Bhagyalakshmi: ತಾಂಡವ್ ಭೇಟಿಯಾಗೋಕೆ ಕದ್ದು ಓಡಿದ ಶ್ರೇಷ್ಠಾ; ಸೀರೆ ಕಟ್ಟಿ ಇಳಿಯೋಕೆ ಎಷ್ಟು ಟೇಕ್ ತೆಗೆದುಕೊಂಡ್ರು ಗೊತ್ತಾ?

By ಎಸ್ ಸುಮಂತ್

ಭಾಗ್ಯಲಕ್ಷ್ಮೀ ಧಾರಾವಾಹಿ ಇತ್ತೀಚೆಗೆ ಹಲವರಿಗೆ ಬೇಸರ ತರಿಸಿದೆ. ಭಾಗ್ಯಾಳನ್ನು ತಾಂಡವ್ ದಡ್ಡಿ, ಶತ ದಡ್ಡಿ ಅಂತ ಹೇಳುವುದಕ್ಕೂ, ಭಾಗ್ಯಾ ಅದೇ ಥರ ಆಡುವುದಕ್ಕೂ ಸಮವಾಗಿದೆ. ಇದಕ್ಕೆ ನೋಡುಗರು ಕೊಂಚ ಬೇಸರ ಮಾಡಿಕೊಂಡಿದ್ದಾರೆ. ಭಾಗ್ಯಾಳನ್ನು ದಡ್ಡಿ ಎಂದೇ ತೋರಿಸುವುದಾದರೇ, ಅರ್ಥವೇ ಆಗದಂತೆ ಆಡುವುದಾದರೆ ತಾಂಡವ್ ಮಾತುಗಳೇ ಸರಿ ಎಂದು ಬಿಂಬಿಸಿದಂತೆ ಆಗುವುದಿಲ್ಲವೇ ಎನ್ನುತ್ತಿದ್ದಾರೆ.

ಡಿವೋರ್ಸ್ ಬೇಕು ಎಂದಾಗ, ಎಸ್ಎಸ್ಎಲ್‌ಸಿ ಬೇಡ ಎಂದಾಗ ಭಾಗ್ಯಾಳ ವರ್ತನೆಯೇ ಬೇರೆ ಇತ್ತು. ಗಟ್ಟಿಗಿತ್ತಿಯಾಗಿ ನಡೆದುಕೊಂಡಿದ್ದಳು. ಗಂಡನನ್ನೇ ದಿಟ್ಟಿಸಿ ನಿಂತಿದ್ದಳು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಎಲ್ಲದಕ್ಕೂ ಹೆದರುತ್ತಾಳೆ, ತೊದಲು ನುಡಿಯುತ್ತಾಳೆ. ಈ ಬೆಳವಣಿಗೆ ಪ್ರೇಕ್ಷಕರಿಗೆ ಬೇಡವಾಗಿದೆ.

Bhagyalakshmi kannada serial Written Update on may 22rd episode

ಕೆಲಸದಿಂದ ಹೊರ ಬಿದ್ದ ಭಾಗ್ಯ

ಭಾಗ್ಯ ತಪ್ಪಿ ಇಂಟರ್‌ವ್ಯೂಗೆ ಹೋಗಿದ್ದಳು. ಅದು ಭಾಗ್ಯಾಗೂ ತಿಳಿದಿರಲಿಲ್ಲ. ಆ ಕೆಲಸಕ್ಕೆ‌ ಬರಬೇಕಾದದ್ದು ಭಗಾಯ ಎಂಬುವವರು. ಇದು ಹಿತ ಗಮನಕ್ಕೂ ಬಂದಿದೆ. ಮನೆಗೆ ಹೊರಟಿದ್ದ ಭಾಗ್ಯಳನ್ನು ಕರೆದು ಜೋರು ಗಲಾಟೆ ಮಾಡಿದ್ದಾಳೆ. ಭಗಾಯ ಜಾಗದಲ್ಲಿ ನೀವೂ ಇರುವುದು. ಬೇರೆಯವರ ಕೆಲಸ ಕಿತ್ತುಕೊಂಡಿದ್ದೀರಾ ಎಂದು ರೇಗಾಡಿ, ಈಗಲೇ ಕೆಲಸ ಬಿಟ್ಟು ಹೋಗಿ ಎಂದಿದ್ದಾಳೆ. ನೋವಿನಲ್ಲಿಯೇ ಹೊರಗೆ ಬಂದ ಭಾಗ್ಯಾ ಎದುರೇ ಕೆಲಸ ಕೊಡಿಸಿದೆ ಎಂದು ಸುಳ್ಳು ಹೇಳಿದ್ದ ಬ್ರೋಕರ್ ಬಂದಿದ್ದಾನೆ. ಮನಸ್ಸಲ್ಲಿ ಇದ್ದ ಕೋಪವನ್ನೆಲ್ಲ ಹೊರಗೆ ಹಾಕಿದ್ದಾಳೆ‌

ಕುಸುಮಾ ಕೆಲಸ ಉಳಿಯಿತು

ಅತ್ತೆ ಸೊಸೆ ಇಬ್ಬರು ಕೂಡ ಅಡುಗೆಯಲ್ಲಿ ಪರ್ಫೆಕ್ಟ್. ಹೀಗಾಗಿಯೇ ಹೊಟೇಲ್‌ನಲ್ಲಿ ಕೆಲಸ ಹುಡುಕಿದ್ದಾರೆ. ಕುಸುಮಾಳ ಜೊತೆಗೊಬ್ಬ ಕೆಲಸ ಮಾಡುತ್ತಾನೆ. ಅವನಿಂದ ಕುಸುಮಾಳ ಕೆಲಸಕ್ಕೂ ಕುತ್ತು ಬಂದಿತ್ತು. ಆದರೆ ಕುಸುಮಾ ಮಾಡುವ ಒತ್ತು ಶಾವಿಗೆಗೆ ಬಾರಿ ಡಿಮ್ಯಾಂಡ್ ಇದೆ. ಹೀಗಾಗಿಯೇ ಆ ಹೊಟೇಲ್‌ನಲ್ಲಿ ಕುಸುಮಾ ಉಳಿದುಕೊಂಡಿದ್ದಾಳೆ. ನಾಳೆಯೂ ಕೆಲಸಕ್ಕೆ ಬನ್ನಿ ಎಂಬ ಮಾತು ಕೇಳಿ ಖುಷಿಯಾಗಿದ್ದಾಳೆ.

ಭಾಗ್ಯಾಳನ್ನು ಓಡಿ ಬಂದ ತಾಂಡವ್

ಅತ್ತ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಕಾರ್ಯಗಳು ಬಹಳ ವೇಗವಾಗಿ ನಡೆಯುತ್ತಿವೆ. ಮದುವೆ ಇವೆಂಟ್ ಬಗ್ಗೆ ಮಾತನಾಡುವುದಕ್ಕೆ ಶ್ರೇಷ್ಠಾ ಇಂದು ತಾಂಡವ್‌ನ ಭೇಟಿಯಾಗಬೇಕಿತ್ತು. ಆದರೆ ಪೂಜಾ ಮುಂದೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆಂದೆ ಫಸ್ಟ್ ಫ್ಲೋರ್‌ನಿಂದ ಸೀರೆ ಕಟ್ಟಿ, ಕೆಳಗೆ ಇಳಿದು ಓಡಿ ಹೋಗಿದ್ದಾಳೆ. ಆದರೆ ಹೊಟೇಲ್‌ನಲ್ಲಿ ಇಬ್ಬರು ಭಾಗ್ಯಾಳನ್ನು ಕಂಡು ಅಲ್ಲಿಂದಲೂ ಓಡಿ ಬಂದಿದ್ದಾರೆ. ಮನೆಗೆ ಬಂದಾಗ ಪೂಜಾ ಮೇಲೆ ತಾಂಡವ್ ಅನುಮಾನ ಪಟ್ಟಿದ್ದಾನೆ. ಆದರೆ ಪೂಜಾಗೂ ಇದು ದೊಡ್ಡ ತಲೆನೋವಿನ ವಿಚಾರವಾಗಿದೆ.

ಸೀರೆಯಲ್ಲಿ ಕೆಳಗಿಳಿಯಲು ಹರಸಾಹಸ

ಯಾವುದೇ ಒಂದು ದೃಶ್ಯವಾಗಲಿ ನಮ್ಮ ಕಣ್ಣಿಗೆ ಕಾಣುವುದು ಎಲ್ಲಾ ರಿಟೇಕ್ ಆಗಿ, ಎಡಿಟಿಂಗ್ ಆದ ವಿಚಾರಗಳು. ಇಂದು ಶ್ರೇಷ್ಠಾ, ಮನೆಯಿಂದ ಕೆಳಗೆ ಇಳಿದು ಬಂದ ದೃಶ್ಯವಷ್ಟೇ ನಮಗೂ ಕಾಣಿಸಿದೆ. ಆದರೆ ಶ್ರೇಷ್ಠಾ ಈ ದೃಶ್ಯವನ್ನು ಮಾಡಲು ಅದೆಷ್ಟು ಕಷ್ಟ ಪಟ್ಟಿದ್ದಾರೆ ಗೊತ್ತಾ..? ಭಾಗ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಶ್ರೇಷ್ಠಾ ಸೀರೆಯ ಸಹಾಯದಿಂದ ಕೆಳಗೆ ಇಳಿಯುವುದಕ್ಕೆ ಭಯ ಪಟ್ಟಿದ್ದಾರೆ. ಸಾಕಷ್ಟು ಬಾರಿ ರಿಟೇಕ್ ಆಗಿದ್ದು, ಕಡೆಗೂ ಧೈರ್ಯ ತೆಗೆದುಕೊಂಡು ಕೆಳಗೆ ಇಳಿದಿದ್ದಾರೆ.

More from Filmibeat

English summary
Bhagyalakshmi kannada serial today episode. Here is the details about Shrestha was scared while escaping from home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X