Bhagyalakshmi: ಕುಸುಮಾ ಮನೇಲಿ ಶ್ರೇಷ್ಠ ಪೋಷಕರು: ಹೆಂಡತಿ ಕೈಗೆ ಸಿಕ್ಕಿ ಬೀಳ್ತಾನಾ ತಾಂಡವ್?

By ಶೃತಿ ಹರೀಶ್ ಗೌಡ

ಶ್ರೇಷ್ಠಳಿಂ ತಾಂಡವ್ ಪದೇ ಪದೆ ಸಮಸ್ಯೆಗೆ ಸಿಲುಕುತ್ತಲೇ ಇದ್ದಾನೆ. ಈ ಮೊದಲು ತಾಂಡವ್ ಮನೆಗೆ ಬರುವುದನ್ನು ಶ್ರೇಷ್ಠ ಕ್ಯಾನ್ಸಲ್ ಮಾಡಿದ್ದಳು. ಆದರೆ ಸುನಂದಾ ವತಿಯಿಂದ ತಾಂಡವ್ ಮನೆಗೆ ಶ್ರೇಷ್ಠ ಮತ್ತೆ ಹೋಗುವಂತೆ ಆಯಿತು.

ತಾಂಡವ್‌ಗೆ ಶ್ರೇಷ್ಠ ಫೋನ್ ಮಾಡಿ ನಾವು ನಿಮ್ಮ ಮನೆಗೆ ಬರುತ್ತಿದ್ದೇವೆ ಎಂದಾಗ ತಾಂಡವ್ ಕೋಪಗೊಂಡಿದ್ದ. ನನ್ನ ತಾಯಿಗೆ ಹುಷಾರಿಲ್ಲ ನೀನು ಈ ರೀತಿ ಹೇಳಿದರೆ ಹೇಗೆ? ಎಂದಿದ್ದ. ಇದೇ ವೇಳೆ ಶ್ರೇಷ್ಠಾ ತಂದೆ ಫೋನನ್ನು ಕಿತ್ತುಕೊಂಡು ಯಾಕಪ್ಪ ಏನು ಎಂದೆಲ್ಲಾ ವಿಚಾರಿಸಿದಾಗ ಅಂಕಲ್ ನೀವು ಮನೆಗೆ ಬನ್ನಿ ಎಂದು ಹೇಳಿದ್ದ.

bhagyalakshmi-kannada-serial

ಈ ಕಡೆ ಸುನಂದಾ ತಮ್ಮ ಬೀಗರಿಗೆ ಚೆನ್ನಾಗಿ ಕೋಪ ಬರಿಸುವ ಕೆಲಸ ಮಾಡಿದ್ದಾಳೆ. ನಿಮಗೆ ಹುಷಾರಿಲ್ಲ ನಿಮ್ಮ ಮಗ ನೋಡಿದರೆ ಎಲ್ಲಿ ಅಲೆಯುತ್ತಾನೆ? ಅವನದು ಏನು ವ್ಯವಹಾರನೋ ಎಂದು ಕೋಪ ಬರುವಂತೆ ಮಾತನಾಡಿದ್ದಾರೆ. ಇನ್ನು ಭಾಗ್ಯ ಆಸ್ಪತ್ರೆಯಲ್ಲಿ ಅತ್ತೆಯನ್ನ ಡಿಸ್ಚಾರ್ಜ್ ಮಾಡಿಸುವ ಪ್ರಕ್ರಿಯೆಯಲ್ಲಿ ಓಡಾಟವನ್ನು ನಡೆಸುತ್ತಾ ಇದ್ದಾಳೆ.

ಈ ಕಡೆ ಸುನಂದ ನೋಡಿ ನಿಮ್ಮ ಮಗ ಬರಲಿಲ್ಲ ನನ್ನ ಮಗಳೇ ನಿಮ್ಮನ್ನ ನೋಡಿಕೊಳ್ಳುತ್ತಿರುವುದು ಎಂದೆಲ್ಲಾ ಹೇಳಿದ್ದಾರೆ. ಈ ಕಡೆ ಸುನಂದಾಗೆ ತನ್ನ ಅಳಿಯನ ಮೇಲೆ ಅಪಾರವಾದ ಕೋಪ ಬಂದಿದೆ. ಅದನ್ನು ಈ ಮೂಲಕ ಹೊರ ಹಾಕುತ್ತಾ ಇದ್ದಾರೆ. ಕುಸುಮಗೂ ಸಹ ತಮ್ಮ ಮಗನ ನಡುವಳಿಕೆ ಮೇಲೆ ಬೇಸರವಾಗಿದೆ.

ಈ ಕಡೆ ತಾಂಡವ್ ಬಾಡಿಗೆ ತಾಯಿ ಸುಂದರಿ ವಾಪಸ್ ಮನೆಗೆ ಹೋಗಿದ್ದಳು. ಇದೇ ವೇಳೆ ತಾಂಡವ್ ಫೋನ್ ಮಾಡಿ ಬೇಗನೆ ಬಾ ಎಂದು ಮನೆಗೆ ಕರೆಸಿಕೊಳ್ಳುವ ಕೆಲಸವನ್ನು ಮಾಡಿದ್ದಾನೆ. ಇನ್ನು ಸುಂದರಿ ಸಹ ತಾಂಡವ್ ಮನೆಗೆ ಬಂದಿದ್ದಾಳೆ. ಈ ಕಡೆ ಶ್ರೇಷ್ಠ ಹಾಗೂ ಶ್ರೇಷ್ಠ ತಾಯಿ ಯಶೋಧ ಅವರ ತಂದೆ ಶ್ರೀವರ ಮೂವರು ಸಹ ಆಸ್ಪತ್ರೆಯಿಂದ ತಾಂಡವ್ ಮನೆಗೆ ಹೊರಟಿದ್ದಾರೆ. ಶ್ರೀವರ ಅವರಿಗೆ ತಾಂಡವ್ ಮೇಲೆ ಸ್ವಲ್ಪ ಅನುಮಾನ ಬಂದಿದ್ದು ಅದನ್ನು ಇಂದೇ ಕ್ಲಿಯರ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾರೆ. ಎಲ್ಲರೂ ಸಹ ತಾಂಡವ್ ಮನೆಯ ಹಾದಿ ಹಿಡಿದಿದ್ದು ಈ ಕಡೆ ಭಾಗ್ಯಗೆ ಅತ್ತೆಗೆ ಕಾಲು ಏಟಾಗಿರುವುದಕ್ಕೆ ತುಂಬಾನೇ ಬೇಸರವಾಗಿದೆ.

bhagyalakshmi-kannada-serial

ತಾಂಡವ್ ಮನೆಗೆ ಬಂದ ಶ್ರೇಷ್ಠ ಫ್ಯಾಮಿಲಿ

ಎಲ್ಲಾ ಅಡಚಣೆಗಳನ್ನ ದಾಟಿ ಕುಸುಮಳನ್ನು ಸಹ ದೂರ ಮಾಡಿ ತಾಂಡವ್ ಮನೆಗೆ ಶ್ರೇಷ್ಠ ಫ್ಯಾಮಿಲಿ ಬಂದಿದೆ. ಇದೇ ವೇಳೆ ಶ್ರೀವರ ಅವರು ತಾಂಡವ್ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ನನ್ನ ತಾಯಿ ಮನೆಯಲ್ಲೇ ಇದ್ದಾರೆ, ಆದರೆ ತಂದೆ ಇಲ್ಲ ಎಂದು ತಾಂಡವ್ ಹೇಳಿದ್ದಾನೆ. ಇನ್ನು ಇದೇ ವೇಳೆ ಬಾಡಿಗೆ ತಾಯಿಯನ್ನ ಜೋರಾಗಿ ಅಮ್ಮ ಎಂದು ಕೂಗಿದ್ದಾನೆ. ಒಳಗಡೆಯಿಂದ ಬಾಡಿಗೆ ತಾಯಿ ಬಂದಿದ್ದು ಬೀಗರು ಬಂದಿದ್ದಾರೆ. ಚೆನ್ನಾಗಿದ್ದೀರಾ ಎಂದು ಕುಶಲೋಪರಿ ವಿಚಾರಿಸಿದ್ದಾರೆ. ನಾವು ಚೆನ್ನಾಗಿ ಇದ್ದೇವೆ ನೀವು ಹೇಗಿದ್ದೀರಾ? ನಿಮ್ಮ ಮನೆಯವರು ಎಲ್ಲಿಗೆ ಹೋದರು ಎಂದು ಯಶೋಧ ವಿಚಾರಣೆ ಪ್ರಾರಂಭಿಸಿದ್ದಾರೆ.

ಎಲ್ಲಾ ಮ್ಯಾನೇಜ್ ಮಾಡುತ್ತಿರುವ ತಾಂಡವ್

ಇದೇ ಸಂದರ್ಭದಲ್ಲಿ ತಾಂಡವ್ ನಮ್ಮ ತಂದೆ ಊರಿನಲ್ಲಿ ಇಲ್ಲ, ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದಾರೆ ಎಂದು ಹೇಳಿದ್ದಾನೆ. ಯಾವ ಊರಿಗೆ ತೆರಳಿದ್ದಾರೆ ಎಂದು ಕೇಳಿದ್ದಕ್ಕೆ ಇಬ್ಬರು ಸಹ ಬೇರೆ ಬೇರೆ ಊರುಗಳ ಹೆಸರನ್ನ ಹೇಳಿದ್ದಾರೆ. ತಾಂಡವ್ ತನ್ನ ತಂದೆ ದಾವಣಗೆರೆಗೆ ಹೋಗಿದ್ದಾರೆ, ಎಂದರೆ ಸುಂದರಿ ತನ್ನ ಗಂಡ ಧಾರವಾಡಕ್ಕೆ ಹೋಗಿದ್ದಾನೆ ಎಂದು ಶ್ರೀ ವರ ಅವರಿಗೆ ಕನ್ಫ್ಯೂಸ್ ಮಾಡಿದ್ದಾರೆ. ಕೊನೆಗೆ ತಾಂಡವ್ ಹೇಗೋ ಸಂದರ್ಭವನ್ನು ಮ್ಯಾನೇಜ್ ಮಾಡಿದ್ದಾನೆ.

ಭಾಗ್ಯ ಕೈಗೆ ಸಿಕ್ಕಿ ಬೀಳ್ತಾನ ತಾಂಡವ್?

ಆಸ್ಪತ್ರೆಯಲ್ಲಿರುವ ಭಾಗ್ಯಗೆ ತನ್ವಿ ಫೋನ್ ಮಾಡಿದ್ದಾಳೆ. ಪಪ್ಪಾ ರೂಂ ಡೋರ್ ಲಾಕ್ ಮಾಡಿಕೊಂಡು ಹೋಗಿದ್ದಾರೆ. ಇನ್ನೂ ಸಹ ಬಂದಿಲ್ಲ, ನೀನು ಎಲ್ಲಿದ್ದೀಯಾ ನನಗೆ ಭಯವಾಗುತ್ತಿದೆ ಬೇಗನೆ ನೀನು ಮನೆಗೆ ಬಾ ಎಂದು ಹೇಳಿದ್ದಾಳೆ. ಇದೇ ಸಂದರ್ಭದಲ್ಲಿ ಭಾಗ್ಯ ಎಲ್ಲರಿಗೂ ವಿಷಯ ತಿಳಿಸಿದ್ದಾಳೆ. ಎಲ್ಲರೂ ಮನೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ. ನಾವು ಕುಸುಮಾಳನ್ನ ಮನೆಗೆ ಕರೆದುಕೊಂಡು ಬರುತ್ತೇವೆ. ನೀನು ಹೋಗು ಎಂದು ಮಾವ ಸಹ ಹೇಳಿದ್ದು ಭಾಗ್ಯ ಮನೆಗೆ ಹೊರಟು ನಿಂತಿದ್ದಾಳೆ.

ಮನೆಗೆ ಹೊರಟಿರುವ ಭಾಗ್ಯ

ಇದೇ ಸಂದರ್ಭದಲ್ಲಿ ಕುಸುಮ ಬಳಿ ಸುನಂದಾ ಜಗಳವಾಡಿದ್ದಾಳೆ. ನಿಮ್ಮ ಮಗ ಮಗಳನ್ನು ಲಾಕ್ ಮಾಡಿ ಎಲ್ಲಿಗೆ ಹೋದ. ಅಷ್ಟೊಂದು ದೊಡ್ಡ ಕೆಲಸಾನ ಎಂದೆಲ್ಲ ಬೈದಿದ್ದಾರೆ. ಧರ್ಮರಾಜ್ ಇದು ಆಸ್ಪತ್ರೆ ಎಂದು ನೆನಪು ಮಾಡಿ ಇಬ್ಬರನ್ನು ಸುಮ್ಮನೆ ಮಾಡಿದ್ದಾರೆ. ಭಾಗ್ಯಗೆ ತುಂಬಾ ಭಯವಾಗಿದೆ, ಹೇಗಾದರೂ ಮಾಡಿ ಬೇಗ ಮನೆಗೆ ತಲುಪಬೇಕು. ತನ್ವಿಯನ್ನು ಹೊರಗಡೆ ಕರೆದುಕೊಂಡು ಬರಬೇಕು ಎಂದುಕೊಂಡು ಮನೆ ಕಡೆ ಹೊರಟಿದ್ದಾಳೆ. ಮನೆಯಲ್ಲಿ ತಾಂಡವ್ ಫ್ಯಾಮಿಲಿ ಇದ್ದು ಭಾಗ್ಯ ಕೈಗೆ ಸಿಕ್ಕಿ ಬೀಳ್ತಾರಾ? ಎಂದು ನೋಡಬೇಕಾಗಿದೆ.

More from Filmibeat

English summary
Bhagyalakshmi Kannada serial today Episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X