Bhagyalakshmi: ಬೆಳ್ಳಿ ಸಾಮಾಗ್ರಿಗಳ ಕಳ್ಳತನ ಬಯಲು: ಸುಂದರಿ ಮೇಲೆ ತಾಂಡವ್‌ಗೆ ಅನುಮಾನ
ಶ್ರೇಷ್ಠಾಗೆ ತನ್ನ ತಂದೆ ತಾಯಿ ತನ್ನ ಕೈಕಾಲು ಕಟ್ಟಿ ಹಾಕಿದ್ದಾರೆ ಎನಿಸುತ್ತಿದೆ. ಊಟ ಮಾಡದೇ ರೂಮ್‌ಗೆ ಬಂದು ಕುಳಿತುಕೊಂಡಿದ್ದಾಳೆ. ಇದೇ ವೇಳೆ ಕಾವ್ಯ ಊಟವನ್ನು ತಂದು ಊಟ ಮಾಡು ಅಂತ ಹೇಳಿದ್ದಾಳೆ. ನಂಗೆ ಯಾವ ಊಟವು ಬೇಡ ಎಂದು ಕಾಫಿ ಆಕೆ ಮೇಲೂ ಸಹ ಶ್ರೇಷ್ಠ ರೇಗಾಡಿದ್ದಾಳೆ.
ತಾಂಡವ್‌ಗೆ ಪ್ರೀತಿ ಇದೆ ಎನ್ನುವುದಾದರೆ ಅವರನ್ನು ನೀನು ಗಣೇಶ ಹಬ್ಬ ಮಾಡಲು ಆಹ್ವಾನಿಸು. ತಾಂಡವ್ ಬಂದರೆ ಅವರಿಗೆ ನಿನ್ನ ಮೇಲೆ ಪ್ರೀತಿ ಇದೆ ಎಂದು ಅರ್ಥ. ಇಲ್ಲದಿದ್ದರೆ ಯಾವುದೇ ಪ್ರೀತಿ ಇಲ್ಲ ಎಂದು ನೀನು ಸುಮ್ಮನೆ ನಿನ್ನ ತಂದೆ ತಾಯಿ ಹೇಳಿದಂತೆ ಕೇಳು ಎಂದಿದ್ದಾಳೆ ಕಾವ್ಯ.

ನಿನ್ನ ತಂದೆ ತಾಯಿಗೆ ಏನಾದರೂ ಸುಂದರಿ ಬಾಡಿಗೆಯ ತಾಯಿ ಎಂದು ಗೊತ್ತಾದರೆ ಏನು ಮಾಡ್ತಾರೆ ಎಂಬ ಪರಿಜ್ಞಾನ ಇದೆಯಾ? ತಾಂಡವ್‌ನ ನಿಜವಾದ ತಾಯಿ ಕುಸುಮಾ ಆಂಟಿ ಅಂತ ಗೊತ್ತಾದರೆ ನಿನ್ನನ್ನು ಮಾತ್ರ ನಿನ್ನ ಅಪ್ಪ ಅಮ್ಮ ಸುಮ್ಮನೆ ಬಿಡುವುದಿಲ್ಲ ಎಂದು ಕಾವ್ಯ ಶ್ರೇಷ್ಠ ಬಳಿ ಹೇಳುತ್ತಾ ಇದ್ದಾಳೆ.
ಇದು ಯಾಕೋ ಸರಿ ಕಾಣುತ್ತಿಲ್ಲ ಮೊದಲು ನೀನು ನಿನ್ನ ಮನಸ್ಸನ್ನು ಬದಲಿಸಿ ಕೊಂಡು ನಿನ್ನ ತಂದೆ ತಾಯಿ ಹೇಳಿದಂತೆ ಕೇಳು ಎಂದು ಕಾವ್ಯ ಹೇಳಿದರೂ ಸಹ ಶ್ರೇಷ್ಠ ಕೇಳುತ್ತಿಲ್ಲ. ನನಗೆ ತಾಂಡವ್‌ವೇ ಬೇಕು, ನಾನು ಆತನನ್ನ ಪಡೆದುಕೊಂಡೆ ತೀರುತ್ತೇನೆ ಎಂದು ಕಾವ್ಯ ಬಳಿ ಹೇಳಿದ್ದಾಳೆ.
ಫೋನ್ ಮಾಡಿದ ಶ್ರೇಷ್ಠ ನೀನು ನನ್ನ ಜೊತೆ ಗಣಪತಿ ಮಾಡಬೇಕು. ಗಣಪತಿ ಮಾಡಿದ ನಂತರ ನನ್ನ ಜೊತೆಗೆ ಇದ್ದು ಹಬ್ಬ ಆಚರಣೆ ಮಾಡಬೇಕು ಎಂದು ಷರತ್ತು ಹಾಕಿದ್ದಾಳೆ. ಈಗಾಗಲೇ ಶ್ರೇಷ್ಠ ಸಹವಾಸದಿಂದ ಬೇಸರ ಮಾಡಿಕೊಂಡಿರುವ ತಾಂಡವ್ ನನ್ನ ಕೈಲಿ ಅದೆಲ್ಲವೂ ಸಾಧ್ಯವಿಲ್ಲ. ನಾವು ಮನೆಯಲ್ಲಿ ಹಬ್ಬ ಆಚರಣೆ ಮಾಡುತ್ತೇವೆ ಈಗ ಆಗಿರುವುದೇ ಸಾಕು ಎಂದು ಶ್ರೇಷ್ಠ ಗೆ ಹೇಳಿದ್ದಾನೆ. ಇದಕ್ಕೆ ಶ್ರೇಷ್ಠ ನೀನೇನಾದರೂ ಬಾರದೇ ಇದ್ದರೆ ನಾನೇ ನಿನ್ನ ಮನೆಗೆ ಬಂದು ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾಳೆ. ಮತ್ತೆ ತಾಂಡವ್ ಪರಿಸ್ಥಿತಿ ಅಡ್ಡ ಕತ್ತರಿಗೆ ಸಿಲುಕಿದಂತಾಗಿದೆ.

ಮನೆಯಲ್ಲಿ ಬೆಳ್ಳಿ ಸಾಮಾಗ್ರಿ ಮಾಯ
ಭಾಗ್ಯ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದು ದೇವರ ಕೋಣೆ ಅಲಂಕಾರ ಮಾಡಲು ಬಂದಿದ್ದಾಳೆ. ಇದೇ ವೇಳೆ ದೇವರ ಮನೆಯಲ್ಲಿದ್ದ ಎರಡು ದೀಪಾಲೆ ಕಂಬ ಹಾಗೂ ಸಣ್ಣ ದೀಪ ಬೆಳ್ಳಿಯ ಸಾಮಗ್ರಿಗಳು ಕಳ್ಳತನವಾಗಿದೆ. ಭಾಗ್ಯ ತನ್ನ ಅತ್ತೆ ಕುಸುಮ ಬಳಿ ಅತ್ತೆ ದೇವರ ಮನೆಯಲ್ಲಿದ್ದ ಬೆಳ್ಳಿಯ ಸಾಮಾಗ್ರಿಗಳು ಯಾವು ಕಾಣಿಸುತ್ತಾ ಇಲ್ಲ ಎಂದು ಹೇಳಿದ್ದಾಳೆ. ನೀನೇ ಎಲ್ಲಾದರೂ ಇಟ್ಟಿರುತ್ತೀಯಾ ಸರಿಯಾಗಿ ಹುಡುಕು ಎಂದು ಕುಸುಮಾ ಹೇಳಿದ್ದಾಳೆ. ಈ ವೇಳೆ ನಾನು ತವರು ಮನೆಗೆ ಹೋದಾಗ ದೀಪ ಹಚ್ಚಿಟ್ಟು ಹೋಗಿದ್ದೆ. ನಂತರ ನಾನು ದೇವರ ಕೋಣೆಗೆ ಬರಲೇ ಇಲ್ಲ ಎಂದಿದ್ದಾಳೆ. ಅಡುಗೆ ಮನೆಗೆ ಹೋದ ಭಾಗ್ಯ ಎಲ್ಲವನ್ನು ಹುಡುಕಾಡಿದ್ದಾಳೆ, ಅಲ್ಲಿರುವ ಬೆಳ್ಳಿ ಲೋಟಗಳು ಕಾಣದೇ ಇದ್ದಾಗ ಗಾಬರಿಯಾಗಿದ್ದಾಳೆ.
ಬೆಳ್ಳಿ ಸಾಮಾಗ್ರಿ ಕಳ್ಳತನ
ಸುನಂದಾಗೆ ಮನೆಗೆ ಯಾರೋ ಕಳ್ಳರು ಬಂದಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಅಂದು ಮನೆಯಲ್ಲಿ ಯಾರು ಇಲ್ಲದೆ ಇದ್ದುದ್ದನ್ನ ನೋಡಿಕೊಂಡಿರುವ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಸುನಂದಾ, ಕುಸುಮ ಬಳಿಯಲ್ಲಿ ಹೇಳಿದ್ದಾಳೆ. ಇದೇ ವೇಳೆ ಕುಸುಮಾ ಅದೆಲ್ಲವನ್ನ ನನ್ನ ತವರು ಮನೆಯಿಂದ ನನ್ನ ಮದುವೆ ಮಾಡಿ ಕಳುಹಿಸಿದ ಸಂದರ್ಭದಲ್ಲಿ ಬಳುವಳಿಯಾಗಿ ಕೊಟ್ಟಿದ್ದರು ಎಂದು ಕಣ್ಣೀರನ್ನು ಹಾಕಿದ್ದಾಳೆ.
ಏನಾಯ್ತು ಎಂದ ತಾಂಡವ್
ಅಮ್ಮ ಜೋರಾಗಿ ಮಾತನಾಡುತ್ತಿರುವುದನ್ನು ಕಂಡು ಓಡೋಡಿ ಬಂದ ತಾಂಡವ್ ಏನಾಯಿತು ಎಂದು ವಿಚಾರ ಮಾಡಿದ್ದಾನೆ. ಈ ವೇಳೆ ಕುಸುಮಾ ನಮ್ಮ ಮನೆಯಲ್ಲಿದ್ದ ಬೆಳ್ಳಿ ಸಾಮಾಗ್ರಿಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ವಿಷಯ ಕೇಳಿ ನನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳಬೇಕು ಎನಿಸುತ್ತಿದೆ ಎಂದಿದ್ದಾರೆ. ತಾಂಡವ್‌ಗೆ ಶಾಕ್ ಆಗಿದೆ. ಸುಂದರಿ ಏನಾದರೂ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾಳಾ ಎಂದು ಅಂದು ಅನುಮಾನಗೊಂಡಿದ್ದಾನೆ.


Click it and Unblock the Notifications











