Bhagyalakshmi: ಭಾಗ್ಯಗೆ ಶಾಲೆಯಿಂದ ಗೇಟ್ ಪಾಸ್..?! ಆಕೆಯ ಓದಿನ‌ ಗತಿಯೇನು..?

By ಶೃತಿ ಹರೀಶ್ ಗೌಡ

ಕನ್ನಿಕಾ ಯಾರಿಗೋ ತಮ್ಮ ಶಾಲೆಯ ಸೀಟನ್ನು ಕೊಡಬೇಕಾಗಿತ್ತು. ಆದರೆ ಕನ್ನಿಕಾ ತಂದೆ ಭಾಗ್ಯಗೆ ಸೀಟ್ ಕೊಟ್ಟಿದ್ದರು. ಕೊನೆಗೂ ಕನ್ನಿಕಾ ಬಳಿ ಹೋರಾಡಿ ಭಾಗ್ಯ ಗೆಲುವು ಪಡೆದಿದ್ದಳು. ಆದರೆ ಯೂನಿಫಾರ್ಮ್ ವಿಷಯವನ್ನು ಇಟ್ಟುಕೊಂಡು ಕನ್ನಿಕಾ ಭಾಗ್ಯಗೆ ವಾರ್ನಿಂಗ್ ಮಾಡಿದ್ದಳು.

ಶಾಲೆಯ ಆಡಳಿತ ಯಾವ ನಿಯಮಗಳನ್ನು ಜಾರಿಗೆ ತಂದಿದೆ ಅದರ ಪ್ರಕಾರ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ನೀನು ಯೂನಿಫಾರ್ಮ್ ಹಾಕಿಕೊಂಡು ಮಾತ್ರ ಶಾಲೆಗೆ ಬರಬೇಕು. ಇಲ್ಲದಿದ್ದರೇ ನಿನ್ನ ಅಡ್ಮಿಶನ್ ಕ್ಯಾನ್ಸಲ್ ಮಾಡುವುದಾಗಿ ಹೇಳಿದಳು. ಎಲ್ಲಾ ಜಂಜಾಟಗಳ ನಡುವೆ ಭಾಗ್ಯ ಶಾಲೆಗೆ ಎರಡು ದಿನ ರಜೆಯನ್ ತೆಗೆದುಕೊಂಡು ಅತ್ತೆಯ ಸೇವೆ ಮಾಡಿ ಮತ್ತೆ ಶಾಲೆಗೆ ಮರಳಿದ್ದಾಳೆ.‌

Bhagyalakshmi Kannada serial Written Update on October 17th episode

ಮನೆಯಲ್ಲಿ ತಾಂಡವ್ ಅಮ್ಮನ ಸೀರೆ ಕಳುವಾಗಿದ್ದರ ಬಗ್ಗೆ ಟೆನ್ಶನ್ ಮಾಡಿಕೊಂಡಿದ್ದಾನೆ. ನಾನೇ ಆ ಸೀರೆ ಸುಂದರಿಗೆ ಕೊಟ್ಟಿದ್ದು ಈಗ ಅದೇ ತರಹ ಸೀರೆಯನ್ನು ಆರ್ಡರ್ ಮಾಡಿ ಬಂದ ತಕ್ಷಣವೇ ಅಮ್ಮನ ವಾರ್ಡ್ರೋಬ್‌ಗೆ ಇಡಬೇಕು. ಇದೊಂದೇ ಈ ಸಮಸ್ಯೆಗೆ ಇರುವ ಪರಿಹಾರ ಎಂದುಕೊಂಡು ಅದೇ ರೀತಿಯ ಸೀರೆ ಆರ್ಡರ್ ಮಾಡಿದ್ದಾನೆ.

ಅಮ್ಮನ ಬಳಿ ಬಂದ ತಾಂಡವ್ ನಾನು ಆಫೀಸ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾನೆ. ಕುಸುಮಾ ಕೋಪದಿಂದ ಬೈದಿದ್ದಾಳೆ. ಬರೀ ಆಫೀಸ್ ಗೆ ಹೋಗಿ ಬರುವುದಲ್ಲ. ಸರಿಯಾದ ಸಮಯಕ್ಕೆ ಮನೆಗೆ ಬರಬೇಕು ಎಂದು ಹೇಳಿದ್ದಾಳೆ. ತಾಂಡವ್ ಸರಿ ಎಂದು ಹೇಳಿ ಹೊರಟ್ಟಿದ್ದಾನೆ.

ಭಾಗ್ಯ ತನ್ನ ಗಂಡನ ಜೊತೆಯಲ್ಲಿ ಶಾಲೆಗೆ ಬಂದಿದ್ದಾಳೆ. ಗುಂಡಣ್ಣ ತಾತನ ಜೊತೆ ಶಾಲೆಗೆ ಹೋಗಿದ್ದಾನೆ. ಈ ವೇಳೆ ತನ್ವಿ, ಅಮ್ಮ ನೀನು ಯೂನಿಫಾರ್ಮ್ ಹಾಕಿಲ್ಲ, ನೀನು ಯುನಿಫಾರ್ಮ್ ಹಾಕಿಕೊಂಡು ಬಂದಿಲ್ಲ ಎಂದರೆ ನಿನ್ನನ್ನ ಶಾಲೆಗೆ ಸೇರಿಸುವುದಿಲ್ಲ ಎಂದು ಹೇಳಿದ್ದರು. ಈಗ ನೀನು ಏನು ಮಾಡ್ತೀಯಾ ಎಂದು ಕೇಳಿದ್ದಾಳೆ. ತನ್ವಿಯ ಪ್ರಶ್ನೆಗೆ ಭಾಗ್ಯ ಏನು ಮಾತನಾಡದೇ ಶಾಲೆಗೆ ಹೋಗಿದ್ದಾಳೆ. ಕೊನೆಗೆ ಕನ್ನಿಕಾ ರೂಮಿಗೆ ಹೋಗಿರುವ ಭಾಗ್ಯ, ಆಕೆಯ ಬಳಿ ಮಾತನಾಡಬೇಕು ಎಂದುಕೊಂಡಿದ್ದಾಳೆ.

ಭಾಗ್ಯ ಮಾತಿಗೆ ಸೊಪ್ಪು ಹಾಕದ ಕನ್ನಿಕಾ

ಮೊದಲಿನಿಂದಲೂ ಭಾಗ್ಯ ಮೇಲೆ ಕನ್ನಿಕಾಗೆ ಕೋಪವಿತ್ತು ಯಾಕೆಂದರೆ ತಾನು ಬೇರೆಯವರಿಗೆ ಶಾಲೆಯಲ್ಲಿ ಸೀಟು ಕೊಡುವುದಾಗಿ ಹೇಳಿದ್ದಳು.‌ ಆ ಸೀಟನ್ನು ಕನ್ನಿಕಾ ತಂದೆ ಭಾಗ್ಯಗೆ ನೀಡಿದ್ದರು. ಕನ್ನಿಕಾ ಭಾಗ್ಯಳನ್ನು ಶಾಲೆಯಿಂದ ಓಡಿಸಬೇಕು ಎಂದು ಏನೇನೋ ಪ್ರಯತ್ನ ಮಾಡಿದರೂ ಓಡಿಸಲು ಸಾಧ್ಯವಾಗಲಿಲ್ಲ. ಕೊನೆಯ ಅಸ್ತ್ರವಾಗಿ ಯೂನಿಫಾರ್ಮ್ ವಿಚಾರ ತೆಗೆದಿದ್ದಾಳೆ.‌ ನೀನು ಯೂನಿಫಾರ್ಮ್ ಹಾಕಿಕೊಂಡು ಬಂದರೆ ಮಾತ್ರ ಶಾಲೆಗೆ ಸೇರಿಸುವುದಾಗಿ ಹೇಳಿದ್ದಳು. ಈಗ ಶಾಲೆಗೆ ಭಾಗ್ಯ ಯೂನಿಫಾರ್ಮ್ ಧರಿಸದೆ ಬಂದಿದ್ದು ಕನ್ನಿಕಾ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಭಾಗ್ಯ ಮಾತಿಗೆ ಸೊಪ್ಪು ಹಾಕದ ಕನ್ನಿಕಾ

ಕನ್ನಿಕಾ ಬಳಿ ಬಂದ ಭಾಗ್ಯ ನಾನು ಈ ವಯಸ್ಸಿನಲ್ಲಿ ಯುನಿಫಾರ್ಮ್ ಹಾಕುವುದು ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾಳೆ. ಇದಕ್ಕೆ ಕನ್ನಿಕಾ, ಭಾಗ್ಯಳನ್ನ ಅವಮಾನಿಸಿದ್ದಾಳೆ. ಈ ವಯಸ್ಸಿನಲ್ಲಿ ಓದಲು ಬಂದು ನಮ್ಮ ಶಾಲೆಯ ಮರ್ಯಾದೆ ತೆಗೆಯುತ್ತಾ ಇದ್ದೀಯಾ. ಯೂನಿಫಾರ್ಮ್ ಹಾಕದೆ ಬಂದರೆ ಈ ಶಾಲೆಗೆ ಎಂಟ್ರಿ ಇಲ್ಲ ಎಂಬ ನಿಯಮವಿದೆ ಅದನ್ನು ಪಾಲಿಸಿದರೆ ಮಾತ್ರ ಈ ಶಾಲೆಯಲ್ಲಿ ಓದಲು ಅವಕಾಶವಿದೆ. ನೀನು ಯೂನಿಫಾರ್ಮ್ ಹಾಕಲು ಆಗಲಿಲ್ಲವೆಂದರೆ ಇಲ್ಲಿಂದ ಹೊರಡು. ನೀನು ಹೊರಡದೇ ಇದ್ದರೆ ಸೆಕ್ಯೂರಿಟಿ ಕರೆದು ನಿನ್ನನ್ನ ಹೊರಗಡೆ ಹಾಕಿಸಬೇಕಾಗುತ್ತದೆ ಎಂದು ಭಾಗ್ಯಳಿಗೆ ಅವಮಾನ ಮಾಡಿದ್ದಾಳೆ.

ಭಾಗ್ಯ ಓದಿನ ಗತಿಯೇನು ಮುಂದೆ?

ಈಗ ಭಾಗ್ಯಳನ್ನು‌ ಶಾಲೆಯಿಂದ ಕನ್ನಿಕಾ ಹೊರಗಡೆ ಹಾಕಿದ್ದು ಭಾಗ್ಯಳ ಓದು ಅರ್ಧಕ್ಕೆ ನಿಂತು ಹೋಗುತ್ತದಾ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಕಾಡುತ್ತಿದೆ.‌ ಇಲ್ಲ ಕುಸುಮಾ ಬಂದು ಕನ್ನಿಕಾಗೆ ಬುದ್ದಿ ಹೇಳಿ ಸೊಸೆಯ ಓದಿಗೆ ಸಹಾಯ ಮಾಡುತ್ತಾಳಾ ಎಂದು ಪ್ರೇಕ್ಷಕರು ಕಾಯುತ್ತಾ ಇದ್ದಾರೆ.

More from Filmibeat

English summary
Bhagyalakshmi Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X