Bhagyalakshmi: ಮಗನನ್ನ ಮನೆಯಿಂದ ಹೊರಗೆ ಹಾಕ್ತಾಳಾ ಕುಸುಮಾ..? ಬಾವನನ್ನೇ ಬ್ಲಾಕ್ ಮೇಲ್ ಮಾಡುತ್ತಿರುವ ಪೂಜಾ..?

By ಶೃತಿ ಹರೀಶ್ ಗೌಡ

ತಾಂಡವ್ ಈಗ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಬಿಟ್ಟಿದ್ದಾನೆ. ಶ್ರೇಷ್ಠಾ ಹಾಗೂ ತಾಂಡವ್ ನಡುವೆ ನಡೆದ ಎಲ್ಲಾ ಮಾತುಕತೆ ಪೂಜಾ ಕೇಳಿಸಿಕೊಂಡಿದ್ದಾಳೆ ಅನ್ನೋದು ತಾಂಡವ್‌ಗೆ ಗೊತ್ತಾಗಿದೆ. ಮನೆಯಲ್ಲಿ ಸುನಂದಾ ಹಾಗೂ ಕುಸುಮಾ ನಡುವೆ ದೊಡ್ಡ ಯುದ್ದವೇ ನಡೆಯುತ್ತಿದೆ.

ತಾಂಡವ್‌ ತಪ್ಪನ್ನು ಸುನಂದಾ ಎತ್ತಿ ತೋರಿಸುತ್ತಾ ಇದ್ದಾಳೆ. ಇದನ್ನು ಕುಸುಮಾ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲ. ನನ್ನ ಮಗನನ್ನ ನಾನು ಯಾವ ರೀತಿ ಬೆಳೆಸಿದೆ. ಅವನು ಯಾಕೆ ಈ ರೀತಿ ಆದ ಎಂದು ಕುಸುಮಾ ಯೋಚನೆ ಮಾಡುತ್ತಾ ಇದ್ದಾಳೆ. ಇನ್ನು ಭಾಗ್ಯ ಬಳಿ ನನ್ನ ಮಗನ ಮೇಲೆ ನಿನಗೆ ನಂಬಿಕೆ ಇದೆ ತಾನೇ ಎಂದು ಕೇಳಿದ್ದಾಳೆ.

bhagyalakshmi-kannada-serial

ಭಾಗ್ಯ ತನ್ನ ಅತ್ತೆಯನ್ನು ಸಮಾಧಾನ ಮಾಡುತ್ತಾ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾಳೆ. ಭಾಗ್ಯಗೂ ಸಹ ತಾಂಡವ್ ಮೇಲೆ ಅನುಮಾನ ಬಂದಿದೆ. ಯಾಕೆ ಈ ರೀತಿ ತಾಂಡವ್ ಮಾಡುತ್ತಿದ್ದಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದಾಳೆ. ಇದೇ ವೇಳೆ ಸುನಂದಾ ನಿಮ್ಮ ಮಗನಿಗೆ ಏನಾದರೂ ಹೆಚ್ಚು ಕಮ್ಮಿ ಆದರೆ ಅದಕ್ಕೆ ಯಾರು ಹೊಣೆ ನನ್ನ ಮಗಳಿಗೆ ನ್ಯಾಯ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದ್ದಾಳೆ. ಸುನಂದಾ ಕೇಳುತ್ತಿರುವ ಎಲ್ಲಾ ಪ್ರಶ್ನೆಗಳಿಗೂ ಸಹ ಕುಸುಮ ಉತ್ತರಿಸಿದ್ದಾಳೆ. ಭಾಗ್ಯಗೆ ಏನಾದ್ರೂ ಅನ್ಯಾಯ ಆಗುತ್ತದೆ ಅಂದರೆ ಅದು ನಾನು ಸತ್ತ ಮೇಲೆ ಅಷ್ಟೇ ಎಂದು ಎಂದಿದ್ದಾಳೆ‌.

ಪೂಜಾಳನ್ನು ಯಾವುದೋ ಜಾಗದಲ್ಲಿ ಇಳಿಸಿ ತಾಂಡವ್ ಮನೆಗೆ ಬರುತ್ತಾ ಇದ್ದಾನೆ. ಆದರೆ ಪೂಜಾಗೆ ಇದನ್ನು ಸಹಿಸಲು ಆಗುತ್ತಿಲ್ಲ. ತನ್ನ ಬಾವ ನನ್ನನ್ನ ಇಲ್ಲಿ ಇಳಿಸಿ ಹೋಗುತ್ತಿದ್ದಾರಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ. ಹೇಗಾದರೂ ಮಾಡಿ ವಾಪಸ್ ಬಾವನನ್ನ ನಾನು ಇರುವಲ್ಲಿಗೆ ಕರೆಸಿಕೊಳ್ಳಬೇಕು ಎಂದು ಪೂಜಾ ಪ್ಲಾನ್ ಮಾಡಿದ್ದಾಳೆ. ಫೋನ್ ಮಾಡಿದವಳೇ ಬಾವ ನನ್ನನ್ನು ಯಾಕೆ ಬಿಟ್ಟು ಹೋದ್ರಿ ಬಂದು ಕರೆದುಕೊಂಡು ಹೋಗಿ ಎಂದಿದ್ದಾಳೆ. ಇದಕ್ಕೆ ತಾಂಡವ್ ಆಟೋ ಹಿಡಿದುಕೊಂಡು ಮನೆಗೆ ಬಾ ಎಂದಿದ್ದಾನೆ.

ಬಾವನಿಗೆ ಪೂಜಾ ಬ್ಲಾಕ್ ಮೇಲ್

ಬೆಟ್ಟದಿಂದ ಕೆಳಗೆ ಬಂದ ಮೇಲೆ ಇಬ್ಬರು ಮನೆಯ ಕಡೆಗೆ ಬರುತ್ತಿದ್ದಾರೆ. ಇದೇ ವೇಳೆ ತಾಂಡವ್ ಪೂಜಾಳನ್ನು ಅರ್ಧ ದಾರಿಯಲ್ಲಿ ಬಿಟ್ಟು ಬಂದಿದ್ದಾನೆ. ಇದಕ್ಕೆ ಪೂಜಾ ಕಾಲ್ ಮಾಡಿ ನೀವೇನಾದರೂ ಈಗ ಕಾರನ್ನು ತೆಗೆದುಕೊಂಡು ಬರಲಿಲ್ಲ ಎಂದರೆ ಬೆಟ್ಟದ ಮೇಲಿದ್ದ ಶ್ರೇಷ್ಠಳನ್ನು ಮನೆಗೆ ಕರೆದುಕೊಂಡು ಬರಬೇಕಾಗುತ್ತದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾಳೆ. ನಾನು- ಶ್ರೇಷ್ಠ ಮಾತನಾಡಿದ್ದನ್ನು ಎಂದು ತಾಂಡ್‌ವೆ ಗೊತ್ತಾಗಿ ಭಯಗೊಂಡಿದ್ದಾನೆ.

ಪೂಜಾ ಹೇಳಿದ್ದಂತೆ ಕೇಳ್ತಿದ್ದಾನೆ ತಾಂಡವ್

ಇನ್ನೂ ಪೂಜಾ ಹೇಳುತ್ತಿರುವ ಪ್ರತಿಯೊಂದನ್ನು ಕೇಳುವ ಪರಿಸ್ಥಿತಿ ತಾಂಡವ್‌ಗೆ ಬಂದಿದೆ. ಪೂಜಾ ಈಗ ಬಾವನ ವೀಕ್‌ನೆಸ್‌ನಿಂದ ಲಾಭ ಪಡೆದುಕೊಳ್ಳುತ್ತಾ ಇದ್ದಾಳೆ. ತನಗೆ ಬೇಕಾದ ಎಲ್ಲವನ್ನು ಕೂಡ ತೆಗೆದುಕೊಳ್ಳುತ್ತಾ ಇದ್ದಾಳೆ. ಮನೆಗೆ ಹೋಗೋಣ ಬಾ ಅಂದ್ರು ಪೂಜಾ ಶಾಪಿಂಗ್ ಮಾಡುತ್ತಿದ್ದಾಳೆ. ಪೂಜಾ ಎಲ್ಲಿ ಎಂದು ಕುಸುಮಾ ಕೇಳಿದ್ದಕ್ಕೆ ಸುನಂದ ಶಾಪಿಂಗ್ ಮಾಡಲು ಹೋಗಿದ್ದಾಳೆ. ಅದು ಸಹ ತಾಂಡವ್ ಜೊತೆಗೆ ಎಂದು ಹೇಳಿದ್ದಾಳೆ. ಪೂಜಾ ಸಣ್ಣ ಹುಡುಗಿ ಅವಳಿಗೆ ಏನೋ ಗೊತ್ತಾಗಿಲ್ಲ. ತಾಂಡವ್‌ಗೆ ಯಾಕೆ ಗೊತ್ತಾಗಲಿಲ್ಲ ನಮ್ಮನೆಲ್ಲ ಮರಳು ಮಾಡಿಕೊಳ್ಳಬೇಕು ಎಂದು ಶಾಪಿಂಗ್ ಮಾಡುತ್ತಿದ್ದಾನೆ ಎಂದು ಹೇಳಿದ್ದಾಳೆ.

ಮನೆಯಿಂದ ಹೊರಗೆ ಹೋಗ್ತಾನಾ ತಾಂಡವ್?

ಕುಸುಮಾಗೆ ಮಗನ ಮೇಲೆ ಬೆಟ್ಟದಷ್ಟು ಕೋಪ ಬಂದಿದೆ. ಇದಕ್ಕಾಗಿ ತಾಂಡವ್ ಬರುವುದನ್ನೇ ಕಾಯುತ್ತಾ ಇದ್ದಾಳೆ. ಸುನಂದಾ ಬೇರೆ ತಾಂಡವ್ ಮೇಲೆ ಇಲ್ಲ ಸಲ್ಲದನೆಲ್ಲ ಹೇಳಿ ಕುಸುಮಾಗೆ ಮತ್ತಷ್ಟು ಕೋಪ ಬರುವಂತೆ ಮಾಡಿದ್ದಾಳೆ. ನಿಮ್ಮ ಮಗ ಮನೆಯಲ್ಲಿ ಪೂಜೆಗೆ ಇಲ್ಲ ಊರೂರು ಸುತ್ತಲೂ ಆಗುತ್ತೆ ಎಂದೆಲ್ಲಾ ಹೇಳಿದಾಗ ಕುಸುಮಾ ಕೋಪ ಮತ್ತಷ್ಟು ನೆತ್ತಿಗೇರಿದೆ. ತಾಂಡವ್ ಮನೆಗೆ ಬಂದಾಗ ಕುಸುಮಾ ಹೊರಗೆ ಹಾಕುತ್ತಾಳಾ ನೋಡಬೇಕಾಗಿದೆ.

More from Filmibeat

English summary
Bhagyalakshmi Kannada serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X