Bhagyalakshmi: ಪೂಜಾ ನೋಡಿ ತಾಂಡವ್ ಶಾಕ್: ಧರ್ಮ ಸಂಕಟಕ್ಕೆ ಸಿಲುಕಿದ ಭಾಗ್ಯ
ತಾಂಡವ್- ಶ್ರೇಷ್ಠ ಜೊತೆಯಲ್ಲಿ ಜಗಳ ಮಾಡಿಕೊಂಡು ನನಗೂ ನಿನಗೂ ಯಾವುದೇ ಸಂಬಂಧವಿಲ್ಲ, ನಿನ್ನ ಪ್ರೀತಿ ಸಹ ನನಗೆ ಬೇಡ ಎಂದು ಬ್ರೇಕಪ್ ಮಾಡಿಕೊಂಡಿದ್ದಾನೆ. ಕರೆದು ನೀನು ಇನ್ನು ಒಂದು ಹೆಜ್ಜೆ ಮುಂದೆ ಇಟ್ಟರೂ ಸರಿಯೇ ನಾನು ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶ್ರೇಷ್ಠ ಬ್ಲಾಕ್ ಮೇಲ್ ಮಾಡಿದ್ದಾಳೆ.
ಸಾಯುವವರು ಯಾವತ್ತೂ ಹೇಳಿ ಸಾಯೋದಿಲ್ಲ. ನೀನು ಬ್ಲಾಕ್ ಮೇಲ್ ಮಾಡಿದರೆ ನಾನು ಅದನ್ನು ನಂಬೊಲ್ಲ ಎಂದು ಅಲ್ಲಿಂದ ತಾಂಡವ್ ತನ್ನ ಕಾರಿನ ಬಳಿ ಬಂದಿದ್ದಾನೆ. ತಾಂಡವ್ ಹೋದ ಮೇಲೆ ಶ್ರೇಷ್ಠಾ ಕಣ್ಣೀರು ಹಾಕಿದ್ದಾಳೆ. ಬೆಟ್ಟದ ಮೇಲೆ ಕುಳಿತುಕೊಂಡು ತಾಂಡವ್‌ಗೆ ಕೋಪದಿಂದ ಶಾಪ ಹಾಕಿ ನನಗೆ ಇವನು ಬೇಕೇ ಬೇಕು, ಅಮ್ಮನಿಗೋಸ್ಕರ ನನ್ನನ್ನೇ ದೂರ ಮಾಡಿಕೊಂಡು ಹೋಗುತ್ತಿದ್ದಾನೆ. ನಾನಂತೂ ಇವನನ್ನು ಸುಮ್ಮನೆ ಬಿಡೋದಿಲ್ಲ ಎಂದು ಶ್ರೇಷ್ಠಾ ಆಕ್ರೋಶಗೊಂಡಿದ್ದಾಳೆ.

ಪೂಜಾ ಸಹ ಭಾವ ಹೋದ ನಂತರ ತಾನು ಕಾರಿನ ಬಳಿ ಹೋಗಿದ್ದಾಳೆ. ತಾಂಡವ್, ಪೂಜಾಳನ್ನು ನೋಡಿದ ಕೂಡಲೇ ಶಾಕ್‌ಗೆ ಒಳಗಾಗಿದ್ದಾನೆ. ಇವಳು ಏಕೆ ಇಲ್ಲಿಗೆ ಬಂದಳು ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದ್ದಾನೆ.
ಶ್ರೇಷ್ಠ ಇತ್ತ ತಾಂಡವ್ ಆ ರೀತಿ ಮಾಡಿ ಹೋಗಿದ್ದಕ್ಕೆ ಒಂದು ದೇವಸ್ಥಾನದ ಬಳಿ ಬಂದು ನನಗೆ ತಾಂಡವ್ ಬೇಕೇ ಬೇಕು. ಅವನು ನನ್ನನ್ನ ದೂರ ಮಾಡಿದರೆ ಮುಂದೆ ಆಗುವ ಕೆಟ್ಟ ಅನಾಹುತಗಳಿಗೆ ಅವನೇ ಕಾರಣನಾಗಿ ಇರುತ್ತಾನೆ. ಇನ್ಮುಂದೆ ಅವನ ಬ್ಯಾಡ್ ಲಾಕ್ ಶುರುವಾದಂತೆ ಎಂದು ಹೇಳುತ್ತಾ ಇದ್ದಾಳೆ. ನಾನಂತೂ ತಾಂಡವ್‌ನನ್ನು ಸುಮ್ಮನೆ ಬಿಡೋದಿಲ್ಲ ಎಂದು ಶಪಥ ಮಾಡಿದ್ದಾಳೆ.
ಪೂಜಾ ನೋಡಿ ಶಾಕ್ ಆದ ತಾಂಡವ್
ಭಾವ ಏನು ಇಲ್ಲಿ ಎಂದು ಪೂಜಾ ಕೇಳಿದ್ದಾಳೆ. ಇದಕ್ಕೆ ತಾಂಡವ್ ನಾನು ಕ್ಲೈಂಟ್ಸ್ ಮೀಟ್ ಮಾಡಲು ಬಂದಿದ್ದೆ ಎಂದು ಸುಳ್ಳು ಹೇಳಿದ್ದಾನೆ. ಇದಕ್ಕೆ ಪೂಜಾ ನಿಮ್ಮ ಕ್ಲೈಂಟ್ ಪರಿಸರ ಪ್ರೇಮಿಯೇ ಇರಬೇಕು ಅದಕ್ಕೆ ಬೆಟ್ಟ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕೆದಕಿದ್ದಾಳೆ. ತಾಂಡವ್ ಮನಸ್ಸಿನಲ್ಲಿ ಪೂಜಾ ನನ್ನ ಹಾಗೂ ಶ್ರೇಷ್ಠಾಳನ್ನು ಒಟ್ಟಿಗೆ ನೋಡಿದ್ದಾಳಾ? ಎಂಬ ಅನುಮಾನ ಕೊರೆಯುತ್ತಿದೆ.

ಶ್ರೇಷ್ಠ ನನ್ನ ವಿಚಾರ ಗೊತ್ತಾಗಿದ್ಯಾ ಎಂದು ಟೆನ್ಶನ್
ತಾಂಡವ್ ಜೊತೆ ಹೊರಟ ಪೂಜಾ
ಪೂಜಾ ಕಾರ್‌ನಲ್ಲಿ ಕುಳಿತುಕೊಂಡು ಬನ್ನಿ ಭಾವ ಮನೆಗೆ ಹೋಗೋಣ ಎಂದು ಕರೆದಿದ್ದಾಳೆ. ಇನ್ನು ನೀವೇನಾದರೂ ಈಗ ಬಾರದೇ ಇದ್ದರೇ ನಿಮ್ಮ ಕ್ಲೈಂಟ್ ಮೇಲಿಂದ ಬಂದು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾರೆ. ಅದಕ್ಕೂ ಮೊದಲೇ ನಾವು ಇಲ್ಲಿಂದ ಹೊರಡೋಣ ಎಂದು ತಾಂಡವ್‌ನನ್ನು ಕರೆದಿದ್ದಾಳೆ. ತಾಂಡವ್ ಅನುಮಾನ ಈಗಲೂ ಸಹ ಹೆಚ್ಚಾಗಿದೆ ಏನು ಮಾತನಾಡದೇ ಪೂಜಾ ಜೊತೆ ಹೋಗಿದ್ದಾನೆ.
ಮಗಳ ಬಳಿ ಸುನಂದಾ ನೂರೆಂಟು ಪ್ರಶ್ನೆ
ಸುನಂದಗೆ ತನ್ನ ಅಳಿಯ ಹಾಗೂ ಮಗಳು ಚೆನ್ನಾಗಿ ಇಲ್ಲ ಎಂಬುವುದು ಗೊತ್ತಿದೆ. ಇದಕ್ಕಾಗಿ ಮಗಳ ಬಳಿ ನಿನ್ನ ಗಂಡನ ಮೇಲೆ ನಿನಗೆ ಅನುಮಾನ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾಳೆ. ನನ್ನ ತಲೆ ಮೇಲೆ ಕೈಯಿಟ್ಟು ಹೇಳು ಎಂದು ಕೇಳಿದ್ದಾಳೆ. ಅಷ್ಟರಲ್ಲೇ ಕುಸುಮಾ ಅಲ್ಲಿಗೆ ಬಂದಿದ್ದು ಸುನಂದಾ ಏನು ಮಾಡುತ್ತಿದ್ದೀರಾ? ನಿಮಗೆ ಬುದ್ಧಿ ಇಲ್ವಾ? ಚೆನ್ನಾಗಿ ಇರುವವರ ಬಳಿ ಇದನ್ನೆಲ್ಲ ಕೇಳ್ತಾರಾ? ಎಂದು ಕೋಪ ಮಾಡಿಕೊಂಡಿದ್ದಾಳೆ.
ಸುನಂದಾ ತಲೆಮೇಲೆ ಭಾಗ್ಯ ಕೈಯಿಟ್ಟ ಕುಸುಮಾ
ಇದೇ ವೇಳೆ ಸುನಂದಾ ನಿಮ್ಮ ಮಗನ ಮೇಲೆ ನನಗೆ ನಂಬಿಕೆ ಇಲ್ಲ, ಅವನು ನನ್ನ ಬಳಿ ಆ ರೀತಿ ನಡೆದುಕೊಂಡಿದ್ದಾನೆ ಎಂದು ಹೇಳಿದ್ದಾಳೆ. ಇದಕ್ಕೆ ಕುಸುಮಾ ಸಂಸಾರವನ್ನು ನನ್ನ ಮಗ ಸರಿಯಾಗಿಯೇ ನಡೆಸಿಕೊಂಡು ಹೋಗುತ್ತಾ ಇದ್ದಾನೆ. ಅದರಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ. ಇನ್ನು ಕೋಪಗೊಂಡ ಕುಸುಮಾ, ಸುನಂದಾ ತಲೆಯ ಮೇಲೆ ಭಾಗ್ಯಳ ಕೈ ಇಟ್ಟು ಹೇಳು ಭಾಗ್ಯ ನೀನು ಚೆನ್ನಾಗಿ ಇಲ್ವಾ? ಎಂದು ಕೇಳಿದ್ದಾಳೆ.


Click it and Unblock the Notifications











