Bhagyalakshmi: ಭಾಗ್ಯಾಳ ಕನಸಿನ ದಿನ; ಎಸ್ಎಸ್ಎಲ್‌ಸಿ ಫಲಿತಾಂಶ ಏನಾಗಬಹುದು..?

By ಎಸ್ ಸುಮಂತ್

ಇವತ್ತು ಮನೆ ಇಬ್ಭಾಗವಾಗುವುದಕ್ಕೆ ಭಾಗ್ಯಾಳ ಓದು ಕೂಡ ಒಂದು ನೆಪ. ತಾಂಡವ್ ಗೆ ಅದಾಗಲೇ ಭಾಗ್ಯಾಳ ಮೇಲೆ ಆಸಕ್ತಿ ಕಳಚಿ ಬಿದ್ದಿತ್ತು. ಅದೇ ಸಮಯಕ್ಕೆ ಭಾಗ್ಯಾ ನಾನು ಓದುತ್ತೀನಿ ಅಂದಳು, ಕುಸುಮಾ ಓದು ಎಂದಳು. ಆದರೆ ತಾಂಡವ್ ಪ್ರತಿ ಹಂತದಲ್ಲೂ ಶ್ರೇಷ್ಠಾಳ ಮಾತು ಕೇಳಿಕೊಂಡು ಅದನ್ನು ತಡೆಯುತ್ತಲೇ ಬಂದನು.

ತಾಂಡವ್ ಮಾಡಿದ ನಾಟಕಗಳು, ಆಡಿದ ಮಾತುಗಳು ಸಹನಾ ಮೂರ್ತಿಯಂತಿದ್ದ ಭಾಗ್ಯಾಳನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ. ಇಂದು ಭಾಗ್ಯ ಗಟ್ಟಿಯಾಗಿ ನಿಲ್ಲುವುದಕ್ಕೆ ತಾಂಡವ್ ಮಾಡಿದ ಅವಮಾನಗಳೇ ಕಾರಣ. ಇಂದು ಭಾಗ್ಯಾಳ ಜೀವನದಲ್ಲಿ ಬಹುಮುಖ್ಯ ಘಟ್ಟ. ಎಸ್ಎಸ್ಎಲ್ಸಿ ರಿಸಲ್ಟ್ ಅನೌನ್ಸ್ ಆಗಿದೆ.

Bhagyalakshmi kannada serial Written Update on may 15th episode

ಕಿಲಾಡಿ ಪೂಜಾಗೆ ತಿಳಿಯಿತು ಸತ್ಯ

ಶ್ರೇಷ್ಠಾ ಮನೆಯಲ್ಲಿ ಸುಂದ್ರಿ ಹಾಗೂ ಪೂಜಾಳ ಕಾಟ ಅತಿಯಾಗಿದೆ. ಅವರಿಗೆ ಇಷ್ಟವಾದದ್ದನ್ನು ತರಿಸಿಕೊಂಡು ತಿಂದು, ಶ್ರೇಷ್ಠಾ ತಲೆ ಮೇಲೆ ಹಾಕುತ್ತಿದ್ದಾರೆ. ಇದೇ ವಿಚಾರವಾಗಿ ಜಗಳವಾಡಿದ್ದ ಶ್ರೇಷ್ಠಾ, ನಿಮ್ಮ ಅಕ್ಕನ ಹಣ ಕದ್ದು, ಹೂವಿನಡಿ ಇಟ್ಟಿದ್ದಲ್ಲ, ನೀ‌ನು ಸ್ವಾರ್ಥಿ ಎಂದಿದ್ದಾಳೆ. ಪೂಜಾಗೆ ಇದನ್ನು ಕೇಳಿ ಶಾಕ್ ಆಗಿದೆ. ಏನೋ ಒಂದು ಬ್ಯಾಲೆನ್ಸ್ ಮಾಡಿ ಸುಮ್ಮನಾದ ಪೂಜಾ, ಭಾಗ್ಯಾಳಿಗೆ ಕಾಲ್ ಮಾಡಿ, ಅಂದು ಹಣ ಹೇಗೆ ಕೊಟ್ಟಳು ಎಂಬುದನ್ನು ಕೇಳಿದ್ದಾಳೆ. ಮದುವೆ ಮನೆಗೆ ಶ್ರೇಷ್ಠಾ ಸುಮ್ಮ ಸುಮ್ಮನೆ ಎರಡು ಲಕ್ಷ ತರಲ್ಲ. ಹೀಗಾಗಿ ನನ್ನ ಹಣವನ್ನು ಕದ್ದು, ಅಕ್ಕನಿಗೆ ಸಾಲವಾಗಿ ಕೊಟ್ಟಿದ್ದಾಳೆ ಎಂಬ ಸತ್ಯವನ್ನು ಅರಿತಿದ್ದಾಳೆ.

ಮಾವನೇ ಹುಡುಕಿ ಕೊಟ್ಟರು ದಾರಿ

ಇತ್ತ ಅತ್ತೆ-ಸೊಸೆಗೆ ಕೆಲಸ ಸಿಕ್ಕಿದೆ. ಆದರೆ ಮನೆಯಲ್ಲಿ ನೆಪ ಹೇಳಿ ಹೋಗುವುದಾದರೂ ಹೇಗೆ. ಕೆಲಸ ಸಿಕ್ಕಿರುವ ವಿಚಾರವನ್ನು ಒಬ್ಬರಿಗೊಬ್ಬರು ಹೇಳಿಲ್ಲ. ಹೀಗಾಗಿ ಮನೆಯಿಂದ ಹೊರ ಹೋಗುವುದಕ್ಕೆ ದಾರಿ ಹುಡುಕುತ್ತಿದ್ದಾಗ ಕುಸುಮಾಳಿಗೆ ಗಂಡ ಹೇಳಿದ ಐದು ದಿನ ಪೂಜೆಯ ವಿಚಾರ ಕಿವಿಗೆ ಬಿದ್ದಿದೆ. ಅದನ್ನೆ ನೆಪ ಮಾಡಿಕೊಂಡು ಇಬ್ಬರು ಹೊರಟಿದ್ದಾರೆ. ಅತ್ತೆ ಒಂದು ದೇವಸ್ಥಾನ ಸೊಸೆ ಮತ್ತೊಂದು ದೇವಸ್ಥಾನಕ್ಕೆ ಹೋಗಲು ದೊಡ್ಡ ಡ್ರಾಮವೇ ನಡೆದಿದೆ.

Bhagyalakshmi kannada serial Written Update on may 15th episode

ಶ್ರೇಷ್ಠಾಗೂ ಬೇತಾಳ ಎಂದ ತಾಂಡವ್

ಇನ್ನು ತಾಂಡವ್‌ದು ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿ. ಇನ್ವಿಟೇಷನ್ ಕಾರ್ಡ್ ಈಗ ಭಾಗ್ಯಾ ಕೈಯಿಂದ ಜಾರಿ, ಕುಸುಮಾಂಬೆಯ ಕಬೋಡ್ ಸೇರಿದೆ. ತೆಗೆಯುವುದಕ್ಕೆ ಆಗ್ತಿಲ್ಲ. ಕುಸುಮಾ ಭದ್ರವಾಗಿ ಲಾಕ್ ಮಾಡಿದ್ದಾಳೆ. ರೂಮಿನ ಬಳಿ ಬಂದಿದ್ದ ಮಗನನ್ನು ಕಂಡು, ನೆನಪಾಗಿ ಬಂದಿರಬೇಕು ಎಂದು ತಪ್ಪಾಗಿ ಭಾವಿಸಿದ್ದಾಳೆ. ಅಮ್ಮನಿಂದ ಬೈಸ್ಕೊಂಡು ಬಂದಿದ್ದ ತಾಂಡವ್ ಗೆ ಶ್ರೇಷ್ಠಾ ಕಾಲ್ ಮಾಡಿ ಪೂಜಾ ಕಥೆ ಹೇಳಿದ್ದಾಳೆ. ಟೆನ್ಶನ್ ನಲ್ಲಿದ್ದ ತಾಂಡವ್ ನೀನು ಸೇರಿ ಎಲ್ಲಾ ಬೇತಾಳಗಳೇ ಅಂತ ಫೋನ್ ಕಟ್ ಮಾಡಿದ್ದಾನೆ.

ಮತ್ತೆ ವ್ಯಂಗ್ಯ ಮಾಡಿದ ತಾಂಡವ್

ವೀಕ್ಷಕರು ಬಯಸುತ್ತಿದ್ದ ದಿನ ಬಂದೇ ಬಿಟ್ಟಿದೆ. ಅದುವೇ ಭಾಗ್ಯಾಳ ಎಸ್ಎಸ್ಎಲ್‌ಸಿ ರಿಸಲ್ಟ್. ಅತ್ತೆ ಸೊಸೆ ದೇವಸ್ಥಾನಕ್ಕೆ ಹೋಗಲು ರೆಡಿಯಾಗುತ್ತಿದ್ದರು. ಪೇಪರ್‌ನಲ್ಲಿ ರಿಸಲ್ಟ್ ಎಂದು ನೋಡಿದ ಭಾಗ್ಯಾ ಮಾವ, ಜೋರಾಗಿ ಕರೆದಿದ್ದಾರೆ. ರಿಸಲ್ಟ್ ಅಂತ ನೋಡಿ ಕುಸುಮಾ ಖುಷಿಯಾಗಿದ್ದಾಳೆ. ಆದರೆ ಅಲ್ಲಿಗೆ ಬಂದ ತಾಂಡವ್ ಮತ್ತೆ ವ್ಯಂಗ್ಯವಾಡಿದ್ದಾನೆ‌. ಪಾಸ್ ಎಲ್ಲಿ, ಫೇಲ್ ಆಗಿರ್ತೀಯ ಬಿಡು ಎಂದಿದ್ದಾನೆ. ತಾಂಡವ್ ಜೊತೆಗೆ ಸುನಂದಾ ಕೂಡ ಅದೇ ಮಾತನಾಡಿದ್ದಾಳೆ.

More from Filmibeat

English summary
Bhagyalakshmi kannada serial today episode. Here is the details about Bhagya SSLC result announce;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X