Bhagyalakshmi: ಕೀರ್ತಿಯ ಕಂಡೀಷನ್.. ಅಕ್ಕಮ್ಮನ ಆಸೆ.. ವೈಷ್ಣವ್ & ಲಕ್ಷ್ಮೀಯ ಮದುವೆ ಕಥೆಯೇನು?

By ಎಸ್ ಸುಮಂತ್

ಮದುವೆಯೆಂಬುದು ಎಲ್ಲರಿಗೂ ದೊಡ್ಡ ಕನಸು. ತನ್ನ ಮದುವೆಯಾಗುವ ಹುಡುಗ ಅಥವಾ ಹುಡುಗಿ ಹೀಗೆ ಇರಬೇಕು ಎಂಬ ನೂರಾರು ಆಸೆ, ನೂರಾರು ಕನಸುಗಳು. ಲಕ್ಷ್ಮೀಗೂ ಅಷ್ಟೇ ಮದುವೆಯಾಗುವ ಹುಡುಗನ ಬಗ್ಗೆ ನಿರೀಕ್ಷೆಗಳು ಬಹಳ ಇತ್ತು. ಹಾಗೇ ಭಾಗ್ಯಗೂ ತಂಗಿಯ ಗಂಡನ ವಿಚಾರದಲ್ಲಿ ಕಾಂಪ್ರೂಮೈಸ್ ಅನ್ನೋದೆ ಇಲ್ಲ. ಎಲ್ಲರೂ ಸೇರಿ ಅವರವರಿಗಿಷ್ಟ ಬಂದಂತ ಹುಡುಗಿಯನ್ನು ಆಯ್ಕೆ ಮಾಡಿಯಾಗಿದೆ. ಆದರೆ, ವೈಷ್ಣವ್ ಮತ್ತು ಲಕ್ಷ್ಮೀಯ ಕನಸು ಕಮರಿ ಹೋಗುವ ಸಮಯ ಸನಿಹವಾಗಿದೆ.

ವೈಷ್ಣವ್‌ಗೆ ಲವ್ ಬ್ರೇಕಪ್ ಆದ ಮೇಲೆ ಮನೆಯವರೆಲ್ಲಾ ಸೇರಿ ಲಕ್ಷ್ಮೀಯನ್ನು ಆಯ್ಕೆ ಮಾಡಿದ್ದರು. ಲಕ್ಷ್ಮೀಗೆ ಮೊದ ಮೊದಲಿಗೆ ಅಷ್ಟೇನು ಇಷ್ಟವಿಲ್ಲದೆ ಹೋದರೂ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಳು. ವೈಷ್ಣವ್ ಬದಲಾವಣೆ, ಅವನ ಕಾಳಜಿ ಎಲ್ಲವೂ ಪ್ರೀತಿಯಾಗಿ ಕಾಣಿಸಿ, ಓಕೆ ಎಂದುಬಿಟ್ಟಳು. ಆದರೆ, ಈಗ ಆ ಎಲ್ಲಾ ಆಸೆಗಳು ಚಿವುಟಿ ಹಾಕಬೇಕಾದ ಪರಿಸ್ಥಿತಿ ಬಂದಿದೆ.

ಮದುವೆಗೆ ಓಕೆ ಎಂದ ಕೀರ್ತಿ.. ಆದ್ರೆ..!

ಮದುವೆಗೆ ಓಕೆ ಎಂದ ಕೀರ್ತಿ.. ಆದ್ರೆ..!

ವೈಷ್ಣವ್ ಕೀರ್ತಿಯನ್ನು ತುಂಬಾನೇ ಪ್ರೀತಿ ಮಾಡುತ್ತಾನೆ. ಆದರೆ, ಮನೆಯವರೆಲ್ಲರ ಒತ್ತಡದಿಂದ ಕೀರ್ತಿ ಈ ಮದುವೆಯೇ ಬೇಡವೆಂದು ಮುರಿದುಕೊಂಡಿದ್ದಾಳೆ. ಪ್ರೀತಿಗೆ ಗುಡ್ ಬೈ ಹೇಳಿದ್ದಾಳೆ. ಆದ್ರೆ ವೈಷ್ಣವ್ ಗೆ ಕಾತರಿ ಇದೆ. ಕೀರ್ತಿ ಇನ್ನು ನನ್ನ ಲವ್ ಮಾಡ್ತಾ ಇದ್ದಾಳೆ ಎಂಬುದು ಗೊತ್ತಿದೆ. ಅದಕ್ಕಾಗಿಯೇ ಮದುವೆಯ ಜಾಗಕ್ಕೆ ಕರೆದುಕೊಂಡು ಬಂದು ಅವಳ ಮನಸ್ಸನ್ನು ಬದಲಾಯಿಸುವುದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಮದುವೆಗೆ ಓಕೆ ಎಂದ ಕೀರ್ತಿ, ಅರಗಿಸಿಕೊಳ್ಳುವುದಕ್ಕೆ ಆಗದಂತಹ ಕಂಡೀಷನ್ ಹಾಕಿದ್ದಾಳೆ. ಅದು ಅಪ್ಪ-ಅಮ್ಮ ಎಲ್ಲರನ್ನು ಬಿಟ್ಟು ನನ್ನ ಜೊತೆಗೆ ಬರಬೇಕು ಎಂಬ ಕಂಡೀಷನ್.

ಲಕ್ಷ್ಮೀಗೆ ಸತ್ಯ ಹೇಳಿದ ವೈಷ್ಣವ್..!

ಲಕ್ಷ್ಮೀಗೆ ಸತ್ಯ ಹೇಳಿದ ವೈಷ್ಣವ್..!

ಲಕ್ಷ್ಮೀಗೂ ಮೊದ ಮೊದಲಿಗೆ ವೈಷ್ಣವ್ ನನ್ನ ಪ್ರೀತಿಸುತ್ತಾನಾ ಎಂಬ ಅನುಮಾನವಿತ್ತು. ಆದ್ರೆ ಇಲ್ಲಿ ವೈಷ್ಣವ್ ಅತ್ತೆ ಹಾಗೂ ಅಮ್ಮ ಆಡಿದ ಗೇಮ್‌ನಿಂದಾಗಿ ಲಕ್ಷ್ಮೀ ಮನಸ್ಸಲ್ಲಿ ದೊಡ್ಡ ಕನಸಿನ ಗೋಪುರವೇ ತಲೆ ಎತ್ತಿ ನಿಂತಿತ್ತು. ವೈಷ್ಣವ್ ಪ್ರೀತಿ ಹೇಳಿಕೊಂಡಂತೆ ವೈಷ್ಣವ್ ತಾಯಿ ಕಾವೇರಿ ಪತ್ರವನ್ನು ಬರೆದಿದ್ದರು. ಅದನ್ನೇ ನಂಬಿದ್ದ ಲಕ್ಷ್ಮೀಗೆ ಈಗ ವೈಷ್ಣವ್, ಈ ಮದುವೆ ನನಗೆ ಇಷ್ಟವಿಲ್ಲ. ಮನಸ್ಸಲ್ಲೊಬ್ಬಳನ್ನು ಪ್ರೀತಿಸಿ, ನಿಮ್ಮ ಜೊತೆ ಜೀವನ ಮಾಡುವುದಕ್ಕೆ ಆಗಲ್ಲ ಎಂದಾಗ ಕಣ್ಣೀರು ಬಿಟ್ಟರೆ ಬೇರೆನು ಬರಲಿಲ್ಲ.

ಅಕ್ಕಮ್ಮನ ಆಸೆಗೆ ಕಟ್ಟು ಬಿದ್ದ ಲಕ್ಷ್ಮೀ..!

ಅಕ್ಕಮ್ಮನ ಆಸೆಗೆ ಕಟ್ಟು ಬಿದ್ದ ಲಕ್ಷ್ಮೀ..!

ವೈಷ್ಣವ್ ಈ ರೀತಿ ಹೇಳಿದಾಗಿನಿಂದ ಲಕ್ಷ್ಮೀ ತುಂಬಾ ಯೋಚನೆಯಲ್ಲಿ ಮುಳುಗಿದ್ದಾಳೆ. ವೈಷ್ಣವ್ ಗೇನೋ ನೀವೂ ನಿಮ್ಮ ಬದುಕನ್ನು ಬದುಕಿ ಹೋಗಿ ಅಂತ ಹೇಳಿ ಕಳುಹಿಸಿ ಬಿಟ್ಟಳು. ಆದರೆ ಇಲ್ಲಿ ಎಲ್ಲರಿಗೂ ಹೇಗೆ ಹೇಳುವುದು. ಆ ಕಡೆ ಭಾವ ತಾಂಡವ್ ಬ್ಲಾಕ್ ಮೇಲ್ ಮಾಡುವುದಕ್ಕೆ ಶುರು ಮಾಡಿದ್ದಾನೆ. ನೀನು ವೈಷ್ಣವ್‌ನನ್ನು ಮದುವೆಯಾಗದೆ ಹೋದರೆ ನಿಮ್ಮ ಅಕ್ಕ ಸೀದಾ ನಿಮ್ಮ ಮನೆಗೆ ಬರುತ್ತಾಳೆಂದು. ಅಕ್ಕಮ್ಮ ಬೇರೆ ದೊಡ್ಡ ಮಟ್ಟದಲ್ಲಿ ಮದುವೆ ಬಗ್ಗೆ ಕನಸು ಕಂಡಿದ್ದಾಳೆ. ಈ ಎಲ್ಲದನ್ನು ನೋಡಿ ಲಕ್ಷ್ಮೀ ಮೌನವಾಗಿದ್ದಾಳೆ.

ಕೀರ್ತಿಯ ಹುಚ್ಚಾಟದಿಂದ ವೈಷ್ಣವ್ ಮೌನ..!

ಕೀರ್ತಿಯ ಹುಚ್ಚಾಟದಿಂದ ವೈಷ್ಣವ್ ಮೌನ..!

ಆ ಕಡೆ ವೈಷ್ಣವ್ ತನ್ನ ಅಮ್ಮನ ಬಳಿ ಸಮಯ ಕೇಳಿದ್ದ. ಕೀರ್ತಿಯನ್ನು ಒಪ್ಪಿಸಿ ಮದುವೆಯಾಗ್ತೀನಿ ಎಂದಿದ್ದ. ಆ ಕಡೆ ಕೀರ್ತಿಯ ಹುಚ್ಚಾಟಕ್ಕೆ ವೈಷ್ಣವ್ ಕೂಡ ಮಂಕಾಗಿದ್ದಾನೆ. ಈ ಕಡೆ ಲಕ್ಷ್ಮೀ ಕೂಡ ಭಾವನೆಗಳಿಗೆ, ಸಂಬಂಧಗಳಿಗೆ ಕಟ್ಟು ಬಿದ್ದಿದ್ದಾಳೆ. ಫೈನಲಿ ಇಬ್ಬರ ಮದುವೆ ಒಪ್ಪದೆ ಒಪ್ಪಂದದ ನಡುವೆ ನಡೆದು ಹೋಗುತ್ತೆ.

More from Filmibeat

English summary
colors kannada Bhagyalakshmi Serial Written Update on March 9th Episode. Here is the details about Bhagya and Lakshmi's Emotional.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X