Bhagyalakshmi: ಸುನಂದಾ ಕೈ ಸೇರಬೇಕಿದ್ದ ಶ್ರೇಷ್ಠಾ-ತಾಂಡವ್ ಲಗ್ನ ಪತ್ರಿಕೆ ಮತ್ತೆ ಭಾಗ್ಯಾ ಕೈಗೆ!

By ಎಸ್ ಸುಮಂತ್

ತಾಂಡವ್‌ಗೆ ಈಗ ಭಾಗ್ಯಾಳದ್ದೇ ಟೆನ್ಷನ್‌. ಶ್ರೇಷ್ಠಾ ಜೊತೆಗೆ ಮದುವೆಯಾಗಲು ಹೊರಟಿರುವ ತಾಂಡವ್ ಹೆಸರನ್ನ ಬದಲಾಯಿಸಿಕೊಂಡು ಏನೋ ಒಂದು ಪ್ಲ್ಯಾನ್ ಮಾಡಿ,‌ ಮನೆಯವರ ಕಣ್ತಪ್ಪಿಸಿ ಮದುವೆಯಾಗಲು ಹೊರಟಿದ್ದಾನೆ. ಆದರೆ ಶ್ರೇಷ್ಠಾ ಕ್ರೇಜ್‌ನಿಂದ ಇಬ್ಬರ ಫೋಟೋವನ್ನು ಕಾರ್ಡ್ ಮೇಲೆ ದೊಡ್ಡದಾಗಿಯೇ ಪ್ರಿಂಟ್ ಮಾಡಿಸಲಾಗಿದೆ. ಈ ಕಾರ್ಡ್‌ನಿಂದಾನೇ ಈಗ ತಾಂಡವ್ ಗಾಬರಿಯಾಗಿದ್ದಾನೆ.

ದೇವಸ್ಥಾನದಲ್ಲಿ ಆ ಮದುವೆ ಕಾರ್ಡ್ ಭಾಗ್ಯಾ ಬ್ಯಾಗ್ ಸೇರಿದೆ. ಆ ಬ್ಯಾಗ್‌ನಿಂದ ಕಾರ್ಡ್ ಹೊರ ತೆಗೆಯುವುದಕ್ಕೆ ಹರಸಾಹಸ ಪಡುತ್ತಿದ್ದಾನೆ. ಅದಕ್ಕೆಂದೇ ಭಾಗ್ಯಾಳನ್ನ ಮನೆಗೆ ಡ್ರಾಪ್ ಮಾಡುವ ನಾಟಕವಾಡಿದ್ದಾನೆ. ಆದರೆ ಏನು ಪ್ರಯೋಜನ ಅದು ಸಕ್ಸಸ್ ಆಗಿಲ್ಲ ಅಂತ ಮನೆಗೆ ಬಂದು ಪಿನ್ ಇಟ್ಟುಕೊಟ್ಟಿದ್ದಾನೆ.

Bhagyalakshmi kannada serial Written Update on may 13th episode

ಅತ್ತೆ ಸೊಸೆ ದೂರ ಮಾಡೋಕೆ ಸಾಧ್ಯವಾ?

ತಾಂಡವ್‌ಗೆ ಈಗ ಹೇಗಾದರೂ ಮಾಡಿ ಆ ಇನ್ವಿಟೇಷನ್ ಕೈ ಸೇರಬೇಕಿದೆ. ರಸ್ತೆಯಲ್ಲಂತು ಆಗಲಿಲ್ಲ ಮನೆಯಲ್ಲಾದರೂ ಪ್ಲ್ಯಾನ್ ಮಾಡೋಣ ಅಂತ ಮನೆಗೆ ಬಂದು ಅತ್ತೆ-ಸೊಸೆ ನಡುವೆ ತಂದಿಡುವ ಪ್ರಯತ್ನ ಮಾಡಿದ್ದಾನೆ. ಅದಕ್ಕೆ ಸುನಂದಾ ಬೇರೆ ಸೊಪ್ಪು ಹಾಕಿದ್ದಾಳೆ. ಇಷ್ಟೊತ್ತು ಆದರೂ ಭಾಗ್ಯಾ ಎಲ್ಲಿ ಎಂಬ ಪ್ರಶ್ನೆ ಕೇಳಿ ಅತ್ತೆಗೆ ಕೋಪ ತರಿಸಿದ್ದಾರೆ. ಅದೇ ಸಮಯಕ್ಕೆ ಭಾಗ್ಯಾ ಮನೆಗೆ ಬಂದಿದ್ದಾಳೆ. ಕುಸುಮಾಗೆ ಅವರಾಡಿದ ಮಾತುಗಳು ಕೋಪ ತರಿಸಿತ್ತು. ಸೊಸೆಯನ್ನ ಬಾಗಿಲಲ್ಲೇ ನಿಲ್ಲಿಸಿ, ಪ್ರಶ್ನೆ ಮಾಡಿದ್ದಾಳೆ‌. ಆದರೆ ಭಾಗ್ಯಾಳ ಬಗ್ಗೆ ತಿಳಿದಿದ್ದ ಮಾವ ಸೊಸೆಯ ಬೆಂಬಲಕ್ಕೆ ನಿಂತಿದ್ದಾರೆ. ಗಂಡನ ಮಾತಿಗೆ ಕುಸುಮಾ ಕೂಡ ಸುಮ್ನೆ ಆಗಬೇಕಲ್ಲ. ಸುನಂದಾಳನ್ನು ಬೈಕೊಂಡು, ಸೊಸೆಯನ್ನು ಒಳಗೆ ಕಳುಹಿಸಿದ್ದಾಳೆ.

ತನ್ನ ಮನೆಯಲ್ಲೇ ಕಳ್ಳನಾದ ತಾಂಡವ್

ಮದುವೆಯ ಕಾರ್ಡ್ ಮನೆಯವರಿಗೆ ಸಿಕ್ಕಿದರೆ ಕಥೆ ಮುಗಿಯಿತು ಎಂದೇ ಅರ್ಥ. ಅಲ್ಲಿ ಶ್ರೇಷ್ಠಾಳಿಗೂ ಒಂದು ಗತಿಯಾಗುತ್ತೆ. ಹೀಗಾಗಿಯೇ ಆ ಕಾರ್ಡ್ ಪತ್ತೆ ಮಾಡಲು ತಾಂಡವ್ ಕುಣಿದಾಡುತ್ತಿದ್ದಾನೆ. ಮನೆ ಬೇರೆ ಬೇರೆಯಾದ ಮೇಲೆ ಭಾಗ್ಯಾಳ ರೂಮಿಗೆ ಹೋಗುವುದಕ್ಕೆ ತಾಂಡವ್‌ಗೆ ಅಸಾಧ್ಯ. ಆದರೆ ಹೇಗಾದರೂ ಮಾಡಿ ಕಾರ್ಡ್ ತೆಗೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾನೆ.

Bhagyalakshmi kannada serial Written Update on may 13th episode

ಸುನಂದಾಳನ್ನ ಬಳಸಿಕೊಳ್ಳುವ ಯತ್ನ

ತಾಂಡವ್ ಆ ಕಾರ್ಡ್‌ಗೋಸ್ಕರ ಅತ್ತೆಯನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ. ಹಾಲು ತಂದುಕೊಟ್ಟ ಅತ್ತೆ ಸುನಂದಾಳನ್ನು ರೇಗಿಸಿದ್ದಾನೆ. ನೀವೂ ಡಬ್ಬಲ್ ಗೇಮ್ ಆಡ್ತಾ ಇದ್ದೀರಾ ಅಂತ. ನಂಬಿಕೆ ಬರಬೇಕು ಅಂದ್ರೆ ಭಾಗ್ಯಾಳ ಬ್ಯಾಗ್ ತಂದುಕೊಡಬೇಕೆಂಬ ಸವಾಲು ಹಾಕಿದ್ದಾನೆ. ನಿಮ್ಮ ಮಗಳ ಜೀವನ ಆ ಬ್ಯಾಗ್‌ನಲ್ಲಿದೆ ಅಂದುಕೊಳ್ಳಿ. ಆದರೆ ಬ್ಯಾಗ್ ನಲ್ಲಿ ಏನಿದೆ ಅಂತ ನೋಡುವಂತಿಲ್ಲ ಎಂದಿದ್ದಾನೆ. ಆಯಿತು ಬಿಡಿ ಈಗಲೇ ತಂದುಕೊಡುತ್ತೀನಿ ಅಂತ ಸುನಂದಾ ರೂಮಿಗೆ ಹೋಗಿದ್ದಾಳೆ. ರೂಮಿಗೆ ಹೋಗಿ ಈ ಸಣ್ಣ ಕೆಲಸದಿಂದ ನನ್ನ ಮೇಲೆ ನಂಬಿಕೆ ಬರುತ್ತಾ ಅಂತ ಯೋಚಿಸಿ, ಆದರೂ ಮೊದಲು ತೆಗೆದುಕೊಂಡು ಹೋಗಿ ಬಿಡೋಣ ಅಂತ ಬ್ಯಾಗ್ ತೆಗೆದುಕೊಂಡಿದ್ದಾಳೆ.

ಅಳಿಯನ ಬಗ್ಗೆ ಸುನಂದಾಗೆ ಅನುಮಾನ

ಸುನಂದಾ, ತಾಂಡವ್ ಜೊತೆಗ ಸೇರಿರುವುದು ಮಗಳಿಗೆ ಒಳ್ಳೆಯದಾಗಲಿ ಅಂತ. ಆದರೆ ಈಗ ಬ್ಯಾಗ್ ತಂದುಕೊಡಲು ಹೇಳಿದ್ದಾನೆ. ಒತ್ತಿ ಒತ್ತಿ ಬ್ಯಾಗ್ ನಲ್ಲಿ ಏನಿದೆ ಎಂಬುದನ್ನು ನೋಡಬಾರದು ಎಂದಿದ್ದಾನೆ. ಮಗಳ ಜೀವನ ಏನಾದರೂ ಹಾಳಾಗುತ್ತಾ ಅಂತ ಸುನಂದಾ ಆ ಬ್ಯಾಗ್ ಚೆಕ್ ಮಾಡಲು ಮುಂದಾಗಿದ್ದಾಳೆ. ಹಣವೇನಾದರೂ ಇಟ್ಟಿದ್ದರೆ ಅದನ್ನು ಕದಿಯುವುದಕ್ಕೆ ಹಿಂಗೆ ಮಾಡ್ತಾ ಇದಾನಾ? ಅಂತ ಇನ್ನೇನು ಲಗ್ನ ಪತ್ರಿಕೆ ನೋಡಬೇಕು ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬಂದೇ ಬಿಟ್ಟಳು. ಬ್ಯಾಗ್ ಯಾಕೆ ನೋಡ್ತಾ ಇದ್ದೀಯಾ ಅಂದಾಗ ಏನೋ ಒಂದು ಹೇಳಿ ಯಾಮಾರಿಸಿದ್ದಾಳೆ. ಭಾಗ್ಯಾ ಕೂಡ ಆ ಬ್ಯಾಗ್ ಕಿತ್ತುಕೊಂಡಿದ್ದಾಳೆ. ಭಾಗ್ಯಾಗೆ ಆ ಬ್ಯಾಗ್‌ನಲ್ಲಿ ಕೆಲಸದ ಲೆಟರ್ ಇರುವ ಭಯ, ತಾಂಡವ್‌ಗೆ ಇನ್ವಿಟೇಷನ್ ಭಯ.

More from Filmibeat

English summary
Bhagyalakshmi kannada serial today episode. Here is the details about The Tandav marriage card is again in Bhagya's hand;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X