Bhagyalakshmi: ಭಾಗ್ಯ ಹಾಗೂ ಶ್ರೇಷ್ಠ ನಡುವೆ ತಾಂಡವ್ ವಿಲವಿಲ: ಪೂಜಾಳಿಂದಲೂ ಬ್ಲಾಕ್‌ಮೇಲ್
ಈಗ ಶ್ರೇಷ್ಠ, ತಾಂಡವ್‌ನನ್ನು ಬ್ಲಾಕ್ ಮೇಲ್ ಮಾಡಲು ಶುರು ಹಚ್ಚಿಕೊಂಡಿದ್ದಾಳೆ. ಕುಸುಮಾ ತನ್ನ ಮನೆಯಿಂದ ಶ್ರೇಷ್ಠ ಮಾಡಿರುವ ಕೆಲಸಕ್ಕೆ ಹೊರಗೆ ಹಾಕಿದ್ದಾಳೆ. ಶ್ರೇಷ್ಠಗೆ ತಾನು ಏನು ಮಾಡಬೇಕು ಎಂಬುದು ಗೊತ್ತಿಲ್ಲ, ಇದಕ್ಕಾಗಿ ತಾಂಡವ್‌ಗೆ ಕಾಲ್ ಮಾಡಿದವಳೇ ಬ್ಲಾಕ್ ಮೇಲ್ ಮಾಡುತ್ತಾ ಇದ್ದಾಳೆ. ಮನೆಯಲ್ಲಿ ಎಲ್ಲರೂ ಸಹ ಸಂತೋಷದಿಂದ ಇದ್ದಾರೆ. ಶ್ರೇಷ್ಠ ಮಾಡಿರುವ ಕೆಲಸಕ್ಕೆ ಬೇಸರವೂ ಇದೆ.
ಧರ್ಮರಾಜ್, ಭಾಗ್ಯ ಬಳಿಯಲ್ಲಿ ಶ್ರೀವರ ಅವರ ಆರೋಗ್ಯ ಹೇಗಿದೆ? ಎಂಬುದನ್ನು ತಿಳಿದುಕೊಂಡಿದ್ದಾರೆ. ಇನ್ನು ಶ್ರೇಷ್ಠ ಬಗ್ಗೆ ಕುಸುಮಾ ಕೆಂಡ ಕಾರುತ್ತಿದ್ದಾಳೆ. ಇವಳು ಇಂತಹ ಹುಡುಗಿ ಎಂದು ನಾನು ಅಂದುಕೊಂಡಿರಲಿಲ್ಲ. ಭಾಗ್ಯ, ಶ್ರೇಷ್ಠ ಮಾಡಿರುವ ಕೆಲಸಗಳ ಬಗ್ಗೆ ಯೋಚಿಸುತ್ತಿದ್ದಾಳೆ. ತಾಂಡವ್ ಹೇಗೋ ಶ್ರೇಷ್ಠ ಮನೆಯಿಂದ ಆಚೆ ಹೋದಳು ಎಂದು ನಿಟ್ಟುಸಿರು ಬಿಟ್ಟಿದ್ದನು. ಆದರೆ ಯಾಕೋ ತಾಂಡವ್‌ಗೆ ಉಳಿಗಾಲ ಇಲ್ಲ ಎಂದು ಕಾಣಿಸುತ್ತದೆ. ಶ್ರೇಷ್ಠ ಪದೇ ಪದೇ ಕಾಲ್ ಮಾಡಿ ತಾಂಡವ್‌ಗೆ ಟಾರ್ಚರ್ ಕೊಡುತ್ತಿದ್ದಾಳೆ. ಈಗ ಬ್ಲಾಕ್ ಮೇಲ್ ಕೂಡ ಮಾಡಲು ನೋಡುತ್ತಾ ಇದ್ದಾಳೆ.

ಪೂಜಾ, ತಾಂಡವ್ ಬಳಿಗೆ ಬಂದವಳೇ ನನ್ನ ಅಕ್ಕನನ್ನು ದೊಡ್ಡ ಹೋಟೆಲ್‌ಗೆ ಊಟಕ್ಕೆ ನೀವು ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾಳೆ. ಇದು ತಾಂಡವ್‌ಗೆ ಸ್ವಲ್ಪವೂ ಸಹ ಇಷ್ಟವಿಲ್ಲ, ಇದಕ್ಕಾಗಿ ಪೂಜಾ ಬಳಿಯಲ್ಲಿ ಏನು ಹೇಳುತ್ತಿದ್ದೀಯ. ನಾನು ಯಾಕೆ ಆ ದೊಡ್ಡ ಹೋಟೆಲ್‌ಗೆ ಕರೆದುಕೊಂಡು ಹೋಗಲಿ? ಎಂದು ಕೇಳಿದ್ದಾನೆ. ಪೂಜಾ ಮಾತ್ರ ತನ್ನ ಅಕ್ಕನನ್ನು ಕರೆದುಕೊಂಡು ಹೋಗಲೇಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇಲ್ಲದಿದ್ದರೆ ನಿಮ್ಮ ಹಾಗೂ ಶ್ರೇಷ್ಠ ನಡುವಿನ ಸಂಬಂಧದ ಬಗ್ಗೆ ಮನೆಯವರಿಗೆ ಹೇಳಬೇಕಾಗುತ್ತದೆ ಎಂದು ಹೇಳಿದ್ದಾಳೆ.
ಶ್ರೇಷ್ಠ ಬಗ್ಗೆ ಕನಿಕರ ಪಡದ ಭಾಗ್ಯ
ಭಾಗ್ಯ ಎಲ್ಲರನ್ನೂ ಕಂಡರೆ ಮರುಗುವವಳು. ಆದರೆ ಶ್ರೇಷ್ಠ ಬಗ್ಗೆ ಯಾಕೋ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದಾಳೆ. ಶ್ರೇಷ್ಠಳ ತಾಯಿ ಯಶೋಧ ತನ್ನ ಎಲ್ಲಾ ನೋವಿಗೆ ಶ್ರೇಷ್ಠಾಳೇ ಕಾರಣ ಎಂದು ಹೇಳಿದ ಮೇಲೆ ಸರಿಯಾದ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡು ಅತ್ತೆಯ ಕೈಯಲ್ಲೇ ಮನೆಯಿಂದ ಹೊರಗಡೆ ಹಾಕಿಸಿದ್ದಾಳೆ.
ಶ್ರೇಷ್ಠಾಗೆ ಬೈಯುತ್ತಿರುವ ಸುನಂದ-ಕುಸುಮಾ
ಇನ್ನೂ ಶ್ರೇಷ್ಠಾಗೆ ಭಾಗ್ಯ ಮೇಲೆ ಕೋಪ ಬಂದಿದೆ. ನನ್ನನ್ನೇ ಮನೆಯಿಂದ ಹೊರಗಡೆ ಹಾಕಿಸಿ ಬಿಟ್ಟಳಲ್ಲ ಎಂದು ಅಂದುಕೊಂಡಿದ್ದಾಳೆ. ಕುಸುಮಾ ನನ್ನ ಮಗ ತಾಂಡವ್ ಅವಳನ್ನು ಎಷ್ಟು ನಂಬಿದ ನಮ್ಮೆಲ್ಲರ ನಂಬಿಕೆಗೆ ಅವಳು ಮೋಸ ಮಾಡಿಬಿಟ್ಟಳು ಎಂದು ಹೇಳಿದ್ದಾಳೆ. ಪೂಜಾ ನಿಮ್ಮಂತಹ ಅಮ್ಮ ಇದ್ದರೆ ಅಂತಹ ಮಗನಿರುವುದು ತಪ್ಪಲ್ಲ ಎಂದು ಗೊಣಗಿ ಚೆನ್ನಾಗಿ ಬೈಸಿಕೊಂಡಿದ್ದಾಳೆ.

ಶ್ರೇಷ್ಠಾ ಕೈಯಲ್ಲಿ ಲಾಕ್ ಆದ ತಾಂಡವ್
ತಾಂಡವ್‌ಗೆ ಕಾಲ್ ಮಾಡಿದ ಶ್ರೇಷ್ಠ ನಾನು ನಿಮ್ಮ ಮನೆಯ ಮುಂದೆಯೇ ಇದ್ದೇನೆ, ನನಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ನೀನು ಬಂದು ಒಳಗಡೆ ಕರೆದುಕೊಂಡು ಹೋದರೆ ಸರಿ ಇಲ್ಲವಾದರೆ ನಾನೇ ಒಳಗೆ ಬಂದು ನಿಮ್ಮ ಅಮ್ಮನ ಮುಂದೆ ಎಲ್ಲಾ ಸತ್ಯವನ್ನು ಹೇಳಬೇಕಾಗುತ್ತದೆ ಎಂದು ತಾಂಡವ್‌ಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ತಾಂಡವ್ ಎಷ್ಟೇ ಹೇಳುತ್ತಿದ್ದರು ಸಹ ಶ್ರೇಷ್ಠ ಕೇಳುತ್ತಿಲ್ಲ, ಹೀಗಾಗಿ ತಾಂಡವ್‌ಗೆ ಭಯವಾಗಿದೆ. ಇವಳು ಹೇಳಿದಂತೆ ಮಾಡೇ ಬಿಡುತ್ತಾಳೆ ಎಂದುಕೊಂಡು ಓಡಾಡಿ ಕೆಳಗಡೆ ಬಂದಿದ್ದಾನೆ.
ಬ್ಲಾಕ್ ಮೇಲ್ ಅಸ್ತ್ರ ಪ್ರಯೋಗಿಸಿದ ಶ್ರೇಷ್ಠ
ಕುಸುಮ ಊಟ ಮಾಡು ಎಂದು ಕರೆದರೂ ಸಹ ತಾಂಡವ್‌ಗೆ ಟೆನ್ಷನ್ ಆಗುತ್ತಿದೆ. ನನಗೆ ಆಫೀಸ್‌ನಿಂದ ಅರ್ಜೆಂಟ್ ಕಾಲ್ ಬಂದಿದೆ ನಾನು ಹೊರಗಡೆ ಮಾತನಾಡಿ ಬರುತ್ತೇನೆ ಎಂದು ಓಡಿ ಹೋಗಿದ್ದಾನೆ. ಭಾಗ್ಯ ಗಂಡನ ವರ್ತನೆಯನ್ನೆಲ್ಲಾ ಗಮನಿಸುತ್ತಾ ಇದ್ದಾಳೆ. ಇದೇ ವೇಳೆ ತಾಂಡವ್ ಮಾತಿನ ಮೇಲೆ ಭಾಗ್ಯಗೆ ಅನುಮಾನ ಬಂದಿದೆ. ಭಾಗ್ಯ ಕೈಲಿ ತಾಂಡವ್ ಮತ್ತೊಮ್ಮೆ ಸಿಕ್ಕಿ ಬೀಳ್ತಾನಾ? ಅನ್ನೋದು ಈಗ ಕುತೂಹಲವಾಗಿದೆ. ಶ್ರೇಷ್ಠಳನ್ನು ಮನೆಗೆ ಕರೆದುಕೊಂಡು ಬರ್ತಾನಾ ಅಥವಾ ಸಮಾಧಾನ ಮಾಡಿ ಕಳಿಸುತ್ತಾನಾ? ನೋಡಬೇಕಾಗಿದೆ.


Click it and Unblock the Notifications











