Bhagyalakshmi: ಭಾಗ್ಯಳ ಜೊತೆಗೆ ತನ್ವಿಯ ಭವಿಷ್ಯಕ್ಕೂ ಕುತ್ತು; ಮಗಳಿಗಾಗಿ ನ್ಯಾಯ ಹುಡುಕುತ್ತಾನಾ ತಾಂಡವ್?

By ಎಸ್ ಸುಮಂತ್

ಭಾಗ್ಯಾಳಿಗೆ ದಿನೇ ದಿನೇ ಸಮಸ್ಯೆ ಕಾಡುತ್ತಲೇ ಇದೆ. ಅದರಲ್ಲೂ ಆಕೆ ಶಾಲೆಗೆ ಹೋಗುವುದಕ್ಕೆ ಶುರು ಮಾಡಿದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ. ತಾಂಡವ್ ಅಂತು ಭಾಗ್ಯಾಳ ಓದಿಗೆ ಅಡ್ಡಿಯಾಗುವುದಕ್ಕೆ ಅದೆಷ್ಟು ಸಾಹಸ ಪಟ್ಟನೋ. ಆದರೆ ಅದ್ಯಾವುದು ವರ್ಕ್ ಆಗಿರಲಿಲ್ಲ. ಅತ್ತೆಯ ಬೆಂಬಲದಿಂದ ಭಾಗ್ಯ ಶಾಲೆಗೆ ಹೋದಳು. ತಾಂಡವ್ ಮಾತನ್ನು ಮೀರಿ ಕುಸುಮಾ ಸೊಸೆಯ ಪರವಾಗಿ ನಿಂತಳು.

ಭಾಗ್ಯಾಳಿಗೆ ಶಾಲೆಯಲ್ಲೇನು ಕಡಿಮೆ ಸಂಕಟ ಬಂದಿಲ್ಲ. ಶಾಲೆಯ ಮಾಲೀಕಿಯಿಂದಾನೇ ಕಿರುಕುಳ ಶುರುವಾಗಿತ್ತು. ಭಾಗ್ಯಾಳ ತಾಳ್ಮೆ ಒಂದಷ್ಟು ಲೋಪದೋಷವನ್ನು ಸರಿ ಮಾಡಿತ್ತು. ಅಮ್ಮ ಎಂದರೆ ಮಗಳಿಗೆ ಕೊಂಚವು ಇಷ್ಟವಿರಲಿಲ್ಲ. ಆದರೆ ಈಗ ಅಮ್ಮನೆಂದರೆ ನಂಬಿಕೆ ಇದೆ. ಅಪ್ಪ ಅಮ್ಮನನ್ನು ಒಂದು ಮಾಡಬೇಕೆಂಬ ಆಸೆ ಇದೆ. ಅಮ್ಮ‌ ಮಗಳು ಜೊತೆಯಾಗಿಯೇ ಓದುವುದಕ್ಕೆ ಶುರು ಮಾಡಿದ್ದಾರೆ. ಇಂಥ ಆತ್ಮೀಯ ಸಂದರ್ಭದಲ್ಲಿ ಭಾಗ್ಯಾಳ ಭವಿಷ್ಯ ಮಾತ್ರವಲ್ಲ ಈಗ ತನ್ವಿಯ ಭವಿಷ್ಯವೂ ಅಪಾಯದಲ್ಲಿದೆ.

Bhagyalakshmi kannada serial Written Update on March 25th episode

ಹಾಲ್ ಟಿಕೆಟ್ ಕದ್ದಿರುವ ತಾಂಡವ್

ಭಾಗ್ಯಾಳಿಗೆ ಎಲ್ಲದರ ಮೇಲೆ ಶ್ರದ್ದೆ ಜಾಸ್ತಿ. ಅದು ಮನೆ ಕೆಲಸವೇ ಆದರೂ ಸರಿ, ಪರೀಕ್ಷೆಯೇ ಆದರೂ ಸರಿ. ಮನೆಯಲ್ಲಿ ಕೂತು ಕಷ್ಟಪಟ್ಟು ಓದಿದ್ದಾಳೆ. ಅದೇ ಧೈರ್ಯದಲ್ಲಿ ಬಂದು ಪರೀಕ್ಷೆಯ ಹಾಲ್ ನಲ್ಲೂ ಕೂತಿದ್ದಾಳೆ. ಮಗಳಿಗೂ ಓದುವ ಆಸಕ್ತಿಯನ್ನು ಹುಟ್ಟು ಹಾಕಿದ್ದಾಳೆ‌. ಅಮ್ಮನಿಗಿಂತ ತಾನೂ ಸೋಲಬಾರದೆಂದು ತನ್ವಿಯೂ ನಿಷ್ಠೆಯಿಂದ ಓದಿದ್ದಾಳೆ‌. ಹೀಗಿರುವಾಗ ಪರೀಕ್ಷಾ ಕೇಂದ್ರದಲ್ಲಿ ಹಾಲ್ ಟಿಕೆಟ್ ಇಲ್ಲ. ಭಾಗ್ಯಾಳ ಶಿಕ್ಷಣಕ್ಕೆ ತೊಂದರೆ ಕೊಡಲು ತಾಂಡವ್ ಹಿಡಿದ ದಾರಿ ಅದಾಗಿತ್ತು.

ಕಡೆಗೂ ಸಿಕ್ಕಿತು ಹಾಲ್ ಟಿಕೆಟ್

ಹಾಲ್ ಟಿಕೆಟ್ ಇಲ್ಲದೆ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಎಲ್ಲರ ಬಳಿ ಮನವಿ ಮಾಡಿಕೊಂಡಳು. ಯಾರೂ ಕರುಣೆ ತೋರಿಸಿದಂತೆ ಕಾಣಲಿಲ್ಲ. ಆದರೆ ಭಾಗ್ಯಾಳನ್ನು ನೋಡಿದ ವ್ಯಕ್ತಿಯೇ ಹಾಲ್ ಟಿಕೆಟ್ ಸಿದ್ಧ ಮಾಡಿಕೊಟ್ಟಿದ್ದಾನೆ. ಭಾಗ್ಯಾ ಕೂಡ ಪರೀಕ್ಷೆ ಆರಂಭವಾಗಿ ಹದಿನೈದು ನಿಮಿಷವಾದರೂ, ಭಯ ಪಡದೇ ಪರೀಕ್ಷೆ ಶುರು ಮಾಡಿದ್ದಳು.

Bhagyalakshmi kannada serial Written Update on March 25th episode

ಅಮ್ಮ, ಮಗಳ ಮೇಲೆ ಕಾಪಿ ಆರೋಪ

ಮೊದಲೇ ಭಾಗ್ಯಾಳನ್ನು ಕಂಡರೆ ಶಾಲೆಯ ಮಾಲೀಕಿಗೆ ಆಗುತ್ತಿರಲಿಲ್ಲ. ಹೇಗಾದರೂ ಮಾಡಿ ಅವಳನ್ನು ಶಾಲೆಯಿಂದ ಹೊರಗೆ ಓಡಿಸುವುದಕ್ಕೆ ಪ್ಲ್ಯಾನ್ ಮಾಡಿದ್ದಳು. ಆದರೆ ಅದು ಸಾಧ್ಯವಾಗಿರಲಿಲ್ಲ‌. ಎಷ್ಟೇ ಅವಮಾನ ಮಾಡಿದರು ಅವಳಿಂದಾನೆರ ಸನ್ಮಾನವೂ ಆಗುತ್ತಿತ್ತು. ಈಗ ಪರೀಕ್ಷೆಯಲ್ಲಿ ಆಟವಾಡಿದ್ದಾಳೆ. ತನ್ವಿ ಹಾಗೂ ಭಾಗ್ಯ ಇಬ್ಬರು ಕೂರುವ ಬೇಂಚ್ ನಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಪಾಯಿಂಟ್ಸ್ ಬರೆಯಲಾಗಿದೆ. ಪರೀಕ್ಷಾ ಸಿಬ್ಬಂದಿ ಇದನ್ನು ಗಮನಿಸಿ, ಪರೀಕ್ಷಾ ಕೇಂದ್ರದಿಂದಾನೇ ಅವರಿಬ್ಬರನ್ನು ಆಚೆ ಕಳುಹಿಸಿದ್ದಾರೆ.

ಅಪ್ಪನ ಬಳಿ ಓಡಿ ಬಂದ ತನ್ವಿ

ಶಾಲೆಯ ಆಡಳಿತ ಮಂಡಳಿ ಬಳಿ ಈ ಸಂಬಂಧ ನಾವೂ ಯಾವುದೇ ತಪ್ಪು ಮಾಡಿಲ್ಲ ಎಂದರು ಕೇಳಿಸಿಕೊಳ್ಳುವ ಕಿವಿ ಯಾರಿಗೂ ಇಲ್ಲ. ಭಾಗ್ಯಾ ಗೋಗರೆದಿದ್ದಾಳೆ. ತನ್ವಿ ಕಣ್ಣಲ್ಲಿ ನೀರಾಕಿದ್ದಾಳೆ. ಆದರೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇಲ್ಲ ಎಂದು ಹೇಳಿದಾಗ ತನ್ವಿಗೆ ಭಯವಾಗಿದೆ. ನಾನು ಮೋಸ ಮಾಡಿಲಗಲ, ಚೆನ್ನಾಗಿ ಓದಿಕೊಂಡು ಬಂದಿದ್ದೀನಿ ಎಂದು ಅಳುತ್ತಾ, ಹೊರಗೆ ಓಡಿ ಹೋಗಿದ್ದಾಳೆ. ಅಷ್ಟರಲ್ಲಿ ಅಲ್ಲಿಗೆ ತಾಂಡವ್ ಕೂಡ ಬಂದಿದ್ದಾನೆ. ಪಪ್ಪಾ ನಾನು ಮೋಸ ಮಾಡಿಲ್ಲ ಎಂದು ಅತ್ತಿದ್ದಾಳೆ. ಭಾಗ್ಯಾಳ ಪರೀಕ್ಷೆಗೆ ಮಾತ್ರ ತಾಂಡವ್ ಅಡ್ಡಿಯಾಗಿದ್ದ. ಈಗ ಮಗಳ ಪರೀಕ್ಷೆಗೂ ಸಮಸ್ಯೆಯಾಗಿದೆ ಎಂದಾಗ ಸರಿ ಮಾಡುವ ಪ್ರಯತ್ನ ಮಾಡಬಹುದು. ಮಕ್ಕಳಿಗಾಗಿಯೇ ಮತ್ತೆ ಮನೆಗೆ ಬಂದಿರುವುದು.

More from Filmibeat

English summary
Bhagyalakshmi kannada serial today episode; Here is the details about Bhagya and Tanvi were unable to write the SSLC exam;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X