ಅದಕ್ಕೆ ಕಾವೇರಿ ಕೂಡ ಸಹಾಯ ಮಾಡಿದಳು. ಸುಪ್ರಿತಾಗೆ ಹಾಗೂ ತಾಂಡವ್‌ಗೆ ಇದು ಖುಷಿ. ಆದರೆ, ಆ ಇಬ್ಬರು ನಿರೀಕ್ಷೆ ಮಾಡದ ರೀತಿ ವೈಷ್ಣವ್ ನಡೆದುಕೊಂಡ. ಲಕ್ಷ್ಮೀ ಕಾಲಿಗೆ ಬ್ಯಾಂಡೇಜ್ ಹಾಕಲಾಗಿತ್ತು. ನಡೆಯಲು ಕಷ್ಟವಾಗಿತ್ತು. ಭಾಗ್ಯಾ ತನ್ನ ಭುಜದ ಮೇಲೆ ಕೈಯಿಡು ಎಂದಾಗ, ಅಲ್ಲಿಯೆ ನಿಂತಿದ್ದ ವೈಷ್ಣವ್, ಲಕ್ಷ್ಮೀಯನ್ನು ಎತ್ತುಕೊಂಡು ನಡೆದ. ಇದು ಭಾಗ್ಯಳಿಗೆ, ಮನೆಯವರಿಗೆ ಖುಷಿ ಕೊಟ್ರೆ ತಾಂಡವ್‌ಗೆ, ಸುಪ್ರಿತಾಗೆ ಬೆಂಕಿ ಹೊತ್ತಿಸಿತ್ತು.


Click it and Unblock the Notifications











