Bhagyalakshmi: ಗಂಡನಿಗೆ ಹಳೆಯದನ್ನು ನೆನಪಿಸಿದ ಭಾಗ್ಯ: ಮಡದಿ ಮಾತಿಗೆ ತಾಂಡವ್ ಸುಸ್ತೋಸುಸ್ತು
ಕುಸುಮಾ ತನ್ನ ಮಗ ಹಾಗೂ ಸೊಸೆಗಾಗಿ ಮನೆಯಲ್ಲಿ ಕಾಯುತ್ತಾ ಇದ್ದಾಳೆ. ಆದರೆ ಭಾಗ್ಯ, ತಾಂಡವ್‌ನನ್ನು ಮನೆಗೆ ಹೋಗಲು ಬಿಡುತ್ತಿಲ್ಲ. ತಾನು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಅನಂತರ ಮನೆಗೆ ಹೋಗೋಣ ಎಂದು ಖಡಕ್ ಆಗಿ ಹೇಳಿದ್ದಾಳೆ.
ಫೋನ್ ಮಾಡಿ ನೀವು ಇಬ್ಬರು ಎಲ್ಲಿ ಹೋಗಿದ್ದೀರಾ? ಎಷ್ಟು ಹೊತ್ತು ಆಯಿತು? ಇನ್ನು ಮನೆಗೆ ಯಾಕೆ ಬರಲಿಲ್ಲ ಇಲ್ಲಿ ಪೂಜೆ ಇದೆ ಎಂಬುದನ್ನು ನೀವು ಮರೆತುಬಿಟ್ರಾ ಎಂದು ಕುಸುಮಾ ಕ್ಲಾಸ್ ತೆಗೆದುಕೊಂಡಿದ್ದಾಳೆ. ಆದರೆ ಭಾಗ್ಯ ಮಾತ್ರ ತನ್ನ ಪಟ್ಟು ಸಡಿಲಿಸದೇ ತಾಂಡವ್ ಕೈಯನ್ನ ಹಿಡಿದು ಎಳೆದುಕೊಂಡು ಹೋಗಿ ಸುಂದರಿ ಹಾಗೂ ನಿಮಗೂ ಏನು ಸಂಬಂಧ? ಯಾಕೆ ಇತ್ತೀಚಿಗೆ ನೀವು ಈ ರೀತಿ ಆಡುತ್ತಿದ್ದೀರಾ ಎಂದು ಕೇಳಿ ಬಿಟ್ಟಿದ್ದಾಳೆ. ಬೆಳಿಗ್ಗೆಯಿಂದ ಮನೆಯಲ್ಲಿ ಆಗಿದ್ದು ಏನು? ಯಾಕೆ ನನ್ನಿಂದ ಏನನ್ನು ಮುಚ್ಚಿ ಇಡುತ್ತಿದ್ದೀರಾ? ಎಂದು ಕೇಳುತ್ತಿದ್ದಾಳೆ. ಆದರೆ ಭಾಗ್ಯ ಕೇಳುತ್ತಿರುವ ಯಾವುದೇ ಪ್ರಶ್ನೆಗಳಿಗೆ ತಾಂಡವ್ ಬಳಿ ಉತ್ತರವಿಲ್ಲ.

ಈ ಕಡೆ ಸುನಂದಾ ಸಹ ಕುಸುಮಾಳನ್ನು ಕೆಣಕಿದ್ದಾಳೆ. ನನ್ನ ಮಗಳು ಯಾವತ್ತೂ ಸಹ ಈ ರೀತಿ ನಡೆದುಕೊಂಡವಳಲ್ಲ. ನಿಮ್ಮ ಮಗ ನೋಡಿ ನೀವು ಆಸ್ಪತ್ರೆಯಲ್ಲಿ ವನವಾಸ ಪಡುತ್ತಿದ್ದರು ಸಹ ನಿಮ್ಮನ್ನ ಬಂದು ನೋಡಿಲ್ಲ ಎಂದಿದ್ದಾಳೆ. ಈ ಮಾತು ಕೇಳಿದ ಕುಸುಮಾಗೆ ಚಿಂತೆ ಶುರುವಾಗಿದೆ. ಇತ್ತೀಚಿಗೆ ಇವನಿಗೆ ಏನಾಗಿದೆ ಯಾಕೆ ಈ ರೀತಿಯಲ್ಲ ನಡೆದುಕೊಳ್ಳುತ್ತಿದ್ದಾನೆ ಎಂದು ಯೋಚಿಸುತ್ತಿದ್ದಾಳೆ. ಮತ್ತೊಂದು ಕಡೆ ಪೂಜಾ ಪತ್ತೆದಾರಿಕೆ ಶುರು ಮಾಡಿದ್ದು ಶ್ರೇಷ್ಠ ಹಾಗೂ ತಾಂಡವ್ ನಡುವೆ ಯಾವ ಸಂಬಂಧ ಇದೆ ಎಂಬುದನ್ನು ಪತ್ತೆ ಹಚ್ಚಲು ಹೊರಟಿದ್ದಾಳೆ.
ತಾಂಡವ್ ಮನಸಾಕ್ಷಿ ಕೆದಕಿದ ಭಾಗ್ಯ
ಭಾಗ್ಯ ಬೆಳಿಗ್ಗೆಯಿಂದ ಮನೆಯಲ್ಲಿ ನಡೆದಿದ್ದು ಏನು? ನೀವು ಯಾಕೆ ಅತ್ತೆ ಆಸ್ಪತ್ರೆಯಲ್ಲಿ ಇದ್ದರೂ ಸಹ ನೋಡಲು ಬಂದಿಲ್ಲ? ನೀವು ನನ್ನ ಬಳಿ ಏನನ್ನು ಮುಚ್ಚಿಡುತ್ತಾ ಇದ್ದೀರಾ? ಎಂದು ತಾಂಡವ್‌ನನ್ನು ಪ್ರಶ್ನೆ ಮಾಡಿದ್ದಾಳೆ. ತಾಂಡವ್ ಇನ್ನು ಸ್ವಲ್ಪ ಹೊತ್ತು ಇಲ್ಲೇ ಇದ್ದರೆ ಈ ಪತ್ತೆದಾರಿ ಭಾಗ್ಯಾಳ ಮಾತಿನಿಂದ ನನ್ನ ತಲೆ ಸಿಡಿದು ಹೋಗಿ ನಾನು ಕೆಳಕ್ಕೆ ಬೀಳಬೇಕಾಗುತ್ತದೆ ಎಂದು ಮನಸ್ಸಿನಲ್ಲೇ ಬೈದುಕೊಂಡಿದ್ದಾನೆ. ಇದೇ ವೇಳೆ ಭಾಗ್ಯ ನೀವು ಇತ್ತೀಚಿಗೆ ಯಾಕೆ ಈ ರೀತಿ ನಡೆದುಕೊಳ್ಳುತ್ತಿದ್ದೀರಾ? ಅನ್ನೋದು ಮಾತ್ರ ತಿಳಿಯುತ್ತಿಲ್ಲ, ಎಲ್ಲದ್ದಕ್ಕು ಸುಳ್ಳು ಹೇಳುತ್ತಾ ಬರುತ್ತಿದ್ದೀರಾ ಎಂದಿದ್ದಾಳೆ.

ಮೌನಕ್ಕೆ ಶರಣಾದ ತಾಂಡವ್
ನಿಮಗೆ ನಿಮ್ಮ ತಂದೆ ತಾಯಿ ಎಂದರೆ ತುಂಬಾನೆ ಪ್ರೀತಿ. ಯಾವತ್ತೂ ಸಹ ಅವರ ವಿಷಯದಲ್ಲಿ ನೀವು ಈ ರೀತಿ ನಡೆದುಕೊಂಡಿರಲಿಲ್ಲ ಎಂದು ಕೆದಕುತ್ತಿದ್ದಾಳೆ. ಅಂದು ಅತ್ತಿಗೆ ಟೈಫಾಯಿಡ್ ಜ್ವರ ಬಂದಾಗ ನೀವು ಏನು ಮಾಡಿದ್ರಿ ಚೆನ್ನೈನಲ್ಲಿ ಮೀಟಿಂಗ್‌ನಲ್ಲಿದ್ದಾಗಲೂ ಸಹ ಜಗಳ ಮಾಡಿಕೊಂಡು ಫೋನ್ ಮಾಡಿ ಮೂರು ಗಂಟೆಯಲ್ಲೇ ಬೆಂಗಳೂರಿಗೆ ಬಂದಿದ್ರಿ. ಆದರೆ ಇಂದು ಅರ್ಧ ಗಂಟೆಯಲ್ಲಿ ತಲುಪುವ ಆಸ್ಪತ್ರೆಗೆ ಯಾಕೆ ಬಂದಿಲ್ಲ ಎಂದು ಪ್ರಶ್ನೆಯನ್ನ ಮಾಡಿದ್ದಾಳೆ.
ಯೂನಿಫಾರ್ಮ್ ಇಲ್ದೆ ಶಾಲೆಗೆ ಹೋಗಲ್ವಾ ಭಾಗ್ಯ
ಭಾಗ್ಯ ಯೂನಿಫಾರ್ಮ್ ಹಾಕಿಕೊಂಡು ಶಾಲೆಗೆ ಬರಲೇಬೇಕು ಎಂದು ಕನ್ನಿಕಾ ಆರ್ಡರ್ ಮಾಡಿದ್ದಾಳೆ. ಈ ವಿಷಯವನ್ನು ತನ್ವಿ, ಗುಂಡಣ್ಣನ ಬಳಿ ಹೇಳಿದ್ದಾಳೆ. ಅಮ್ಮ ಇನ್ಮುಂದೆ ಶಾಲೆಗೆ ಬರೋದಿಲ್ಲ ಯೂನಿಫಾರ್ಮ್ ಇಲ್ಲದೆ ಶಾಲೆಗೆ ಬರಬಾರದು ಎಂದು ಶಾಲೆಯಿಂದ ಆರ್ಡರ್ ಆಗಿದೆ ಎಂದಿದ್ದಾಳೆ. ಗುಂಡಣ್ಣನಿಗೆ ಯೋಚನೆ ಶುರುವಾಗಿದೆ. ಶಾಲೆಗೆ ಹೋಗದೆ ಅಮ್ಮನ ಶಿಕ್ಷಣ ಮುಗಿದೇ ಹೋಗುತ್ತಾ? ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾನೆ. ಈಗ ಭಾಗ್ಯಳಿಗೆ ಗಣೇಶನೇ ಒಂದು ದಾರಿ ತೋರಿಸಬೇಕಾಗಿದೆ.


Click it and Unblock the Notifications











