Bhagyalakshmi: ಭಾಗ್ಯ ನೆರವಿಗೆ ಮಂಗಳ ಗೌರಿ: ಮತ್ತೆ ಶಾಲೆಯಲ್ಲಿ ಓದು ಮುಂದುವರಿಸುತ್ತಾಳ ಭಾಗ್ಯ..?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿ ದಿನಕ್ಕೊಂದು ತಿರುವನ್ನು ಪಡೆದುಕೊಂಡು ಪ್ರೇಕ್ಷಕರ ಮನ ಗೆದ್ದಿದೆ. ಟಿಆರ್‌ಪಿಯಲ್ಲೂ ಸಹ ಉತ್ತಮ ಸ್ಥಾನ ಪಡೆದಿದೆ. ಇನ್ನೂ ಭಾಗ್ಯ ಓದಲು ಶುರು ಮಾಡಿದಾಗ ಹಲವು ಪ್ರೇಕ್ಷಕರು ಖುಷಿಪಟ್ಟಿದ್ದರು. ಕುಸುಮಾ ನಿರ್ಧಾರ ಸರಿಯಾಗಿ ಇದೆ ಎಂದು ಹಾಡಿ ಹೊಗಳಿದ್ದರು.

ಭಾಗ್ಯ ಶಾಲೆಗೆ ಬಂದಾಗ ಮಗಳು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾಳೆ ಎಂದು ಪತ್ತೆ ಮಾಡಿದಾಗ ತಾಯಿಯ ಸ್ಥಾನ ಎಂತಹದ್ದು ಎಂದು ಹೊಗಳಿದರು. ಗಂಡ ದಾರಿ ತಪ್ಪಿದ್ದಾನೆ ಎಂಬುವುದು ಭಾಗ್ಯಗೆ ಗೊತ್ತಿತ್ತು‌. ಆದರೂ ಸಹ ತನ್ನ ಸಂಸಾರ ಹಾಳಾಗಬಾರದು ಎಂದು ಅತ್ತೆಯ ಮುಂದೆ ಗಂಡನನ್ನು ಬಿಟ್ಟು ಕೊಡಲಿಲ್ಲ. ಇದಕ್ಕೂ ಸಹ ಭಾಗ್ಯ ಸಹ ಧರ್ಮೀಣಿಯಾಗಿ ಗಂಡನಿಗೆ ಒಳ್ಳೆಯದನ್ನೇ ಮಾಡುತ್ತಿದ್ದಾಳೆ ಎಂದರು.

Bhagyalakshmi Kannada serial Written Update on October 19th episode

ಈಗ ಭಾಗ್ಯ ಓದುವುದಕ್ಕೆ ಕನ್ನಿಕಾ ಕುತ್ತು ತಂದಿದ್ದಾಳೆ. ಭಾಗ್ಯ ಶಾಲೆಗೆ ಬರಬೇಕು ಎಂದರೆ ಯೂನಿಫಾರ್ಮ್ ಹಾಕಿಕೊಂಡೆ ಬರಬೇಕು ಇಲ್ಲದಿದ್ದರೆ ಶಾಲೆಗೆ ಸೇರಿಸುವುದಿಲ್ಲ. ಶಾಲೆಯ ನಿಯಮಗಳನ್ನ ಪಾಲಿಸಲೇಬೇಕು ಎಂದು ಕನ್ನಿಕಾ ಬಿಗಿಪಟ್ಟು ಹಿಡಿದಿದ್ದಳು. ಆದರೆ ಕುಸುಮಾಗೆ ಭಾಗ್ಯ ಯೂನಿಫಾರ್ಮ್ ಹಾಕಿಕೊಂಡು ಶಾಲೆಗೆ ಹೋಗುವುದು ಸ್ವಲ್ಪವೂ ಇಷ್ಟವಿಲ್ಲ.

ಅತ್ತೆಯ ಮಾತಿಗೆ ವಿರುದ್ಧವಾಗಿ ಭಾಗ್ಯ ಎಂದು ಸಹ ನಡೆದುಕೊಂಡಿಲ್ಲ. ಇದಕ್ಕಾಗಿ ನಾನು ಯುನಿಫಾರ್ಮ್ ಹಾಕೋದಿಲ್ಲ ಎಂದು ಹೇಳಿದಳು. ಇನ್ನೂ ಶಾಲೆಗೆ ಬಂದ ಭಾಗ್ಯ, ಕನ್ನಿಕಾಳನ್ನ ಕನ್ವಿನ್ಸ್ ಮಾಡಲು ನೋಡಿದಾಗ ಕನ್ನಿಕಾ ಇದೇನು ಮಾರ್ಕೆಟ್ ಅಲ್ಲ, ರಿಯಾಯಿತಿ ಕೊಡಲು ನೀನು ಇಲ್ಲಿಂದ ಹೊರಗೆ ಹೋಗು ಎಂದು ಕಠೋರವಾಗಿ ನಡೆದುಕೊಂಡಿದ್ದಳು. ಭಾಗ್ಯ‌ ಸಪ್ಪೆ ಮೊರೆ ಹಾಕಿಕೊಂಡು ಶಾಲೆಯಿಂದ ಹೊರಗೆ ಬಂದಿದ್ದಾಳೆ.

ಚಿಂತೆಯಿಂದ ಹೊರಗಡೆ ನಿಂತ ಭಾಗ್ಯ

ಕನ್ನಿಕಾ ಹೊರಗಡೆ ಹೋಗು ಎಂದ ಕೂಡಲೇ ಭಾಗ್ಯ ಏನು ಮಾತನಾಡಬೇಕು ಎಂದು ತಿಳಿದಿಲ್ಲ. ಭಾಗ್ಯ ತಾನಾಗಿಯೇ ಹೊರ ಬಂದಿದ್ದಾಳೆ. ಈ ವೇಳೆ ಇದನೆಲ್ಲಾ ತಡೆಯಲು‌ ಯಾರಿದ್ದಾರೆ ಎಂದು ಶಾಲೆಯ ಹೊರಗಡೆ ಬಂದಿದ್ದಾಳೆ. ಈ ವೇಳೆ ಮಂಗಳಗೌರಿ ಖ್ಯಾತಿಯ ಕಾವ್ಯಶ್ರೀ ಭಾಗ್ಯಳ ನೆರವಿಗೆ ಬಂದಿದ್ದಾರೆ. ನಾನು ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಭಾಗ್ಯಗೆ ಭರವಸೆ ನೀಡಿದ್ದಾರೆ. ಇದಕ್ಕೆ ಭಾಗ್ಯ ನೀವು ಯಾರು ಎಂದು ಕೇಳಿದ್ದಾಳೆ. ನಾನು ಇಲ್ಲಿ ಎಲ್ಲವನ್ನ ಸರಿ ಮಾಡಲು ಬಂದಿರುವವಳು ಎಂದು ಮಂಗಳ ಗೌರಿ ಹೇಳಿದ್ದಾರೆ.

ಭಾಗ್ಯಳ ಭಯ ದೂರ ಮಾಡಿದ ಮಂಗಳಗೌರಿ

ನೀನು ಇಷ್ಟು ಬೇಗ ಸೋತು ಹೊರಗೆ ಹೇಗೆ ಬಂದೆ? ಎಂದಾಗ ನಾನು ಏನು ತಾನೇ ಮಾತನಾಡಲು ಸಾಧ್ಯ. ಇಲ್ಲಿ ಹಣವಿರುವವರಷ್ಟೇ ಮಾತನಾಡುತ್ತಾರೆ ಎಂದು ನೋವಿನಿಂದ ಭಾಗ್ಯ ನುಡಿದಿದ್ದಾಳೆ. ನಾನು ನಿನ್ನ ಜೀವನದಲ್ಲಿ ಪ್ರತಿಯೊಂದನ್ನು ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದಾಗ ಭಾಗ್ಯಗೆ ಸಂತೋಷವಾಗಿದೆ.‌ ಆದರೂ ಸಹ ನನ್ನ ಸಹಾಯಕ್ಕೆ ಬಂದಿರುವವರು ಯಾರು ಎಂಬ ಅನುಮಾನ ಗಾಢವಾಗಿದೆ. ನಿನ್ನ ಎಲ್ಲಾ ಕೆಲಸವನ್ನ ನಾನು ಮಾಡಿಸುತ್ತೇನೆ ನಡೆ ಇಲ್ಲಿಂದ ಎಂದು ಹೇಳಿದಾಗ ಭಾಗ್ಯ ಸಂತಸಪಟ್ಟಿದ್ದಾಳೆ. ಇಂದಿನ ಮಹಾ ಸಂಚಿಕೆಯಲ್ಲಿ ಭಾಗ್ಯಾಳ ಬದುಕೇ ಬದಲಾಗಲಿದೆ.

ಭಾಗ್ಯಗೆ ಧೈರ್ಯ ತುಂಬಿದ ಮಂಗಳ ಗೌರಿ

ನಿನ್ನ ಅತ್ತೆ ನಿನ್ನನ್ನ ಇಷ್ಟೊಂದು ಕಷ್ಟಪಟ್ಟು ಶಾಲೆಗೆ ಸೇರಿಸಬೇಕಾಗಿತ್ತಾ? ಅವರ ಆಸೆಗೆ ತಣ್ಣೀರು ಎರಚಿ ನೀನು ಇಲ್ಲಿಂದ ನಡೆದು ಬಿಡ್ತೀಯಾ? ಎಂದು ಮಂಗಳ ಗೌರಿ ಭಾಗ್ಯಗೆ ಪ್ರಶ್ನೆ ಮಾಡಿದ್ದಾರೆ. ನಿನ್ನ ಮಗಳನ್ನ ಸರಿದಾರಿಗೆ ತರುವ ಪ್ರಯತ್ನ ಎಲ್ಲಿ ಹೋಗುತ್ತದೆ? ಅದನ್ನು ಕೂಡ ನೀನು ಯೋಚನೆ ಮಾಡಬೇಕು ತಾನೇ. ನೀನು ಈ ಶಾಲೆಯಲ್ಲಿ ಕಲಿಯಬೇಕು ಎಂದು ಹೇಳಿದ್ದಾರೆ.

ಶಾಲೆಗೆ ಮತ್ತೆ ಸೇರುತ್ತಾಳ ಭಾಗ್ಯ..!

ಮಂಗಳ ಗೌರಿ ಮಾತಿನಿಂದ ಭಾಗ್ಯಗೆ ತುಂಬಾ ಧೈರ್ಯ ಬಂದಿದೆ. ನಡಿ ಶಾಲೆಗೆ ಹೋಗೋಣ, ನೀನು ಮತ್ತೆ ಶಾಲೆಗೆ ಸೇರಿ ನಿನ್ನ ಬದುಕನ್ನು ಮಾಡಿಕೊಳ್ಳುವಂತೆ ನಾನು ಮಾಡುತ್ತೇನೆ ಎಂದು ಶಾಲೆಯ ಒಳಗಡೆ ಮಂಗಳಗೌರಿ, ಭಾಗ್ಯಳನ್ನ ಕರೆದುಕೊಂಡು ಹೋಗಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಭಾಗ್ಯಗೆ ಒಳ್ಳೆಯದನ್ನೇ ಮಾಡಲು ಮಂಗಳ ಗೌರಿ ಭಾಗ್ಯಲಕ್ಷ್ಮಿ ಕಥೆಯಲ್ಲಿ ಎಂಟ್ರಿ ಕೊಟ್ಟಿರುವುದು ಗೊತ್ತಾಗುತ್ತಿದೆ.

More from Filmibeat

English summary
Bhagyalakshmi Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X