Bhagyalakshmi: ತಾಂಡವ್ ಮುಂದೆ ಹೊರ ಬಂತು ಭಾಗ್ಯಳ ಆಕ್ರೋಶ: ಗಂಡ ಮಾಡಿದ ತಪ್ಪಿಗೆ ತಲೆ ತಗ್ಗಿಸಿದ ಪತ್ನಿ..!

By ಶೃತಿ ಹರೀಶ್ ಗೌಡ

ತಾಂಡವ್ ಮನೆಗೆ ಬರುತ್ತಾನೆ ಎಂದು ಎಲ್ಲರೂ ಕಾಯುತ್ತಾ ಕುಳಿತಿದ್ದರು. ಆದರೆ ಶ್ರೇಷ್ಠ ಆಡಿದ ಒಂದೊಂದು ಮಾತು ತಾಂಡವ್ ಮೇಲೆ ಸಾಕಷ್ಟು ಪರಿಣಾಮ ಬೀರಿವೆ. ಇದಕ್ಕಾಗಿ ತಾಂಡವ್ ನಾನು ಇನ್ಮುಂದೆ ಯಾರಿಗೂ ಹೆದರಬಾರದು ನಾನೇ ಎಲ್ಲರನ್ನ ಎದುರಿಸಬೇಕು ಎಂದುಕೊಂಡು ಶ್ರೇಷ್ಠ ಜೊತೆ ಇದ್ದುಕೊಂಡು ಪ್ರಾಜೆಕ್ಟ್ ಮುಗಿಸಿ ಲೇಟ್ ಆಗಿ ಮನೆಗೆ ಹೊರಟಿದ್ದಾನೆ.

ಈ ಕಡೆ ಮಕ್ಕಳು ತನ್ನ ತಂದೆ ಬರುತ್ತಾನೆ ಎಂದುಕೊಂಡು ಊಟಕ್ಕೆ ಹೋಗಲು ಕಾದು ಕಾದು ಕುಳಿತು ಸುಸ್ತಾಗಿದ್ದಾರೆ. ಕೊನೆಗೆ ಭಾಗ್ಯನೇ ರೆಡಿ ಆಗಿ ಮನೆ ಮಂದಿಯನ್ನು ಊಟಕ್ಕೆ ಹೊರಗಡೆ ಕರೆದುಕೊಂಡು ಬಂದಿದ್ದಾಳೆ. ಆದರೆ ತಾಂಡವ್ ಅಂದುಕೊಂಡಿದ್ದೆ ಒಂದು ಇಲ್ಲಿ ಆಗಿರುವುದೇ ಇನ್ನೊಂದು.

Bhagyalakshmi Kannada serial Written Update on November 20th episode

ಭಾಗ್ಯ ಯಾವುದೇ ಕಾರಣಕ್ಕೂ ಮನೆಯವರನ್ನು ಹೊರಗಡೆ ಕರೆದುಕೊಂಡು ಹೋಗೋದಿಲ್ಲ ಎಂದು ತಾಂಡವ್ ಅಂದುಕೊಂಡಿದ್ದನು. ಆದರೆ ಭಾಗ್ಯ ಮಕ್ಕಳಿಗೋಸ್ಕರವಾಗಿ ಮನೆಯವರನ್ನೆಲ್ಲಾ ಊಟಕ್ಕೆ ಹೊರಗಡೆ ಕರೆದುಕೊಂಡು ಹೋಗಿದ್ದಾಳೆ. ಇದೇ‌ ವೇಳೆ ಶ್ರೇಷ್ಠ, ತಾಂಡವ್ ಮೇಲೆ ಮಾತಿನ ಪ್ರಯೋಗ ಮಾಡಿದ್ದಾಳೆ. ನೀವು ಗಂಡಸಾಗಿ‌ ಇರು, ಹುಲಿ ಹುಲ್ಲು ತಿನ್ನೊದ್ದನ್ನು ನೋಡಲು ಚೆನ್ನಾಗಿ ಇರೋದಿಲ್ಲ ಎಂದಿದ್ದಾಳೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುವ ತಾಂಡವ್ ನಾನು ಇನ್ಮುಂದೆ ಮನೆಯಲ್ಲಿ ಯಾರಿಗೂ ಹೆದರಬಾರದು ಎಂದು ನಿರ್ಧರಿಸಿದ್ದಾನೆ.

ಭಾಗ್ಯ ಮಾತ್ರ ತನ್ವಿ ಮಾತಿಗೆ ತಲೆ ಕೆಡಿಸಿಕೊಂಡಿಲ್ಲ. ಗುಂಡಣ್ಣ, ತನ್ವಿ ಮಾತಿಗೆ ತಲೆ ಕೆಡಿಸಿಕೊಂಡಿದ್ದು ಅಕ್ಕನ ಜೊತೆಗೆ ಜೋರಾಗಿ ಜಗಳ ಮಾಡಿದ್ದಾನೆ. ನೀನು ಯಾವಾಗಲೂ ಅಮ್ಮನಿಂದ ಕೆಲಸವನ್ನು ಮಾಡಿಸಿಕೊಂಡು ಕೊನೆಗೆ ಅಮ್ಮನನ್ನೇ ಬೈಯ್ಯುತ್ತೀಯ ಎಂದು ಅಕ್ಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಅಪ್ಪನಿಗೆ ಅಮ್ಮನ ಜೊತೆ ಬರುವುದು ಇಷ್ಟವಿಲ್ಲ ಇದಕ್ಕಾಗಿ ಈ ರೀತಿಯೆಲ್ಲ ಮಾಡುತ್ತಾ ಇದ್ದಾರೆ. ಈ ಅಮ್ಮನಿಂದಾಗಿ ನಾವು ಸಹ ಹೊರಗಡೆ ಹೋಗೋದು ತಪ್ಪಿತು ಎಂದು ತನ್ವಿ ಅಂದಿದ್ದಾಳೆ. ಇದಕ್ಕೆ ಗುಂಡಣ್ಣ ತನ್ನ ಅಕ್ಕನಿಗೆ ವಾರ್ನಿಂಗ್ ಮಾಡಿದ್ದಾನೆ.

ಹೋಟೆಲ್‌ನಲ್ಲಿ ಗುಂಡಣ್ಣನಿಗೆ ನಿರಾಸೆ

ಭಾಗ್ಯ ಎಲ್ಲರನ್ನ ಮನವೊಲಿಸಿ ಊಟಕ್ಕೆಂದು ಹೋಟೆಲ್‌ಗೆ ಕರೆದುಕೊಂಡು ಬಂದಿದ್ದಾಳೆ. ಇದೆ ವೇಳೆ ಗುಂಡಣ್ಣನ ಫ್ರೆಂಡ್ ಸಿಕ್ಕಿದ್ದು ಯಾಕೋ ನಿನ್ನ ಅಪ್ಪ ಊಟಕ್ಕೆ ಬರಲಿಲ್ವಾ? ಎಂದು ಕೇಳಿದ್ದಾನೆ. ಈ ಮಾತನ್ನು ಕೇಳಿದ ಗುಂಡಣ್ಣನಿಗೆ ಕೋಪವೇ ಬಂದಿದೆ ನೀನು ಏನು ನನ್ನ ಅಪ್ಪನ ಬಗ್ಗೆ ಮಾತನಾಡುವುದು. ಅವರು ತುಂಬಾ ಬ್ಯುಸಿ, ನಿನ್ನ ಅಪ್ಪನ ತರ ನಾಲಾಯಕ್ ಅಲ್ಲ ಎಂದು ಕೋಪದಿಂದ ಅಂದಿದ್ದಾನೆ. ಇದೇ ವೇಳೆ ಅವನ ಗೆಳೆಯ ನೀನು ನನ್ನ ತಂದೆಯ ಬಗ್ಗೆ ಮಾತನಾಡಬೇಡ ಎಂದು ಇಬ್ಬರೂ ಸಹ ಜಗಳವಾಡಿದ್ದಾರೆ.

Bhagyalakshmi Kannada serial Written Update on November 20th episode

ಮಗನ ಕೋಪ ಕಂಡು ದಿಗ್ಭ್ರಾಂತಳಾದ ಭಾಗ್ಯ

ಗುಂಡಣ್ಣ ತನ್ನ ತಂದೆ ಮೇಲಿನ ಇದ್ದಂತಹ ಕೋಪ ಹೊರ ಹಾಕಿದ್ದಾನೆ. ಎಲ್ಲರಿಂದಲೂ ಕೂಡ ನಾನು ಬಯಸಿಕೊಳ್ಳುವಂತೆ ಆಯಿತು ಎಂದು ಗುಂಡಣ್ಣ ಕೋಪ ಮಾಡಿಕೊಂಡಿದ್ದಾನೆ. ನನ್ನ ತಂದೆಗೆ ಆಫೀಸಿನಲ್ಲಿ ಕೆಲಸವಿದೆ, ನಿನ್ನ ತಂದೆಯ ರೀತಿ ಬೇಗ ಮನೆಗೆ ಬರೋದಿಲ್ಲ ಎಂದು ಗುಂಡಣ್ಣ ಕೋಪಿಸಿಕೊಂಡಿದ್ದಾನೆ. ಮಗನ ಈ ಆವೇಶ ಕಂಡ ಭಾಗ್ಯಗೆ ಏನು ಮಾಡಬೇಕು ಎಂದು ಕಾಣಲೇ ಇಲ್ಲ. ತಂದೆ ಮಾಡಿದ ತಪ್ಪು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ, ಗುಂಡಣ್ಣ ಸಹ ನಿರಾಸೆಯಿಂದಾಗಿ ತನ್ನ ಸ್ನೇಹಿತ ಎಂಬುದನ್ನು ನೋಡದೆ ಜಗಳವಾಡಿಕೊಂಡಿದ್ದಾನೆ.

ತಾಂಡವ್ ಮುಂದೆ ಧ್ವನಿ ಎತ್ತಿದ ಭಾಗ್ಯ

ಅಂತೂ ತಾಂಡವ್ ಮನೆಗೆ ಬಂದಿದ್ದಾನೆ. ಇದೇ ವೇಳೆ ನನಗೋಸ್ಕರ ಎಲ್ಲರೂ ಕಾಯುತ್ತಾ ಇರಬೇಕು, ನನ್ನ ಮೇಲೆ ಮುಗಿಬಿಳಲು ನೋಡುತ್ತಾ ಇರುತ್ತಾರೆ. ಇಂದು ನಾನು ಎಲ್ಲರಿಗೂ ಸಹ ಸರಿಯಾಗಿ ಉತ್ತರ ನೀಡುತ್ತೇನೆ, ನನ್ನ ಮನೆಯಲ್ಲಿ ನಾನೇ ಹೆದರಿಕೊಳ್ಳುವ ಪರಿಸ್ಥಿತಿ ಇನ್ಮುಂದೆ ನಿರ್ಮಾಣ ಆಗೋದಿಲ್ಲ ಎಂದುಕೊಂಡು ಮನೆಗೆ ಬರುತ್ತಿದ್ದಾನೆ. ಅಮ್ಮನಿಗೂ ಅಷ್ಟೇ ಇಂದು ಜೋರಾಗಿಯೇ ಮಾತನಾಡಬೇಕು ಮನೆಯಲ್ಲಿ ಹೇಗಿದ್ದರೂ ಅಪ್ಪ ಇಲ್ಲ ಇಂದು ಹಳೆಯ ತಾಂಡವ್ ರೀತಿ ನಾನು ಇರಬೇಕು ಎಂದುಕೊಂಡು ಮನೆಗೆ ಬಂದರೆ ತಾಂಡವ್‌ಗೆ ನಿರಾಸೆಯಾಗಿದೆ.

ತಾಂಡವ್ ಬಳಿ ಭಾಗ್ಯ ಪ್ರಶ್ನೆ

ಮನೆಯಲ್ಲಿ ಯಾರು ಇಲ್ಲದ್ದನ್ನ ಕಂಡು ತಾಂಡವ್, ಭಾಗ್ಯಗೆ ಫೋನ್ ಮಾಡಿದ್ದಾನೆ. ಆದರೆ ಭಾಗ್ಯ ಫೋನ್ ತೆಗೆದಿಲ್ಲ. ಇದಕ್ಕೂ ಸಹ ತಾಂಡವ್ ಬೈದುಕೊಂಡಿದ್ದಾನೆ. ಮನೆಯಲ್ಲಿ ಎಲ್ಲರೂ ಎಲ್ಲಿಗೆ ಹೋದರು? ಎಂಬುದು ಮಾತ್ರ ತಾಂಡವ್‌ಗೆ ಗೊತ್ತಿಲ್ಲ. ಮನೆಗೆ ಬಂದ ಭಾಗ್ಯ, ತಾಂಡವ್‌ನನ್ನು ಪ್ರಶ್ನೆ ಮಾಡಿದ್ದಾಳೆ. ಭಾಗ್ಯಳ ಇನ್ನೊಂದು ಮುಖ ನೋಡಿದ ತಾಂಡವ್‌ಗೆ ಭಯವಾಗಿದೆ.

More from Filmibeat

English summary
Bhagyalakshmi Kannada serial today epiode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X