Bhagyalakshmi: ತಾಂಡವ್‌ ಬಗ್ಗೆ ಕೆಟ್ಟದಾಗಿ ಮಾತನಾಡಿದ ಪೂಜಾ..! ಗಂಡನ ಮೇಲೆ ಭಾಗ್ಯಗೆ ಅನುಮಾನ..?

By ಶೃತಿ ಹರೀಶ್ ಗೌಡ

ಮನೆಯಲ್ಲಿ ತಾಂಡವ್‌ ಬಗ್ಗೆ ಯಾರಿಗೂ ಸಹ ಒಳ್ಳೆಯ ಅಭಿಪ್ರಾಯ ಇಲ್ಲ. ಮೊದಲು ತಾಂಡವ್ ಮೇಲೆ ಸುನಂದಾ ಅನುಮಾನ ವ್ಯಕ್ತಪಡಿಸಿದ್ದರು. ಇವನು ಸರಿ ಇಲ್ಲ, ಬೇರೆಯೊಬ್ಬಳನ್ನ ಪ್ರೀತಿ ಮಾಡುತ್ತಾ ಇದ್ದಾನೆ, ನನ್ನ ಮಗಳನ್ನು ಕಂಡರೆ ಇವನಿಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ನಿಮ್ಮ ಒತ್ತಾಯಕ್ಕೆ ಮದುವೆಯಾಗಿರೋದು ಎಂದೆಲ್ಲ ಕುಸುಮ ಮುಂದೆ ಸುನಂದಾ ಹೇಳಿದ್ದಳು.

ಭಾಗ್ಯಗೂ ಎಲ್ಲಾ ವಿಷಯ ಗೊತ್ತು. ತಾಂಡವ್ ತನ್ನ ಹಳೇ ಪ್ರೀತಿ ಯಾವುದು ಎಂದು ಹೇಳಿದನು. ಇದೆ ವೇಳೆ ಭಾಗ್ಯ ಮೇಲೆ ಆಣೆ ಮಾಡಿ ನನಗೆ ಯಾವುದೇ ರೀತಿಯಲ್ಲಿ ಯಾರ ಜೊತೆಗೂ ಸಹ ಪ್ರೀತಿ ಇಲ್ಲ ಎಂದು ಹೇಳುವ ಮೂಲಕ ಮನೆಯಲ್ಲಿ ಆಗಿದ್ದ ವಿವಾದಕ್ಕೆ ತೆರೆ ಎಳೆದಿದ್ದನು.

Bhagyalakshmi-serial

ಭಾಗ್ಯ ತಾಂಡವ್ ಮೇಲೆ ಅಲ್ಪ ಸ್ವಲ್ಪ ಗೌರವವನ್ನು ಹೊಂದಿದ್ದಳು‌. ತಾಂಡವ್‌ನ ಇನ್ನೊಂದು ಮುಖ ಗೊತ್ತಾದ ಮೇಲೆ ತಾನೇ ಗಂಡನಿಗೆ ಎದುರು ಮಾತನಾಡುವಷ್ಟು ಧೈರ್ಯ ಬೆಳೆಸಿಕೊಂಡಿದ್ದಳು. ಈಗ ಪೂಜಾ ಆಡಿರುವ ಮಾತಿನಿಂದ ಭಾಗ್ಯ ಮನಸ್ಸಿನಲ್ಲೂ ಕೂಡ ಅನುಮಾನದ ಬೀಜ ಬಿದ್ದಿದೆ. ಇನ್ನು ಇದಕ್ಕೂ ಮೊದಲೇ ಭಾಗ್ಯಗೆ ಕಳ್ಳಿ ಮನೆಗೆ ಬಂದು ಸಾಮಗ್ರಿಗಳನ್ನೆಲ್ಲ ಕಳ್ಳತನ ಮಾಡಿಕೊಂಡು ಹೋದಾಗಲು ಸಹ ಗಂಡನ ಮೇಲೆ ಅನುಮಾನ ಬಂದಿತ್ತು. ತದನಂತರ ಮರೆತು ಸುಮ್ಮನಾಗಿದ್ದಳು. ಈಗ ಪೂಜಾ ಆಡಿರುವ ಆ ಒಂದು ಮಾತು ಭಾಗ್ಯಳ ಮನಸ್ಸಿನಲ್ಲಿ ಕಿಡಿ ಹೊತ್ತಿಸಿದೆ.

ಭಾಗ್ಯ ಶಾಲೆಯಿಂದ ಬಂದಿದ್ದಾಳೆ. ಜೊತೆಗೆ ದುರ್ಗೆ ಸಹ ಬಂದಿದ್ದು ಕುಸುಮಾಗೆ ಇವರು ಯಾರು ಎಂಬ ಪ್ರಶ್ನೆ ಮೂಡಿದೆ. ಇದೆ ವೇಳೆ ಭಾಗ್ಯ ಎಲ್ಲದಕ್ಕೂ ಉತ್ತರ ನೀಡಿದ್ದಾಳೆ. ನಂತರ ಪೂಜಾ ಜೊತೆಯಲ್ಲಿ ತಾನು ಸಹ ರೆಡಿಯಾಗಲು ಹೋಗಿದ್ದಾಳೆ. ಇದೇ ವೇಳೆ ಪೂಜಾ ತನ್ನ ಅಕ್ಕನಿಗೆ ಅಲಂಕಾರ ಮಾಡಿ ದೃಷ್ಟಿಯನ್ನು ತೆಗೆದಿದ್ದಾಳೆ. ದೃಷ್ಟಿ ತೆಗೆದ ನಂತರ ನೀನು ಇಷ್ಟು ಚೆನ್ನಾಗಿ ರೆಡಿಯಾದರೆ ಬಾವ ಯಾಕೆ ಬೇರೆಯವರ ಹಿಂದೆ ಹೋಗುತ್ತಾರೆ ಎಂದಿದ್ದಾಳೆ. ಪೂಜಾಳ ಮಾತು ಭಾಗ್ಯಳಲ್ಲಿ ಒಂದು ಅವ್ಯಕ್ತ ಭಯ ಉಂಟುಮಾಡಿದೆ.

Bhagyalakshmi-serial

ಪೂಜಾ ಮಾತಿಗೆ ಶಾಕ್ ಆದ ಭಾಗ್ಯ

ಭಾಗ್ಯ, ತಾಂಡವ್‌ನ ಎರಡನೇ ಮುಖ ನೋಡಿದ ಮೇಲೆ ಆತನ ಬಗ್ಗೆ ಯಾವುದೇ ರೀತಿಯ ಕನಿಕರವನ್ನು ತೋರುಸ್ತಾ ಇರಲಿಲ್ಲ. ಗಂಡ ಮಕ್ಕಳ ಎದುರು ಸಣ್ಣವನಾಗಬಾರದು ಎಂದು ತಾಂಡವ್ ಪರವಾಗಿ ಇದ್ದಳು. ಈಗ ಪೂಜಾ ಆಡಿರುವ ಮಾತಿನಿಂದ ಒಂದು ರೀತಿಯ ಶಾಕ್‌ಗೆ ಒಳಗಾಗಿದ್ದಾಳೆ. ‌ಅಂದು ಅಮ್ಮ ತಾಂಡವ್ ಮೇಲೆ ಆಪಾದನೆ ಮಾಡಿದರು. ಈಗ ನೋಡಿದರೆ ಪೂಜಾ, ತಾಂಡವ್‌ ಬಗ್ಗೆ ಮಾತನಾಡುತ್ತಾ ಇದ್ದಾಳೆ ಎಂದುಕೊಂಡಿದ್ದಾಳೆ. ಪೂಜಾ ಬಳಿ ಎನು ಅಂದೆ ಎಂದು ಕೇಳಿದ್ದಕ್ಕೆ ಅಕ್ಕ ಅಮ್ಮ ಆ ರೀತಿ ಹೇಳುತ್ತಾ ಇದ್ರಲ್ಲ ಅದಕ್ಕೆ ನಾನು ಸಹ ಪ್ಲೋನಲ್ಲಿ ಹೇಳಿದೆ ಎಂದು ಹೇಳಿ ರೂಮ್‌ನಿಂದ ಹೊರಗಡೆ ಹೋಗಿದ್ದಾಳೆ.

ತಾಂಡವ್ ಮೇಲೆ ಬಂತಾ ಅನುಮಾನ?

ಭಾಗ್ಯ ಈಗ ಪೂಜಾ ಹೇಳಿದ ಮಾತಿನ ಬಗ್ಗೆ ಯೋಚನೆ ಮಾಡುತ್ತಾ ಇದ್ದಾಳೆ. ಅಂದು ಅಮ್ಮ ಸಹ ಇದೇ ರೀತಿ ಮಾತನಾಡಿದರು, ಈಗ ಪೂಜಾ ಸಹ ಇದೇ ರೀತಿ ಹೇಳುತ್ತಿದ್ದಾಳೆ. ಹಾಗಾದರೆ ತಾಂಡವ್ ಏನಾದರೂ ತಪ್ಪು ಮಾಡುತ್ತಾ ಇದ್ದಾರಾ? ಎಂದು ಭಾಗ್ಯಾಗೆ ಅನುಮಾನ ಬಂದಿದೆ. ಅಮ್ಮ ಅಂದರೂ ಸಹ ಪೂಜಾ ಮಾತ್ರ ಅಪ್ಪಿ ತಪ್ಪಿಯು ಆ ರೀತಿ ಹೇಳೋದಿಲ್ಲ, ಆ ರೀತಿ ಹೇಳಿದ್ದಾಳೆ ಎಂದರೆ ಇಲ್ಲಿ ಏನು ನಡೆದಿದೆ ಎಂದು ಅರ್ಥ ಎಂದುಕೊಂಡು ಭಾಗ್ಯ ಈಗ ಯೋಚಿಸುತ್ತಿದ್ದಾಳೆ.

ತಾಂಡವ್‌ ಪೀಡಿಸುತ್ತಿರುವ ಶ್ರೇಷ್ಠ

ಮತ್ತೊಂದು ಕಡೆ ತಾಂಡವ್ ಭೇಟಿಯಾಗಿರುವ ಶ್ರೇಷ್ಠ ಎರಡು ಉಂಗುರಗಳನ್ನ ತೋರಿಸಿ ನೀನು ಈಗ ಎಂಗೇಜ್ಮೆಂಟ್ ಮಾಡಿಕೊಳ್ಳಲೇಬೇಕು ಎಂದು ಒತ್ತಾಯಿಸುತ್ತಾ ಇದ್ದಾಳೆ. ನೀನೇನಾದರೂ ಎಂಗೇಜ್ಮೆಂಟ್ ಮಾಡಿಕೊಂಡಿಲ್ಲ ಎಂದರೆ ನಾನು ಮತ್ತಷ್ಟು ಮುಂದುವರಿಯಬೇಕಾಗುತ್ತದೆ ಎಂದು ತಾಂಡವ್‌ಗೆ ಬ್ಲಾಕ್ ಮೇಲ್ ಮಾಡಿದ್ದಾಳೆ. ನಾನು ನಿನ್ನನ್ನ ಮದುವೆಯಾಗಲು ಸಾಧ್ಯವಿಲ್ಲ ಈಗಾಗಲೇ ಮನೆಯಲ್ಲಿ ನನ್ನ ಸ್ಥಾನಮಾನ ಎಲ್ಲವೂ ಸಹ ಕುಸಿದಿದೆ ಎಂದು ತಾಂಡವ್ ಹೇಳಿದ್ದಾನೆ.

ಎಂಗೇಜ್ಮೆಂಟ್ ಮಾಡಿಕೋ ಎಂದು ಒತ್ತಾಯ

ಶ್ರೇಷ್ಠ ತಾಂಡವ್ ನೀನು ನನ್ನನ್ನ ಮದುವೆಯಾಗಲೇಬೇಕು ನಾನೇನು ಆಟದ ವಸ್ತುವಲ್ಲ. ನೀ ಬಾ ಅಂದಾಗ ಬರಲು ಹೋಗು ಎಂದಾಗ ಹೋಗಲು ಎಂದು ಹೇಳಿದ್ದಾಳೆ. ತಾಂಡವ್ ಮಾತ್ರ ಹೀಗಾಗಲೇ ಆಗಿರುವ ಸಮಸ್ಯೆಯನ್ನು ಸರಿ ಮಾಡಬೇಕು ಎಂದುಕೊಂಡಿದ್ದಾನೆ. ಈಗ ಶ್ರೇಷ್ಠಳನ್ನು ಬಿಟ್ಟು ಭಾಗ್ಯಳಿಗೆ ಹತ್ತಿರವಾಗುತ್ತಾನಾ? ಎಂಬುದೇ ಕುತೂಹಲವಾಗಿದೆ.

More from Filmibeat

English summary
Bhagyalakshmi kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X