Bhagyalakshmi: ಸಿಕ್ಕಿ ಬೀಳುವ ಭಯದಲ್ಲಿ ತಾಂಡವ್ ಮತ್ತೆ ಸುಳ್ಳು: ಪೊಲೀಸ್ ಸ್ಟೇಷನ್‌ನಲ್ಲಿವೆ ಕಳುವಾದ ಬೆಳ್ಳಿ ಸಾಮಾನು
'ಭಾಗ್ಯಲಕ್ಷ್ಮಿ' ಧಾರಾವಾಹಿ ದಿನದಿಂದ ದಿನಕ್ಕೆ ಒಂದೊಂದು ತಿರುವುಗಳನ್ನ ಪಡೆಯುತ್ತಾ ಸಾಗುತ್ತಿದೆ. ತಾಂಡವ್ ಸಿಕ್ಕಿ ಬಿದ್ದ ಎನ್ನುವಷ್ಟರಲ್ಲಿ ಹೊಸದೊಂದು ಟ್ವಿಸ್ಟ್ ನೀಡಲಾಗುತ್ತಿದೆ. ಈಗಲೂ ಸಹ ಕುಸುಮಾ ಮನೆಯಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಕುಸುಮಾ ಮನೆಯಲ್ಲಿದ್ದ ಬೆಳ್ಳಿ ಸಾಮಾಗ್ರಿಗಳನ್ನು ಸುಂದರಿ ಕದ್ದುಕೊಂಡು ಹೋಗಿದ್ದಳು.
ಪೊಲೀಸರು ಸುಂದರಿ ಎಂಬ ಮಹಿಳೆಯನ್ನ ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ. ತಾಂಡವ್ ಪೊಲೀಸ್ ಸ್ಟೇಷನ್‌ಗೆ ಬರುವಷ್ಟರಲ್ಲಿ ಟೇಬಲ್ ಮೇಲೆ ಸುಂದರಿ ಕುಸುಮಾ ಮನೆಯಲ್ಲಿ ಕದ್ದಿದ್ದ ಬೆಳ್ಳಿ ಸಾಮಗ್ರಿಗಳನ್ನ ಇಡಲಾಗಿತ್ತು. ಭಾಗ್ಯ ಟೇಬಲ್ ನೋಡಿ ಇವೆಲ್ಲವೂ ಸಹ ನಮ್ಮದೇ ಬೆಳ್ಳಿ ಸಾಮಗ್ರಿಗಳು ಎಂದು ತಾಂಡವ್ ಬಳಿ ಹೇಳಿದ್ದಾಳೆ.

ಇನ್ನು ಕಾವ್ಯ ಮದುವೆಯಾಗಬೇಕು ಎಂದುಕೊಂಡಿರುವ ಹುಡುಗ ರಘು ಜೊತೆ ಆ ತಾಂಡವ್ ಸರಿ ಇಲ್ಲ. ಆ ಹುಡುಗನ ಜೊತೆ ಮದುವೆ ಮಾಡಿಕೊಳ್ಳಬೇಡ ಎಂದರು ಈ ಶ್ರೇಷ್ಠ ಕೇಳುತ್ತಿಲ್ಲ.ಯಾವುದೇ ಸತ್ಯವನ್ನು ನೀನು ಹೇಳಬಾರದು ಎಂದು ನನ್ನ ತಾಯಿಯ ಮೇಲೆ ಆಣೆ ಮಾಡಿಸಿಕೊಂಡಿದ್ದಾಳೆ. ನನ್ನ ಬಾಯನ್ನ ಕಟ್ಟಿ ಹಾಕುವ ಕೆಲಸ ಮಾಡುತ್ತಾ ಇದ್ದಾಳೆ ಎಂದಿದ್ದಾಳೆ.
ತಾಂಡವ್ ಮನೆ ಮುಂದೆ ಶ್ರೇಷ್ಠ ನಿಂತಿದ್ದಾಳೆ. ತಾಂಡವ್ ಹೋಗಿದ್ದನ್ನು ನೋಡಿ ಫೋನ್ ಮಾಡಿದ್ದಾಳೆ. ತಾಂಡವ್ ಫೋನ್ ಕಟ್ ಮಾಡಿದ್ದಕ್ಕೆ ಶ್ರೇಷ್ಠಗೆ ತುಂಬಾ ಕೋಪ ಬಂದಿದೆ. ನನ್ನ ಫೋನ್ ಕಟ್ ಮಾಡುತ್ತಾನೆ. ಹೆಂಡತಿ ಜೊತೆಯಲ್ಲಿ ಇದ್ದರೆ ನಾನು ಬೇಡ ಇವನಿಗೆ ಸರಿಯಾಗಿ ಬುದ್ಧಿಯನ್ನ ಕಳಿಸುತ್ತೇನೆ ಎಂದು ಶ್ರೇಷ್ಠ ಅಲ್ಲಿಯೇ ನಿಂತು ಕೊಂಡಿದ್ದಾಳೆ. ಇವತ್ತು ತಾಂಡವ್ ಬರಲಿ ನಾನು ಅವನನ್ನ ಕೇಳುತ್ತೇನೆ ನಿನಗೆ ನಾನು ಹೆಚ್ಚು ಅಥವಾ ಆ ಭಾಗ್ಯ ಹೆಚ್ಚೋ ಎಂದುಕೊಂಡಿದ್ದಾಳೆ.
ಮತ್ತೊಮ್ಮೆ ಸುಳ್ಳು ಹೇಳಿದ ತಾಂಡವ್
ಕುಸುಮ ಮನೆಯಲ್ಲಿ ಕಳುವಾಗಿದ್ದ ಬೆಳ್ಳಿ ಸಾಮಾನು ಪೊಲೀಸ್ ಸ್ಟೇಷನ್‌ನಲ್ಲಿವೆ. ಆದರೆ ತಾಂಡವ್ ಪೊಲೀಸ್ ಸ್ಟೇಷನ್‌ನಲ್ಲಿ ಮತ್ತೊಮ್ಮೆ ಸುಳ್ಳು ಹೇಳಿದ್ದಾನೆ. ಸುಂದರಿಯನ್ನ ಪೊಲೀಸರು ಹೊರಗೆ ಕರೆಸಿದಾಗ ತಾಂಡವ್ ಶಾಕ್‌ಗೆ ಒಳಗಾಗಿದ್ದಾನೆ. ಸುಂದರಿಗೆ ನನ್ನ ಮನೆಗೆ ಬಂದಿದ್ದಳು, ಎಂದು ನಾನು ಹೇಳಿದರೆ ನಾನು ಮಾಡಿದ ತಪ್ಪಲ್ಲ ಹೊರಗೆ ಬರುತ್ತದೆ ಎಂದು ಭಯಪಟ್ಟುಕೊಂಡು ಇವರಲ್ಲ ಸರ್ ನಮ್ಮ ಮನೆಗೆ ನೀರು ಕೇಳಲು ಬಂದಿದ್ದವರು ಎಂದಿದ್ದಾನೆ.

ಪೋಲಿಸ್ ಠಾಣೆಯಲ್ಲಿ ಬೆಳ್ಳಿ ಸಾಮಾನು
ಭಾಗ್ಯಗೆ ತನ್ನ ಗಂಡನ ಮಾತಿನಿಂದ ಶಾಕ್ ಆಗಿದೆ. ಯಾಕೆಂದರೆ ಅಲ್ಲಿ ಇರುವುದು ನಮ್ಮ ಮನೆಯ ಬೆಳ್ಳಿ ಸಾಮಾಗ್ರಿಗಳು. ಇವರು ನೋಡಿದರೆ ಯಾಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಗಂಡನ ಮುಖ ನೋಡುತ್ತಾ ಇದ್ದಾಳೆ. ತಾಂಡವ್‌ಗೆ ತನ್ನ ನಿಜ ಸ್ವರೂಪ ಬಯಲಾಗಿ ಬಿಡುತ್ತದೆ ಎಂಬ ಭಯ ಆವರಿಸಿದೆ. ಈ ಸುಂದರಿ ಯಾಕೆ ನಮ್ಮ ಮನೆಯ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋದಳು. ಇವರನ್ನೆಲ್ಲ ಹೇಗೆ ನಂಬೋದು ಎಂದು ತಾಂಡವ್ ಬೇಸರ ಮಾಡಿಕೊಂಡಿದ್ದಾನೆ.
ಶ್ರೇಷ್ಠಾಳನ್ನು ನೋಡಿದ ಪೂಜಾ
ಮಹಡಿಯ ಮೇಲೆ ರೀಲ್ಸ್ ಮಾಡಲು ಬಂದಿದ್ದ ಪೂಜಾ ಶ್ರೇಷ್ಠಾಳನ್ನ ನೋಡಿದ್ದಾಳೆ. ಇವಳು ಯಾಕೆ ಮನೆ ಒಳಗೆ ಬರದೇ ಅಲ್ಲೇ ನಿಂತುಕೊಂಡು ವಾಕ್ ಮಾಡುತ್ತಿದ್ದಾಳೆ ಎಂದು ಅನುಮಾನ ವ್ಯಕ್ತಪಡಿಸಿದ್ದಾಳೆ. ಏನೋ ನಡೆದಿದೆ ಅದನ್ನ ನಾನು ಕಂಡು ಹಿಡಿಯಲೇಬೇಕು ಎಂದು ಪೂಜಾ ಅಂದುಕೊಂಡಿದ್ದಾಳೆ. ಅಮ್ಮನಿಗೆ ಏನಾದರೂ ವಿಷಯ ತಿಳಿಸಿದರೆ ರಂಪ ರಾಮಾಯಣ ಮಾಡುತ್ತಾಳೆ. ಅದರ ಬದಲು ನಾನೇ ಏನಾಗಿದೆ ಎಂದು ಕಂಡುಹಿಡಿಯುತ್ತೇನೆ ಅನಂತರ ನಾನು ಮನೆಯಲ್ಲಿ ಎಲ್ಲರಿಗೂ ತಿಳಿಸುತ್ತೇನೆ ಎಂದು ಪೂಜಾ ಅಂದುಕೊಂಡಿದ್ದಾಳೆ.


Click it and Unblock the Notifications











