Bhagyalakshmi: ಕುಸುಮಾ ಕೋಪದಿಂದ ತಪ್ಪಿಸಿಕೊಳ್ತಾನ ತಾಂಡವ್?!: ಮಗನನ್ನೇ ಮನೆಯೊಳಗೆ ಬರಬೇಡ ಎಂದ ತಾಯಿ!

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ಒಂದು ವಾರದಿಂದಲೂ ಸಹ ರೋಚಕ ತಿರುವುಗಳನ್ನೇ ಪಡೆದುಕೊಂಡು ಸಾಗುತ್ತಿದೆ. ತಾಂಡವ್, ಶ್ರೇಷ್ಠಳ ಸಂಬಂಧ ಕಳೆದುಕೊಂಡರೂ ಶ್ರೇಷ್ಠ ಮಾತ್ರ ತಾಂಡವ್ ಸಂಬಂಧ ಕಳೆದುಕೊಳ್ಳಲು ಸಿದ್ಧಳಿಲ್ಲ. ಇದಕ್ಕಾಗಿ ದೇವರ ಎದುರು ಶಪಥ ಮಾಡಿದ್ದಾಳೆ. ಅವನು ನನ್ನನ್ನು ಬಿಟ್ಟು ಹೋದರು ಸರಿಯೇ ನಾನು ಮಾತ್ರ ಅವನನ್ನ ಬಿಡುವುದಿಲ್ಲ ಎಂದಿದ್ದಾಳೆ.

ನಮಗೆ ಯಾವುದು ಬೇಡ ನಡಿ ಊರಿಗೆ ಹೋಗೋಣ ಎಂದು ತಂದೆ ತಾಯಿ ಹೇಳಿದರೂ ಶ್ರೇಷ್ಠ ಕೇಳುತ್ತಿಲ್ಲ. ನನಗೆ ತಾಂಡವ್ ಬೇಕೇ ಬೇಕು, ಅವನಿಗೆ ನಾನು ಬೇಡವಾದರೂ ಸರಿಯೇ ಅವನಿಗೋಸ್ಕರ ನಾನು ಇಲ್ಲೇ ಇರುತ್ತೇನೆ ನಾನು ಎಲ್ಲಿಗೂ ಬರುವುದಿಲ್ಲ ಎಂದು ಹೇಳಿದ್ದಾಳೆ. ನೀನು ಊರಿಗೆ ಬಂದು ರಘುವನ್ನು ಮದುವೆ ಮಾಡಿಕೊಂಡು ಇರು ಎಂದರೂ ಸಹ ತನಗೆ ತಾಂಡವ್ ಬೇಕೇ ಬೇಕು ಎಂದು ತಂದೆ ತಾಯಿಯ ಬಳಿ ಹಠ ಮಾಡುತ್ತಾ ಕಿರುಚಾಡುತ್ತಿದ್ದಾಳೆ.

Bhagyalakshmi-kananda-serial

ಈ ಕಡೆ ಸುನಂದಾ ತನ್ನ ಅಳಿಯನನ್ನು ಕುಸುಮಾಳ ಮುಂದೆ ವಿಲನ್‌ ಆಗಇ ಮಾಡಿದ್ದಾಳೆ. ನಿಮ್ಮ ಮಗನಿಗೆ ಮನೆಯ ಹಬ್ಬಕ್ಕಿಂತ ಶಾಪಿಂಗ್‌ಗೆ ಹೆಚ್ಚಾಗಿ ಹೋಯಿತಾ ಎಂದೆಲ್ಲ ಹೇಳುತ್ತಿದ್ದಾಳೆ. ನಿಮ್ಮ ಮಗನ ಮೇಲೆ ನನಗೆ ನಂಬಿಕೆ ಇಲ್ಲ, ಅವನು ಆ ರೀತಿ ನಡೆದುಕೊಂಡಿದ್ದಾನೆ ಎಂದು ಹೇಳಿದಾಗ ಕುಸುಮಾಗೆ ತನ್ನ ಮಗನ ಮೇಲೆ ಅಸಾಧ್ಯವಾದ ಸಿಟ್ಟು ಬಂದಿದೆ. ಮಗನ ನಡವಳಿಕೆಯಿಂದ ಕುಸುಮಾ ಬೇಸತ್ತು ಹೋಗಿದ್ದಾಳೆ. ಮಗ ಮನೆಗೆ ಬಂದರೆ ಸಾಕು ನಾಲ್ಕು ಕಪಾಳಕ್ಕೆ ಹೊಡೆಯಬೇಕು ಎಂದು ಅನಿಸಿದೆ. ಮಗನ ದಾರಿಯನ್ನು ಕುಸುಮಾ ಕಾಯುತ್ತಾ ಇದ್ದಾಳೆ.

ಮನೆಗೆ ಬಂದ ತಾಂಡವ್‌ಗೆ ಮಂಗಳಾರತಿ

ತಾಂಡವ್ ಮನೆಗೆ ಬರುವುದನ್ನೇ ಕಾದಿದ್ದ ಕುಸುಮಾ ಕಾಲಿಂಗ್ ಬೆಲ್ ಆದ ತಕ್ಷಣವೇ ತಾನೇ ಹೋಗಿ ಬಾಗಿಲು ತೆರೆದಿದ್ದಾಳೆ. ಈ ವೇಳೆ ತಾಂಡವ್ ಅಮ್ಮನ ಬಳಿ ಅಮ್ಮ ನಿನಗೆ ಕಾಲು ನೋವಾಗಿದೆ ತಾನೇ ನೀನೇಕೆ ಬಾಗಿಲು ತೆಗೆದೆ ಎಂದು ಕೇಳಿದ್ದಾನೆ. ಕುಸುಮಾ, ನೀನು ಎಲ್ಲಿಗೆ ಹೋಗಿದ್ದೆ? ಎಂದು ಪ್ರಶ್ನೆ ಮಾಡಿದ್ದಾಳೆ. ಪೂಜಾ ಅತ್ತೆ ಶಾಪಿಂಗ್‌ಗೆ ಹೋಗಿದ್ವಿ ಎಂದಿದ್ದಾಳೆ. ಪೂಜಾ ಕೈನಲ್ಲಿದ್ದ ಬಟ್ಟೆಗಳನ್ನು ತೆಗೆದುಕೊಂಡ ಕುಸುಮಾ ಎಲ್ಲವನ್ನು ನೋಡಿದ್ದಾಳೆ.

Bhagyalakshmi-kananda-serial

ಅಮ್ಮನ ಕೋಪದಿಂದ ತಪ್ಪಿಸಿಕೊಳ್ಳುತ್ತಾನ?

ಪೂಜಾಳನ್ನ ಮಾತ್ರ ಒಳಗಡೆ ಕರೆದುಕೊಂಡಿದ್ದಾಳೆ. ಇದೇ ವೇಳೆ ತಾಂಡವ್ ಅಮ್ಮ ನನಗೆ ಒಂದು ಮೀಟಿಂಗ್ ಇತ್ತು, ಅದನ್ನ ಮುಗಿಸಿಕೊಂಡು ಶಾಪಿಂಗ್‌ಗೆ ಹೋಗಿದ್ವಿ ಎಂದು ಹೇಳಿದ್ದಾನೆ. ಇದಕ್ಕೆ ಕುಸುಮ ಮನೆಯಲ್ಲಿ ಪೂಜೆಗಿಂತ ನಿನಗೆ ಮೀಟಿಂಗ್ ಹಾಗೂ ಶಾಪಿಂಗ್‌ ಹೆಚ್ಚಾಗಿ ಹೋಯಿತು ಅಲ್ವಾ ಎಂದು ಮಗನಿಗೆ ಬೈದಿದ್ದಾಳೆ. ಮನೆಯವರೆಲ್ಲರೂ ಸಹ ಕುಸುಮಾಳ ಆದ ಬದಲಾವಣೆ ಕಂಡು ಶಾಕ್ ಆಗಿದ್ದಾರೆ. ಸುನಂದಾಗೆ ಮಾತ್ರ ಬೀಗತಿ ಮಗನನ್ನು ಪ್ರಶ್ನೆ ಮಾಡುತ್ತಿರುವುದು ಖುಷಿ ತಂದಿದೆ.

ಮನೆಯಿಂದ ಹೊರಹೋಗು ಎಂದ ಕುಸುಮಾ

ತಾಯಿ ಪ್ರಶ್ನೆ ಮಾಡುತ್ತಿರುವ ವೇಳೆ ತಾಂಡವ್ ಮನೆಯೊಳಗೆ ಬರಲು ನೋಡಿದ್ದಾನೆ. ಈ ವೇಳೆ ಮಗನನ್ನು ದೂರಕ್ಕೆ ಕುಸುಮಾ ತಳ್ಳಿದ್ದಾಳೆ. ನೀನು ಮನೆಯ ಒಳಗೆ ಬರುವ ಅವಶ್ಯಕತೆ ಇಲ್ಲ, ಈಗಿಂದಿಗಲೇ ನೀನು ಮನೆಯಿಂದ ಹೊರಗೆ ಹೋಗು ಎಂದು ಅಂದಿದ್ದಾಳೆ. ತಾಂಡವ್ ತಂದಿದ್ದ ಬಟ್ಟೆಗಳೆಲ್ಲವನ್ನು ಸಹ ಅಮ್ಮ ಮುಖದ ಮೇಲೆ ಎಸೆದು ಇದನ್ನು ಸಹ ತೆಗೆದುಕೊಂಡು ಹೋಗು ಎಂದು ಹೇಳಿದ್ದಾಳೆ.

ಅಮ್ಮನ ಮುಖ ನೋಡುತ್ತ ನಿಂತ ತಾಂಡವ್

ನಿಜಕ್ಕೂ ತಾಂಡವ್ ತನ್ನ ಅಮ್ಮನಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅಮ್ಮ ನಾನು ಮನೆ ಒಳಗೆ ಬರದೆ ಎಲ್ಲಿಗೆ ಹೋಗಲಿ ಎಂದು ಕೇಳುತ್ತಾ ಇದ್ದಾನೆ. ಇದಕ್ಕೆ ಕುಸುಮಾ ನೀನು ಎಲ್ಲಿಗಾದರೂ ಹೋಗು ನಿನಗೆ ಮನೆಯಲ್ಲಿದ್ದ ಪೂಜೆಗಿಂತ ಹೊರಗಿನ ಕೆಲಸವೇ ಹೆಚ್ಚಾಗಿ ಹೋಯಿತು ಎಂದಿದ್ದಾಳೆ. ಮನೆಯಲ್ಲಿರುವ ಗುಂಡಣ್ಣ ಹಾಗೂ ಭಾಗ್ಯ, ಕುಸುಮಾ ಆಡುತ್ತಿರುವ ಮಾತುಗಳಿಂದ ಶಾಕ್ ಆಗಿದ್ದಾರೆ. ತಾಂಡವ್ ಅಮ್ಮನ ಕೋಪಕ್ಕೆ ಗುರಿಯಾಗಿದ್ದು ಈಗ ಹೇಗೆ ಆಕೆಯ ಕೋಪವನ್ನ ತಣ್ಣಗೆ ಮಾಡುತ್ತಾನೆ? ಅನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Bhagyalakshmi Kannada serial today Epipode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X