Bhagyalakshmi: ಭಾಗ್ಯಾಳ ತಾಳ್ಮೆ ಅಸಹಾಯಕತೆಯಲ್ಲ: ಕತ್ತಲೆ ಕೋಣೆಯಲ್ಲಿ ಕನ್ನಿಕಾಳಿಗೆ ಕಪಾಳಮೋಕ್ಷ

By ಎಸ್ ಸುಮಂತ್

ಭಾಗ್ಯಾ ವಿನಯತೆ, ವಿಧೇಯತೆಗೆ ಹೆಚ್ಚು ಬೆಲೆ ಕೊಡುತ್ತಾಳೆ. ದೊಡ್ಡವರೆಂದರೆ ಎದುರು ಮಾತನಾಡುವುದಿಲ್ಲ. ದೊಡ್ಡವರಿಗೆ ತಲೆ ಬಾಗುತ್ತಾಳೆ. ಹೊಸಬರಿಗೂ ಅಷ್ಟೇ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗೂ ಒಳಿತನ್ನೇ ಮಾಡುತ್ತಾಳೆ. ಮಾತನಾಡಿಸಿದವರನ್ನು ಚೆನ್ನಾಗಿಯೇ ಮಾತನಾಡಿಸುತ್ತಾಳೆ. ಮಾತನಾಡಿಸದೆ ಇದ್ದವರನ್ನು ಆದಷ್ಟು ಮಾತನಾಡಿಸಿ, ಸಂಬಂಧ ಗಟ್ಟಿ‌ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಾಳೆ. ಯಾರಿಗೂ ಕೆಟ್ಟದ್ದನ್ನು ಬಯಸುವುದೇ ಇಲ್ಲ.

ಇದೆಲ್ಲಾ ಭಾಗ್ಯಾಳ ಒಳ್ಳೆಯ ಗುಣ ಎಂಬುದನ್ನು ತೋರಿಸುತ್ತದೆ. ಆದರೆ ಅದು ಅಸಹಾಯಕತೆಯಲ್ಲ. ತನಗೂ ಕೋಪ ಬರುತ್ತದೆ, ತಾನೂ ಮನುಷ್ಯಳೇ ಎಂಬುದನ್ನು ಈಗಾಗಲೇ ಭಾಗ್ಯಾ ಪ್ರೂವ್ ಮಾಡಿದ್ದಾಳೆ. ಅಷ್ಟು ಗೌರವ ಕೊಡುವ ಗಂಡನಿಗೆ ಅತಿಯಾಗಿ ಮಾತನಾಡಿದಾಗ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈಗ ಕನ್ನಿಕಾಳನ್ನು ಬಿಡುತ್ತಾಳಾ..?

Bhagyalakshmi kannada serial Written Update on March 27th episode

ಪಾರ್ಟಿ ಮೂಡ್‌ನಲ್ಲಿ ಕನ್ನಿಕಾ

ಆ ಕಡೆ ಶಾಲೆಯಲ್ಲಿ ಭಾಗ್ಯಾ ಹಾಗೂ ತನ್ವಿಗೆ ಪರೀಕ್ಷೆ ಬರೆಯದಂತೆ ಮಾಡಿ, ಕನ್ನಿಕಾ ಪಾರ್ಟಿ ಮಾಡಲು ಬಂದಿದ್ದಾಳೆ. ತನ್ನ ಬರ್ತ್ ಡೇ ಪಾರ್ಟಿಗೆ ಎಲ್ಲರನ್ನು ಆಹ್ವಾನಿ, ಎಂಜಾಯ್ ಮಾಡಲು ಸಿದ್ಧತೆ ನಡೆಸಿದ್ದಳು. ಆದರೆ ಭಾಗ್ಯಾಳಿಗೆ ಕನ್ನಿಕಾಳ ಕಿತಾಪತಿ ತಿಳಿದ ಮೇಲೆ ಅವಳು ಎಲ್ಲಿದ್ದಾಳೆ ಎಂಬುದನ್ನು ಹುಡುಕಿಸಿದ್ದಳು. ತಾನೇನು ತಪ್ಪೇ ಮಾಡಿಲ್ಲ, ಇವತ್ತು ಭಾಗ್ಯಾಳಿಗೆ ಬುದ್ದಿ ಕಲಿಸಿದೆ ಎಂಬ ಅಹಂನಲ್ಲಿ ಕನ್ನಿಕಾ ತೇಲಾಡುತ್ತಿದ್ದಳು. ಭಾಗ್ಯಾಳಿಗೆ ಸಪೋರ್ಟ್ ಮಾಡಿದ ಅಕ್ಕನಿಗೂ ಯಾಮಾರಿಸಿದ ಖುಷಿ ಅವಳಲ್ಲಿ ಇತ್ತು.

ಪಾರ್ಟಿಗೆ ಬಂದ ಭಾಗ್ಯಾ

ಕನ್ನಿಕಾ ಊಹೆಯನ್ನೇ ಮಾಡದ ವ್ಯಕ್ತಿ ಪಾರ್ಟಿಗೆ ಬಂದಾಗಿದೆ. ಚಾಲಾಕಿ ಪೂಜಾ, ಕನ್ನಿಕಾಳ ಅಡ್ರೆಸ್ ಜಾಲಾಡಿ, ಭಾಗ್ಯಾಳಿಗೆ ಕೊಟ್ಟಿದ್ದಾಳೆ. ಇನ್ನೇನು ಪಾರ್ಟಿ ಶುರುವಾಗಬೇಕು ಎನ್ನುವಷ್ಟರಲ್ಲಿ ಪಾರ್ಟಿಯ ಬಾಗಿಲನ್ನು ಭಾಗ್ಯಾ ತೆಗೆದಿದ್ದಾಳೆ. ಭಾಗ್ಯಾಳ ಆಗಮನ ಕಂಡು ಬರೀ ಕನ್ನಿಕಾ ಮಾತ್ರವಲ್ಲ ಪಾರ್ಟಿಗೆ ಬಂದಿದ್ದವರಿಗೂ ಶಾಕ್ ಆಗಿದೆ. ಶಾಲೆಯಲ್ಲಿ ಇರುವ ಲೇಡಿ ಅಲ್ವಾ? ಇಲ್ಲಿಗ್ಯಾಕೆ ಬಂದಿದ್ದಾಳೆ ಎಂಬ ಪ್ರಶ್ನೆ ಕೇಳಿದ್ದಾರೆ. ಅವರ ಯಾರ ಪ್ರಶ್ನೆಗೂ ಕನ್ನಿಕಾಳ ಬಳಿಯೂ ಉತ್ತರ ಇರಲಿಲ್ಲ.

Bhagyalakshmi kannada serial Written Update on March 27th episode

ಕಪಾಳಕ್ಕೆ ಬಾರಿಸಿದ ಭಾಗ್ಯಾ

ಪಾರ್ಟಿಗೆ ಬಂದೊಡನೆ ಭಾಗ್ಯಾ ಮಾಡಿದ್ದು ಕನ್ನಿಕಾಳ ಕಪಾಳ ಮೋಕ್ಷ. ನೋಡ ನೋಡುತ್ತಲೇ ನಾಲ್ಕೈದು ಏಟು ಬಾರಿಸಿದ್ದಾಳೆ. ಅಕ್ಕ ಪಕ್ಕ ಇದ್ದವರು ಕೆನ್ನೆ ಮುಟ್ಟಿ ನೋಡಿಕೊಳ್ಳಬೇಕು ಆ ರೀತಿ ಬಾರಿಸಿದ್ದಾಳೆ. ಭಾಗ್ಯಾಳನ್ನು ತಡೆದ ಕನ್ನಿಕಾ, ಎಷ್ಟು ಧೈರ್ಯ ಎಂದು ಪ್ರಶ್ನಿಸಿದ್ದಾಳೆ. ಆದರೆ ನಿನ್ನ ಕೆನ್ನೆಗೆ ಹೊಡೆಯುವುದಕ್ಕೆ ನನಗೆ ಧೈರ್ಯ ಬೇಕಿಲ್ಲ. ನಾನು ನೋಡುತ್ತಲೇ ಇದ್ದೀನಿ. ಶಾಲೆಗೆ ಸೇರಿದಾಗಿನಿಂದ ನಿನ್ನದು ಒಂದೊಂದೇ ತೊಂದರೆ ಶುರುವಾಗಿದೆ. ಒಂದು ವರ್ಷವಾದರು ಒಮ್ಮೆ ಅಟೆಂಡೆನ್ಸ್ ಇನ್ನೊಮ್ಮೆ ಹಾಲ್ ಟಿಕೆಟ್ ಅಂತ ಸಮಸ್ಯೆ ಮಾಡ್ತೀಯ. ನನ್ನದು ಬಿಡು ಆ ಮಗುಗು ತೊಂದರೆ ಕೊಡ್ತೀಯಾ ಅಂತ ಕಪಾಳಕ್ಕೆ ಬಾರಿಸಿದ್ದಾಳೆ.

ಭಾಗ್ಯಾ ತಾಳ್ಮೆ ಕಳೆದುಕೊಂಡರೆ ಮುಗೀತು

ಕನ್ನಿಕಾ ಮೊದಲೇ ಸುಮ್ಮನಿರುತ್ತಾಳಾ? ಬಾಯಿ ಜೋರು ಮಾಡಿದ್ದಾಳೆ. ಹಾಗಂತ ಈಗ ಭಾಗ್ಯಾ ಸುಮ್ಮನೆ ಇರುತ್ತಾಳಾ ಚಾನ್ಸೆ ಇಲ್ಲ. ಕನ್ನಿಕಾಳಿಗೆ ನಡುಕ ಹುಟ್ಟಿಸಿದ್ದಾಳೆ. ನಿನ್ನ ತಪ್ಪಿಗೆ ಸರಿಯಾದ ಶಿಕ್ಷೆ ಕೊಡಿಸುತ್ತೇನೆ. ಪೊಲೀಸರಿಗೆ ನಿನ್ನನ್ನು ಒಪ್ಪಿಸಿದರೆ ಈ ಸಲ ನೀನು ಬಚಾವ್ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ಪೂಜಾಳ ಬಳಿಯಿಂದ ಫೋನ್ ಕೇಳಿದ್ದಾಳೆ. ಆದರೆ ಕನ್ನಿಕಾಳನ್ನು ಭಾಗ್ಯಾಳನ್ನು ಎದುರಿಸುವ ಪ್ರಯತ್ನ ನಡೆದಿದೆ. ಭಾಗ್ಯಾ ಸೈಲೆಂಟ್ ಆಗಿದ್ದರೆ ಅದು ಅವಳ ಒಳ್ಳೆಯ ಗುಣ. ಆದರೆ ವೈಲೆಂಟ್ ಆಗುವಂತೆ ಮಾಡಿದರೆ ಶಿಕ್ಷೆ ಆಗುವ ತನಕ ಬಿಡುವವಳೇ ಅಲ್ಲ.

More from Filmibeat

English summary
Bhagyalakshmi kannada serial today episode. Here is the details about Bhagya hit Kannika's forehead;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X