'ಭಾಗ್ಯಲಕ್ಷ್ಮಿ' ಧಾರಾವಾಹಿಯಿಂದ ಹೊರಬಂದ ಗೌತಮಿ ಗೌಡ ನಟಿಯಷ್ಟೇ ಅಲ್ಲ.. ಭರತನಾಟ್ಯ ಡ್ಯಾನ್ಸರ್ ಕೂಡ ಹೌದು!

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ'ಯಲ್ಲಿ ಖಳನಾಯಕಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಟಿ ಗೌತಮಿ ಗೌಡ ಅವರು ಧಾರಾವಾಹಿಯಿಂದ ಹೊರಬಂದಿರುವ ವಿಚಾರ ಸೀರಿಯಲ್ ವೀಕ್ಷಕರಿಗೆ ತಿಳಿದೇ ಇದೆ.

ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್, ಇನ್‌ಸ್ಟಾಗ್ರಾಮ್‌ನಲ್ಲಿ ಆಕೆ "ನಮಸ್ಕಾರ, ವೈಯಕ್ತಿಕ ಕಾರಣಗಳಿಂದ 'ಭಾಗ್ಯಲಕ್ಷ್ಮಿ ' ಧಾರಾವಾಹಿಯಿಂದ ಹೊರಬರುತ್ತಿದ್ದೇನೆ. ಇಷ್ಟು ದಿನಗಳ ಕಾಲ ನನ್ನನ್ನು ಪ್ರೋತ್ಸಾಹಿಸಿದ್ದಕ್ಕೆ ಚಿರಋಣಿ" ಎಂದು ಬರೆದುಕೊಂಡಿದ್ದರು‌. ಈ ಬಗ್ಗೆ ಕಿರುತೆರೆ ಪ್ರೇಕ್ಷಕರು ಬೇಸರ ವ್ಯಕ್ತಪಡಿಸಿದ್ದು ಕಾಮೆಂಟ್ ಸುರಿಮಳೆ ಸುರಿಸಿ ತಮ್ಮ ಅನಿಸಿಕೆ ಹಾಗೂ ಶುಭಹಾರೈಕೆಗಳನ್ನು ಹಂಚಿಕೊಂಡಿದ್ದರು.

Bhagyalakshmi serial Actress Gouthami Gowda also known as Bharatanatyam dancer

ಸಾವಿತ್ರಯಾಗಿ ಕಿರುತೆರೆಯಲ್ಲಿ ಫೇಮಸ್ಸು!

ದಶಕದ ಹಿಂದೆಯೇ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಗೌತಮಿ ಗೌಡ 'ಅಮ್ಮ ನಿನಗಾಗಿ,' 'ಚಿ ಸೌ.ಸಾವಿತ್ರಿ' ಇತ್ಯಾದಿ ಧಾರಾವಾಹಿಗಳಿಂದ ಬಹಳಷ್ಟು ಪಾಪ್ಯುಲಾರಿಟಿ ಪಡೆದಿದ್ದರು. ನಂತರ ನಟನಾ ರಂಗದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು.

ಬಿಗ್ ಬಾಸ್ ನಲ್ಲೂ ಭಾಗಿ

ಮತ್ತೆ ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಮೂರರ ಅಭ್ಯರ್ಥಿಯಾಗಿ ಕಿರುತೆರೆಗೆ ಕಾಲಿಟ್ಟ ಗೌತಮಿ ಗೌಡ ಅಲ್ಲಿಯೂ ಬಹಳಷ್ಟು ಹೆಸರನ್ನೂ ಮಾಡಿದ್ದರು. ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಲ್ಲೂ ನಟಿಸಿರುವ ಈಕೆ 'ಮುತ್ತಿನ ಪಲ್ಲಕ್ಕಿ ', 'ಮಳೆ ', ' ದಿ ಪ್ಲಾನ್ ', 'ಮಾತುಕತೆ', 'ಕೋಟಿಗೊಬ್ಬ 2' ಇತ್ಯಾದಿ ದೊಡ್ಡ ದೊಡ್ಡ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆದರೂ ಧಾರಾವಾಹಿ ನಂಟು ಬಿಡದ ಈಕೆ ಅವಕಾಶ ಹಾಗೂ ಒಳ್ಳೆಯ ಪಾತ್ರಗಳು ಸಿಕ್ಕಾಗ ಅಭಿನಯಿಸುವುದಾಗಿ ಹೇಳಿದ್ದರು.

Bhagyalakshmi serial Actress Gouthami Gowda also known as Bharatanatyam dancer

ಭರತನಾಟ್ಯ ಕಲಾವಿದೆ ಹೌದು

ಭರತನಾಟ್ಯ ಕಲಾವಿದೆಯೂ ಆದ ಈಕಡೆ ಬಹಳಷ್ಟು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ದಶಕದ ಹಿಂದೆ 'ಕುಣಿಯೋಣ ಬಾರಾ' ಎಂಬ ಡಾನ್ಸ್ ರಿಯಾಲಿಟಿ ಶೋನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಬೆಳಕಿಗೆ ಬಂದು ನಂತರ ನಟನೆಯನ್ನು ಆಯ್ದು ಮುಂದೆ ಬಂದ ಪ್ರತಿಭಾನ್ವಿತೆ ಈಕೆ.

ಈಗ 'ಭಾಗ್ಯಲಕ್ಷಿ' ಧಾರಾವಾಹಿಯಲ್ಲಿ ಹಿಂದೆಂದೂ ಮಾಡದ ಖಳನಾಯಕಿ ಪಾತ್ರ ಮಾಡುತ್ತಾ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರೆ ಈಕೆ ಕಾರಣಂತರಗಳಿಂದ ಧಾರಾವಾಹಿಗೆ ಗುಡ್‌ ಬೈ ಹೇಳಿದ್ದಾರೆ. ಮತ್ತೆ ಈಕೆಯ ನಟನೆಯನ್ನು ಯಾವಾಗ ಹೇಗೆ ನೋಡುವ ಅವಕಾಶ ಸಿಗುತ್ತದೆಯೋ ಕಾದು ನೋಡಬೇಕಿದೆ.

More from Filmibeat

English summary
Bhagyalakshmi serial Actress Gouthami Gowda also known as Bharatanatyam dancer,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X