Bhagyalakshmi: ಕನ್ನಿಕಾ ಮೇಡಂ ಚಿನ್ನಾಭರಣ ಕದ್ದರಾ? ಆಕೆ ಅಹಂ ಇಳಿಸಲು ಮಾಡಿದ ಐಡಿಯಾ?

By ಎಸ್ ಸುಮಂತ್

ಶ್ರೀಮಂತಿಕೆ ಅನ್ನೋ ಅಹಂ ಕನ್ನಿಕಾಳ ನಡಳಿಕೆಯಲ್ಲಿಯೇ ಎದ್ದು ಕಾಣುತ್ತಿದೆ. ತಾನೂ ನಡೆಸುವ ಶಾಲೆಯಲ್ಲಿ ವಿದ್ಯೆಗಿಂತ ಹಣದ ಹೊಳೆ ಹರಿಯಬೇಕು ಎಂಬುದೇ ಅವಳ ಬಯಕೆ. ಆದರೆ ಅವರ ಅಪ್ಪ ಹಾಗೂ ಅಕ್ಕನದ್ದು ಆ ರೀತಿಯ ಗುಣವಿಲ್ಲ. ಆದಷ್ಟು ಅವಕಾಶ ಸಿಕ್ಕಾಗ ಸಮಾಜಸೇವೆ ಮಾಡಬೇಕೆಂಬ ಬಯಕೆ. ಇದೇ ಮನೋಭಾವದಿಂದಾನೇ ಭಾಗ್ಯಾಳಿಗೆ ಉಚಿತ ಸೀಟು ಕೊಟ್ಟಿದ್ದರು.

ಭಾಗ್ಯಾಳಿಂದ ಎಲ್ಲವೂ ಸಾಧ್ಯ. ಟ್ಯಾಲೆಂಟ್ ಇದೆ, ಚೆನ್ನಾಗಿ ಓದುತ್ತಾಳೆ, ಶಾಲೆಗೆ ಒಳ್ಳೆ ಹೆಸರು ತರುತ್ತಾಳೆ. ಆದರೆ ಶಾಲೆಗೆ ಅವಳಿಂದ ಡೊನೇಶನ್ ಏನು ಬರುವುದಿಲ್ಲ. ಆ ಸೀಟನ್ನೇ ಇನ್ನೊಬ್ಬರಿಗೆ ಕೊಟ್ಟಿದ್ದರೆ ಲಕ್ಷಾಂತರ ರೂಪಾಯಿ ಸಿಗುತ್ತಾ ಇತ್ತು. ಇದು ಕನ್ನಿಕಾಳ ವಾದ. ಆ ದುರಾಸೆಯಿಂದಾನೇ ಕನ್ನಿಕಾ, ಭಾಗ್ಯಾಳ ಮೇಲೆ ಕೆಂಡಕಾರುತ್ತಾ ಇರುತ್ತಾಳೆ‌. ಈಗ ಕನ್ನಿಕಾಳ ಕಾಲ ಮುಗೀತು ಭಾಗ್ಯಾಳ ಕ್ಲಾಸ್ ಕೇಳಿಸಿಕೊಳ್ಳುವ ಕಾಲ ಬಂತು.

Bhagyalakshmi kannada serial Written Update on March 28th episode

ಒದೆ ತಿಂದರೂ ಪಾರ್ಟಿ ಮುಂದುವರಿಕೆ

ಭಾಗ್ಯಾ ತನಗಾದ ಅನ್ಯಾಯಕ್ಕೆ ನ್ಯಾಯ ಕೇಳಲು ಬಂದಿದ್ದಳು. ಸುಮ್ಮನೆ ಎಲ್ಲರ ಮುಂದೆ ತಪ್ಪು ಒಪ್ಪಿಕೋ ಎಂದೇ ಗೋಗರೆದಳು. ಆದರೆ ಮಾತು ಕೇಳದ ಕನ್ನಿಕಾಗೆ ಕಪಾಳಕ್ಕೆ ಸರಿಯಾಗಿಯೇ ಬಾರಿಸಿದ್ದಳು ಭಾಗ್ಯಾ. ಆದರೆ ಅದ್ಯಾವುದು ಲೆಕ್ಕವೇ ಅಲ್ಲವೆಂಬಂತೆ ಕನ್ನಿಕಾ ಮತ್ತೆ ಪಾರ್ಟಿ ಮೂಡಿಗೆ ಬಂದಿದ್ದಾಳೆ. ಭಾಗ್ಯಾಳನ್ನು ಅಲ್ಲಿಂದ ಕಳುಹಿಸಿ, ಎಂಜಾಯ್ ಮಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾಳೆ.

ಕನ್ನಿಕಾ ಮೇಲೆ ಕಳ್ಳತನದ ಆರೋಪ

ಈ ಪಾರ್ಟಿ ನಡುವೆ ಇನ್ವೈಟ್ ಮಾಡಿದ್ದಂತ ಫ್ರೆಂಡ್ ಚಿನ್ನದ ಸರ‌ ಕಾಣೆಯಾಗಿತ್ತು. ಎಲ್ಲಾ ಕಡೆ ಹುಡುಕಿದಾಗಲೇ ಆ ಸರ ಕನ್ನಿಕಾಳ ಬ್ಯಾಗ್‌ನಲ್ಲಿ ಇದ್ದದ್ದು ಗೊತ್ತಾಯ್ತು. ಆದರೆ ಕನ್ನಿಕಾ ತಾನೂ ಕದ್ದಿಲ್ಲ ಎಂದೇ ವಾದ ಮಾಡಿದ್ದರು, ಪಾರ್ಟಿಯಲ್ಲಿ ಇದ್ದವರು ಯಾರು ಕೂಡ ಅದನ್ನು ನಂಬುವುದಕ್ಕೆ ಹೋಗಲಿಲ್ಲ. ಅವಳನ್ನೇ ಕಳ್ಳಿ ಎಂದು ಬಿಂಬಿಸಿದರು.

Bhagyalakshmi kannada serial Written Update on March 28th episode

ಕನ್ನಿಕಾಳಿಗೆ ಬ್ಲಾಕ್ ಮೇಲ್ ಶುರು

ಶ್ರೇಷ್ಠಾಳ ಮಾವ ರಘು ಕೂಡ ಇದೇ ಪಾರ್ಟಿಯಲ್ಲಿ ಇದ್ದರು. ಅವರ ಪರವಾಗಿಯೇ ಕನ್ನಿಕಾಳ ಫ್ರೆಂಡ್ ಮಾತನಾಡಿದ್ದು. ಅದನ್ನು ಕನ್ನಿಕಾಳಿಂದ ಸಹಿಸಲಾಗದೆ ಅಲ್ಲಿಂದ ಹೊರಗೆ ಬಂದು ಬಿಟ್ಟಳು. ಆದರೆ ಹೊರಗೆ ಬಂದೊಡನೆ ಒಂದು ವಿಡಿಯೋ ಸಿದ್ಧವಾಗಿತ್ತು. ಮೊಬೈಲ್ ನಲ್ಲೂ ನಡುಕ ಹುಟ್ಟಿಸಿತ್ತು. ಹೇಳಿದ ಜಾಗಕ್ಕೆ ಬರದೆ ಹೋದರೆ, ಈ ವಿಡಿಯೋವನ್ನು ಮಾಧ್ಯಮದವರಿಗೆ ಕಳುಹಿಸಲಾಗುತ್ತದೆ. ಕನ್ನಿಕಾ ಚಿನ್ನಾಭರಣ ಕಳ್ಳತನ ಮಾಡಿದ್ದಾಳೆಂದು ಊರೆಲ್ಲಾ ಸುದ್ದಿ ಮಾಡಿಸಲಾಗುತ್ತದೆ ಎಂದು ಆ ವಿಡಿಯೋ ಕಳುಹಿಸಿದ ಮಹಾತ್ಮರು ಕಾಲ್ ನಲ್ಲಿ ತಿಳಿಸಿದ್ದರು.

ಭಾಗ್ಯಾಳ ಕೈನಲ್ಲಿ ಲಾಕ್ ಆದ ಕನ್ನಿಕಾ

ಅದು ಆಕ್ಚುಲಿ ಪೂಜಾ ವಾಯ್ಸ್. ಆ ಕಳ್ಳತನದ ಡ್ರಾಮಾ ಕೂಡ ಭಾಗ್ಯಾ, ಪಾರ್ಟಿಗೆ ಬಂದು ಕೆನ್ನೆಗೆ ಒಡೆದ ಗ್ಯಾಪ್ ನಲ್ಲಿಯೇ ನಡೆದಿದೆ. ಆ ವಿಡಿಯೋ ಇಟ್ಟುಕೊಂಡು ಕನ್ನಿಕಾಳನ್ನು ಒಂದು ಕತ್ತಲೆ ಕೋಣೆಗೆ ಕರೆಸಿಕೊಂಡಿದ್ದಾಳೆ. ಆ ವಿಡಿಯೋ ಎಲ್ಲೂ ಲೀಕ್ ಆಗಬಾರದು ಎಂಬ ಕಾರಣಕ್ಕೇನೆ ಕನ್ನಿಕಾ ಭಯದಿಂದಾನೇ ಹೇಳಿದ ಜಾಗಕ್ಕೆ ಬಂದಿದ್ದಾಳೆ‌. ಅಲ್ಲಿಯೂ ಭಾಗ್ಯಾಳನ್ನು ಕಂಡು ಶಾಕ್ ಆಗಿದ್ದಾಳೆ. ಈಗ ಕನ್ನಿಕಾಳನ್ನು ಸರಿ ದಾರಿಗೆ ತರುವುದಕ್ಕೆಂದೆ ವಿಡಿಯೋ ಬೇರೆ ಸಿಕ್ಕಿದೆ. ಆ ವಿಡಿಯೋ ಮೂಲಕ ಅವಳ ಅಹಂಕಾರವನ್ನು ಅಡಗಿಸುವುದಕ್ಕೆ ಹೊರಟಿದ್ದಾಳೆ.

More from Filmibeat

English summary
Bhagyalakshmi kannada serial today episode. Here is the details about Kannika Lock;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X