Bhagyalakshmi: ಬಂದೇ ಬಿಡ್ತು ತಾಂಡವ್ ಮುಖವಾಡ ಕಳಚುವ ಸಮಯ: ಮತ್ತೇನು ಡ್ರಾಮಾ ಮಾಡ್ತಾನೆ..?

By ಶೃತಿ ಹರೀಶ್ ಗೌಡ

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಗಣೇಶನನ್ನ ತರಲು ತಾಂಡವ್‌ಗೆ ಕುಸುಮಾ ಹೇಳಿದ್ದಾಳೆ. ಆ ಗಣೇಶನ ನಮ್ಮ ಮನೆಗೆ ಬಂದಿರುವ ಕಳ್ಳನನ್ನ ಹಿಡಿದು ಕೊಡುತ್ತಾನೆ ಎಂದಿದ್ದಾಳೆ. ಇದಕ್ಕೆ ತಾಂಡವ್ ಕಳ್ಳನನ್ನು ಗಣೇಶ ಹಿಡಿಯುತ್ತಾನಾ? ಎಂದಿದ್ದಾನೆ. ತಾಂಡವ್ ಗಣೇಶ ಮೂರ್ತಿಯನ್ನು ತರಲು ಹೋಗುತ್ತಾನೆ.

ಕುಸುಮಾ ಗಣೇಶನೇ ನಮ್ಮ ಮನೆಯ ಕಳ್ಳನನ್ನು ಕಂಡು ಹಿಡಿಯುತ್ತಾನೆ. ವಾಪಸ್ ನನ್ನ ತವರು ಮನೆಯವರು ಕೊಟ್ಟಿದ್ದ ಬೆಳ್ಳಿ ಸಾಮಾಗ್ರಿಗಳು ನನಗೆ ವಾಪಸ್ ಸಿಗುತ್ತದೆ ಎಂದು ಖುಷಿಪಟ್ಟಿದ್ದಾರೆ‌. ತಾಂಡವ್‌ ಹಾಗೂ ಧರ್ಮರಾಜ್ ಎಲ್ಲರೂ ಸೇರಿ ಗಣಪತಿ ಮೂರ್ತಿ ತಂದಿದ್ದಾರೆ. ತನ್ವಿ ಗೌರಿ ಮೂರ್ತಿಯನ್ನು ಹಿಡಿದುಕೊಂಡಿದ್ದಾಳೆ. ಗುಂಡಣ್ಣ ಹಾಗೂ ಪೂಜಾ ಇಬ್ಬರೂ ಸೇರಿಕೊಂಡು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾ ಗಣಪತಿ ಬಪ್ಪ ಮೋರಿಯಾ ಎಂದು ಬಂದಿದ್ದಾರೆ.

bhagyalakshmi-kannada-serial

ಗಣಪತಿ ಮೂರ್ತಿ ಮನೆಗೆ ಬಂದ ತಕ್ಷಣ ಭಾಗ್ಯ ಗಣಪತಿ ಮೂರ್ತಿಗೆ ಆರತಿ ಮಾಡಿ ಮನೆಯ ಒಳಗೆ ಕರೆದುಕೊಂಡಿದ್ದಾಳೆ. ಇದೇ ವೇಳೆ ಕುಸುಮಾ ಮೂರ್ತಿಯನ್ನು ಅಕ್ಕಿ ಹಾಕಿದ ಬಾಳೆ ಎಲೆಯ ಮೇಲೆ ಇಡುವಂತೆ ಹೇಳಿದ್ದಾಳೆ. ಗಣೇಶ ಮೂರ್ತಿಗೆ ಅಕ್ಷತೆ ಹಾಗೂ ಹೂವನ್ನ ಹಾಕಿ ಭಾಗ್ಯ ಪೂಜೆ ಸಲ್ಲಿಸಿದ್ದಾಳೆ.

ತಾಂಡವ್‌ಗೆ ಮತ್ತೊಮ್ಮೆ ಪ್ರಾಣ ಸಂಕಟ

ತಾಂಡವ್ ಮನೆಗೆ ಗೌರಿ ಹಬ್ಬಕ್ಕೆಂದು ಬಂದಿದ್ದ ಪಕ್ಕದ ಮನೆಯವರು ಕುಸುಮಾ ಬಳಿ ನಿಮ್ಮ ಮನೆಗೆ ಗೆಸ್ಟ್ ಬಂದಿದ್ರಾ? ಎಂದಿದ್ದಾರೆ. ಇದರಿಂದ ತಾಂಡವ್ ಕರ್ಮ ವಾಪಸ್ ತಾಂಡವ್‌ಗೆ ಹೊಡೆಯುವಂತೆ ಮಾಡಿದ್ದಾರೆ. ಇದಕ್ಕೆ ಕುಸುಮ ನಮ್ಮ ತಾಂಡವ್ ಆಫೀಸಿನಿಂದ ಕ್ಲೈಂಟ್ ಬಂದಿದ್ದರು. ಅವರು ಇಲ್ಲೇ ಮೀಟಿಂಗ್ ಮಾಡಿದ್ದಾರೆ ಎಂದಾದಾಗ ತಾಂಡವ್ ಹೌದು ಎಂದು ತಲೆ ಆಡಿಸಿದ್ದಾನೆ. ಅವರನ್ನು ನೋಡಿದರೆ ಆಫೀಸ್‌ನಲ್ಲಿ ಕೆಲಸ ಮಾಡುವವರಂತೆ ಕಾಣುತ್ತಿರಲಿಲ್ಲ. ಒಂದು ಹೆಂಗಸು ಹಾಗೂ ಒಂದು ಗಂಡಸು, ಮಗಳು ಬಂದಂತೆ ಕಾಣಿಸುತ್ತಿತ್ತು ಎಂದಿದ್ದಾರೆ.

bhagyalakshmi-kannada-serial

ಅಮ್ಮನ ಮುಂದೆ ಸಿಕ್ಕಿಬಿದ್ದ ರಾಜ

ತಾಂಡವ್ ಕೂಡಲೇ ಇಲ್ಲ ಅವರು ನಮ್ಮ ಆಫೀಸ್ ಕಲೀಗ್. ನಿಮಗೆ ಆ ರೀತಿ ಅನ್ನಿಸಿದೆ ಅಷ್ಟೆ ಎಂದಿದ್ದಾನೆ. ಇಲ್ಲ ನಾವು ನೋಡಿದ್ದು ಬೇರೆ ತಾಂಡವ್ ಜೊತೆ ಚೆನ್ನಾಗಿ ಮಾತನಾಡುತ್ತಿದ್ದರು ಎಂದಿದ್ದಕ್ಕೆ ತಾಂಡವ್, ಅವರು ಅಡ್ರೆಸ್ ಕೇಳುತ್ತಾ ಇದ್ದರು ನಾನು ಹೇಳಿದೆ ಎಂದು ಹೇಳಿದ್ದಾದೆ. ನೀವು ಅವರನ್ನು ಒಳಗಡೆ ಕರೆದುಕೊಂಡು ಬಂದಿದ್ರಿ, ಸುಮಾರು ಹೊತ್ತು ಅವರು ಮನೆಯಲ್ಲಿ ಇದ್ದರು ಎಂದು ಪಕ್ಕದ ಮನೆಯವರು ಬಾಂಬ್‌ ಸಿಡಿಸಿದ್ದಾರೆ.

ಸುನಂದಾಗೆ ಬಂತು ಅನುಮಾನ

ನಮ್ಮ ಮನೆಗೆ ಬಂದಿದ್ದವರೇ ಮನೆಯಲ್ಲಿದ್ದ ಬೆಳ್ಳಿ ಸಾಮಾನುಗಳನ್ನ ಕದ್ದಿದ್ದಾರೆ ಎಂದು ಸುನಂದ ಅನುಮಾನ ವ್ಯಕ್ತಪಡಿಸಿದ್ದಾಳೆ. ಕುಸುಮಾ ಕೂಡ ಇದೇ ರೀತಿ ಅಂದುಕೊಂಡಿದ್ದಾಳೆ. ನಾವು ಈಗಲೇ ಹೋಗಿ ಪೊಲೀಸ್ ಕಂಪ್ಲೇಂಟ್ ಕೊಡೋಣ ಎಂದು ಹೇಳಿದ್ದಾಳೆ. ತಾಂಡವ್‌ ಬಳಿ ಅಮ್ಮ ಕಂಪ್ಲೇಂಟ್ ಕೊಡೋಣ ಎಂದು ಹೇಳಿದ್ದಕ್ಕೆ ಸುತಾರಾಮ್ ಒಪ್ಪಿಗೆ ಇಲ್ಲ. ಅಂದು ಬಂದಿದ್ದು ಶ್ರೇಷ್ಠ ಹಾಗೂ ಫ್ಯಾಮಿಲಿ. ಅವರ ಮೇಲೆ ಕಂಪ್ಲೇಂಟ್ ಕೊಡೋದಕ್ಕೆ ಆಗುತ್ತಾ? ಎನ್ನುವ ಯೋಚನೆಯಲ್ಲಿ ತಾಂಡವ್ ಮುಳುಗಿದ್ದಾನೆ.

More from Filmibeat

English summary
Bhagyalakshmi Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X