Bhagyalakshmi: ಮನೆಯವರಿಗಾಗಿ ಶ್ರೇಷ್ಠಾಳಿಂದ ದೂರವಾಗ್ತಾನ ತಾಂಡವ್? ಮಗನ ಮೇಲೆ ಕುಸುಮಾ ಬೇಸರ

By ಶೃತಿ ಹರೀಶ್ ಗೌಡ

ಶ್ರೇಷ್ಠ ಯಾವುದೇ ಕಾರಣಕ್ಕೂ ತಾಂಡವ್‌ನನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ತಾಂಡವ್ ಬಳಿ ಹೇಳುತ್ತಾ ಇದ್ದಾಳೆ. ನಾನು ನಿನ್ನನ್ನ ಮದುವೆ ಆಗಲೇಬೇಕು ನಾನು ಸುಮ್ಮನೆ ನಿನ್ನನ್ನ ಪ್ರೀತಿ ಮಾಡಿಲ್ಲ ಎಂದು ಹೇಳಿದ್ದಾಳೆ.

ನಾವಿಬ್ಬರೂ ಪ್ರೀತಿ ಮಾಡುವ ಮುಂಚೆ ಇಬ್ಬರ ನಡುವೆ ತುಂಬಾ ಚೆನ್ನಾಗಿ ಸಂಬಂಧ ಇತ್ತು. ಆದರೆ ನೀನು ಯಾವಾಗ ಮದುವೆ ಎಂಬ ವಿಚಾರವನ್ನು ಮುಂದೆ ಇಟ್ಟೆಯೋ ನನಗೆ ಆಗಿನಿಂದ ಸಮಸ್ಯೆ ಶುರುವಾಗುತ್ತಾ ಬಂತು ಎಂದು ತಾಂಡವ್, ಶ್ರೇಷ್ಠ ಬಳಿ ಹೇಳುತ್ತಾ ಇದ್ದಾನೆ. ಪೂಜಾ ದೂರದಲ್ಲಿ ನಿಂತುಕೊಂಡು ತಾಂಡವ್ ಹಾಗೂ ಶ್ರೇಷ್ಠ ನಡುವಿನ ಮಾತುಕತೆ ಕೇಳಿಸಿಕೊಳ್ಳುತ್ತಾ ಇದ್ದಾಳೆ .

bhagyalakshmi-kannada-serial

ಅಂದು ನನ್ನ ಅಮ್ಮ ಬಂದು ಇವರ ಮೇಲೆ ಸಂಶಯ ಪಟ್ಟಾಗ ನಾವ್ಯಾರು ನಂಬಲಿಲ್ಲ. ಆದರೆ ಇವರಿಬ್ಬರೂ ಮದುವೆಯಾಗುವ ಮಟ್ಟಕ್ಕೆ ಬಂದಿದ್ದಾರೆ ನನ್ನ ಅಕ್ಕನಿಗೆ ಭಾವ ಮೋಸ ಮಾಡಿದ್ದಾರೆ.‌ ಇವರಿಗೆ ಮನಸ್ಸಾದರೂ ಹೇಗೆ ಬಂತು? ಎಂದು ಪೂಜಾ ಅಂದುಕೊಂಡಿದ್ದಾಳೆ. ಶ್ರೇಷ್ಠ, ತಾಂಡವ್‌ಗೆ ನಾನು ನಿನ್ನನ್ನ ಮದುವೆಯಾಗಲೇಬೇಕು ಅದು ಏನಾದರೂ ಸರಿಯೇ, ನಾನು ಯಾವುದೇ ಕಾರಣಕ್ಕೂ ನಿನ್ನನ್ನ ಬಿಟ್ಟು ಹೋಗೋದಿಲ್ಲ ಎಂದು ಶ್ರೇಷ್ಠ ಹೇಳಿದ್ದಾಳೆ.

ಮನೆಯಲ್ಲಿ ಕುಸುಮ ಪೂಜೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವಂತೆ ಭಾಗ್ಯ ಬಳಿ ಹೇಳಿದ್ದಾರೆ. ಭಾಗ್ಯ ಸಂಜೆಯ ಪೂಜೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದಾಳೆ. ಇನ್ನೇನಿದ್ದರೂ ಗಣೇಶನನ್ನು ವಿಸರ್ಜನೆ ಮಾಡುವುದೊಂದೇ ಬಾಕಿ ಇದೆ. ಈ ಕಡೆ ಸುನಂದಾಗೆ ಪೂಜಾ ಎಲ್ಲಿಗೆ ಹೋದಳು? ಎಂಬ ಅನುಮಾನ ಶುರುವಾಗಿದೆ. ಕೇಳದೆ ಎಲ್ಲಿಗೋ ಹೋಗಿದ್ದಾಳೆ ಎಂದು ಸುನಂದಾ ಅಂದುಕೊಂಡಿದ್ದಾಳೆ. ತಾಂಡವ್‌ಗೆ ಕುಸುಮಾ ಬಯ್ಯುತ್ತಾ ಇದ್ದರೆ ತನ್ವಿ ಹಾಗೂ ತನ್ಮಯ್ ಇಬ್ಬರಿಗೂ ಸಹ ಬೇಸರವಾಗಿದೆ.

ಶ್ರೇಷ್ಠ ಮುಂದೆ ಕಣ್ಣೀರು ಹಾಕಿದ ತಾಂಡವ್

ತಾಂಡವ್ ಶ್ರೇಷ್ಠಾಳನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಿದ್ದಾನೆ. ನಿನ್ನಿಂದಾಗಿ ಮನೆಯಲ್ಲಿ ಎಷ್ಟೆಲ್ಲಾ ರಾದ್ಧಾಂತ ಆಯಿತು ಗೊತ್ತಾ? ನಾನು ನನ್ನ ಮಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪಿದ್ದೆ. ಇಂತಹ ಪ್ರೀತಿ ನಮಗೆ ಬೇಕಾ ಎಂದಿದ್ದಾನೆ. ಶ್ರೇಷ್ಠ, ತಾಂಡವ್‌ನ ಸಮಾಧಾನ ಮಾಡುತ್ತಾ ಇದ್ದಾಳೆ.‌ ಈ ವೇಳೆ ನಾನು ನನ್ನ ಮಕ್ಕಳ ಮುಂದೆ ವಿಲನ್ ಆಗಿದ್ದೇನೆ ಈ ಹಿಂದೆ ನಾನು ಮಕ್ಕಳ ಮುಂದೆ ಹೀರೋ ಆಗಿದ್ದೆ. ತನ್ವಿ ಯಾವಾಗಲೂ ನನ್ನನ್ನು ಹೀರೋ ಎಂದು ಕರೆಯುತ್ತಾ ಇದ್ದಳು. ಈಗ ತನ್ವಿ ಮುಂದೆಯೂ ಸಹ ವಿಲನ್ ಆಗಿದ್ದೇನೆ ಎಂದು ಹೇಳಿದ್ದಾನೆ.

bhagyalakshmi-kannada-serial

ತನ್ನ ನಡವಳಿಕೆ ಬಗ್ಗೆಯೇ ಅಸಹ್ಯ

ಅವಳು ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಗ ನನಗೆ ಎಷ್ಟು ಸಂಕಟವಾಗುತ್ತಿತ್ತು ಗೊತ್ತಾ? ಶ್ರೇಷ್ಠ ನನ್ನ ಬಗ್ಗೆಯೇ ನನಗೆ ಅಸಹ್ಯ ಬಂದಿದೆ‌. ನಾನು ಅಂದು ಮಾಡಿದ್ದಾದರೂ ಏನು? ಸುಳ್ಳಿನ ಮೇಲೆ ಸುಳ್ಳು ನನ್ನ ರಕ್ತ ಹಂಚಿಕೊಂಡು ಹುಟ್ಟಿರುವ ಮಗಳು ಸತ್ತು ಹೋಗಿದ್ದರೆ? ನಾನು ಯಾವ ಪರಿಸ್ಥಿತಿಗೆ ತಲುಪುತ್ತಿದ್ದೆ ನಿನಗೆ ಗೊತ್ತಾ‌? ಎಂದಿದ್ದಾನೆ. ನನ್ನ ಗುಂಡಣ್ಣನ ಕಣ್ಮುಂದೆಯೂ ಸಹ ನಾನು ಕೆಟ್ಟವನಾಗಿದ್ದೇನೆ. ನನ್ನ ತಂದೆಗೆ ಒಳ್ಳೆಯ ಬುದ್ದಿ ಕೊಡಪ್ಪ ಎಂದು ಗಣೇಶನ ಬಳಿ ಹರಕೆಯನ್ನು ಕಟ್ಟಿಕೊಂಡು ಬಂದಿದ್ದಾನೆ. ನಾನು ನನ್ನ ಅಮ್ಮನ ದೃಷ್ಟಿಯಲ್ಲಿ ತುಂಬಾ ಕೆಟ್ಟವನಾಗಿದ್ದೇನೆ ಎಂದು ಕಣ್ಣೀರು ಹಾಕಿದ್ದಾನೆ.

ಶ್ರೇಷ್ಠ ಸಹವಾಸವೇ ಬೇಡ ಎಂದ ತಾಂಡವ್

ಇನ್ನು ಇದೇ ವೇಳೆ ಶ್ರೇಷ್ಠ, ತಾಂಡವ್ ಬಳಿ ನಿನ್ನ ಅಮ್ಮನ ಕಾಲು ಮುರಿದಿದ್ದಕ್ಕೆ ನಾನೇ ಕಾರಣ ಎಂದು ಹೇಳಿದ್ದಾಳೆ. ನಿಮ್ಮ ಮನೆಗೆ ಬರುವುದನ್ನು ತಪ್ಪಿಸಲು ನಾನು ಈ ರೀತಿ ಮಾಡಿದೆ ಎಂದು ಹೇಳುವಾಗ ತಾಂಡವ್‌ಗೆ ಕೋಪ ಬಂದಿದ್ದು ಸರಿಯಾಗಿ ಶ್ರೇಷ್ಠ ಕೆನ್ನೆಗೆ ಬಾರಿಸಿದ್ದಾನೆ. ನಿನ್ನನ್ನ ಏನಾದರೂ ನಾನು ಮದುವೆಯಾಗಲು ಹೋದರೆ ನನ್ನ ಅಮ್ಮನನ್ನೇ ಬೇಕಾದರೆ ನೀನು ಕೊಂದುಬಿಡುತ್ತೀಯಾ? ನನಗೆ ನಿನ್ನ ಜೊತೆಗಿನ ಸಂಬಂಧ ಬೇಡವೇ ಬೇಡ ನಿನ್ನ ಸಹವಾಸವು ಸಾಕು ಇಲ್ಲಿಗೆ ಇದೆಲ್ಲವೂ ಅಂತ್ಯ ಕಾಣಲಿ ಎಂದು ಹೇಳಿದ್ದಾನೆ. ತಾಂಡವ್ ತೆಗೆದುಕೊಂಡ ನಿರ್ಧಾರ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಹಾಕಿದ್ದು ಮುಂದೇನು? ಎಂಬ ಪ್ರಶ್ನೆ ಕಾಡುತ್ತಿದೆ.

More from Filmibeat

English summary
Bhagyalakshmi Kannada serial today episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X