Bhagyalakshmi: ತನ್ವಿಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯ..! ತಾಂಡವ್ ಜುಟ್ಟು ಈಗ ಶ್ರೇಷ್ಠಾ ಕೈಯಲ್ಲಿ?
ತನ್ವಿಗೆ ಮೊದಲಿನಿಂದಲೂ ಕೂಡ ಭಾಗ್ಯಳನ್ನು ಕಂಡರೆ ಅಷ್ಟಕ್ಕಷ್ಟೇ. ತನ್ನ ತಂದೆಯೇ ಸೂಪರ್ ಹೀರೋ ಎಂದುಕೊಂಡಿದ್ದಳು. ಆದರೆ ತಾಂಡವ್ ಯಾವಾಗ ತನ್ವಿಯನ್ನು ರೂಮ್‌ನಲ್ಲಿ ಲಾಕ್ ಮಾಡಿ ಹೋಗಿದ್ದನೋ ಆಗಿನಿಂದ ತಂದೆಯ ಮೇಲೆ ಇದ್ದಂತಹ ಗೌರವ ಕಡಿಮೆಯಾಗಿದೆ. ಭಾಗ್ಯ ಮೇಲೆ ಯಾವುದೇ ಕಾರಣಕ್ಕೂ ಕೂಡ ಪ್ರೀತಿ ಬಂದಿಲ್ಲ ಆದರೆ ಭಾಗ್ಯ ಮುಂದೆ ತನ್ವಿ ನಾಟಕ ಮಾಡುತ್ತಾ ತನ್ನ ಕಾರ್ಯ ಸಾಧನೆ ಮಾಡಿಕೊಳ್ಳುತ್ತಿದ್ದಳು.
ಭಾಗ್ಯ ತನ್ನ ಶಾಲೆಗೆ ಸೇರಿದಾಗಿನಿಂದ ಅಮ್ಮನನ್ನು ಹೇಗಾದರೂ ಮಾಡಿ ಶಾಲೆಯಿಂದ ಓಡಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಳು. ಈಗ ಭಾಗ್ಯಳನ್ನು ಶಾಲೆಯಿಂದ ಓಡಿಸಲು ತನ್ನ ಫ್ರೆಂಡ್ಸ್ ಜೊತೆ ಸೇರಿ ತನ್ನ ಅಮ್ಮನ ಹೆಸರನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನೀಡಿದ್ದಾಳೆ. ಈ ಬಗ್ಗೆ ಭಾಗ್ಯಗೆ ಬೇಸರವಾಗಿದೆ. ನನ್ನ ಮಗಳು ನನ್ನ ಬೆನ್ನ ಹಿಂದೆಯೇ ನಿಂತುಕೊಂಡು ಈ ಕೆಲಸ ಮಾಡಿಬಿಟ್ಟಳಲ್ಲ ಎಂದು ಕೋಪ ಮಾಡಿಕೊಂಡಿದ್ದಾಳೆ. ಈ ಬಗ್ಗೆ ತನ್ವಿಯನ್ನ ಕೇಳಿದರೆ ಅವಳು ಏನನ್ನು ಹೇಳುತ್ತಿಲ್ಲ. ನನ್ನ ಕಂಡರೆ ನಿನಗೆ ಯಾಕೆ ಇಷ್ಟು ಕೋಪ ಎಂದು ತನ್ವಿಯ ಬಳಿ ಕೇಳಿದ್ದಾಳೆ. ಈ ವೇಳೆ ಆಕೆ ತನ್ನ ಅಮ್ಮನಿಂದ ತಪ್ಪಿಸಿಕೊಂಡು ಬೇರೆ ಕಡೆಗೆ ಓಡಿ ಬಂದಿದ್ದಾಳೆ. ಭಾಗ್ಯ ಮಗಳ ಹಿಂದೆ ಓಡಿ ಬಂದು ಹಿಡಿದುಕೊಂಡಿದ್ದಾಳೆ.

ಶ್ರೇಷ್ಠಾ ಬಾಡಿಗೆ ಮನೆಯನ್ನು ನೋಡಲು ಬಂದಿದ್ದು ಬಾಡಿಗೆ ಮನೆಯವರು ಕೆಲ ಷರತ್ತುಗಳನ್ನು ಹಾಕಿದ್ದಾರೆ. ನಮ್ಮ ಮನೆಗೆ ಹಬ್ಬಕ್ಕೆ ಕರೆದಾಗ ಗಂಡ ಹೆಂಡತಿ ಇಬ್ಬರೂ ಕೂಡ ಬರಬೇಕು ಇಲ್ಲ ಎಂದು ಹೇಳುವ ಆಗಿಲ್ಲ ಎಂದು ಹೇಳಿದ್ದಾರೆ. ಎಲ್ಲದಕ್ಕು ಒಪ್ಪಿಕೊಂಡ ಶ್ರೇಷ್ಠ ಖುಷಿಪಟ್ಟಿದ್ದಾಳೆ. ನನಗೆ ಇಂತಹ ಮನೆಯವರೆ ಬೇಕಾಗಿತ್ತು ತಾಂಡವ್‌ಗೆ ಸರಿಯಾಗಿ ಲಾಕ್ ಮಾಡಿಕೊಳ್ಳಬಹುದು. ಇವರು ಆಗಾಗ ಕರೆಯುತ್ತಿದ್ದರೆ ತಾಂಡವ್‌ನನ್ನು ನಾನು ಮನೆಗೆ ಕರೆಸಿಕೊಳ್ಳಬಹುದು ಎಂದು ಖುಷಿಪಟ್ಟಿದ್ದಾಳೆ. ಆದರೆ ಶ್ರೇಷ್ಠ ಮಾಡಿರುವ ಕೆಲಸಕ್ಕೆ ತಾಂಡವ್‌ಗೆ ಕೆಟ್ಟ ಕೋಪ ಬರುತ್ತಿದೆ.
ಮನಸು ಬದಲಿಸಿತು ಶ್ರೇಷ್ಠ ಮಾತು
ತಾಂಡವ್ ನಾನು ಈಗ ಮನೆಗೆ ಹೋಗಬೇಕು ನಿನ್ನ ಕೆಲಸಗಳೆಲ್ಲ ಮುಗಿಯಿತು ಅಲ್ವಾ ಎಂದು ಶ್ರೇಷ್ಠ ಬಳಿ ಕೇಳಿದ್ದಾನೆ. ಆದರೆ ಶ್ರೇಷ್ಠಾಳಿಗೆ ತಾಂಡವ್‌ನನ್ನು ಮನೆಗೆ ಕಳುಹಿಸಲು ಇಷ್ಟವಿಲ್ಲ, ನೀನೇನಾದರೂ ಈಗ ಬರಲಿಲ್ಲ ಎಂದರೆ ಮುಂದೆ ನೀನು ಇದಕ್ಕೆ ಬೆಲೆ ತರ ಬೇಕಾಗುತ್ತದೆ. ನಾನಂತೂ ನನ್ನ ಪ್ರೀತಿಯನ್ನ ಪಡೆದುಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ ಎಂದು ತಾಂಡವ್ ಬಳಿ ಹೇಳಿದ್ದಾಳೆ. ತಾಂಡವ್, ಶ್ರೇಷ್ಠಾ ಹೇಳಿದ್ದರ ಬಗ್ಗೆ ಯೋಚನೆ ಮಾಡುತ್ತಾ ನಾನು ಮನೆಗೆ ಹೋಗುವುದಿಲ್ಲ. ಎಮ್ಮೆಯ ಜೊತೆ ಲಂಚ್‌ಗೆ ಹೋಗುವ ಬದಲು ನಿನ್ನ ಜೊತೆಗೆ ಇರುತ್ತೇನೆ ಎಲ್ಲಿಗೆ ಕರೆದುಕೊಂಡು ಹೋಗಬೇಕು ಹೇಳು ಎಂದಿದ್ದಾನೆ.

ಕೈಯ್ಯಾರೆ ತಾಳಿ ತೆಗೆದ ತಾಂಡವ್
ಶ್ರೇಷ್ಠಾಗೆ ತಾಂಡವ್ ತನ್ನ ದಾರಿಗೆ ಬರುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ತಾಂಡವ್‌ಗೆ ಶ್ರೇಷ್ಠಾ ಕಟ್ಟಿಕೊಂಡ ತಾಳಿಯ ಮೇಲೆ ಕಣ್ಣು ಬಿದ್ದಿದ್ದು ತಾಳಿಯನ್ನ ತಾಂಡವ್ ತೆಗೆದಿದ್ದಾನೆ. ಶ್ರೇಷ್ಠಾ ಏನು ಮಾಡುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ತಾಳಿ ಇದ್ದರೆ ಸಮಸ್ಯೆ ಆಗುತ್ತದೆ, ಅದಕ್ಕಾಗಿ ನಾನು ತೆಗೆಯುತ್ತಿದ್ದೇನೆ ಎಂದು ಹೇಳಿದ್ದಾನೆ. ಇನ್ನು ಶ್ರೇಷ್ಠಗೆ ತಾಂಡವ ತಾಳಿ ತೆಗೆದಿದ್ದು ಮಾತ್ರ ಸ್ವಲ್ಪವೂ ಸಹ ಇಷ್ಟವಾಗಲಿಲ್ಲ. ತಾಂಡವ್ ಮಾತ್ರ ತನ್ನ ಪರಿಸ್ಥಿತಿಗೆ ತನ್ನನ್ನೇ ಬೈದುಕೊಳ್ಳುತ್ತಾ ಇದ್ದಾನೆ.
ಮಗಳಿಗೆ ಬುದ್ಧಿ ಕಲಿಸಲು ಭಾಗ್ಯ ನಿರ್ಧಾರ..!
ತನ್ವಿ ಬಳಿ ಬಂದ ಭಾಗ್ಯ ನಿನಗೆ ನನ್ನನ್ನ ಕಂಡರೆ ಯಾಕೆ ಇಷ್ಟೊಂದು ಕೋಪ ಎಂದು ಕೇಳಿದ್ದಾಳೆ. ನೀನು ಎಲ್ಲರಂತೆ ಇಲ್ಲ, ಎಲ್ಲರ ಅಮ್ಮಂದಿರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ, ನೀನು ಏನನ್ನು ಮಾತನಾಡುವುದಿಲ್ಲ. ಒಂದು ಪಾರ್ಟಿ ಮಾಡಲು ಬರೋದಿಲ್ಲ, ನೀನು ದಡ್ಡಿ, ನನಗೆ ಮೊದಲಿನಿಂದಲೂ ನಿನ್ನ ಕಂಡರೆ ಆಗುವುದಿಲ್ಲ ಎಂದು ಹೇಳಿದ್ದಾಳೆ. ಇದೇ ವೇಳೆ ಭಾಗ್ಯ, ಮಗಳಿಗೆ ಚಾಲೆಂಜ್ ಮಾಡಿದ್ದಾಳೆ. ನಾನೇನಾದರೂ ಕಾಂಪಿಟೇಷನ್‌ನಲ್ಲಿ ಗೆದ್ದರೆ ನನ್ನನ್ನು ನಿನ್ನ ಅಮ್ಮ ಎಂದು ಒಪ್ಪಿಕೊಳ್ಳುತ್ತೀಯಾ? ಎಂದು ಕೇಳಿದ್ದಾರೆ. ಭಾಗ್ಯಗೆ ತನ್ನ ಮಗಳನ್ನು ಸರಿದಾರಿಗೆ ತರುವುದೇ ದೊಡ್ಡ ಚಿಂತೆಯಾಗಿದೆ.


Click it and Unblock the Notifications











