Bhagyalakshmi: ಇಂಟರ್ವ್ಯೂಗೆ ಹೋಗಿದ್ದ ಅತ್ತೆ ಕುಸುಮಾ ಪಾಸ್, ಸೊಸೆ ಭಾಗ್ಯಾ ಕಥೆ ಏನಾಗುತ್ತೊ?

By ಎಸ್ ಸುಮಂತ್

ತಾಂಡವ್ ಹಠ.. ತಾಂಡವ್ ಅಹಂಕಾರ ಇಂದು ತಾಯಿಯ ನೋವಿಗೂ ಕಾರಣವಾಗಿದೆ. ಈ ವಯಸ್ಸಲ್ಲಿ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಬರುತ್ತೆ ಅಂತ ಯಾವತ್ತಿಗೂ ಕುಸುಮಾ ಭಾವಿಸಿರಲಿಲ್ಲ. ಇಂಥ ಮಗನಿಗೆ ಜನ್ಮ ಕೊಟ್ಟಿದ್ದಕ್ಕೆ ತಾನೇ ಪಶ್ಚಾತ್ತಾಪ ಪಟ್ಟುಕೊಂಡು ಸುಮ್ಮನೆ ಆಗಿದ್ದಾಳೆ. ಆದರೆ ಎಂಥ ಕಷ್ಟದಲ್ಲೂ ಸೊಸೆಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ತಾಂಡವ್‌ಗೆ ಹೆಂಡತಿ ಮಕ್ಕಳ ಬೆಲೆಯನ್ನು ಅರ್ಥ ಮಾಡಿಸಬೇಕು ಎಂದೇ ಕುಸುಮಾ ಪ್ರಯತ್ನ ಪಡುತ್ತಿದ್ದಾಳೆ. ಅದರ ಫಲವಾಗಿ ಈಗ ತಾಂಡವ್ ಸಿಂಗಲ್ ಆಗಿದ್ದಾನೆ. ಮನೆಯವರೆಲ್ಲಾ ಒಂದಾಗಿದ್ದಾರೆ. ಸುನಂದಾ ಈ ಎಲ್ಲವನ್ನು ಬಿಟ್ಟು ಮಗಳ ಸಂಸಾರ ಸರಿ ಆಗಲಿ ಎಂದು ಅಳಿಯನ ಪರವಾಗಿ ನಿಂತಿದ್ದಾಳೆ. ಇದ್ಯಾವುದಕ್ಕೂ ಕುಸುಮಾ ತಲೆ ಕೆಡಿಸಿಕೊಂಡಿಲ್ಲ. ಇದೀಗ ಕೆಲಸಕ್ಕೆ ಹೊರಟು ನಿಂತಿದ್ದಾಳೆ.

Bhagyalakshmi kannada serial Written Update on may 8th episode

ಕುಸುಮಾಳ ಮಾತಿಗೆ ಬ್ರೋಕರ್ ಕಂಗಾಲು

ಮನೆ ನಿಭಾಯಿಸುವುದಕ್ಕೆ ಅತ್ತೆ ಸೊಸೆ ಇಬ್ಬರು ಪಣ ತೊಟ್ಟಿದ್ದಾರೆ. ಆದರೆ ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಕೆಲಸದ ಇಂಟರ್‌ವ್ಯೂಗೆ ಹೋಗಿದ್ದಾರೆ. ಅತ್ತೆ ಸೊಸೆ ಇಬ್ಬರನ್ನು ಸಂದರ್ಶನಕ್ಕೆ ಕಳುಹಿಸಿರುವುದು ಒಬ್ಬನೇ ಬ್ರೋಕರ್. ಕುಸುಮಾಳನ್ನು ಹೊಟೇಲ್ ಮ್ಯಾನೇಜರ್ ಬಳಿ ಕರೆದುಕೊಂಡು ಹೊರಟ. ಆದರೆ ಕುಸುಮಾ ತಾನೇ ಮುಂದೆ ಹೊರಟಳು. ಅದನ್ನು ಕಂಡು ಕಂಗಲಾದ ಬ್ರೋಕರ್, ಏನಮ್ಮ ನಾನು ತಾನೇ ಮುಂದೆ ಹೋಗಬೇಕಿರುವುದು ಎಂದು ಕೇಳಿದ. ಅದಕ್ಕೂ ಕುಸುಮಾ ಕೊಟ್ಟ ಉತ್ತರ ಕೇಳಿ ಶಾಕ್ ಆಗಿ ನಿಂತ.

ಕೆಲಸ ಸಿಕ್ಕಿದ್ದನ್ನು ಘೋಷಿಸಿದ ಕುಸುಮಾ

ಒತ್ತು ಶಾವಿಗೆ ಮಾಡುವವ ಕೈ ಕೊಟ್ಟಿದ್ದಾನೆ ಅಂತ ಹೊಟೇಲ್ ಮ್ಯಾನೇಜರ್ ಮೊದಲೇ ಕೋಪದಲ್ಲಿ ಇದ್ದ. ಯಾರದ್ದೋ ಕೋಪವನ್ನು ಕುಸುಮಾ ಮೇಲೆ ಹಾಕಿದರೆ ಕೇಳುತ್ತಾಳೆಯೇ. ಕುಸುಮಾ ಗರಂ ಆದಳು. ಒತ್ತು ಶಾವಿಗೆ ತಾನೇ ಪಟಾಪಟ್ ಅಂತ ಮಾಡಿಕೊಡ್ತೀನಿ. ನನ್ನ ಕೈ ರುಚಿಗೆ ಅಭಿಮಾನಿಗಳಿದ್ದಾರೆ ಎಂದು ಹೇಳಿದಳು. ಕುಸುಮಾ ಆಡುವ ಪ್ರತಿಯೊಂದು ಮಾತು ಬಿಲ್ಡಪ್ ಥರವೇ ಇತ್ತು. ಅದಕ್ಕೆ ಸಪೋರ್ಟ್ ಮಾಡಲಿಲ್ಲ. ಕಡೆಗೂ ನಂಗೊಂದು ಚಾನ್ಸ್ ಕೊಡಿ ಅಂತ ಕೇಳಿ, ಒತ್ತು ಶಾವಿಗೆ ಮಾಡಿಕೊಟ್ಟಳು.

Bhagyalakshmi kannada serial Written Update on may 8th episode

ಇಂಗ್ಲಿಷ್ ಪ್ರಶ್ನೆಗೆ ಉತ್ತರಿಸಿದ ಭಾಗ್ಯಾ

ಅತ್ತ ಭಾಗ್ಯಾ ಫೈವ್ ಸ್ಟಾರ್ ಹೊಟೇಲ್‌ಗೆ ಅಡುಗೆ ಮಾಡಲು ಇಂಟರ್ವ್ಯೂಗೆ ಹೋಗಿದ್ದಳು. ಆದರೆ ಅಲ್ಲಿ ಇಂಟರ್ ವ್ಯೂ ಎಲ್ಲವೂ ನಡೆದಿದ್ದು ಇಂಗ್ಲೀಷ್‌ನಲ್ಲಿ. ಭಾಗ್ಯಾಗೆ ಮೊದಲೇ ಇಂಗ್ಲಿಷ್ ಗೊತ್ತಿಲ್ಲ. ಆದರೆ ಮಕ್ಕಳು ಹೇಳುತ್ತಿದ್ದ ಮಾತುಗಳನ್ನು ನೆನಪಿಟ್ಟುಕೊಂಡು ಮಾತನಾಡಿದಳು. ಅವರು ಇಂಗ್ಲೀಷ್‌ನಲ್ಲಿಯೇ ಕೇಳಿದರು, ಭಾಗ್ಯಾ ಕನ್ನಡದಲ್ಲಿಯೇ ಉತ್ತರ ಕೊಟ್ಟಿದ್ದಾಳೆ.

ಭಾಗ್ಯಾಗೂ ಸಿಗುತ್ತಾ ಕೆಲಸ..?

ಅತ್ತೆ ಸೊಸೆ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ಕುಸುಮಾ ಮೊದಲೇ ಘಾಟಿ. ಕೆಲಸವನ್ನು ತನಗೆ ತಾನೇ ಘೋಷಣೆ ಮಾಡಿಕೊಂಡು ಬಿಟ್ಟಳು. ಹೊಟೇಲ್ ಮಾಲೀಕ ಅದ್ಯಾವಾಗ ಒತ್ತು ಶಾವಿಗೆ ರುಚಿ ಸೂಪರ್ ಅಂತ ಹೇಳಿದನೋ ಕುಸುಮಾ ಹಾಗಾದ್ರೆ ನಾನು ನಾಳೆಯಿಂದ ಕೆಲಸಕ್ಕೆ ಬರುತ್ತೀನಿ ಅಂತ ಹೇಳಿ, ಆಗಲೇ ಅಧಿಕಾರವನ್ನು ತೆಗೆದುಕೊಂಡು ಬಿಟ್ಟಳು. ಇಲ್ಲಿ ಯಾಕೆ ಸಿಪ್ಪೆ ಬಿದ್ದಿದೆ, ಅಡುಗೆ ಮನೆ ಕ್ಲೀನ್ ಇರಬೇಕು ಅಂತೆಲ್ಲಾ ಹೇಳಿದಳು. ಹಾಗೋ ಹೀಗೋ ಕುಸುಮಾಗೆ ಕೆಲಸವೇನೋ ಸಿಕ್ತು. ಅಲ್ಲಿ ಸೊಸೆ ಇಂಗ್ಲೀಷ್‌ ಅರ್ಥವಾಗದೇ ಕಂಗಲಾಗಿದ್ದಾಳೆ. ಆದರೂ ಅವಳ ಜಾಣ್ಮೆಗೂ ಕೆಲಸ ಸಿಗದೇ ಇರುವುದಿಲ್ಲ.

More from Filmibeat

English summary
Bhagyalakshmi kannada serial today episode. Here is the details about Kusuma belongs to work at the hotel;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X