Bhagyalakshmi: ಒಂದು ಗಂಟೆಯ ಮಹಾಸಂಚಿಕೆಯಲ್ಲಿ ಬರೀ ಕಾರ್ಡ್‌ಗಾಗಿಯೇ ಹೋರಾಡಿದ ತಾಂಡವ್!
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಹುಟ್ಟಡಗಿಸುವ ಕಾಲ ಸನಿಹವಾಗಿದೆ. ಸುನಂದಾಗೆ ಏನು ಸತ್ಯ ತಿಳಿಯದೆ ಅಳಿಯನ ಪರ ನಿಂತಿದ್ದಾಳೆ. ಅಳಿಯನಿಗೆ ಸಹಾಯ ಮಾಡ್ತೀನಿ ಅಂತಿದ್ದಾಳೆ. ಅದಕ್ಕಾಗಿ ಭಾಗ್ಯಳನ್ನು ಸೋಲಿಸಬೇಕೆಂದುಕೊಳ್ಳುತ್ತಿದ್ದಾಳೆ. ತಾಂಡವ್ ಕಿತಾಪತಿ ತಿಳಿಯದೇ ಭಾಗ್ಯಾಳಿಗೆ ಸಂಬಂಧಿಸಿದಂತ ವಸ್ತುಗಳನ್ನು ತಂದುಕೊಡಲು ಹೊರಟಿದ್ದಳು. ಆದರೆ ಕುಸುಮಾ ಕೈಗೆ ಸಿಕ್ಕಿಬಿದ್ದು ತಣ್ಣಗಾದಳು. ತಾಂಡವ್ ಪ್ಲ್ಯಾನ್ ಫ್ಲಾಪ್ ಆಯ್ತು.
ಕುಸುಮಾ ಒಂಥರ ಸೊಸೆಗೆ ಸದಾ ಕಾವಲುಗಾರ್ತಿ. ಇನ್ನೇನು ಸೊಸೆಗೆ ಕೆಟ್ಟದಾಗಬೇಕು ಎನ್ನುವಷ್ಟರಲ್ಲಿಯೇ ದೇವರಂತೆ ಬಂದು ನಿಂತಿ ಬಿಡುತ್ತಾಳೆ. ತಾಂಡವ್ ಗೂ ಅದೇ ಗ್ರಹಚಾರ ಬಿಡಿಸಿದ್ದಾಳೆ. ಮಗ ಎಂಬುದನ್ನು ನೋಡಲ್ಲ ಕುಸುಮಾ. ಸಂಸಾರ ಸರಿಯಾಗಬೇಕೆಂದರೆ ಮಗ ಸೊಸೆ ಸರಿಯಾಗಿರಬೇಕೆಂದೆ ಬಯಸುತ್ತಾಳೆ.

ಮಹಾ ಸಂಚಿಕೆ ಬಗ್ಗೆ ಇದೇ ನಿರೀಕ್ಷೆ
ಕಥೆಯಲ್ಲಿ ಟ್ವಿಸ್ಟ್ ಇದ್ದಾಗ ಮಹಾ ಸಂಚಿಕೆಯನ್ನು ಮಾಡುವುದು ಸಹಜ. ಈಗ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲೂ ಟ್ವಿಸ್ಟ್ ಒಂದಿದೆ. ಶ್ರೇಷ್ಠಾ ಹಾಗೂ ತಾಂಡವ್ ಮದುವೆ ಟ್ವಿಸ್ಟ್. ಇವರ ಮದುವೆ ಕಾರ್ಯ ಎಲ್ಲಿಗೆ ಬಂತು, ತಾಂಡವ್ ಹೇಗೆ ತಪ್ಪಿಸಿಕೊಳ್ಳುತ್ತಾನೆ, ಕುಸುಮಾರನ್ನ ಶ್ರೇಷ್ಠಾ ತಾಯಿ ಯಶೋಧಾ ಮದುವೆಗೆ ಕರೆಯುತ್ತಾರಾ ಎಂಬೆಲ್ಲಾ ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುವಂತದ್ದು. ಇಂದಿನಿಂದ ಒಂದು ಗಂಟೆಯ ಮಹಾ ಸಂಚಿಕೆಯಲ್ಲಿ ತೋರಿಸುತ್ತಾರೆ. ಅದಕ್ಕಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.
ಮದುವೆ ಕಾರ್ಡ್‌ಗಾಗಿ ತಾಂಡವ್ ಹುಡುಕಾಟ
ತಾಂಡವ್‌ಗೆ ದೊಡ್ಡ ಭಯವಾಗಿರುವುದು ಮದುವೆ ಕಾರ್ಡ್ ಭಾಗ್ಯಾಳ ಬ್ಯಾಗ್‌ನಲ್ಲಿದೆ. ಯಾರಾದರೂ ನೋಡಿದರೆ ಮದುವೆ ಅಲ್ಲ ತಿಥಿ ಕಾರ್ಡ್ ರೆಡಿ ಮಾಡಿಸ್ತಾರೆ ಅಂತ. ಆದರೆ ಭಾಗ್ಯಾ ಆ ಬ್ಯಾಗ್ ಅನ್ನ ಜೋಪಾನ ಮಾಡಿದ್ದು, ಆಫರ್ ಲೆಟರ್ ಇರುವ ಕಾರಣಕ್ಕೆ. ಈಗ ಭಾಗ್ಯಾಳ ರೂಮಿಗೆ ಬಂದ ತಾಂಡವ್ ಎಲ್ಲರ ಬಳಿ ತಗಲಾಕಿಕೊಂಡಿದ್ದಾನೆ. ಗುಂಡಣ್ಣ ಕಳ್ಳ ಬಂದ ಅಂತ ಹೇಳಿ, ಎಲ್ಲರನ್ನು ರೂಮಿಗೆ ಕರೆಸಿದ್ದಾನೆ. ಆದರೆ ಭಾಗ್ಯಾಳಿಗೆ ಇದು ಗೊತ್ತಿದ್ದ ಕಾರಣಕ್ಕೆ ಎಲ್ಲರನ್ನು ಹೊರಗೆ ಕಳುಹಿಸಿದ ಮೇಲೆ, ತಾಂಡವ್‌ನನ್ನು ಹೊರಗೆ ಕರೆದಿದ್ದಾಳೆ. ಬೆಳಗ್ಗೆ ಈ ವಿಚಾರ ಕುಸುಮಾ ಗಮನಕ್ಕೆ ಬಂದು ಹಿಗ್ಗಾಮುಗ್ಗಾ ಜಾಡಿಸಿದ್ದಾಳೆ.

ಅದೇ ಶ್ರೇಷ್ಠಾ ಮನೆಯ ಸದ್ದುಗದ್ದಲ
ಅತ್ತ ಶ್ರೇಷ್ಠಾ ಮನೆಯಲ್ಲಿ ಪೂಜಾ ಹಾಗೂ ಸುಂದರಿ ಸೇರಿಕಿಂಡು ತಕದಿಮಿತ ಆಡುತ್ತಿದ್ದಾರೆ. ಶ್ರೇಷ್ಠಾಳಿಗೆ ನಿದ್ದೆಯೂ ಬಾರದಂತೆ ಮಾಡಬೇಕೆಂದುಕೊಂಡು ಮಧ್ಯರಾತ್ರಿಯಲ್ಲಿ ಜೋರು ಸೌಂಡ್ ಹಾಕಿಕೊಂಡು ಕುಣಿಯುವುದಕ್ಕೆ ಶುರು ಮಾಡಿದ್ದಾರೆ. ಪೂಜಾ ಮನೆಗೆ ಬಂದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ಕೊಡುತ್ತಿದ್ದಾಳೆ. ಮದುವೆಯಾಗುವ ನಿರ್ಧಾರದಿಂದ ವಾಪಾಸ್ ಆಗಬೇಕೆಂಬುದೇ ಪೂಜಾಳ ಹಠವಾಗಿದೆ.
ಪ್ರೇಕ್ಷಕರಿಗಿತ್ತು ಅಸಮಾಧಾನ!
ಇಂದು ಗಂಟೆಯ ಮಹಾಸಂಚಿಕೆ ಯಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಭಾಗ್ಯಾಳಿಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇದೆ. ಕಥೆಯಲ್ಲಿ ಏನಾದರೂ ಇಂಟ್ರೆಸ್ಟಿಂಗ್ ಆಗಿರಬಹುದು ಎಂದೇ ಒಂದು ಗಂಟೆಗಳ ಕಾಲ ಸೀರಿಯಲ್ ನೋಡಲಾಗಿತ್ತು. ಆದರೆ ಅದು ತಪ್ಪಾಗಿದೆ. ನಿರೀಕ್ಷೆ ಸುಳ್ಳಾಗಿದೆ. ನಿನ್ನೆಯಿಂದ ಹುಡುಕುತ್ತಿದ್ದ ಕಾರ್ಡ್ ಹುಡುಕಾಟ ಇವತ್ತು ಮುಂದುವರೆದಿದೆ. ಶ್ರೇಷ್ಠಾ ಟಾರ್ಚರ್ ಕೊಡುವ ಕೆಲಸವೂ ಕಂಟಿನ್ಯೂ ಆಗಿದೆ. ಪ್ರೇಕ್ಷಕರು ನಿನ್ನೆಯ ಮಹಾಸಂಚಿಕೆಗೆ ಪ್ರೋಮೋಗೆ ಇದೇ ಬೇಸರ ವ್ಯಕ್ತಪಡಿಸಿದ್ದರು. ಏನು ಚೇಂಜಸ್ ಆಗಲ್ಲ ಬಿಡಿ ಅಂತ. ಇಂದಿನ ಒಂದು ಗಂಟೆಯ ಸಂಚಿಕೆ ಅದೇ ಫೀಲ್ ಕೊಟ್ಟಿದೆ. ಪ್ರತಿದಿನದ ಅರ್ಧ ಗಂಟೆ ಸಂಚಿಕೆಯೆನ್ನೇ ಎಳೆದಿದ್ದಾರೆ ಎಂದು ಪ್ರೇಕ್ಷಕರು ಬೇಸರ ಮಾಡಿಕೊಂಡಿದ್ದಾರೆ.


Click it and Unblock the Notifications











