Bhagyalakshmi: ಭಾಗ್ಯ ಕೇಳಿದ ಪ್ರಶ್ನೆಗೆ ತಾಂಡವ್ ತಬ್ಬಿಬ್ಬು..? ಪೊಲೀಸ್ ಸ್ಟೇಷನ್‌ಗೆ ಹೋಗ್ತಾಳಾ ಕುಸುಮಾ..?
ತಾಂಡವ್ ಈಗ ಏನು ಮಾಡದೇ ಸುಮ್ಮನೆ ತನಗೇನು ಗೊತ್ತಿಲ್ಲ ಎಂಬ ರೀತಿಯಲ್ಲಿ ಇರಬೇಕು ಎಂದು ನಿರ್ಧಾರ ಮಾಡಿದ್ದಾನೆ. ಎಲ್ಲರಿಗೂ ಸಹ ಮತ್ತೆ ನನ್ನ ಮೇಲೆ ಸಂಶಯ ಬಂದಿದೆ, ಮಹೇಶ್‌ಗೆ ಕಾಲ್ ಮಾಡಿ ಸೀರೆ ತರಿಸಿಕೊಂಡರೂ ಸಮಸ್ಯೆ ಎದುರಾಗುತ್ತದೆ. ಇದಕ್ಕಾಗಿ ಕಂಡು ಕಾಣದಂತೆ ಇರಬೇಕು ಎಂದು ತಾಂಡವ್ ಅಂದುಕೊಂಡಿದ್ದಾನೆ.
ಒಂದುವೇಳೆ ತಾಂಡವ್ ಸುಮ್ಮನೆ ಇದ್ದರೂ ಅವರ ಅಮ್ಮ ಕುಸುಮ ಸುಮ್ಮನೆ ಇರಬೇಕಲ್ಲ. ತನ್ನ ಕಾಟನ್ ಸೀರೆ ಎಲ್ಲಿ ಹೋಗಿದೆ ಎಂದು ಪೇಚಾಡುತ್ತಾ ಇದ್ದಾಳೆ. ಇದಕ್ಕೆ ಸುನಂದಾ ಉಪ್ಪು ಖಾರ ಹಾಕಿ ತಾಂಡವ್ ಮೇಲೆ ಸಂಶಯ ಬರುವಂತೆ ಮಾಡುತ್ತಾ ಇದ್ದಾಳೆ. ಕುಸುಮಾ ಸಹ ಮಗನನ್ನು ಪ್ರಶ್ನೆ ಮಾಡುತ್ತಿದ್ದಾಳೆ. ಆ ಕಳ್ಳಿ ನನ್ನ ಸೀರೆ ಉಟ್ಟುಕೊಂಡು ಹೋಗುವಾಗ ನೀನು ಏನು ಮಾಡುತ್ತಾ ಇದ್ದೆ? ಕಳ್ಳಿಯನ್ನು ನೀನೇ ಮನೆಗೆ ಕರೆದುಕೊಂಡು ಬಂದ್ಯಾ ಹೇಗೆ ಎಂದು ಕೇಳಿದ್ದಾಳೆ.

ತಾಂಡವ್ ಎಲ್ಲರ ಬಾಯಿ ಮುಚ್ಚಿಸುವ ಚಿಂತೆ ಮಾಡಿದ್ದಾನೆ. ಹೇಗಾದರೂ ಮಾಡಿ ಬಂದಿರುವ ಸಮಸ್ಯೆಯಿಂದ ಪಾರಾಗಬೇಕು, ಇಲ್ಲದೆ ಇದ್ದರೆ ನನಗೆ ಉಳಿಗಾಲವಿಲ್ಲ ಎಂದು ಅಂದುಕೊಂಡು ಬೇರೆಯದ್ದೇ ಪ್ಲ್ಯಾನ್ ಮಾಡುತ್ತಾ ಇದ್ದಾನೆ. ಮನೆಯಲ್ಲಿರುವವರು ಸಹ ತಾಂಡವ್ ಒಂದು ರೀತಿ ಆಡುತ್ತಾ ಇರುವುದನ್ನು ನೋಡಿ ಒಂದು ರೀತಿಯಲ್ಲಿ ಇವನೇ ಕಳ್ಳನಂತೆ ಏಕೆ ಆಡುತ್ತಿದ್ದಾನೆ ಎಂದು ಅಂದುಕೊಂಡಿದ್ದಾರೆ.
ಮನೆಯಲ್ಲಿ ಪೂಜೆಗೂ ಸಹ ಬರಲಿಲ್ಲ ಈಗ ನೋಡಿದರೆ ಬಾಯಿಗೆ ಬಂದ ರೀತಿ ಮಾತನಾಡುತ್ತಾ ಇದ್ದಾನೆ. ಇವನಿಗೆ ಏನಾದರೂ ಸಮಸ್ಯೆ ಆಗಿದೆಯಾ ಎಂದುಕೊಂಡಿದ್ದಾರೆ. ಆದರೆ ತಾಂಡವ್, ಶ್ರೇಷ್ಠಾಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡು ವಿಲವಿಲ ಎಂದು ಒದ್ದಾಡುತ್ತಾ ಇದ್ದಾನೆ. ಯಾಕೆಂದರೆ ಶ್ರೇಷ್ಠಾಳಿಂದ ದೂರಾದರೂ ಹಿಂದೆ ಆಗಿರುವ ಎಡವಟ್ಟುಗಳಿಂದ ನೆಮ್ಮದಿ ಕೆಡುವಂತಾಗಿದೆ.
ತಾಂಡವ್‌ನನ್ನು ಪ್ರಶ್ನೆ ಮಾಡಿದ ಭಾಗ್ಯ
ಇದೀಗ ತಾಂಡವ್ ಬಳಿ ಬಂದ ಭಾಗ್ಯ ಯಾಕೆ ಬೆಳಗ್ಗಿನ ಜಾವ ಆ ರೀತಿ ಆಡುತ್ತಾ ಇದ್ರಿ? ಎಂದು ಕೇಳಿದ್ದಾಳೆ. ಏನೋ ಕನಸು ಬಿತ್ತು ಎಂದಾಗ, ಭಾಗ್ಯ ನೀವು ಮನಸಿನಲ್ಲಿ ಯಾವುದೋ ಸಮಸ್ಯೆ ಇಟ್ಟುಕೊಂಡು ಯಾಕೆ ಒದ್ದಾಡುತ್ತಾ ಇದ್ದೀರಾ? ನಮ್ಮ ಬಳಿ ನಿಮ್ಮ ಮನಸ್ಸಿನಲ್ಲಿರುವ ಸಮಸ್ಯೆ ಹೇಳಿಕೊಳ್ಳಿ ಎಂದಿದ್ದಾಳೆ. ಇದಕ್ಕೆ ತಾಂಡವ್, ಭಾಗ್ಯಳ ಮೇಲೆ ರೇಗಿದ್ದಾನೆ. ನಾನು ಸುಮ್ಮನೆ ಇದ್ದೇನೆ ಎಂದು ಬಾಯಿ ಮುಂದು ಮಾಡಬೇಡ, ನನ್ನನ್ನೇ ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದು ಬಿಟ್ಯಾ ಎಂದು ಭಾಗ್ಯಗೆ ಜೋರು ಮಾಡಿದ್ದಾನೆ.

ಗಢ ಗಢ ನಡುಗಿದ ತಾಂಡವ್
ತಾಂಡವ್ ಬಳಿ ಭಾಗ್ಯ ನೀವು ಏನೋ ಸುಳ್ಳನ್ನ ಮುಚ್ಚಿ ಇಡುತ್ತಿದ್ದೀರಾ ಎಂಬುವುದು ನನಗೆ ತಿಳಿದಿದೆ. ಸಾಕಷ್ಟು ಸುಳ್ಳುಗಳನ್ನ ಹೇಳಿ ನೀವು ಈ ರೀತಿ ಆಡುತ್ತಾ ಇದ್ದೀರಾ. ನಿಮ್ಮನ್ನೇ ಒಮ್ಮೆ ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ, ನೀವು ಯಾವ ರೀತಿ ಇದ್ದೀರಾ ಎಂಬುದನ್ನು ಅದೇ ಹೇಳುತ್ತದೆ. ತದನಂತರ ನನಗೆ ಬೈಯಲು ಬನ್ನಿ ಎಂದು ಹೇಳಿದ್ದಾಳೆ. ತಾಂಡವ್ ಇವಳೇನು ಮನಸ್ಸಿನಲ್ಲಿರುವುದನ್ನು ಓದುತ್ತಾಳಾ ಎಂದು ಕೊಂಡಿದ್ದಾನೆ. ಕೊನೆಗೆ ಭಾಗ್ಯ ಕಾಫಿ ಟೇಬಲ್ ಮೇಲೆ ಇಟ್ಟು ತಾಂಡವ್ ಒಬ್ಬನೇ ಬಿಟ್ಟು ಕೆಳಗಡೆ ಹೋಗಿದ್ದಾಳೆ. ತಾಂಡವ್‌ಗೆ ಭಯ ಶುರುವಾಗಿದೆ.
ಸೀರೆ ಹುಡುಕುವುದರಲ್ಲಿ ಮಗ್ನಳಾದ ಕುಸುಮ
ಕುಸುಮಾ ತನ್ನ ಕಾಟನ್ ಸೀರೆ ಎಲ್ಲಿ ಹೋಯಿತು ಎಂದು ಹುಡುಕಾಡುತ್ತಾ ಇದ್ದಾಳೆ. ಕೊನೆಗೆ ರೂಮ್‌ಗೆ ಬಂದ ಸುನಂದಾ ಬನ್ನಿ ಬೀಗತ್ತಿ ತಿಂಡಿ ತಿನ್ನಿ ಎಂದು ಕರೆದಿದ್ದಾಳೆ. ಆದರೆ ಕುಸುಮಾಗೆ ಮಾತ್ರ ತನ್ನ ಸೀರೆ ಎಲ್ಲಿ ಹೋಯಿತು? ಎಂಬ ಚಿಂತೆ ಕಾಡುತ್ತಿದೆ. ಇದೇ ಸರಿಯಾದ ಸಮಯ ಎಂದುಕೊಂಡ ಸುನಂದ ನನ್ನ ಮಗಳು ಎಲ್ಲವನ್ನ ಸರಿಯಾದ ರೀತಿಯಲ್ಲಿ ಇಡುತ್ತಾಳೆ, ಅವಳಿಗೆ ಜವಾಬ್ದಾರಿ ಇದೆ. ಆದರೆ ನಿಮ್ಮ ಮಗ ತಾಂಡವ್ ಏನೋ ಮಾಡಿದ್ದಾನೆ ಎಂದಿದ್ದಾಳೆ.
ಕುಸುಮಾಗೆ ಮತ್ತಷ್ಟು ಅನುಮಾನ
ಮನೆಗೆ ಬಂದಿದ್ದ ಕಳ್ಳಿಯೇ ಸೀರೆಯನ್ನ ತೆಗೆದುಕೊಂಡು ಹೋಗಿರುವುದು. ನೀವು ತಾಂಡವ್‌ನನ್ನು ಇನ್ನೊಮ್ಮೆ ವಿಚಾರ ಮಾಡಿ ಎಂದು ಸುನಂದಾ ಹೇಳಿದ್ದಾಳೆ. ಕುಸುಮಾಗೆ ಇದೇ ಸರಿ ಎನಿಸಿದೆ. ತಾಂಡವ್ ಮತ್ತೊಮ್ಮೆ ಸಂಕಷ್ಟಕ್ಕೆ ಸಿಕ್ಕಿ ಬೀಳ್ತಾನಾ? ನೋಡಬೇಕಾಗಿದೆ.


Click it and Unblock the Notifications











